ಮೇಷ ರಾಶಿಯವರ ಪಾಲಿಗೆ ಅಕ್ಟೋಬರ್ ತಿಂಗಳು ಹೇಗಿರಲಿದೆ? ಸಂಪೂರ್ಣ ಮಾಹಿತಿ

0 13,277

ಜ್ಯೋತಿಷ್ಯಶಾಸ್ತ್ರ ಹಲವು ವಿಷಯಗಳನ್ನು ಒಳಗೊಂಡಿದೆ. ಗ್ರಹಗಳ ಚಲನೆಯಿಂದ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಅಂತಹ ಗ್ರಹಗಳ ಚಲನೆಯ ಬಗ್ಗೆ ತಿಳಿಸಿ ಕೊಡುವುದು ಜ್ಯೋತಿಷ್ಯಶಾಸ್ತ್ರವಾಗಿದೆ. 12 ರಾಶಿಗಳಲ್ಲಿ ಮೊದಲ ರಾಶಿಯಾದ ಮೇಷ ರಾಶಿಯ ಭವಿಷ್ಯ ಅಕ್ಟೋಬರ್ ತಿಂಗಳಿನಲ್ಲಿ ಹೇಗಿದೆ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಯಾವ ಯಾವ ಗ್ರಹವು ಸಂಚಾರ ಮಾಡುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಕ್ಟೋಬರ್ 4 ನೇ ತಾರೀಖಿನಂದು ಪ್ರದೂಷವಿದೆ ಸೋಮವಾರದ ದಿನದಂದು ಪ್ರದೂಷವಿರುವುದರಿಂದ ಸೋಮ ಪ್ರದೂಷ ಎಂದು ಕರೆಯುತ್ತಾರೆ. ಆ ದಿನ ಶಿವನನ್ನು ಆರಾಧಿಸುವುದರಿಂದ ಅಥವಾ ಸಂಜೆ ಸಮಯದಲ್ಲಿ ನಂದಿಯನ್ನು ದರ್ಶನಮಾಡಿ ಈಶ್ವರನನ್ನು ದರ್ಶನ ಮಾಡುವುದರಿಂದ ಸ್ವಾಮಿ ಅನುಗ್ರಹ ಪಡೆಯಬಹುದು. ಅಕ್ಟೋಬರ್ ತಿಂಗಳಿನಲ್ಲಿ 5ನೇ ತಾರೀಖಿನಿಂದ ಮಹಾಲಯ ಅಮಾವಾಸ್ಯೆ ಪ್ರಾರಂಭವಾಗುತ್ತದೆ,

6ನೇ ತಾರೀಖಿನಂದು ಅಮಾವಾಸ್ಯೆ ಇರುತ್ತದೆ. ಅಕ್ಟೋಬರ್ 7 ನೇ ತಾರೀಖಿನಂದು ನವರಾತ್ರಿ ಉತ್ಸವ ಪ್ರಾರಂಭವಾಗುತ್ತದೆ. ನವರಾತ್ರಿಯ ಸಮಯದಲ್ಲಿ ಸರಸ್ವತಿ ಪೂಜೆಯನ್ನು ಮಾಡಬೇಕು. ವಿದ್ಯಾರ್ಥಿಗಳಿಗೆ ಸರಸ್ವತಿ ಪೂಜೆಯಿಂದ ಬಹಳ ಒಳ್ಳೆಯದು. ನವರಾತ್ರಿಯ ಮೂಲಾ ನಕ್ಷತ್ರದ ದಿನದಂದು ಸರಸ್ವತಿ ಪೂಜೆ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಅಕ್ಟೋಬರ್ 12 ನೇ ತಾರೀಖಿನಂದು ಮೂಲ ನಕ್ಷತ್ರ ಇರುವುದರಿಂದ ಸರಸ್ವತಿ ಪೂಜೆಯನ್ನು ಪ್ರತಿಯೊಬ್ಬರು ಮಾಡಬೇಕು. ಪುಸ್ತಕಗಳನ್ನು ಇಡುವುದರ ಮೂಲಕ ಸರಸ್ವತಿ ಪೂಜೆಯನ್ನು ಮಾಡುವುದರಿಂದ ತಾಯಿ ಸರಸ್ವತಿ ಆಶೀರ್ವಾದ ಮಾಡುತ್ತಾಳೆ.

ಅಕ್ಟೋಬರ್ 13ರಂದು ದುರ್ಗಾಷ್ಟಮಿ ದಿನದಂದು ಚಂಡಿಕಾಯಾಗ, ಚಂಡಿ ಹವನ ಮಾಡುವುದು, ದೇವಿಯನ್ನು ದರ್ಶನ ಮಾಡುವುದರಿಂದ, ಆರಾಧಿಸುವುದರಿಂದ ಒಳ್ಳೆಯದಾಗುತ್ತದೆ. ಅಕ್ಟೋಬರ್ 14 ನೇ ತಾರೀಖಿನಂದು ಮಹಾನವಮಿ ಆಯುಧಪೂಜೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು.

ಅಕ್ಟೋಬರ್ 15 ನೇ ತಾರೀಖಿನಂದು ವಿಜಯದಶಮಿ ಒಂಭತ್ತು ದಿನಗಳ ಕಾಲ ತಾಯಿ ಮಾಡಿದ ಯುದ್ಧದ ವಿಜಯವನ್ನು ಜಯಭೇರಿಯಿಂದ ಆಚರಣೆ ಮಾಡಿಕೊಳ್ಳುವ ದಿನ ವಿಜಯದಶಮಿಯಾಗಿದೆ. ವಿಜಯದಶಮಿಯ ದಿನದಂದು ಇಡಿ ದಿನ ಶುಭ ಸಮಯ ಇರುತ್ತದೆ. ಅಕ್ಟೋಬರ್ 20 ನೇ ತಾರೀಖಿನಂದು ವಾಲ್ಮೀಕಿ ಜಯಂತಿ ಇದೆ. ವಾಲ್ಮೀಕಿ ಜಯಂತಿಯನ್ನು ಆಚರಿಸುವುದರ ಮೂಲಕ ಮಹಾನ್ ಸಂತರಾದ ವಾಲ್ಮೀಕಿ ಋಷಿಗಳ ಆಶೀರ್ವಾದ ಪಡೆಯಬೇಕು.

ಅಕ್ಟೋಬರ್ 24 ನೇ ತಾರೀಖಿನಂದು ಸಂಕಷ್ಟಹರ ಗಣಪತಿ ಚತುರ್ಥಿ ವ್ರತವನ್ನು ಮಾಡಬೇಕು. ಆ ದಿನದಂದು ಉಪವಾಸ ಮಾಡುವವರು ಉಪವಾಸ ಮಾಡಬಹುದು ಅಥವಾ ಗಣಪತಿಯನ್ನು ಆರಾಧಿಸುವುದರಿಂದ ಸಂಕಷ್ಟವನ್ನು ಗಣಪತಿ ದೂರ ಮಾಡುತ್ತಾನೆ. ಅಕ್ಟೋಬರ್ 28 ನೇ ತಾರೀಖಿನಂದು ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದರ್ಶನ ಪ್ರಾರಂಭವಾಗುತ್ತದೆ.

ಪಿಂಡದ ರೂಪದಲ್ಲಿರುವ ಮಹಾಶಕ್ತಿ, ಮಹಾಕಾಳಿ ಸ್ವರೂಪಿಣಿ ಹಾಸನಾಂಬೆಯ ದರ್ಶನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಅಕ್ಟೋಬರ್ ಒಂದನೇ ತಾರೀಖಿನಂದು ಬುಧಗ್ರಹ ಸಂಚಾರ ಮಾಡಲಿದ್ದು ಒಳ್ಳೆಯ ಸೂಚನೆಯಾಗಿದೆ. ಅಕ್ಟೋಬರ್ 2 ನೇ ತಾರೀಖಿನಂದು ಶುಕ್ರಗ್ರಹ ಸಂಚಾರ ಮಾಡುತ್ತಾನೆ. ಅಕ್ಟೋಬರ್ 17 ನೇ ತಾರೀಖಿನಂದು ರವಿ ತುಲಾ ರಾಶಿಗೆ ಪ್ರವೇಶಮಾಡುತ್ತಾನೆ ಇದು ಒಳ್ಳೆಯ ಸೂಚನೆಯಲ್ಲ. ಅಕ್ಟೋಬರ್ 30ನೇ ತಾರೀಖಿನಂದು ಶುಕ್ರ ಒಂದೆ ತಿಂಗಳಿನಲ್ಲಿ ಮತ್ತೊಮ್ಮೆ ಧನಸ್ಸು ರಾಶಿಗೆ ಸಂಚಾರ ಮಾಡುತ್ತಾನೆ.

ಈ ರೀತಿಯ ಗ್ರಹಗಳ ಬದಲಾವಣೆಯಿಂದ ಮೇಷರಾಶಿಗೆ ಅಕ್ಟೋಬರ್ ತಿಂಗಳಿನಲ್ಲಿ ತಕ್ಕಮಟ್ಟಿಗೆ ಅನುಕೂಲವಾಗಲಿದೆ ಇದು ಒಳ್ಳೆಯ ವಿಚಾರವಾಗಿದೆ. ಮೇಷ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಸಾಲದ ಬಾಧೆಗೆ ಒಳಗಾಗುವ ಸಂಭವ ವಿದೆ, ಅಗ್ನಿಬಾಧೆ, ಆರೋಗ್ಯದ ವಿಷಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗುತ್ತದೆ. ಈ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ.

ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ದೋಷಗಳು ಅಕ್ಟೋಬರ್ ತಿಂಗಳಿನಲ್ಲಿ ಪರಿಹಾರವಾಗುತ್ತದೆ. ವಾಹನಗಳನ್ನು ಖರೀದಿಸುವುದಿದ್ದರೆ ಅಕ್ಟೋಬರ್ ತಿಂಗಳಿನಲ್ಲಿ ಬೇಡ. ಚಿತ್ರರಂಗದಲ್ಲಿರುವ ಮೇಷ ರಾಶಿಯವರಿಗೆ ಅಕ್ಟೋಬರ್ ತಿಂಗಳು ಅಷ್ಟು ಅನುಕೂಲವಿಲ್ಲ. ಮೇಷ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಚರ್ಮದ ಆರೋಗ್ಯಕ್ಕೆ ಮತ್ತು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿ ಜಾಗರೂಕರಾಗಿರಬೇಕು.

ಮೇಷ ರಾಶಿಯವರಿಗೆ ವಿವಾಹದ ವಿಷಯದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲವಿಲ್ಲ, ಸತಿಪತಿಗಳಲ್ಲಿ ಮನಸ್ತಾಪಗಳು ಉಂಟಾಗುತ್ತದೆ. ಮೇಷ ರಾಶಿಯವರು ಸೂರ್ಯನ ಜಪ ಮಾಡುವುದು ಸೂರ್ಯನನ್ನು ಆರಾಧಿಸುವುದರಿಂದ ಮೇಷ ರಾಶಿಯವರ ಸಮಸ್ಯೆ ಪರಿಹಾರವಾಗುತ್ತದೆ. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರು ಬಹಳ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಅಕ್ಟೋಬರ್ ತಿಂಗಳು ಮೇಷ ರಾಶಿಯವರಿಗೆ ಸಂತೋಷವನ್ನು ಕೊಡಲಿ ಎಂದು ಆಶಿಸೋಣ.

Leave A Reply

Your email address will not be published.