Entertainment Vamshika anand: ಸ್ನೇಹಿತರೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂಲಕ ವಂಶಿಕ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. (Master Anand) ಮಾಸ್ಟರ್ ಆನಂದ್ ಅವರ ಮಗಳಾಗಿರುವ ವಂಶಿಕ ತಂದೆಗಿಂತ ಹೆಚ್ಚಿನ ಜನಪ್ರಿಯತೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪಡೆದುಕೊಂಡಿದ್ದಾರೆ ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು. ಕೇವಲ ಪ್ರತಿಭೆ ವಿಚಾರದಲ್ಲಿ ಮಾತ್ರವಲ್ಲದೆ ಸಂಭಾವನೆ ವಿಚಾರದಲ್ಲಿ ಕೂಡ ಈಕೆ ಈಗಾಗಲೇ ಮುಂದಿದ್ದಾಳೆ.

ಹೌದು ಗೆಳೆಯರೇ ವಂಶಿಕ (Vamshika) ಕೇವಲ ಸ್ಪರ್ಧಿಯಾಗಿ ಮಾತ್ರವಲ್ಲದೆ ಈಗಾಗಲೇ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮದಲ್ಲಿ ಆಕೆಯನ್ನು ಮೀರಿಸುವಂತಹ ಒಂದು ಪುಟಾಣಿ ಪ್ರತಿಭೆ ಈಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಯಾರ ಬಗ್ಗೆ ಮಾತನಾಡುತ್ತಿರಬಹುದು ಎಂಬುದಾಗಿ ನೀವು ಯೋಚಿಸುವ ಅಗತ್ಯವೇ ಇಲ್ಲ ಯಾಕೆಂದರೆ ನಾವು ಮಾತನಾಡುತ್ತಿರುವುದು ದಿಯಾ ಹೆಗ್ಡೆ (Dia Hegde) ಅವರ ಕುರಿತಂತೆ.

ತನ್ನ ಸುಮಧುರ ಕಂಠದಿಂದ ಈಗಾಗಲೇ ಪ್ರೇಕ್ಷಕರನ್ನು ಹಾಗೂ ತೀರ್ಪುಗಾರರು ಇಬ್ಬರನ್ನು ಕೂಡ ಮೆಚ್ಚಿಸಿರುವ ದಿಯಾ ಹೆಗಡೆ (Dia Hegde) ಎಲ್ಲರ ನೆಚ್ಚಿನ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ದಿಯಾ ಸಂಭಾವನೆಯ ವಿಚಾರದಲ್ಲಿ ಕೂಡ ವಂಶಿಕಾಳನ್ನು ಹಿಂದಿಕ್ಕಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ದಿಯಾ ಹೆಗ್ಡೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬುದಾಗಿ ಸಂಪೂರ್ಣ ವಿವರದಿಂದ ತಿಳಿದುಕೊಳ್ಳೋಣ ಬನ್ನಿ.

ತನ್ನ ಹಾವಭಾವ ಹಾಗೂ ಜನಪದ ಹಾಡುಗಳಿಂದಾಗಿ ಎಲ್ಲರ ಮನೆಗೆದ್ದಿರುವ ದಿಯಾ ಹೆಗಡೆ ಪ್ರತಿ ಎಪಿಸೋಡಿಗೆ 35,000 ಸಂಭಾವನೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದು ಬಂದಿದೆ. ಅವಳಿಗೆ ಹೋಲಿಸಿದರೆ ವಂಶಿಕ ಪ್ರತಿ ಎಪಿಸೋಡಿಗೆ ಕೇವಲ 20 ಸಾವಿರ ರೂಪಾಯಿಗಳನ್ನು ಮಾತ್ರ ಸಂಭಾವನೆಯ ರೂಪದಲ್ಲಿ ಪಡೆದುಕೊಳ್ಳುತ್ತಿದ್ದಾಳೆ. ಅದೇನೆ ಇರಲಿ ಈ ಎರಡು ಪುಟಾಣಿ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದಾಗಿ ಹಾರೈಸೋಣ.

By

Leave a Reply

Your email address will not be published. Required fields are marked *