ಎಲ್ಲರಿಗೂ ಪ್ರಯೋಜನ ಆಗುವಂತಹ ಕೆಲವು ಸಮಾನ್ಯಾವಾಗಿ ಆರೋಗ್ಯವನ್ನು ಹೆಚ್ಚಿಸುವಂತಹ ಸರಳ ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳೋಣ. ಕೆಲವರಿಗೆ ಆಹಾರದಲ್ಲಿ ನಾರಿನ ಅಂಶ ಫೈಬರ್ ಇರುವಂತಹ ಪದಾರ್ಥಗಳನ್ನು ಸೇವಿಸೋಕೆ ಡಾಕ್ಟರ್ಸ್ ಹೇಳ್ತಾರೆ. ಆದ್ರೆ ಯಾವ ಪದಾರ್ಥದಲ್ಕಿ ಫೈಬರ್ ಅಂಶ ಇರತ್ತೆ ಇರಲ್ಲ ಅನ್ನುವುದು ಕೆಲವರಿಗೆ ತಿಳಿದಿರಲ್ಲ ಅದರ ಬಗ್ಗೆ ನಮ್ಮ ಆರೋಗ್ಯಕ್ಕೆ ಬೇಕಾದ ಉತ್ತಮ ಅಂಶಗಳನ್ನು ತಿಳಿದುಕೊಳ್ಳೋಣ.

ನಾರು ಇರುವ ಪಾದಾರ್ಥಗಳು ಏನೆಂದರೆ ಯಾವುದೇ ಬಳ್ಳಿ ಅಲ್ಲ. ಆಹಾರದಲ್ಲಿ ಇರುವ ನಾರಿನ ಅಂಶ ಬೇರೆಯೇ ಇದೆ ಇದರಲ್ಲಿ ಎರಡು ವಿಧ. ಒಂದು ಸೋಲಿಬಲ್ ಫೈಬರ್ ಅಂದ್ರೆ ನೀರಿನಲ್ಲಿ ಕರಗುವ ನಾರಿನ ಅಂಶ ಇನ್ನೊಂದು ಇನ್ಸಾಲಿಬಲ್ ಫೈಬರ್ ಅಂದ್ರೆ ನೀರಿನಲ್ಲಿ ಕರಗದೆ ಇರುವ ನಾರಿನ ಅಂಶ. ಈ ಎರಡೂ ಅಂಶಗಳೂ ಕೂಡಾ ನಮ್ಮ ಆರೋಗ್ಯಕ್ಕೆ ಬೇಕಾಗುತ್ತೆ ಅದರಲ್ಲಿ ಹೆಚ್ಚಾಗಿ ನಮಗೆ ನೀರಿನಲ್ಲಿ ಕರಗುವ ನಾರಿನ ಅಂಶ ಬೇಕಾಗುತ್ತದೆ. ಹಾಗೇ ಸುಮ್ಮನೆ 100, 150 ವರ್ಷಗಳ ಹಿಂದೆ ಹೋದರೆ ನಮ್ಮ ಆಹಾರದಲ್ಲಿ ಬರೀ ಹಣ್ಣುಗಳು ಮಾತ್ರವೇ ಇದ್ದವು. ಹಾಗಾಗಿ ನಮಗೆ ಒಂದು ದಿನಕ್ಕೆ ಸಕಾದಷ್ಟು 50 ಗ್ರಾಂ ಅಷ್ಟು ನಾರಿನ ಅಂಶ ನಮಗೆ ಸಿಗುತ್ತಿತ್ತು. ಇವತ್ತಿನ ಜೀವನದ ನಮ್ಮ ಆಹಾರ ಪದ್ಧತಿಯಲ್ಲಿ 5 ಗ್ರಾಂ ಅಷ್ಟು ಕೂಡಾ ನಾರಿನ ಅಂಶ ನಮಗೆ ಸಿಗುತ್ತಿಲ್ಲ. ಹೀಗಾಗಿ ಮೂಲವ್ಯಾಧಿ, ಮಲಬದ್ಧತೆ ಅಂತಹ ಇಷ್ಟೊಂದು ರೋಗಗಳು ಈಗ ನಮಗೆ ಕಾಡುತ್ತಿವೆ. ಈ ಮೂಲವ್ಯಾಧಿ, ಮಲಬದ್ಧತೆ ಇವುಗಳಿಗೆಲ್ಲ ಮೂಲ ಕಾರಣ ನಮಗೆ ಬೇಕಾದ ನೀರಿನಲ್ಲಿ ಕರಾಗುವಂತಹ ನಾರಿನ ಅಂಶ ಇಲ್ಲದೆ ಇರುವುದು. ಹಾಗಾದ್ರೆ ನೀರಿನಲ್ಲಿ ಕರಗುವ ನಾರಿನ ಅಂಶ ಯಾವುದರಲ್ಲಿದೆ? ಅಂತ ನೋಡುವುದಾದರೆ, ಎಲ್ಲ ಹಣ್ಣು ತರಕಾರಿಗಳಲ್ಲಿ ಕೂಡಾ ನೀರಿನಲ್ಲಿ ಕರಗುವ ನಾರಿನ ಅಂಶ ಇದೆ. ಹಾಗಾಗಿ ನಾವು ಹಣ್ಣು ತರಕಾರಿಗಳನ್ನು ಬೇಯಿಸಿಯೋ ಅಥವಾ ಹಸಿಯಾಗಿಯೋ ಒಟ್ಟಿನಲ್ಲಿ ತರಕಾರಿ ಹಣ್ಣುಗಳನ್ನು ಜಾಸ್ತಿ ಸೇವಿಸಬೇಕು. ಧಾನ್ಯಗಳ ತೌಡಿನಲ್ಲಿ ನಾರಿನ ಅಂಶ ಇರತ್ತೆ ಆದ್ರೆ ಇದರಲ್ಲಿ ನೀರಿನಲ್ಲಿ ಕರಗುವ ನಾರಿನ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಕೆಂಪು ಅಕ್ಕಿಯನ್ನ ಹೆಚ್ಚು ತಿನ್ನಬೇಕು ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಇರತ್ತೆ ಜೊತೆಗೆ ಚೆನ್ನಾಗಿ ಬೆಯತ್ತೆ ಜೀರ್ಣ ಆಗುತ್ತದೆ. ನಾವು ಧಾನ್ಯಗಳ ತೌಡನ್ನು ದನಗಳಿಗೆ ಕೊಡ್ತೀವಿ ಅದನ್ನ ತಿಂದು ದನಗಳು ಆರಾಮಾಗಿ ಇರತ್ತೆ ಆದ್ರೆ ನಾವು ಬೇಡದ ವಸ್ತು ಅಂತ ದನಗಳಿಗೆ ಕೊಟ್ಟು ನಾವು ಮಾತ್ರ ನೋಡೋಕೆ ಚೆನ್ನಾಗಿ ಕಾಣುವ ಬಿಳಿ ಅಕ್ಕಿಯ ಅನ್ನವನ್ನು ಊಟ ಮಾಡಿ ರೋಗವನ್ನು ತಂದುಕೊಳ್ಳುತ್ತೇವೆ. ಹಾಗಾಗಿ ನಾವು ತೌಡು ರಹಿತ ಆಹಾರಗಳನ್ನು ಬಿಟ್ಟು ತೌಡು ಸಹಿತ ಆಹಾರಗಳನ್ನು ಸೇವಿಸಬೇಕು. ಅದು ಗೋಧಿ ರಾಗಿ ಜೋಳ ಇರಬಹುದು ಇವೆಲ್ಲದರ ಹೊರಗಿನ ಸಿಪ್ಪೆಯಲ್ಲಿ ನಾರಿನ ಅಂಶ ಇರುತ್ತದೆ.ಜಾಸ್ತಿ ನಾರಿನ ಅಂಶ ಇರುವ ಆಹಾರವನ್ನು ಸೇವಿಸುವುದರಿಂದ ನಮ್ಮ ಮೆದುಳಿಗೆ ಬೇಗನೆ ಹೊಟ್ಟೆ ತುಂಬಿದ ಸಂದೇಶ ರವಾನೆ ಆಗುತ್ತದೆ.

ಇನ್ನೊಂದು ನಾರಿನ ಅಂಶ ಹೆಚ್ಚು ಇರುವ ಪದಾರ್ಥ ಎಂದರೆ ರಾಗಿ ಮತ್ತು ಸಿರಿಧಾನ್ಯ. ಆದರೆ ಅದರಲ್ಲಿ ನೀರಿನಲ್ಲಿ ಕರಗದ ನಾರಿನಂಶ ಇರುವುದರಿಂದ ಸಿರಿಧಾನ್ಯದಂತಹ ನಾರಿನ ಅಂಶದಿಂದಾಗಿ ಶುಗರ್, ಬೊಜ್ಜು ಹತೋಟಿಗೆ ಬರುತ್ತದೆ. ಆದರೆ ಸಿರಿಧಾನ್ಯವನ್ನೇ ಹೆಚ್ಚು ಬಳಸಿದಾಗ ನಮಗೆ ಆಟೋ ಇಮ್ಯುನ್ ಕಾಯಿಲೆ ಬರುತ್ತದೆ. ಈ ನೀರಿನಲ್ಲಿ ಕರಗದ ನಾರಿನ ಅಂಶ ಕೆಟ್ಟ ಬ್ಯಾಕ್ಟೀರಿಯಾದ ಆಹಾರ ಆಗತ್ತೆ. ಕೆಟ್ಟ ಬ್ಯಾಕ್ಟೀರಿಯಾ ಜಾಸ್ತಿ ಆದಾಗ ಆಮಶಂಕೆ, ಚರ್ಮದ ಕಾಯಿಲೆ, ಅಲ್ಸರ್, ಅಸಿಡಿಟಿ ಹೆಚ್ಚು ಆಗತ್ತೆ. ಹಾಗಾಗಿ ಸಿರಿಧಾನ್ಯವನ್ನು ಕೂಡಾ ಮಿತಿಯಲ್ಲಿ ಸೇವಿಸಬೇಕು. ನಾರಿನ ಅಂಶ ಇಯುವ ಇನ್ನೊಂದು ಆಹಾರ ಅಗಸೆ ಬೀಜ… ಅಗಸೆ ಬೀಜದಲ್ಲಿ ಶೇಕಡಾ 50ರಷ್ಟು ಫೈಬರ್ ಅಂಶ ಇರುತ್ತದೆ. ಹಾಗಾಗಿ ಈ ಅಗಸೆ ಬೀಜವನ್ನು ಪ್ರತೀ ದಿನ ಒಂದು ಚಮಚಡಷ್ಟು ಹಸಿಯಾಗಿ ತಿನ್ನಬೇಕು ಹಾಗೂ ಇದರಲ್ಲಿರುವ ನಾರಿನ ಅಂಶದ ಜೋಯೆಗೆ ಒಮೆಗ3 ಕೂಡಾ ದೊರೆಯುತ್ತದೆ.

ನಾರಿನ ಅಂಶ ಇರುವ ಇನ್ನೊಂದು ಆಹಾರ ಎಂದರೆ ಅದು ಮೆಂತೆ… ಇದರಲ್ಲಿ ಕೂಡಾ ಶೇಕಡಾ 50ರಷ್ಟು ನಾರಿನ ಅಂಶ ಇದ್ದು ಅದರಲ್ಲಿ ಶೇಕಡಾ 25 ರಷ್ಟು ನೀರಿನಲ್ಲಿ ಕರಗುವ ಮತ್ತು ಇನ್ನು 25 ಶೇಕಡಾ ನೀರಿನಲ್ಲಿ ಕರಗದ ಅಂಶಗಳು ಇರುತ್ತವೆ. ಮಲಬದ್ಧತೆ ಹಾಗೂ ಮೂಲವ್ಯಾಧಿ ಇರುವವರು ಮೆಂತೆಯನ್ನ ಹಸಿಯಾಗಿ ಪುಡಿ ಮಾಡಿಕೊಂಡು ಪ್ರತೀ ದಿನ ಒಂದು ಚಮಚ ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಕಡಿಮೆ ಆಗುತ್ತೆ ಅಷ್ಟೇ ಅಲ್ಲದೆ ಇದರಲ್ಲಿ 50 ಶೇಕಡಾ ಅಷ್ಟು ನಾರಿನ ಅಂಶ ಇರತ್ತೆ ಹಾಗೂ ದೇಹಕ್ಕೆ ಕೂಡಾ ತಂಪು. ಅಷ್ಟೇ ಅಲ್ಲದೆ ಡಯಾಬಿಟಿಸ್ ಹಾಗೂ ಕೊಬ್ಬು ಹತೋಟಿಗೆ ಬರತ್ತೆ ಜೊತೆಗೆ ಚರ್ಮದ ರೋಗಗಳು ಇರಲ್ಲ. ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಹಾಗಾಗಿ ಮೆಂತೆಯನ್ನ ಸೇವಿಸುವುದು ಒಳ್ಳೆಯದು. ನಾರಿನ ಅಂಶ ಇರುವ ಇನ್ನೊಂದು ಪದಾರ್ಥ ಎಳ್ಳು… ಪ್ರತೀ ನಿತ್ಯ ಒಂದು ಅಥವಾ ಅರ್ಧ ಚಮಚದಷ್ಟು ಬಿಳಿ ಎಳ್ಳು ಅಥವಾ ಕಪ್ಪು ಎಳ್ಳನ್ನು ಸೇವಿಸುವುದರಿಂದಲೂ ಸಹ ನಾರಿನ ಅಂಶ ದೊರೆಯುತ್ತದೇ. ಈ ಮೂಲಕ ನಮ್ಮ ಆರೋಗ್ಯ ವೃದ್ಧಿ ಆಗಲು ಸಹಾಯ ಮಾಡುತ್ತದೆ.

ಈ ಎಲ್ಲ ಪದಾರ್ಥಗಳೂ ನೇರವಾಗಿ ನಮ್ಮ ಹಿಟ್ಟೆಯಲ್ಲಿಯೇ ಉಳಿಯದೆ ಕರುಳಿಗೆ ಹೋಗು ಅಲ್ಲಿ ಮಲ ಉತ್ಪಾದನೆ ಆಗಲು ಅಲ್ಲಿರುವ ಬ್ಯಾಕ್ಟೀರಿಯಗಳಿಗೆ ಸಹಾಯ ಮಾಡುತ್ತದೆ . ಈ ಮೂಲಕ ಮಲ ಸರಾಗವಾಗಿ ವಿಸರ್ಜನೆ ಆಗಳು ಸಹಾಯ ಮಾಡುತ್ತದೆ. ನಾರಿನ ಅಂಶ ಕಡಿಮೆ ಇದ್ರೆ ಮಲಬದ್ಧತೆ ಹೆಚ್ಚು ಆಗುತ್ತದೆ ಹಾಗೂ ನಾರಿನ ಅಂಶ ಕಡಿಮೆ ಆದರೆ ಮಲಬದ್ಧತೆ ಉಂಟಾಗತ್ತೆ ಹಾಗೂ ಕೋಲೇಸ್ಟ್ರಾಲ್ ಕೂಡ ಹೆಚ್ಚು ಆಗತ್ತೆ. ದೇಹದಲ್ಲಿ ಅನಗತ್ಯವಾದ ಕೊಲೆಸ್ಟ್ರಾಲ್ ಅನ್ನು ಮಲದ ಮೂಲಕ ಹೊರ ಹಾಕಲು ನಾರಿನ ಅಂಶ ಸಹಾಯ ಮಾಡುತ್ತದೆ. ನಮ್ಮ ದೇಹದ ಬೊಜ್ಜನ್ನು ಕರಗಿಸಲು, ಡಯಾಬಿಟಿಸ್ ಕಡಿಮೆ ಮಾಡಲು ನಮಗೆ ನಮ್ಮ ದೇಹಕ್ಕೆ ನಾರಿನ ಅಂಶ ಬೇಕೇ ಬೇಕು.

By

Leave a Reply

Your email address will not be published. Required fields are marked *