ಸಾಮಾನ್ಯವಾಗಿ ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ದಿನ ತಲೆನೋವು ಕಾಣಿಸಿಕೊಳ್ಳುತ್ತದೆ, ಈ ತಲೆನೋವು ನಿವಾರಣೆಗೆ ನಾನಾ ರೀತಿಯ ಮಾತ್ರೆ ಬಳಸುವ ಬದಲು ಮನೆಯಲ್ಲೇ ಇರುವಂತ ಸಾಮಗ್ರಿಗಳನ್ನು ಬಳಸಿ ತಲೆನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರಿಂದ ಶರೀರಕ್ಕೆ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ.

ತಲೆನೋವು ಏಕೆ ಕಾಣಿಸಿಕೊಳ್ಳುತ್ತದೆ ಅನ್ನೋದಕ್ಕೆ ಮುಖ್ಯ ಕಾರಣವೇನು ಇಲ್ಲ, ಹಲವು ಕಾರಣಗಳಿಂದ ಕೂಡ ತಲೆನೋವು ಬರಬಹುದು. ಹೌದು ಸರಿಯಾಗಿ ಊಟ ನಿದ್ರೆ ಇಲ್ಲದಿದ್ದರೂ ಹಾಗು ಕೆಲಸದ ಒತ್ತಡ ಗಾಳಿ ಬಿಸಿಲು ಅಷ್ಟೇ ಅಲ್ದೆ ಕಣ್ಣಿನ ಸಮಸ್ಯೆ, ವಿಟಮಿನ್‌ ಕೊರತೆ, ನಿದ್ರಾಹೀನತೆ, ಎಸಿಡಿಟಿ, ನೀರಿನ ಅಂಶ ಕಡಿಮೆಯಾಗುವುದು ಇವೆಲ್ಲವುಗಳಿಂದ ತಲೆ ನೋವು ಕಾಣಿಸಿಕೊಳ್ಳುವುದು.

ತಲೆನೋವು ನಿವಾರಣೆಗೆ ಕರಿಮೆಣಸಿನ ಮನೆಮದ್ದು ಮಾಡೋದು ಹೇಗೆ? ಮೊದಲನೆಯದಾಗಿ ಕರಿಮೆಣಸಿನ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಕುಡಿಯುವುದು ಅಥವಾ ತುಪ್ಪದಲ್ಲಿ ಬಿಸಿ ಮಾಡಿ ತೆಗೆದುಕೊಳ್ಳುವುದು ಮೈಗ್ರೇನ್‌ ಅಥವಾ ಇನ್ನಿತರ ತಲೆನೋವನ ಬಾಧೆಯನ್ನು ಹೋಗಲಾಡಿಸುತ್ತದೆ. ಕರಿಮೆಣಸಿನಲ್ಲಿರುವ ಖಾರದ ಅಂಶ ನೋವಿನ ಬಾಧೆಯನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. ಅಥವಾ ನೆನೆಸಿಟ್ಟ ಕರಿಮೆಣಸನ್ನು ಹುಡಿ ಮಾಡಿಯೂ ಸೇವಿಸಬಹುದು

ಕರಿಮೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕಾರಿ ಅಂಶಗಳಿವೆ ವಿಟಮಿನ್‌ ಎ, ಸಿ ಹಾಗೂ ಕೆಗಳನ್ನು ಹೊಂದಿರುವ ಕರಿಮೆಣಸಿನ ಕಾಳುಗಳಲ್ಲಿ, ಅತ್ಯಧಿಕ ಪ್ರಮಾಣದ ಖನಿಜಾಂಶಗಳೂ ಇವೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಸೇರಿದಂತೆ ದೇಹಕ್ಕೆ ಅಗತ್ಯವಾದ ಖನಿಜಾಂಶಗಳನ್ನು ಇವುಗಳು ಹೊಂದಿವೆ. ಕರಿಮೆಣಸು ಮಸಾಲೆ ಪದಾರ್ಥವಾದರೂ ಕೂಡ ಶರೀರದ ಒಂದಿಷ್ಟು ಬೇನೆಗಳಿಗೆ ಪರಿಹಾರ ಒದಗಿಸುವಂತ ಕೆಲಸವನ್ನು ಮಾಡುತ್ತೆ.

By

Leave a Reply

Your email address will not be published. Required fields are marked *