ನಾವೆಲ್ಲರೂ ಸಾಮಾನ್ಯವಾಗಿ ರಾಶಿ ಭವಿಷ್ಯವನ್ನು ನಂಬುತ್ತೇವೆ ನಮ್ಮ ರಾಶಿಗೆ ಯಾವ ರೀತಿಯ ಫಲಾಫಲ ಇದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಎಲ್ಲರೂ ಆಸಕ್ತಿಯನ್ನು ತೋರಿಸುತ್ತಾರೆ. ನಾವಿಂದು ನಿಮಗೆ ಕನ್ಯಾ ರಾಶಿ ಹಾಗೂ ಕನ್ಯಾ ಲಗ್ನದವರ ಗುಣಲಕ್ಷಣಗಳ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಿಕೊಡುತ್ತೆವೆ.

ಈ ಕನ್ಯಾರಾಶಿಯು ಪೃಥ್ವಿದತ್ತ ರಾಶಿಯಾಗಿದ್ದು ಈ ಕನ್ಯಾರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಈ ರಾಶಿಯವರು ನೋಡಲು ಸುಂದರವಾಗಿರುತ್ತಾರೆ ಆಕರ್ಷಕವಾಗಿರುತ್ತಾರೆ ಈ ರಾಶಿಯವರು ಯಾರನ್ನಾದರೂ ಇಂಪ್ರೆಸ್ ಮಾಡುವುದಿದ್ದರೆ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡುತ್ತಾರೆ. ಈ ರಾಶಿಯವರು ಅವರಿಗಾಗಿರುವ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ.

ಅವರ ಮುಖದಲ್ಲಿ ಮುಗ್ದತೆ ಎದ್ದು ಕಾಣುತ್ತದೆ ಅವರ ನಡಿಗೆಯು ತುಂಬಾ ಸ್ಟೈಲಿಶ್ ಆಗಿ ಇರುತ್ತದೆ. ಇನ್ನು ಈ ರಾಶಿಯವರು ಬುದ್ಧಿವಂತರಾಗಿರುತ್ತಾರೆ ಇವರು ಸ್ವಚ್ಛವಾಗಿ ಇರಲು ಬಯಸುತ್ತಾರೆ. ಇವರು ತಮ್ಮ ಆಹಾರವನ್ನು ತಾವಿರುವ ಸ್ಥಳವನ್ನು ಶುಚಿಯಾಗಿಟ್ಟು ಕೊಂಡಿರುತ್ತಾರೆ. ಇವರು ಎಲ್ಲ ವಿಷಯದಲ್ಲಿಯೂ ಪರ್ಫೆಕ್ಟ್ ಆಗಿರುತ್ತಾರೆ. ನಿಯಮಬದ್ಧರಾಗಿರುತ್ತಾರೆ ಸಣ್ಣ ಸಣ್ಣ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.

ಇವರು ಬುದ್ದಿವಂತರಾಗಿರುವುದರಿಂದ ಇವರಿಗೆ ಮೋಸ ಮಾಡುವುದು ಸ್ವಲ್ಪ ಕಷ್ಟ ಎಂದು ಹೇಳಬಹುದು.ಇವರು ದ್ವಿ ಸ್ವಭಾವದವರಾಗಿರುತ್ತಾರೆ ಬೇರೆಯವರು ಇವರ ಬಗ್ಗೆ ಏನು ಹೇಳುತ್ತಾರೆ ಎಂಬುದರ ಚಿಂತೆಯನ್ನು ಮಾಡುವುದಿಲ್ಲ.ಇವರು ಯಾವಾಗಲೂ ಚಟುವಟಿಕೆಯಿಂದಿರುತ್ತಾರೆ ಪ್ರಾಮಾಣಿಕವಾಗಿ ಇರುತ್ತಾರೆ.ಈ ರಾಶಿಯವರು ಕ್ರಿಟಿಕ್ ಆಗಿರುತ್ತಾರೆ ಇವರು ತಮ್ಮಲ್ಲಿ ಮತ್ತು ಬೇರೆಯವರಲ್ಲಿ ತಪ್ಪನ್ನು ಹುಡುಕುತ್ತಿರುತ್ತಾರೆ. ಈ ಕನ್ಯಾ ರಾಶಿಯವರಿಗೆ ಸೇವೆ ಮಾಡುವುದರಲ್ಲಿ ತುಂಬಾ ಆಸಕ್ತಿ ಇರುತ್ತದೆ ಇವರು ಯಾವಾಗಲೂ ನಗುತ್ತಿರುತ್ತಾರೆ ಜೊತೆಗೆ ತಮ್ಮ ಸುತ್ತ ಮುತ್ತಲಿನವರನ್ನು ನಗಿಸುತ್ತಿರುತ್ತಾರೆ.

ಇವರು ದಾಯಾಳುಗಳಾಗಿರುತ್ತಾರೆ ಇವರಿಗೆ ಸ್ವಲ್ಪ ಗಂಭೀರ ಹಾಗೂ ನಾಚಿಕೆಯ ಸ್ವಭಾವ ಇರುತ್ತದೆ ಈ ರಾಶಿಯವರು ಅಧ್ಯಯನ ಶಿಲಾರಾಗಿರುತ್ತಾರೆ ಇವರಿಗೆ ಹಲವು ವಿಷಯಗಳಲ್ಲಿ ಆಳವಾದ ಜ್ಞಾನ ಇರುತ್ತದೆ.ಇವರು ಸ್ಫೂರ್ತಿವಂತರಾಗಿರುತ್ತಾರೆ ಪ್ರಕೃತಿಯ ಪ್ರೇಮಿಗಳಾಗಿರುತ್ತಾರೆ. ಇವರಿಗೆ ಬೇರೆಯವರಿಂದ ಸಹಾಯವನ್ನು ಪಡೆದುಕೊಳ್ಳುವುದಕ್ಕೆ ಇಷ್ಟ ಆಗುವುದಿಲ್ಲ ಇನ್ನು ಈ ರಾಶಿಯವರಿಗೆ ಬೇರೆಯವರಲ್ಲಿ ಇರುವ ಕೆಟ್ಟ ಗುಣಗಳನ್ನು ಕಂಡುಹಿಡಿಯುವ ವಿಶೇಷ ಶಕ್ತಿ ಇರುತ್ತದೆ.

ಇವರಿಗೆ ಪ್ರತಿದಿನ ಒಂದೇ ರೀತಿಯ ಕೆಲಸವನ್ನು ಮಾಡುವುದಕ್ಕೆ ಇಷ್ಟ ಆಗುವುದಿಲ್ಲ ಮತ್ತು ಬೇರೆಯವರು ಇವರ ಕೆಲಸದಲ್ಲಿ ಮಧ್ಯಸ್ಥಿಕೆ ವಹಿಸುವುದು ಇಷ್ಟ ಆಗುವುದಿಲ್ಲ. ಇವರು ಬೇರೆಯವರ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ಹೇಳಿಕೊಡುತ್ತಾರೆ. ಕನ್ಯಾರಾಶಿಯವರು ನಿಷ್ಪಕ್ಷಪಾತವಾಗಿರುತ್ತಾರೆ. ಯಾರಿಗೂ ಮೋಸ ಮಾಡುವುದಿಲ್ಲ ಇವರು ಅನಾವಶ್ಯಕ ಭಾವನೆಗಳಲ್ಲಿ ಮುಳುಗುವುದಿಲ್ಲ. ಇವರು ಎಂತಹ ಸ್ಥಿತಿಯಲ್ಲಿದ್ದರು ತನ್ನನ್ನು ತಾನು ಶಾಂತವಾಗಿಟ್ಟು ಕೊಂಡಿರುತ್ತಾರೆ.

ಕನ್ಯಾ ರಾಶಿಯವರು ಶೀಘ್ರ ಬುದ್ಧಿ ಉಳ್ಳವರಾಗಿರುತ್ತಾರೆ ಹಾರ್ಡ್ ವರ್ಕರ್ ಆಗಿರುತ್ತಾರೆ ಕನ್ಯಾರಾಶಿಯವರು ಎಂತಹದ್ದೇ ಪರಿಸ್ಥಿತಿ ಬಂದರೂ ಅದರ ಆಳಕ್ಕಿಳಿದು ಅದನ್ನು ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸುತ್ತಾರೆ. ಯಾವುದಾದರೂ ಕೆಲಸ ಆಗುತ್ತಿಲ್ಲ ಎಂದರೆ ಆ ಕೆಲಸವನ್ನು ಕನ್ಯಾ ರಾಶಿಯವರಿಗೆ ನೀಡಿದರೆ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಹೆಸರು ಕೀರ್ತಿಯನ್ನು ಗಳಿಸುತ್ತಾರೆ.ಇವರು ಕಲೆಯನ್ನು ಇಷ್ಟ ಪಡುತ್ತಾರೆ ಇವರಿಗೆ ಬೇರೆಯವರ ಎದುರು ಶೋ ಅಫ್ ಮಾಡುವುದು ಇಷ್ಟ ಆಗುವುದಿಲ್ಲ. ಕನ್ಯಾರಾಶಿಯವರಿಗೆ ನೆನಪಿನ ಶಕ್ತಿ ತುಂಬಾ ಚೆನ್ನಾಗಿರುತ್ತದೆ.

ಈ ರಾಶಿಯವರಿಗೆ ಹಣ ಕಾಸಿನ ವಿಷಯದಲ್ಲಿ ವಸ್ತುವಿನ ವಿಷಯದಲ್ಲಿ ತೃಪ್ತಿ ಇರುವುದಿಲ್ಲ. ಈ ರಾಶಿಯವರು ಧಾರ್ಮಿಕತೆಯಲ್ಲಿ ಆಸಕ್ತರಾಗಿರುತ್ತಾರೆ.ಪರಿವಾರದಲ್ಲಿ ತಂದೆಯವರ ಮೇಲೆ ಪೂರ್ಣವಾದ ಶ್ರದ್ಧೆ ಇಡುತ್ತಾರೆ. ಈ ರಾಶಿಯವರು ತನ್ನ ಪರಿವಾರದವರಿಗೆ ಮತ್ತು ಸ್ನೇಹಿತರಿಗೆ ಸಹಾಯ ಮಾಡಲು ತುಂಬಾ ಉತ್ಸುಕರಾಗಿರುತ್ತಾರೆ. ಈ ರಾಶಿಯವರು ತನ್ನ ಸ್ನೇಹಿತರಿಗೆ ಸಹಾಯಮಾಡುವ ಪರಿಸ್ಥಿತಿ ಎದುರಾದಾಗ ತನ್ನ ಕೆಲಸವನ್ನು ಬಿಟ್ಟು ಸಹಾಯ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ ಇವರು ಸ್ನೇಹಿತರ ಹೆಸರಿನಲ್ಲಿ ಬರುವ ಕೆಟ್ಟ ಜನರ ಜಾಲದಲ್ಲಿ ಬೀಳುವ ಸಾಧ್ಯತೆ ಇರುತ್ತದೆ ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಕನ್ಯಾ ರಾಶಿಯವರು ತನ್ನ ಹಾಗೂ ತನ್ನ ಪರಿವಾರದವರ ಆರೋಗ್ಯದಲ್ಲಿ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಇವರಿಗೆ ಬೇರೆಯವರ ವಿಷಯದಲ್ಲಿ ಮಧ್ಯಸ್ತಿಕೆ ವಹಿಸುವ ಕೆಟ್ಟ ಸ್ವಭಾವ ಇರುತ್ತದೆ. ಇವರು ತಮ್ಮ ಭಾವನೆಗಳನ್ನು ಯಾರ ಹತ್ತಿರವೂ ನೇರವಾಗಿ ಹೇಳಿಕೊಳ್ಳುವುದಿಲ್ಲ. ಇವರಿಗೆ ತಾನು ತನ್ನ ಭಾವನೆಯನ್ನು ಹೇಳದೆ ಅದನ್ನು ಬೇರೆಯವರು ಅರ್ಥ ಮಾಡಿಕೊಳ್ಳಬೇಕು ಎನ್ನುವುದಿರುತ್ತದೆ. ಸಣ್ಣ ಸಣ್ಣ ವಿಷಯಕ್ಕೂ ಚಿಂತೆಗೊಳಗಾಗುತ್ತಾರೆ. ಇವರು ತುಂಬಾ ಆಲೋಚನೆ ಮಾಡುವುದರಿಂದ ಇವರ ಜೀವನದಲ್ಲಿ ಗೊಂದಲಗಳಿರುತ್ತವೆ. ಇವರು ಮಧುರವಾಗಿ ಮಾತನಾಡುತ್ತಾರೆ ಜೊತೆಗೆ ತುಂಬಾ ಮಾತನಾಡುತ್ತಾರೆ. ಲೆಕ್ಕಾಚಾರ ಮಾಡಿ ಖರ್ಚು ಮಾಡುತ್ತಾರೆ ತಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಹಣವನ್ನು ಉಳಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ.

ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗಲು ದುಡುಕುವುದಿಲ್ಲ ಅದನ್ನು ಅನಲೈಜ್ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರು ಸುಂದರವಾಗಿ ಲೋಯಲ್ ಆಗಿ ಬುದ್ಧಿವಂತ ವ್ಯಕ್ತಿಗಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟ ಪಡುತ್ತಾರೆ. ಇವರು ಪ್ರೀತಿಯ ವಿಷಯದಲ್ಲಿ ಕುರುಡರಾಗಿರುವುದಿಲ್ಲ. ಇವರಲ್ಲಿ ಎಷ್ಟೇ ಪ್ರೀತಿ ಇದ್ದರೂ ಅದನ್ನು ಓಪನ್ ಆಗಿ ಹೇಳುವುದಿಲ್ಲ ತಾವು ಪ್ರೀತಿಸುವ ವ್ಯಕ್ತಿಯ ವ್ಯಕ್ತಿತ್ವವನ್ನು ಅನಲೈಜ್ ಮಾಡಿ ಮುಂದುವರೆಯುತ್ತಾರೆ. ಇವರು ಒಂದು ಸಾರಿ ಪ್ರೀತಿಯನ್ನು ಒಪ್ಪಿಕೊಂಡರೆ ಅದನ್ನು ಪೂರ್ಣ ಮನಸ್ಸಿನಿಂದ ನಿಭಾಯಿಸುತ್ತಾರೆ.

ಇನ್ನು ಈ ರಾಶಿಯವರ ಕರಿಯರ್ ವಿಚಾರವನ್ನು ನೋಡುವುದಾದರೆ ಡಾಕ್ಟರ್ ನರ್ಸ್ ಟೀಚರ್ ಮನೋವಿಜ್ಞಾನಿ ಇಂಜಿನಿಯರಿಂಗ್ ಮೆಡಿಕಲ್ ರಿಸರ್ಚ್ ಡೇಟಾಅನಾಲಿಸ್ಟ್ ಮಾಡೆಲಿಂಗ್ ಅಕೌಂಟೆಂಟ್ ಲಾಯರ್ ಈರೀತಿಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇನ್ನು ಇವರ ಆರೋಗ್ಯದ ಸ್ಥಿತಿಯನ್ನು ಗಮನಿಸುವುದಾದರೆ ಇವರಿಗೆ ಹೊಟ್ಟೆಗೆ ಸಂಬಂಧಿಸಿದ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಟೆನ್ಶನ್ ಡಿಪ್ರೆಶನ್ ಇಂಪಿರಿಯೋರಿಟಿ ಕಾಂಪ್ಲೆಕ್ಸ್ ಓಸಿಡಿ ಅಂತಹ ಕಾಯಿಲೆಗಳು ಇವರಿಗೆ ಬರಬಹುದು.

ಕನ್ಯಾರಾಶಿಯವರು ನಕಾರಾತ್ಮಕ ಯೋಚನೆಗಳನ್ನು ಮಾಡುವುದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ ಇದರಿಂದ ಸಾಧ್ಯವಾದಷ್ಟು ನಕಾರಾತ್ಮಕ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಇವರು ತಮ್ಮನ್ನು ಇತರರೊಂದಿಗೆ ಹೊಲಿಸಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಈ ರಾಶಿಯವರು ಲಕ್ಷ್ಮಿ ನಾರಾಯಣ ಮತ್ತು ಗಣಪತಿಯ ಆರಾಧನೆಯನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ. ಸ್ನೇಹಿತರೆ ಈ ರೀತಿಯಾಗಿ ಕನ್ಯಾ ರಾಶಿಯವರು ಗುಣ ಸ್ವಭಾವವನ್ನು ಹೊಂದಿರುತ್ತಾರೆ.ನೀವು ಕನ್ಯಾ ರಾಶಿಯವರಾಗಿದ್ದರೆ ನೀವು ನಕಾರಾತ್ಮಕ ಯೋಚನೆಗಳನ್ನು ದೂರ ಮಾಡಿಕೊಳ್ಳಿ ಇದರಿಂದ ನಿಮ್ಮ ಜೀವನ ಚೆನ್ನಾಗಿರುತ್ತದೆ.

By

Leave a Reply

Your email address will not be published. Required fields are marked *