ಲೋ ಬಿಪಿ ಸಮಸ್ಯೆ ಇದ್ದೋರಿಗೆ ಈ ಮನೆಮದ್ದು ತುಂಬಾನೇ ಸಹಕಾರಿ

0 2

ಈಗಿನ ಬದಲಾದ ಜೀವನ ಶೈಲಿಯಲ್ಲಿ ರಕ್ತದ ಒತ್ತಡ ಎಂಬುದು ಜನರಲ್ಲಿ ಸರ್ವೇಸಾಮಾನ್ಯವಾದ ಸಮಸ್ಯೆಯಾಗಿದೆ. ಮೂವರಲ್ಲಿ ಒಬ್ಬರಿಗೆ ಬಿಪಿ ಇದ್ದೇ ಇರುತ್ತದೆ. ಹೈ ಬಿಪಿ ಅಥವಾ ಅಧಿಕ ರಕ್ತದ ಒತ್ತಡದಂತೆಯೇ ಲೋ ಬಿಪಿ ಅಥವಾ ಹೈಪೋಟೆನ್ಶನ್ ಕೂಡ ಮನುಷ್ಯನಿಗೆ ಅಪಾಯಕಾರಿ. ಕಾಲಕ್ರಮೇಣ ಮನುಷ್ಯನಿಗೆ ಎದುರಾಗುವ ರಕ್ತದ ಒತ್ತಡದ ಸಮಸ್ಯೆಗೂ ಮನುಷ್ಯನ ದೇಹದ ಒಳಗಿನ ಮುಖ್ಯವಾದ ಅಂಗಗಳ ಕಾರ್ಯ ವೈಖರಿಗೂ ನೇರವಾದ ಸಂಬಂಧವಿದೆ. ರಕ್ತದ ಒತ್ತಡ ಜಾಸ್ತಿ ಅಥವಾ ಕಡಿಮೆಯಾದರೂ ಇವುಗಳಿಗೆ ಹಾನಿ ತಪ್ಪಿದ್ದಲ್ಲ. ವೈದ್ಯಲೋಕದ ಪ್ರಕಾರ ಯಾವ ಮನುಷ್ಯ ಕಡಿಮೆ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವನೋ, ಅವನು ಅಧಿಕ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಿಂತ ತುಂಬಾ ಅಪಾಯದ ಸುಳಿಯಲ್ಲಿ ಸಿಲುಕಿರುತ್ತಾನೆ. ಅಂದರೆ ಕಡಿಮೆ ರಕ್ತದ ಒತ್ತಡ ಹೊಂದಿರುವ ವ್ಯಕ್ತಿಗೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮೆದುಳು, ಮೂತ್ರಪಿಂಡ ಮತ್ತು ಹೃದಯಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಆತನ ಜೀವಕ್ಕೆ ಸಂಚಕಾರ ಬರಬಹುದು.

ಆರೋಗ್ಯವೇ ಭಾಗ್ಯ ಎನ್ನುವ ಗಾದೆಮಾತಿನ ಪ್ರಕಾರ, ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ತುಂಬಾ ಮುಖ್ಯವಾಗುವುದು. ಒಮ್ಮೆ ಆರೋಗ್ಯ ಕಳೆದುಕೊಂಡರೆ ಕೋಟಿ ಕೋಟಿ ಹಣ ಸುರಿದರೂ ಸಹ ಯಾವುದೇ ಪ್ರಯೋಜನ ಬಾರದು. ಕೆಲವು ಆರೋಗ್ಯಕರ ಸಮಸ್ಯೆಗಳಲ್ಲಿ ಇತ್ತೀಚೆಗೆ ಸರ್ವೇ ಸಾಮಾನ್ಯ ಎಂದು ಕಾಡುತ್ತಿರುವ ಸಮಸ್ಯೆ ಎಂದರೆ ಅದು ರಕ್ತದ ಒತ್ತಡ. ಇದೊಂದು ಚಿಕ್ಕ ಸಮಸ್ಯೆ ಎಂದು ಸಾಕಷ್ಟು ಜನರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹಾಗೇ ಮಾಡುವುದರಿಂದ ಮುಂದೆ ಸಾಕಷ್ಟು ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಸಮಸ್ಯೆ ಅಥವಾ ಕಾಯಿಲೆ ಇದ್ದರೂ ಸಹ ಅದನ್ನು ಚಿಕ್ಕದಿರುವಾಗಲೇ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಈ ಲೇಖನದಲ್ಲಿ ನಾವು ಲೋ ಬಿಪಿ ಸಮಸ್ಯೆಗೆ ಸುಲಭವಾದ ಮನಮದ್ದನ್ನು ತಿಳಿದುಕೊಳ್ಳೋಣ. ಲೋ ಬಿಪಿ ಎಂದರೆ ಸಾಕಷ್ಟು ಜನರು ನಿರ್ಲಕ್ಷ್ಯ ಮಾಡುವವರೇ ಇದ್ದಾರೆ ಇದರಿಂದ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಲೋ ಬಿಪಿ ಗೆ ಕಾರಣ ಮತ್ತು ಪರಿಹಾರವನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಲೋ ಬಿಪಿ ಕಾಡುವ ಸಂಭವ ಹೆಚ್ಚಾಗಿ ಇರುತ್ತದೆ ಹಾಗಾಗಿ ಈ ಸಮಯದಲ್ಲಿ ಗರ್ಭಿಣಿಯರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಹಾಗೂ ಬಿಪಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಇನ್ನು ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರೂ ಸಹ ಲೋ ಬಿಪಿ ಸಮಸ್ಯೆ ಕಾಡುತ್ತದೆ ಈ ಸಂದರ್ಭದಲ್ಲಿ ಕೂಡಾ ಹೆಚ್ಚು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ತಪ್ಪದೆ ಅನುಸರಿಸಬೇಕು. ನಿರ್ಜಲೀಕರಣ ಸಮಸ್ಯೆ ಇರುವವರು ಸಹ ಲೋ ಬಿಪಿ ಸಮಸ್ಯೆ ಯನ್ನು ಎದುರಿಸುತ್ತಾರೆ. ಕಡಿಮೆ ನೀರು ಕುಡಿಯುವುದು ಸಹ ಲೋ ಬಿಪಿ ಗೆ ಒಂದು ಕಾರಣ ಎನ್ನಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಕೆಲವು ಸುಲಭವಾದ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ನಾವು ಸ್ವಲ್ಪ ಮಟ್ಟಿಗೆ ಆದರೂ ಲೋ ಬಿಪಿ ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಸುಲಭದ ಮನೆಮದ್ದುಗಳನ್ನು ನೋಡುವುದಾದರೆ, ತುಳಸಿ ಎಲೆ ಇದರಲ್ಲಿ ಪೊಟ್ಯಾಶಿಯಂ, ಮ್ಯಾಗ್ನೇಶಿಯಂ ಸತ್ವಗಳು ಇರುವುದರಿಂದ ಇವು ರಕ್ತದ ಒತ್ತಡವನ್ನು ಸಾಮಾನ್ಯ ರೂಪಕ್ಕೆ ತರಲು ಸಹಾಯಕಾರಿ ಆಗುತ್ತದೆ.

ಹತ್ತರಿಂದ ಹದಿನೈದು ತುಳಸಿ ಎಲೆಗಳನ್ನು ಜೇನುತುಪ್ಪದ ಜೊತೆ ಬೆರೆಸಿ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಇನ್ನು ಎರಡನೆಯದಾಗಿ ನಿಂಬೆ ಹಣ್ಣಿನ ರಸ. ಕಡಿಮೆ ರಕ್ತದ ಒತ್ತಡ ಸಮಸ್ಯೆ ಇರುವವರಿಗೆ ನಿಂಬೆ ಹಣ್ಣಿನ ಜ್ಯೂಸ್ ಬಹಳ ಪ್ರಯೋಜನಕಾರಿ ಎನ್ನಬಹುದು. ಡಿಹೈಡ್ರೇಶನ್ ಸಮಸ್ಯೆಗೂ ಸಹ ಉಪಯೋಗ ಆಗುವುದು. ಉಪ್ಪು ನೀರೂ ಸಹ ಕಡಿಮೆ ರಕ್ತದ ಒತ್ತಡ ಇರುವ ಜನರಿಗೆ ಸಹಾಯಕಾರಿ. ಇದರಲ್ಲಿ ಸೋಡಿಯಂ ಇರುವುದರಿಂದ ಇದು ರಕ್ತದ ಒತ್ತಡವನ್ನು ಹೆಚ್ಚು ಮಾಡುವ ಮೂಲಕ ಕಡಿಮೆ ರಕ್ತದ ಒತ್ತಡ ಇರುವವರಿಗೆ ಸಹಾಯಕಾರಿ. ಇನ್ನು ಪ್ರತಿದಿನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಮತ್ತು ಸ್ಟ್ರಾಂಗ್ ಬ್ಲಾಕ್ ಕಾಫಿ ಕುಡಿಯುವುದರಿಂದ ಸಹ ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ನಾವು ನಿಯಂತ್ರಿಸಿಕೊಳ್ಳಬಹುದು. ಬಾದಾಮಿಯನ್ನು ಪೇಸ್ಟ್ ಮಾಡಿಕೊಂಡು ಬೆಚ್ಚಗಿನ ನೀರಿನ ಜೊತೆ ತೆಗೆದುಕೊಂಡರೆ ಉತ್ತಮ. ಪ್ರತೀ ದಿನ ವ್ಯಾಯಾಮ ಮಾಡುವುದು ಸಹ ಕಡಿಮೆ ರಕ್ತದ ಒತ್ತಡ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಉಪಾಯ ಎನ್ನಬಹುದು. ಈ ಕೆಲವು ಸುಲಭವಾದ ಹಾಗೂ ಸರಳವಾದ ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Leave A Reply

Your email address will not be published.