ಬಹಳ ಹಿಂದಿನ ಕಾಲದಿಂದಲೂ ವೀಳ್ಯದ ಎಲೆಯೂ ತನ್ನದೇ ಆದ ಮಹತ್ವವನ್ನು ಕಯ್ದುಕೊಂಡು ಬಂದಿದೆ ಯಾಕಂದ್ರೆ ವೀಲ್ಯದ ಎಲೆಗೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ ಆದ್ದರಿಂದಲೇ ವೀಲ್ಯದ ಎಲೆಯನ್ನು ಎಲ್ಲ ಶುಭಕಾರ್ಯಗಳಲ್ಲಿಯೂ ಬಳಸಲಾಗುತ್ತದೆ ಅಲ್ಲದೆ ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ತನ್ನಲ್ಲಿ ಒಳಗೊಂಡಿರುವ ಈ ವೀಲ್ಯದ ಎಲೆಯು ಅನೇಕ ಆರೋಗ್ಯಕಾರಿ ಲಕ್ಷಣಗಳನ್ನು ಹೊಂದಿದೆ ಹಾಗಾದ್ರೆ ವೀಲ್ಯದ ಎಲೆಯ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ವೀಳ್ಯದ ಎಲೆಯು ಮಾನವನ ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ಹೊಂದಿದೆ ಮೊದಲಿಗೆ ಹೊಟ್ಟೆಯಲ್ಲಿ ಉಂಟಾಗುವ ಗ್ಯಾಸ್ಟ್ರೀಕ್ ಸಮಸ್ಯೆ ಮತ್ತು ಹೊಟ್ಟೆ ಉಬ್ಬರಿಸುವಿಕೆಗೆ ವೀಳ್ಯದ ಎಲೆಯು ರಾಮಬಾಣವಾಗಿ ಕೆಲಸ ಮಾಡುತ್ತದೆ ಸಾಮಾನ್ಯವಾಗಿ ಊಟವಾದ ನಂತರ ಬರೀ ವೀಳ್ಯದ ಎಳೆಯನ್ನು ಪ್ರತಿನಿತ್ಯ ಎರಡು ಬಾರಿ ಸೇವಿಸುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ವೀಳ್ಯದ ಎಲೆಯು ನಮ್ಮ ಜೀರ್ಣ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ಉರಿಮೂತ್ರ ಸಮಸ್ಯೆ ಇರುವವರು ಯೂರಿನ್ ಇನ್ಫೆಕ್ಷನ್ ಇರುವವರು ಕಿಡ್ನಿ ಗೆ ಸಂಬಂದಿಸಿದಂತೆ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಎರಡು ವೀಳ್ಯದ ಎಲೆಗಳನ್ನು ತಿಂದು ಬಿಸಿ ನೀರನ್ನು ಕುಡಿಯುವುದರಿಂದ ಕ್ರಮೇಣ ಉರಿ ಮೂತ್ರ ಮತ್ತು ಮೂತ್ರ ಕೋಶಕ್ಕೆ ಸಂಬಂದಪಟ್ಟಂತಹ ಯಾವುದೇ ಸಮಸ್ಯೆಗಳಿದ್ದರೂ ಶೀಘ್ರದಲ್ಲಿ ಗುಣಮುಕವಾಗುತ್ತವೆ ಮತ್ತು ಈ ಸಮಯದಲ್ಲಿ ಮಧ್ಯಪಾನ ಮಾಡುವುದು ನಿಷಿದ್ಧವಾಗಿದೆ ಇದರಿಂದ ನಿಮ್ಮ ಸಮಸ್ಯೆಗಳು ಉಲ್ಭಣವಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿರುತ್ತವೆ

ಒಣ ಕೆಮ್ಮು ಅಥವಾ ನಾಯಿ ಕೆಮ್ಮು ಇರುವವರು ಒಂದು ವೀಳ್ಯದ ಎಳೆಯ ಜೊತೆಗೆ ಒಂದು ಚಮಚ ಅಜ್ವಾನ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಬೆಳಿಗ್ಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಒಣ ಕೆಮ್ಮು ನಿಯಂತ್ರಣಕ್ಕೆ ಬರುವುದಲ್ಲದೆ ನಿಮ್ಮ ಉಸಿರಾಟಕ್ಕೆ ಸಂಬಂದಪಟ್ಟಂತಹ ಅಥವಾ ಶ್ವಾಸಕೋಶಕ್ಕೆ ಸಂಬಂದಿಸಿದ ಯಾವುದೇ ಸಮಸ್ಯೆ ಇದ್ದರೂ ಸರಿಯೇ ಅತೀ ವೇಗವಾಗಿ ಗುಣಮುಖವಾಗುತ್ತದೆ ಮತ್ತು ಆಸ್ತಮಾ ಇರುವವರಿಗೆ ಕೂಡಾ ಇದು ರಾಮ ಬಾಣವಾಗಿದೆ

ಇನ್ನೂ ವೀಳ್ಯದ ಎಲೆಯನ್ನು ಸಣ್ಣಗೆ ನುರಿದು ಪೇಸ್ಟ್ ಮಾಡುಕೊಂಡು ಹಣೆಯ ಮೇಲೆ ಲೇಪಿಸಿಕೊಂಡು ನಂತರ ಅರ್ಧ ಗಂಟೆ ಬಿಟ್ಟು ತೊಳೆಯುವುದರಿಂದ ತಲೆ ನೋವು ಅಥವಾ ಮೈಗ್ರೇನ್ ಸಮಸ್ಯೆ ಇರುವವರು ಗುಣಮುಖರಾಗುತ್ತಾರೆ ಅಲ್ಲದೇ ನಿಯಮಿತವಾಗಿ ವೀಳ್ಯದ ಎಳೆಯನ್ನು ತಿನ್ನುವುದರಿಂದ ಬಾಯಿ ಹುಣ್ಣು ವಾಸಿಯಾಗುತ್ತದೆ ಮತ್ತು ವೀಳ್ಯದ ಎಳೆಯು ನಮ್ಮ ಹಸಿವನ್ನು ಹೆಚ್ಚಿಸುತ್ತದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!