ಸ್ನಾನ ಮಾಡಲು ಸೂಕ್ತ ಸಮಯ ಯಾವುದು, ಮಾಡಬಾರದಾ ಯಾವ ಸಮಯದಲ್ಲಿ ಮಾಡಿದರೆ ಏನಾಗುತ್ತೆ

Health & fitness

ಇವತ್ತಿನ ವಿಷಯ ನಾವು ಪ್ರತಿದಿನ ಒಂದಿಷ್ಟು ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತೇವೆ ಅವು ನಮ್ಮ ದಿನಚರ್ಯಗಳಾಗಿರುತ್ತವೆ. ಈ ದಿನಚರ್ಯದಲ್ಲಿ ಸ್ನಾನವು ಒಂದಾಗಿದೆ ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ ಹಾಗಾಗಿ ನಾವಿಂದು ನಿಮಗೆ ಸ್ನಾನದ ಕುರಿತಾದ ಕೆಲವು ಮಾಹಿತಿಗಳನ್ನು ತಿಳಿಸಿಕೊಡುತ್ತೆವೆ.ಪ್ರತಿದಿನ ಸ್ನಾನ ಮಾಡಬೇಕಾ ಮಾಡಬಾರದಾ ಯಾವ ಸಮಯದಲ್ಲಿ ಮಾಡಿದರೆ ಯಾವ ಪ್ರಯೋಜನವಾಗುತ್ತದೆ ಯಾವ ದುಷ್ಪರಿಣಾಮ ಬೀರುತ್ತದೆ ಇದರ ಕುರಿತಾದ ವಿಸ್ತೃತ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ.

ಎಲ್ಲರಿಗೂ ತಿಳಿದಿರುವ ಹಾಗೆ ಸ್ನಾನ ಎಂದರೆ ನೀರಿನಿಂದ ಮಾಡುವಂಥದ್ದು ಇದು ಕೇವಲ ಶರೀರ ಶುದ್ಧಿ ಮಾತ್ರವಲ್ಲ ಇದಕ್ಕೆ ಭೂತ ಶುದ್ಧಿ ಎಂದು ಕರೆಯುತ್ತಾರೆ.ಭೂತ ಎಂದರೆ ದೆವ್ವ ಪಿಶಾಚಿ ಅಲ್ಲ ಪಾಂಚ ಭೌತಿಕ ತತ್ವದಿಂದ ಮಾಡಿರುವ ಶರೀರ. ಈ ಪಾಂಚ ಭೌತಿಕ ತತ್ವಗಳು ಯಾವುದು ಎಂದರೆ ಪೃಥ್ವಿ ಆಕಾಶ ಬೆಂಕಿ ತೇಜಸ್ಸು ಮತ್ತು ಗಾಳಿ ಈ ಪಂಚ ಮಹಾ ಭೂತಗಳಿಂದ ಮಾಡಿರುವ ದೇಹವನ್ನು ಭೂತ ಎಂದು ಕರೆಯುತ್ತಾರೆ

ಈ ಪಂಚ ಭೌತಿಕ ಶರೀರದಲ್ಲಿ ಹೆಚ್ಚು ಇರುವಂತಹ ಅಂಗ ಚರ್ಮ ಅದನ್ನು ಬಿಟ್ಟರೆ ರಕ್ತ ಅದನ್ನು ಬಿಟ್ಟರೆ ಮೂಳೆ ಹಾಗಾಗಿ ದೇಹವನ್ನು ಹೊರಗಿನಿಂದ ಕವರ್ ಮಾಡುವ ಮತ್ತು ಬಹಳ ಇರುವ ಅಂಗ ಯಾವುದು ಎಂದರೆ ಅದು ಚರ್ಮ. ಈ ಚರ್ಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸ್ವಚ್ಛಂದವಾಗಿ ಕಾಣಬೇಕು ಎಂದರೆ ಈ ಭೂತ ಶಕ್ತಿ ಬಹಳ ಮುಖ್ಯ. ಭೂತ ಶುದ್ಧಿ ಅರ್ಥ ನೀರಿನ ಸ್ನಾನ ಬಹಳ ಮುಖ್ಯ ನೀರಿನ ಜೊತೆಗೆ ಹಲವಾರು ದ್ರವ್ಯಗಳನ್ನು ಬಳಕೆ ಮಾಡಬೇಕು.

ಈ ಭೂತ ಶುದ್ಧಿಯನ್ನು ಯಾವ ಸಮಯದಲ್ಲಿ ಮಾಡುವುದು ಶ್ರೇಷ್ಟ ಅದರಿಂದ ಏನೂ ಲಾಭವಾಗುತ್ತದೆ ಎಂದು ತಿಳಿದುಕೊಳ್ಳೋಣ. ಸ್ನೇಹಿತರೆ ಸ್ನಾನವನ್ನು ಯಾವಾಗಲೂ ಕಾಲಿ ಹೊಟ್ಟೆಯಲ್ಲಿ ಮಾಡುವುದು ಶ್ರೇಷ್ಟ ಅಂದರೆ ಸ್ನಾನವನ್ನು ಬೆಳಿಗ್ಗೆ ಮಾಡುವುದು. ಉತ್ತಮ ನೀವು ರಾತ್ರಿ ಊಟ ಮಾಡಿರುತ್ತಿರಿ ರಾತ್ರಿಯಿಂದ ಬೆಳಗ್ಗಿನವರೆಗೆ ಅಂದರೆ ಎಂಟರಿಂದ ಒಂಬತ್ತು ತಾಸು ಹೊಟ್ಟೆಯಲ್ಲಿ ಏನು ಆಹಾರ ಇರುವುದಿಲ್ಲ ಅಂತಹ ಸಮಯದಲ್ಲಿಯೇ ಸ್ನಾನವನ್ನು ಮಾಡಬೇಕು.

ಯಾಕೆ ಕಾಲಿ ಹೊಟ್ಟೆಯಲ್ಲಿ ಸ್ನಾನವನ್ನು ಮಾಡಬೇಕು ಯಾಕೆ ಊಟದ ನಂತರ ಸ್ನಾನ ಮಾಡಬಾರದು ಎಂದರೆ ಕೆಲವರಿಗೆ ಬೆಳಿಗ್ಗೆ ಎದ್ದು ತಿಂಡಿ ತಿಂದು ಹತ್ತು ಹನ್ನೆರಡು ಗಂಟೆಗೆ ಸ್ನಾನ ಮಾಡುವ ಅಭ್ಯಾಸ. ನೀವು ನೋಡಿರಬಹುದು ಎಷ್ಟೋ ಜನರು ರೆಗ್ಯೂಲರ್ ಆಗಿ ವಾಕ್ ವ್ಯಾಯಾಮ ಪ್ರಾಣಾಯಾಮ ಡಯೆಟ್ ನ್ನು ಸಮಯಕ್ಕೆ ಸರಿಯಾಗಿ ಆಹಾರವನ್ನು ನ್ಯುಟ್ರಿಷಿಯನ್ ಆಹಾರವನ್ನು ಈ ರೀತಿಯಾಗಿ ಬಹಳ ಸ್ಟ್ರಿಕ್ಟ್ ಆಗಿ ತಮ್ಮ ದಿನಚರ್ಯವನ್ನು ನಡೆಸುತ್ತಿರುತ್ತಾರೆ.

ಒಂದು ಚುರೂ ವ್ಯತ್ಯಾಸವನ್ನು ಮಾಡುವುದಿಲ್ಲ ಹಾಗಿದ್ದರೂ ಕೂಡ ಕೆಲವರಿಗೆ ಅಜೀರ್ಣ ಸಮಸ್ಯೆ ಇರುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣ ಅವರು ಸಮಯಕ್ಕೆ ಸರಿಯಾಗಿ ಸ್ನಾನ ಮಾಡದಿರುವುದು ಯಾವಾಗ ನೀವು ಆಹಾರವನ್ನು ಸೇವಿಸಿ ಸ್ನಾನ ಮಾಡುತ್ತೀರಿ ಆಗ ಈ ತರಹದ ಸಮಸ್ಯೆಗಳು ಉಂಟಾಗುತ್ತವೆ.

ನೀವು ಆಹಾರವನ್ನು ತೆಗೆದುಕೊಂಡಾಗ ದೇಹದ ಎಲ್ಲಾ ಎನರ್ಜಿ ಹೊಟ್ಟೆಯಕಡೆ ಕೇಂದ್ರೀಕೃತವಾಗುತ್ತದೆ.ಹೊಟ್ಟೆಯಲ್ಲಿರುವ ಆಹಾರವನ್ನು ಜೀರ್ಣ ಮಾಡುವಲ್ಲಿ ಕೇಂದ್ರೀಕೃತವಾಗಿರುತ್ತವೆ. ನೀವು ಒಂದು ವೇಳೆ ಆಹಾರದ ನಂತರ ಸ್ನಾನ ಮಾಡಿದರೆ ಕಾನ್ಸನ್ಟ್ರೇಷನ್ ಆಗಿರುವ ಎನರ್ಜಿ ಡಿಸ್ಪ್ರಸ್ ಆಗುತ್ತದೆ ನಿಮ್ಮ ದೇಹದ ಇನ್ನಿತರ ಅಂಗಗಳಿಗೆ ಡೈವರ್ಟ್ ಆಗುತ್ತದೆ ಅಂದರೆ ನಮ್ಮ ದೇಹದ ಅಟೆನ್ಷನ್ ಹೋಗುತ್ತದೆ ಅಲ್ಲಿ ನಮ್ಮ ಎನರ್ಜಿ ಫ್ಲೋ ಆಗುತ್ತದೆ ಎಲ್ಲಿ ಎನರ್ಜಿ ಫ್ಲೋ ಆಗುತ್ತದೆ ಅಲ್ಲಿ ನಡೆಯಬೇಕಾದ ಕಾರ್ಯಗಳು ಸುಸೂತ್ರವಾಗಿ ನಡೆಯುವುದಿಲ್ಲ.

ನೀವು ಆಹಾರವನ್ನು ಸೇವಿಸಿದಾಗ ದೇಹದ ಎಲ್ಲಾ ಎನರ್ಜಿ ಹೊಟ್ಟೆಯ ಕಡೆ ಕೇಂದ್ರೀಕೃತವಾಗಿರುತ್ತದೆ ಮತ್ತು ಆ ಎನರ್ಜಿ ಆಹಾರವನ್ನು ಸರಿಯಾದ ಕ್ರಮದಲ್ಲಿ ಜೀರ್ಣ ಮಾಡಿ ಸಾರವನ್ನು ದೇಹಕ್ಕೆ ಒದಗಿಸಿ ಕೆಟ್ಟ ಭಾಗವನ್ನು ಹೊರಗೆ ಹಾಕುತ್ತದೆ. ಇದು ನಾರ್ಮಲ್ ಪೇನಾಮಿನಾ. ಪ್ರಾಕೃತವಾದಂತಹ ಪ್ರಕ್ರಿಯೆ ನಡೆಯುವಂತಹ ವಿಧಾನ. ನೀವು ಊಟ ಆದ ನಂತರ ಬಿಸಿನೀರು ಅಥವಾ ತಣ್ಣೀರಿನಿಂದ ಸ್ನಾನ ಮಾಡಿದಿರಿ ಎಂದರೆ ಅಲ್ಲಿ ಕೇಂದ್ರೀಕೃತವಾಗಿರುವಂತಹ ಎನರ್ಜಿ ಮತ್ತೆ ಡಿಸ್ಪ್ರಸ್ ಆಗುತ್ತದೆ ಆಗ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ

ಆಗ ಆಹಾರದ ಸಾರ ಭಾಗ ಸರಿಯಾಗಿ ಮಾರ್ಪಾಡು ಆಗುವುದಿಲ್ಲ ಸಾರ ಭಾಗ ಮಾರ್ಪಾಡಾಗದಿದ್ದಾಗಎನರ್ಜಿ ಉತ್ಪತ್ತಿ ಆಗುವುದಿಲ್ಲ ಆಗ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉತ್ಪತ್ತಿ ಆಗುತ್ತದೆ.ಜೀರ್ಣ ಕ್ರಿಯೆ ಸರಿಯಾಗಿ ಆಗದಿದ್ದಾಗ ಹಂತ ಹಂತವಾಗಿ ಎಲ್ಲ ಸಿಸ್ಟಮ್ ಗಳು ಹಾಳಾಗುತ್ತದೆ.

ನೀವು ವ್ಯಾಯಾಮ ಪ್ರಾಣಾಯಾಮ ಪತ್ಯಾಹಾರ ಆಸನ ಎಲ್ಲವನ್ನೂ ನೀವು ಸರಿಯಾಗಿ ಇಟ್ಟುಕೊಂಡಿರಬಹುದು ಅವೆಲ್ಲವನ್ನು ಸರಿಯಾಗಿಟ್ಟುಕೊಂಡು ಇದೊಂದನ್ನು ಸರಿಯಾಗಿ ಮಾಡದಿದ್ದಾಗ ಹೊಳೆಯಲ್ಲಿ ಹಣಸೆಹಣ್ಣು ಹಿಂಡಿದಂತಾಗುತ್ತದೆ. ಹೀಗಾಗಿ ಕಾಲಿ ಹೊಟ್ಟೆಯಲ್ಲಿ ಸ್ನಾನ ಮಾಡಿದರೆ ಒಳ್ಳೆಯದು ಒಂದು ವೇಳೆ ಆಹಾರ ಸೇವಿಸಿದ ನಂತರವೇ ಸ್ನಾನ ಮಾಡಬೇಕು

ಎಂದರೆ ಆಹಾರವನ್ನು ಸೇವಿಸಿದ ಮೂರು ಗಂಟೆಯ ನಂತರ ಸ್ನಾನ ಮಾಡಿ. ಸ್ನೇಹಿತರೇ ನೀವೇನಾದರೂ ಆಹಾರದ ನಂತರ ಸ್ನಾನ ಮಾಡುವ ರೂಢಿ ಹೊಂದಿದ್ದರೆ ಅದನ್ನು ಬದಲಾಯಿಸಿ ನೀವು ಕೂಡ ಇಂದಿನಿಂದಲೇ ಕಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದನ್ನು ರೂಢಿಸಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave a Reply

Your email address will not be published. Required fields are marked *