ರೈತರು ತಮ್ಮ ಜಮೀನಿನಲ್ಲಿ ನೀರಿದ್ದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ. ಹಲವು ರೈತ ಬಾಂಧವರು ತಮ್ಮ ಜಮೀನಿನಲ್ಲಿ ಬೋರ್ವೆಲ್ ಅನ್ನು ಕೊರೆಸುತ್ತಾರೆ ಆದರೆ ಅದಕ್ಕೆ ಹಾಕುವ ಕೇಸಿಂಗ್ ಪೈಪ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಹಾಗೂ ಅದನ್ನು ಇನ್ಸ್ಟಾಲೇಷನ್ ಮಾಡುವಾಗ ಎಚ್ಚರಿಕೆ ವಹಿಸದೆ ಬೋರ್ ವೆಲ್ ಕೊಲೆಪ್ಸ್ ಮಾಡಿಕೊಳ್ಳುತ್ತಾರೆ ಆದರೆ ಕೇಸಿಂಗ್ ಪೈಪ್ ಬಗ್ಗೆ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಬೋರ್ವೆಲ್ ಕೊರೆಸುವ ಸಮಯದಲ್ಲಿ ಕೇಸಿಂಗ್ ಪೈಪ್ ಅನ್ನು ಹಾಕುತ್ತಾರೆ ಕೆಲವರು ಹಾಕುವುದು ಕಟ್ ಆಗಿರುತ್ತದೆ ಹೀಗಾಗಿ ಬ್ರಾಂಡೆಡ್ ಕೇಸಿಂಗ್ ಪೈಪ್ ಅನ್ನು ಹಾಕಬೇಕಾಗುತ್ತದೆ. ಔಟರ್ ಕೇಸಿಂಗ್ ಎಂಬುದನ್ನು ಕೂಡ ಹಾಕಬಹುದು. ಕೇಸಿಂಗ್ ಪೈಪ್ ಏಳರಿಂದ ಎಂಟು ಇಂಚು ಇದ್ದರೆ ಔಟರ್ ಕೇಸಿಂಗ್ 10 ಇಂಚು ಇರುತ್ತದೆ, ಕೇಸಿಂಗ್ ಪೈಪ್ ಹಾಕುವಾಗ ಆರರಿಂದ ಹತ್ತು ಕೆಜಿ ಪ್ರೆಶರ್ ಇರಬೇಕು. ಪಿವಿಸಿ ಕೇಸಿಂಗ್ ಪೈಪ್ ಹಾಕುವಾಗ ಬಹಳ ಎಚ್ಚರಿಕೆಯಿಂದ ಹಾಕಬೇಕು. ಉತ್ತರ ಕರ್ನಾಟಕದ ಭಾಗಗಳಲ್ಲಿ ಪಿವಿಸಿ ಕೇಸಿಂಗ್ ಪೈಪ್ ಹಾಕುತ್ತಾರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಜಿಐ ಕೇಸಿಂಗ್ ಪೈಪ್ ಹಾಕಲಾಗುತ್ತದೆ. ಬೆಂಗಳೂರು, ಕೋಲಾರ ಭಾಗಗಳಲ್ಲಿ ಎಂಎಸ್ ಕೇಸಿಂಗ್ ಪೈಪ್ ಹಾಕುತ್ತಾರೆ.

ಕೇಸಿಂಗ್ ಪೈಪ್ ಹಾಕುವಲ್ಲಿ ಫೇಲ್ಯೂರ್ ಆದರೆ ಬೋರ್ವೆಲ್ ನಲ್ಲಿ ನೀರು ಇದ್ದರೂ ಪ್ರಯೋಜನವಿಲ್ಲ. ಕೇಸಿಂಗ್ ಪೈಪ್ ಇನ್ಸ್ಟಾಲೇಷನ್ ನಲ್ಲಿ ಫೇಲ್ಯೂರ್ ಆದರೆ ಬೋರ್ವೆಲ್ ಕೊಲೆಪ್ಸ್ ಆಗುತ್ತದೆ ಜೊತೆಗೆ ಬೋರ್ವೆಲ್ ರಾಡ್ ಗಳು ಜಾಮ್ ಆಗುತ್ತದೆ. ಕೇಸಿಂಗ್ ಪೈಪ್ ಕಟ್ ಆದರೆ ಪಂಪ್ ಗೆ ಸಮಸ್ಯೆ ಆಗುತ್ತದೆ, ಮಡ್ಡಿ ವಾಟರ್ ಬರುತ್ತದೆ ಬೋರ್ವೆಲ್ ನಲ್ಲಿ ಕ್ಲಿಯರ್ ವಾಟರ್ ಬರಬೇಕು, ಬಿಳಿ ಬಣ್ಣದ ನೀರು ಬರಬೇಕು ಬಿಳಿ ಬಣ್ಣದ ನೀರು ಬಂದರೆ ಕೇಸಿಂಗ್ ಪೈಪ್ ಇನ್ಸ್ಟಾಲೇಷನ್ ಸರಿಯಾಗಿ ಮಾಡಿದ್ದಾರೆ ಎಂದು ಅರ್ಥ. ಕೆಲವೊಂದು ಭಾಗದಲ್ಲಿ ನೂರು ಇನ್ನೂರು ಅಡಿ ಕೇಸಿಂಗ್ ಪೈಪ್ ಹೋಗುವ ಸಮಯದಲ್ಲಿ ಇನ್ನರ್ ಕೇಸಿಂಗ್ ಪೈಪ್ ಹಾಗೂ ಔಟರ್ ಕೇಸಿಂಗ್ ಪೈಪ್ ಹಾಕಿದರೂ ಮಡ್ಡಿ ವಾಟರ್ ಬರುತ್ತದೆ ಆಗ ಫಿಲ್ಟರ್ ಕೇಸಿಂಗ್ ಪೈಪ್ ಹಾಕಬೇಕು. ಬೋರ್ ಕೊರೆಯುವ ಸಮಯದಲ್ಲಿ ಕೇಸಿಂಗ್ ಪೈಪ್ ಗಳನ್ನು ತಂದುಕೊಟ್ಟರೆ ಮಾತ್ರ ಈ ಕೆಲಸ ಆಗುತ್ತದೆ, ಇರುವ ಕಡಿಮೆ ಸಮಯದಲ್ಲಿ ಏಜೆಂಟರಿಗೆ, ಮಾಲೀಕರಿಗೆ ಕನ್ವಿನ್ಸ್ ಮಾಡಬೇಕಾಗುತ್ತದೆ.

ಬೋರ್ವೆಲ್ ಲಾರಿಗಳಲ್ಲಿ ಇಟ್ಟುಕೊಳ್ಳುವ ಕೇಸಿಂಗ್ ಪೈಪ್ ಬ್ರಾಂಡೆಡ್ ಆಗಿರುವುದಿಲ್ಲ 2.5 ಕೆಜಿ ಫ್ರೆಶರ್ ಇರುವ ಕೇಸಿಂಗ್ ಪೈಪ್ ಗಳನ್ನು ಇಟ್ಟುಕೊಳ್ಳುತ್ತಾರೆ ಲೂಸ್ ಬಂದರೆ ಬ್ರಾಂಡೆಡ್ ಕೇಸಿಂಗ್ ಪೈಪ್ ಗಳನ್ನು ಹಾಕಬೇಕಾಗುತ್ತದೆ ಹಾಗೂ ದೀರ್ಘಾವಧಿ ಬಾಳಿಕೆ ಬರುತ್ತದೆ ಇಲ್ಲದೆ ನಾರ್ಮಲ್ ಕೇಸಿಂಗ್ ಪೈಪ್ ಹಾಕಿದರೆ ಬೋರ್ವೆಲ್ ಕೊರೆಸಿದಾಗ ಬಂದ ನೀರು ಕೆಲವೆ ದಿನಗಳಲ್ಲಿ ಇರುವುದಿಲ್ಲ. ಮೇಲೆ ಹಾಕುವ ಪೈಪ್ ಗಳಲ್ಲಿ ಒಂದನ್ನು ಮಾತ್ರ ಸಾದಾ ಪೈಪ್ ಹಾಕಿ ಕೆಳಗೆ ಫಿಲ್ಟರ್ ಕೇಸಿಂಗ್ ಪೈಪ್ ಹಾಕಬೇಕು.

ಸಾದಾ ಕೇಸಿಂಗ್ ಪೈಪ್ ಹಾಕುವುದರಿಂದ ನೀರಿನ ಫೋರ್ಸ್ ಗೆ ಒಡೆದು ಹೋಗುತ್ತದೆ. ಬೋರ್ವೆಲ್ ಹಾಕುವ ಮೊದಲು ಬೋರ್ವೆಲ್ ಹಾಕುವ ಭೂಮಿಯ ಒಳಭಾಗ ಗಟ್ಟಿ ಶಿಲಾವಲಯವೊ ಮೃದು ಶಿಲಾವಲಯವೋ ತಿಳಿದುಕೊಂಡು ಕೇಸಿಂಗ್ ಪೈಪ್ ಅನ್ನು ಅಚ್ಚುಕಟ್ಟಾಗಿ ಇನ್ಸ್ಟಾಲೇಷನ್ ಮಾಡಬೇಕು. ಕೇಸಿಂಗ್ ಪೈಪ್ ಹಾಕುವುದರಲ್ಲಿ ಜಾಗರೂಕತೆ ಇಲ್ಲದಿದ್ದರೆ ಬೋರ್ವೆಲ್ ಕೊರೆಸಿದ್ದು ವ್ಯರ್ಥವಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *