ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟ ರಜನೀಕಾಂತ್, ಅದು ಎಷ್ಟು ಕೋಟಿ ಗೊತ್ತಾ

0 1

ದಕ್ಷಿಣ ಭಾರತ ಚಿತ್ರರಂಗವೆಂದರೆ ನಾಯಕ ನಟರದ್ದೇ ಮೇಲುಗೈ. ಚಿತ್ರದಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ಇರುತ್ತೋ ಅದಕ್ಕಿಂತ ದುಪ್ಪಟ್ಟು ನಾಯಕ ನಟನ ಆಯ್ಕೆ ವಿಷಯದಲ್ಲಿ ನಿರ್ಮಾಪಕರು ಕಾಳಜಿ ವಹಿಸುತ್ತಾರೆ. ಏಕೆಂದರೆ ಕಾಲಿವುಡ್, ಟಾಲಿವುಡ್, ಮಾಲಿವುಡ್ ಹಾಗೂ ನಮ್ಮ ಚಂದನವನದಲ್ಲಿ ನಾಯಕ ನಟರದ್ದೇ ದರ್ಬಾರ್. ಇಲ್ಲಿ ನಾಯಕ ಕೇವಲ ನಟನಷ್ಟೇ ಅಲ್ಲ ನಿಜ ಜೀವನದ ದೇವರಾಗಿರುತ್ತಾನೆ

ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಸಿನಿರಂಗದಲ್ಲಿ ಕೋಟಿ ಗಳಿಕೆ ಹೊಂದಿರುವ ತಾರೆಯರ ಸಂಭಾವನೆ ವಿವರ ಬಹಳವೇ ಇದೆ. ಅದರಲ್ಲಿ ನಾವು ಈ ಲೇಖನದಲ್ಲಿ ಸಧ್ಯ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜನಪ್ರಿಯ ನಾಯಕ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಂಭಾವನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೊಣ.

ದಕ್ಷಿಣ ಭಾರತ ಚಿತ್ರರಂಗದ ಹೀರೋಗಳು ಅಭಿಮಾನಿಗಳ ಪಾಲಿನ ಅಣ್ಣನಾಗಿ ಬಾಂಧವ್ಯ ಬೆಸೆದುಕೊಂಡಿರುವುದರಿಂದ ಸಿನಿಮಾ ಎಂದರೆ ಹಬ್ಬದ ವಾತಾವರಣ ಎಲ್ಲಾ ರಾಜ್ಯಗಳಲ್ಲೂ ಕಂಡು ಬರುತ್ತದೆ. ಹೀರೋಗಳು ಕೂಡಾ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಚಿತ್ರದಿಂದ ಚಿತ್ರಕ್ಕೆ ಮ್ಯಾನರೀಸಂ ಬದಲಾಯಿಸುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಿರುತ್ತಾರೆ. ಅಭಿಮಾನಿಗಳ ಶ್ರೀರಕ್ಷೆ ಪಡೆದ ಹೀರೋಗಳ ಗಳಿಕೆ ಚಿತ್ರದ ನಿರ್ಮಾಣ ವೆಚ್ಚದಲ್ಲಿ ಶೇ 25 ರಿಂದ ಶೇ 50 ರಷ್ಟು ಪಾಲು ಪಡೆಯುತ್ತಾರೆ ಎಂದರೆ ಅಚ್ಚರಿಯಾದರೂ ನಂಬಲೇ ಬೇಕು. ಕೋಟಿಗಟ್ಟಲೇ ಹಣ ಗಳಿಸುವ ದಕ್ಷಿಣದ ನಾಯಕರು ಬಾಲಿವುಡ್ ಹೀರೋಗಳಿಗೆ ಸರಿಸಾಟಿಯಾಗಿ ನಿಲ್ಲುತ್ತಿದ್ದಾರೆ.

ಸಿನಿಮಾ ರಂಗದಲ್ಲಿ ಗೆಲುವು ಮತ್ತು ಸಂಭಾವನೆಯ ವಿಚಾರವಾಗಿಯೇ ಸ್ಟಾರ್ ಗಳಿಗೆ ಪಾಪ್ಯುಲಾರಿಟಿ ಗೊತ್ತು ಪಡಿಸಲಾಗುತ್ತದೆ. ನಂಬರ್ ಗಳ ಪಟ್ಟ ಕಟ್ಟಲಾಗುತ್ತಿದೆ. ಇದೀಗ ಭಾರತೀಯ ಸಿನಿಮಾ ರಂಗದಲ್ಲಿ ನಂ.1 ನಟ ಯಾರು? ಯಾರು ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ಕಾರಣ ಅಚ್ಚರಿ ಪಡುವಂತೆ ರಜನೀಕಾಂತ್ ಸಂಭಾವನೆ ಪಡೆಯುತ್ತಿದ್ದಾರಂತೆ.

ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರು ಬಾಲಿವುಡ್ ನಲ್ಲೇ ಇದ್ದಾರೆ ಎಂದು ನಂಬಿಸುತ್ತಾ ಬರಲಾಗಿತ್ತು. ದಕ್ಷಿಣದ ಸಿನಿಮಾಗಳ ಬಜೆಟ್ ನ ಎರಡ್ಮೂರು ಪಟ್ಟು ಸಂಭಾವನೆಯನ್ನು ಬಾಲಿವುಡ್ ನಟರು ಪಡೆಯುತ್ತಾರೆ ಎಂದು ಗೇಲಿ ಮಾಡಲಾಗುತ್ತಿತ್ತು. ನೂರಾರು ಕೋಟಿ ಸಂಭಾವನೆ ಪಡೆಯುವ ಮೂಲಕ ಖಾನ್ ಖಾಂದಾನ್ ನಟರು ಯಾವಾಗಲೂ ನಂಬರ್ 1 ಪಟ್ಟದಲ್ಲೇ ಬೀಗುತ್ತಾರೆ ಎನ್ನುವುದು ದಾಖಲಾಗಿತ್ತು. ಇದೀಗ ಎಲ್ಲವನ್ನೂ ಅಳಿಸಿ ಹಾಕುತ್ತಿದ್ದಾರೆ ರಜನೀಕಾಂತ್. ದಕ್ಷಿಣದ ಸಿನಿಮಾಗಳು ಬಾಲಿವುಡ್ ನಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ನೂರಾರು ಕೋಟಿ ರೂಪಾಯಿಗಳನ್ನು ಬಾಚುತ್ತಿರುವಾಗ, ಸಹಜವಾಗಿಯೇ ದಕ್ಷಿಣದ ನಟರು ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಅದರಲ್ಲೂ ತಮಿಳಿನ ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರು ಸಂಭಾವನೆಯ ವಿಚಾರದಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಬಾಲಿವುಡ್ ಖ್ಯಾತ ನಟರ ಸಂಭಾವನೆಯನ್ನೇ ಇವರು ಹಣ ಪಡೆಯುತ್ತಿದ್ದರು ಎನ್ನುವುದು ಸತ್ಯ. ಇದೀಗ ರಜನೀಕಾಂತ್ ಅವರು 169ನೇ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ಅವರು ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಇವರಾಗಿದ್ದಾರೆ. 250ಕ್ಕೂ ಹೆಚ್ಚು ಕೋಟಿ ಈ ಸಿನಿಮಾ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗುತ್ತಿದೆಯಂತೆ.

Leave A Reply

Your email address will not be published.