ಜ್ವ ರ ಬಂದ ತಕ್ಷಣ ಮನೆಯಲ್ಲೇ ಮಾಡಬೇಕಾದ ಮನೆಮದ್ದು

0 16

ಸಾಮಾನ್ಯವಾಗಿ ಜ್ವರ ಬಂದರೆ ಜ್ವರದ ತಾಪಮಾನ 98.4 ಡಿಗ್ರಿ ಫ್ಯಾರನ್ಹೀಟ್ ಇದಕ್ಕಿಂತ ಜಾಸ್ತಿ ತಾಪಮಾನ ಇದ್ದಾಗ ನಮಗೆ ಜ್ವರ ಬಂದಿದೆ ಎಂದು ಅರ್ಥ. 101 ಡಿಗ್ರಿ ಫ್ಯಾರನ್ಹೀಟ್ ವರೆಗೂ ಜ್ವರ ಇದ್ದರೆ ಅದು ಸಾಮಾನ್ಯವಾಗಿ ಎಲ್ಲರಿಗೂ ವಾತಾವರಣದಲ್ಲಿ ಉಂಟಾಗುವ ಬದಲಾವಣೆ ನೀರಿನ ಬದಲಾವಣೆ ಅವುಗಳ ಮೂಲಕ ಬರುವಂತಹದ್ದು. ಇದಕ್ಕಾಗಿ ನಾವು ಅಷ್ಟಾಗಿ ಮನೆಯಲ್ಲಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾಡಬಾರದು ಹೆಚ್ಚಾಗಿ ನಾವು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತದೆ. ಇದರಿಂದ ನಂತರ ಅನೇಮಿಯ ಬರುವ ಸಾಧ್ಯತೆಯೂ ಇದ್ದು ಸ್ವಲ್ಪ ವರ್ಷಗಳ ನಂತರ ಈ ಅನಿಮಿಯಾ ರೋಗವು ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಸಾಧ್ಯತೆಯೂ ಇದೆ ಎಂದು ಹೇಳುತ್ತಾರೆ. ಹಾಗಾಗಿ ನಾವು ಈ ರೀತಿಯ ಸಣ್ಣಪುಟ್ಟ ಜ್ವರಗಳಿಗೆ ಪ್ರತಿಯೊಂದಕ್ಕೂ ಡಾಕ್ಟರ್ ಬಳಿ ಹೋಗದೆ ಮನೆಯಲ್ಲಿಯೇ ಸಿಗುವಂತಹ ಮನೆಮದ್ದು ಗಳನ್ನು ಬಳಸಿಕೊಂಡು ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಲೇಖನದ ಮೂಲಕ ಬೇಗ ಜ್ವರ ಕಡಿಮೆಯಾಗಲು ನಾವು ಯಾವ ರೀತಿ ಮನೆಮದ್ದನ್ನು ಮಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.

ಮನೆಮದ್ದುಗಳನ್ನು ಮೊದಲು ಮೂರು ದಿನಗಳ ಕಾಲ ಮಾಡಿನೋಡಿ ಅದಾಗಿಯೂ ಕಡಿಮೆಯಾಗದಿದ್ದಲ್ಲಿ ನಾಲ್ಕನೇ ದಿನದ ನಂತರ ವೈದ್ಯರನ್ನು ಸಂಪರ್ಕಿಸಬಹುದು. ಜ್ವರ ಬಂದಾಗ ನಾವು ಮನೆಯಲ್ಲಿ ಮೊದಲು ಮಾಡಬೇಕಾದ ಕೆಲಸ ನಮ್ಮ ಹಣೆಯ ಮೇಲೆ ಆಗಾಗ ತಣ್ಣೀರು ಬಟ್ಟೆಯನ್ನಹಾಕುತ್ತಿರುವುದು. ಜ್ವರ ಬಂದಾಗ ಕೆಲವು ಜನರು ಸ್ನಾನ ಮಾಡುವುದೇ ಬಿಡುತ್ತಾರೆ. ಆದರೆ ಈ ರೀತಿಯಾಗಿ ಮಾಡಿದೆ ಜ್ವರಬಂದು ಸಮಯದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು ಆದರೆ ಬಹಳ ಹೊತ್ತು ಸ್ಥಾನಮಾನ 5 ನಿಮಿಷದಲ್ಲಿ ಸ್ನಾನ ಮಾಡಿದರೆ ಉತ್ತಮ. ಜ್ವರವನ್ನು ಕಡಿಮೆ ಮಾಡಿಕೊಳ್ಳಲು ಇನ್ನೊಂದು ವಿಧಾನ ಎಂದರೆ ಆಲಿವ್ ಆಯಿಲ್ ನಿಂದ ನಮ್ಮ ಪಾದಗಳಿಗೆ 5 ರಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳುವುದು. ಹೀಗೆ ಮಸಾಜ್ ಮಾಡಿಕೊಳ್ಳುವುದರಿಂದ ಆಯಾಸದಿಂದ ಜ್ವರ ಬಂದಿದ್ದರೆ ಬಹುಬೇಗ ಕಡಿಮೆಯಾಗುತ್ತದೆ.

ವಿಟಮಿನ್-ಸಿ ಅಂಶ ಹೆಚ್ಚಾಗಿರುವಂತಹ ಹಣ್ಣುಗಳ ಸೇವನೆ ಹೆಚ್ಚಾಗಿ ಮಾಡಬೇಕು ಅಂತ ಹಣ್ಣುಗಳ ಜ್ಯೂಸ್ ಹೆಚ್ಚಾಗಿ ಕುಡಿಯಬೇಕು. ಉದಾಹರಣೆಗೆ ಕಿತ್ತಳೆ ಹಣ್ಣು , ದ್ರಾಕ್ಷಿ ,ಕಲ್ಲಂಗಡಿ ಹಾಗೂ ಸಾಧ್ಯವಾದಷ್ಟು ಎಳನೀರನ್ನು ಕುಡಿಯುವುದು ಸಹ ಒಳ್ಳೆಯದು. ಇನ್ನು ತಿಂಡಿಯ ವಿಚಾರಕ್ಕೆ ಬಂದರೆ ಜ್ವರ ಬಂದಾಗ ಇಡ್ಲಿ ತಿನ್ನುವುದು ಬಹಳ ಉತ್ತಮ. ಜ್ವರ ಬಂದಾಗ ಪ್ರತಿ ಒಂದು ಗಂಟೆಗೆ ಒಂದು ಲೋಟದಷ್ಟು ಬೆಚ್ಚಗಿನ ನೀರನ್ನು ಕುಡಿಯಬೇಕು. ಪ್ರತಿ ಒಂದು ಗಂಟೆಗೆ ಒಂದು ಲೋಟದಷ್ಟು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಬಹಳ ಬೇಗ ಜ್ವರ ಕಡಿಮೆಯಾಗುತ್ತದೆ. ಈರುಳ್ಳಿಯನ್ನು ರೌಂಡಾಗಿ ಕಟ್ ಮಾಡಿಕೊಂಡು ಮಲಗುವ ಸಮಯದಲ್ಲಿ ನಮ್ಮ ಪಾದಕ್ಕೆ ತಾಗುವ ಹಾಗೆ ಸಾಕ್ಸ್ ಒಳಗೆ ಹಾಕಿಕೊಂಡು ಮಲಗಿದರೆ ಜ್ವರ ಬಹಳ ಬೇಗ ಕಡಿಮೆಯಾಗುತ್ತದೆ. ಇವೆಲ್ಲ ಸಾಮಾನ್ಯವಾಗಿ ನಾವು ಜ್ವರ ಬಂದಾಗ ಎಲ್ಲರೂ ಮಾಡಬಹುದಾದಂತಹ ಮೂಲ ಔಷಧ ಎಂದು ಹೇಳಬಹುದು.

ಇನ್ನು ವೈದ್ಯರನ್ನು ಸಂಪರ್ಕಿಸದೆ ನಾವು ಮನೆಯಲ್ಲಿಯೇ ಮನೆಮದ್ದನ್ನು ಮಾಡಿಕೊಂಡು ಜ್ವರವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ನೋಡುವುದಾದರೆ ಮನೆಮದ್ದುಗಳು ಈ ರೀತಿಯಾಗಿರುತ್ತದೆ. ಮೊದಲನೇ ಮನೆಮದ್ದು ಎಂದರೆ ಸ್ಟವ್ ಮೇಲೆ ಒಂದು ಲೋಟ ನೀರನ್ನು ಕುದಿಯಲು ಇಟ್ಟು ನೀರಿಗೆ ಸ್ವಲ್ಪ ಚಕ್ಕೆ ಪುಡಿ ಸ್ವಲ್ಪ ಶುಂಠಿ ಸ್ವಲ್ಪ ಕಾಳುಮೆಣಸು ಹಾಗೂ 7 ರಿಂದ 8 ತುಲಸಿ ಎಲೆಗಳನ್ನು ಹಾಕಿ ಅದನ್ನು ಕುದಿಸಿ ನಂತರ ಶೋಧಿಸಿಕೊಂಡು ಕುಡಿಯಬೇಕು ಹಾಗೆ ಕುಡಿಯಲು ಆಗದೇ ಇದ್ದಲ್ಲಿ ಅರ್ಧ ಟೀ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿಕೊಂಡು ಕುಡಿಯಬಹುದು.

ಜ್ವರ ಕಡಿಮೆ ಮಾಡಿಕೊಳ್ಳಲು ಎರಡನೇ ಮನೆಮದ್ದು ಎಂದರೆ ಮೊದಲಿನ ಹಾಗೆ ಸ್ಟೋರ್ ಮೇಲೆ ಒಂದು ಲೋಟ ನೀರನ್ನು ಕುದಿಸಲು ಇಟ್ಟು ನೀರಿಗೆ ಸ್ವಲ್ಪ ಶುಂಠಿ ಎಂಟರಿಂದ 10 ತುಳಸಿ ಹಾಗೂ ಪುದೀನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅವುಗಳನ್ನು ಶೋಧಿಸಿಕೊಂಡು ಕುಡಿಯಬಹುದು. ಎರಡು ಮನೆಮದ್ದು ಗಳಲ್ಲಿ ಯಾವುದೇ ಒಂದನ್ನಾದರೂ ಮಾಡಿಕೊಳ್ಳಬಹುದು.
ಇನ್ನು ಎರಡು ಮನೆಮದ್ದು ಗಳಿಗಿಂತಲೂ ಇನ್ನೂ ಉತ್ತಮವಾದ ಮನೆ ಮದ್ದು ಎಂದರೇ , ಔಷಧಿ ವೈರಲ್ ಜ್ವರ ಗಳನ್ನು ಸಹ ಕಡಿಮೆ ಮಾಡುತ್ತದೆ. ಸ್ಟೋವ್ ಮೇಲೆ ಒಂದು ಲೀಟರ್ ಅಷ್ಟು ನೀರನ್ನು ಕುದಿಸಲು ಇಟ್ಟು ಇದಕ್ಕೆ 50 ಗ್ರಾಂ ಎಷ್ಟು ಶುಂಠಿಯನ್ನು ಹಾಕಬೇಕು. ಶುಂಠಿಯನ್ನು ಹಾಕಿ ಒಂದು ಲೀಟರ್ ನೀರು ಅರ್ಧ ಲೀಟರ್ ನೀರಿಗೆ ಬರುವವರೆಗೂ ಇದನ್ನು ಚೆನ್ನಾಗಿ ಕುದಿಸಬೇಕು ನಂತರ ಶೋಧಿಸಿಕೊಂಡು ಬೇರೆ ಏನನ್ನು ಸೇರಿಸದೆ ಕುಡಿಯಬೇಕು. ಈ ರೀತಿ ಮಾಡುವುದರಿಂದ ಮೇಲೆ ಹೇಳಿದ ಎರಡು ಔಷಧಿಗಳಿವೆ ಒಂದು ಅತ್ಯುತ್ತಮ ಪರಿಣಾಮವನ್ನು ಬೀರುತ್ತದೆ.

ಪ್ರತಿಯೊಂದಕ್ಕೂ ವಿಜ್ಞಾನ ಮುಂದುವರೆದಿದೆ ಅಥವಾ ತಂತ್ರಜ್ಞಾನ ಮುಂದುವರಿದಿದೆ ಎಂದು ವೈದ್ಯರನ್ನು ಅವಲಂಬಿಸುವುದಕ್ಕಿಂತ ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿ ದೊರೆಯುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮಾಡಿಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಅಥವಾ ರೋಗಗಳನ್ನು ನಿವಾರಿಸಿಕೊಳ್ಳಬಹುದು. ಪ್ರತಿಯೊಂದು ಮನೆಮದ್ದಿನ ಹಿಂದೆಯೂ ಕೂಡ ಅದರದ್ದೇ ಆದ ವೈಜ್ಞಾನಿಕ ವಿಶೇಷತೆ ಇದ್ದೇ ಇರುತ್ತದೆ. ವಸ್ತುಗಳ ಮಹತ್ವವನ್ನು ಯಾವುದನ್ನು ಅರಿಯದೆ ನಮ್ಮ ಪೂರ್ವಜರು ಔಷಧೀಯ ವಸ್ತುವನ್ನಾಗಿ ಬಳಕೆ ಮಾಡಿಲ್ಲ

Leave A Reply

Your email address will not be published.