ಸಾಮಾನ್ಯವಾಗಿ ಎಲ್ಲ ವಯೋಮಾನದ ಹೆಣ್ಣು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಮತ್ತು ಕೂದಲು ತುಂಬಾ ಉದುರುವ ಸಮಸ್ಯೆ ಇರುವವರನ್ನು ನಾವು ನೋಡಿದ್ದೇವೆ ಇದರಿಂದ ಹಲವಾರು ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ಯುಕ್ತ ಎಣ್ಣೆಗಳಿಗೆ ಮಾರುಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗದೆ ಬೇಸತ್ತವರಿದ್ದಾರೆ ಇಂತಹ ಎಲ್ಲ ಸಮಸ್ಯೆಗಳಿಗೆ ಕರಿಬೇವಿನ ಎಣ್ಣೆಯು ಶಾಶ್ವತ ಪರಿಹಾರವಾಗಿದೆ ಹಾಗಾದರೆ ಈ ಕರಿ ಬೇವಿನ ಎಣ್ಣೆಯನ್ನು ತಯಾರಿಸುವ ವಿಧಾನದ ಬಗ್ಗೆ ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ

ಮೊದಲಿಗೆ ಒಂದು ಬೌಲ್ ಕರಿಬೇವಿನ ಸೊಪ್ಪನ್ನು ತೆಗೆದುಕೊಳ್ಳಬೇಕು ನಂತರ 150 ರಿಂದ 200 ಗ್ರಾಂ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು ಹೀಗೆ ಒಂದು ಬೌಲ್ ನಲ್ಲಿ ತೆಗೆದುಕೊಂಡ ಕರಿಬೇನಿನ ಸೊಪ್ಪನ್ನು ಒಂದು ಚಿಕ್ಕ ಮಿಕ್ಸಿ ಜಾರ್ ನಲ್ಲಿ ಹಾಕಿಕೊಂಡು ನಂತರ ಅದಕ್ಕೆ ಸ್ವಲ್ಪ ಮಾತ್ರವೇ ಕೊಬ್ಬರಿ ಎಣ್ಣೆಯನ್ನು ಹಾಕಿ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ಹೀಗೆ ರುಬ್ಬಿಕೊಂಡ ಕರಿಬೇವಿನ ಎಲೆಗಳು ಮತ್ತು ಸ್ವಲ್ಪವೇ ಕೊಬ್ಬರಿ ಎಣ್ಣೆಯೂ ತುಂಬಾ ನುರಿದು ಪೇಸ್ಟ್ ರೀತಿಯಲ್ಲಿ ಆಗಿರಬೇಕು ನಂತರ ಹೀಗೆ ಪೇಸ್ಟ್ ರೀತಿಯಲ್ಲಿ ತಯಾರಾದ ಕರಿಬೇವು ಮತ್ತು ಸ್ವಲ್ಪ ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ಒಂದು ಚಿಕ್ಕ ಬೌಲ್ ನಲ್ಲಿ ಹಾಕಿಕೊಳ್ಳಬೇಕು

ನಂತರ ಒಂದು ದಪ್ಪ ತಳ ಇರುವ ಬಾಣಲೆಯಲಿ ನಾವು ಮೊದಲೇ ತೆಗೆದುಕೊಂಡಿರುವ 150 ರಿಂದ 200 ಗ್ರಾಂ ಕೊಬ್ಬರಿ ಎಣ್ಣೆಯನ್ನು ಹಾಕಬೇಕು ನಂತರ ಬಾಣಲೆಯಲ್ಲಿರುವ ಕೊಬ್ಬರಿ ಎಣ್ಣೆಯ ಜೊತೆಗೆ ನೀವು ತಯಾರಿಸಿರುವ ಕರಿಬೇನಿನ ಎಲೆಗಳ ಪೇಸ್ಟ್ ಅನ್ನು ಮಿಶ್ರಣ ಮಾಡಿ ಅದನ್ನು ಒಲೆಯ ಮೇಲೆ ಇಟ್ಟು ಬಹಳ ಸಣ್ಣ ಉರಿಯಲ್ಲಿ ಅದು ಕಾಯುವವರೆಗೂ ಬೇಯಿಸಿಕೊಳ್ಳಬೇಕು ಹೀಗೆ ಬಿಸಿಯಾದ ಎಣ್ಣೆಯು ಕರಿಬೇವಿನ ಎಲೆಗಳ ಪೇಸ್ಟ್ ನ ಪ್ರಭಾವದಿಂದ ಹಸಿರು ಬಣ್ಣಕ್ಕೆ ತಿರುಗುತ್ತದೆ ನಂತರ ಹಸಿರು ಬಣ್ಣಕ್ಕೆ ತಿರುಗಿದ ಈ ಎಣ್ಣೆಯನ್ನು ಶೋಧಿಸಿಕೊಳ್ಳಬೇಕು ಹೀಗೆ ಶೋಧಿಸಿಕೊಂಡ ಎಣ್ಣೆಯನ್ನು ಸ್ವಲ್ಪ ಹೊತ್ತು ಆರಲು ಬಿಟ್ಟು ನಂತರ ತಲೆಗೆ ಹಚ್ಚಿಕೊಳ್ಳಬಹುದು ಅಲ್ಲದೇ ಈ ಎಣ್ಣೆಯನ್ನು 6 ತಿಂಗಳ ವರೆಗೆ ಕೆಡದಂತೆ ನೂಡಿಕೊಳ್ಳಬಹುದು

ಸಿದ್ಧಪಡಿಸಿಕೊಂಡಿರುವ ಈ ಕರಿಬೇವಿನ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ತಲೆಗೆ ಹಚ್ಚಿಕೊಂಡು ಎರಡು ಗಂಟೆಯ ನಂತರ ತಲೆಗೆ ಬಿಸಿನೀರಿನ ಸ್ನಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ನಿಮ್ಮ ತಲೆ ಕೂದಲು ಕಪ್ಪಾಗುವುದಲ್ಲದೇ ಬುಡದಿಂದಲೇ ದೃಡವಾಗಿ ಸಮೃದ್ದವಾಗಿ ಬೆಳೆಯುತ್ತದೆ ಮತ್ತು ತಲೆ ಕೂದಲು ಉದುರುವಿಕೆಯನ್ನು ಇದರಿಂದ ನಿಯಂತ್ರಿಸಬಹುದಾಗಿದೆ

Leave a Reply

Your email address will not be published. Required fields are marked *