ರೈತರು ತಮ್ಮ ಜಮೀನಿನಲ್ಲಿ ನೀರಿನ ಸಮಸ್ಯೆ ಇದ್ದರೆ ಬೋರ್ವೆಲ್ ಕೊರೆಸುತ್ತಾರೆ. ಬೋರ್ವೆಲ್ ಕೊರೆಸುವುದು ಅಷ್ಟು ಸುಲಭದ ಕೆಲಸವಲ್ಲ. ನೀರು ಬರುತ್ತದೆಯೊ ಇಲ್ಲವೋ ಎಂಬುದು ಮೊದಲೆ ತಿಳಿಯುವುದಿಲ್ಲ. ಬೋರ್ವೆಲ್ ಕೊರೆಸಿದವರು ಒಂದು ಇಂಚು ನೀರು ಬಂತು ಎರಡು ಇಂಚು ನೀರು ಬಂತು ಎಂದು ಹೇಳುತ್ತಾರೆ ಹಾಗಾದರೆ ಒಂದು ಇಂಚು ನೀರು ಎಂದರೆ ಎಷ್ಟು ನೀರು 2 ಇಂಚು ನೀರು ಎಂದರೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಸಿಕ್ಕಿದೆ ಎಂದು ಹೇಳುತ್ತಾರೆ ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಸಿಕ್ಕಿದೆ ಎಂದರೆ ಅದರ ಅರ್ಥ ಒಂದು ಕಾಲುವೆಯಲ್ಲಿ ನೀರು ಹೋಗುತ್ತಿದ್ದರೆ ಅದನ್ನು ಅಳತೆ ಮಾಡಲು ನಮಗೆ ನೋಚ್ ಪ್ಲೇಟ್ ಎಂಬ ನೀರಿನ ಅಳತೆ ಮಾಡುವ ಪರಿಕರ ಬೇಕಾಗುತ್ತದೆ. ಇದು ಬೇರೆ ಬೇರೆ ಆಕಾರಗಳಲ್ಲಿ ಇರುತ್ತದೆ. ವಿ ನೋಚ್ ರೆಕ್ಟ್ಯಾಂಗಲ್ ನೋಚ್ ಹೀಗೆ ಬೇರೆ ಬೇರೆ ರೀತಿಯ ಆಕಾರಗಳಲ್ಲಿ ಇರುತ್ತದೆ. ವಿ ನೋಚ್ ಬಳಸಿಕೊಂಡು ಕಾಲುವೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎಂದು ನೋಡಬಹುದು.

ವಿನೋಚ್ ಪ್ಲೇಟಿನಲ್ಲಿ ನೀರು ಹಾಕಿದಾಗ ಒಳಗಿರುವ ನೀರು ವಿನೋಚ್ ಪ್ಲೇಟ್ ಇಂದ ಹೊರಗೆ ಬರುತ್ತದೆ ಹೀಗೆ ಹೊರ ಬರುತ್ತಿರುವ ನೀರನ್ನು ಒಂದು ಫಾರ್ಮುಲಾ ಇರುತ್ತದೆ ಅದನ್ನು ಬಳಸಿಕೊಂಡು ಅಳತೆ ಮಾಡಿಕೊಳ್ಳುತ್ತಾರೆ. ಈ ಫಾರ್ಮುಲಾದಲ್ಲಿ ಎಚ್ ಅಂದರೆ ವಿ ನೋಚ್ ನಲ್ಲಿ ಹರಿಯುತ್ತಿರುವ ನೀರಿನ ಎತ್ತರವಾಗಿದೆ. ಎಷ್ಟು ಎತ್ತರವಾಗಿ ನೀರು ಹರಿಯುತ್ತಿದೆ ಎಂದರೆ ಅಷ್ಟು ಹೆಚ್ಚು ನೀರು ಹರಿಯುತ್ತಿದೆ ಎಂದರ್ಥ. ಹೊಸದಾಗಿ ಬೋರ್ವೆಲ್ ಹಾಕಿದಾಗ ಬೋರ್ವೆಲ್ ಇಂದ ಬರುತ್ತಿರುವ ನೀರನ್ನು ಒಂದು ಕಾಲುವೆಯಲ್ಲಿ ಹೋಗುವ ಹಾಗೆ ಮಾಡಿ ಆ ಕಾಲುವೆಯಲ್ಲಿ ವಿನೋಚ್ ಪ್ಲೇಟನ್ನು ಫಿಟ್ ಮಾಡಿದರೆ ನೀರು ವಿನೋಚ್ ಮೂಲಕ ಹೊರಗಡೆ ಬರುತ್ತದೆ

ಹೀಗೆ ವಿನೋಚ್ ಮೂಲಕ ಬರುತ್ತಿರುವ ನೀರು ಒಂದು ಇಂಚು ಎತ್ತರದಲ್ಲಿ ಬರುತ್ತಿದ್ದರೆ ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಬರುತ್ತಿದೆ ಎಂದರ್ಥ ಅದೆ ರೀತಿ ವಿ ನೋಚ್ ನಲ್ಲಿ ಎರಡು ಇಂಚು ಎತ್ತರದಲ್ಲಿ ನೀರು ಬರುತ್ತಿದ್ದರೆ ಬೋರ್ವೆಲ್ ನಲ್ಲಿ 2 ಇಂಚು ನೀರು ಬರುತ್ತಿದೆ ಎಂದು ಅರ್ಥ. ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಬರುತ್ತಿದೆ ಎಂದರೆ ಬೋರ್ವೆಲ್ ನಲ್ಲಿ 597 ಲೀಟರ್ ನೀರು ಒಂದು ಗಂಟೆಗೆ ಬರುತ್ತದೆ ಎಂದು ಅರ್ಥ.

ಬೋರ್ವೆಲ್ ನಲ್ಲಿ ಎರಡು ಇಂಚು ನೀರು ಬರುತ್ತದೆ ಎಂದರೆ ಬೋರ್ವೆಲ್ ನಲ್ಲಿ 3382 ಲೀಟರ್ ನೀರು ಒಂದು ಗಂಟೆಗೆ ಬರುತ್ತದೆ ಎಂದು ಅರ್ಥ. ಒಂದು ವೇಳೆ ಬೋರ್ವೆಲ್ ನಲ್ಲಿ 3 ಇಂಚು ನೀರು ಬರುತ್ತಿದೆ ಎಂದರೆ 9329 ಲೀಟರ್ ನೀರು ಒಂದು ಗಂಟೆಗೆ ಬರುತ್ತದೆ ಎಂದು ಅರ್ಥ. ಹೀಗೆ ಬೋರ್ವೆಲ್ ನಲ್ಲಿ ಬರುವ ನೀರು ಎಷ್ಟು ಎಂಬುದನ್ನು ಸಾಧನದ ಮೂಲಕ ತಿಳಿದುಕೊಳ್ಳಬಹುದು. ಹೆಚ್ಚು ಇಂಚು ನೀರು ಬಂದರೆ ಬೋರ್ವೆಲ್ ನಲ್ಲಿ ಹೆಚ್ಚು ನೀರು ಬರುತ್ತಿದೆ ಎಂಬುದಾಗಿದೆ. ಒಟ್ಟಾರೆಯಾಗಿ ಬೋರ್ವೆಲ್ ನಿಂದ ಒಂದು ಇಂಚು ನೀರು ಬಂದರೂ ರೈತನ ಮುಖದಲ್ಲಿ ಕಾಣುವ ಸಂತೋಷಕ್ಕೆ ಪಾರವೆ ಇಲ್ಲ. ಬೋರ್ವೆಲ್ ಕೊರೆಸುವಾಗ ಅದರ ಬಗ್ಗೆ ಹೆಚ್ಚು ಜ್ಞಾನ ಉಳ್ಳವರಿಂದ ಸಲಹೆ ಪಡೆದು ಬೋರ್ವೆಲ್ ಕೊರೆಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *