ನೀವು ಇದನ್ನ ತಿನ್ನೋದ್ರಿಂದ ದೇಹ ಆಗುತ್ತೆ ವಜ್ರಕಾಯ, ಡಾಕ್ಟರ್ ಹತ್ರ ಹೋಗಬೇಕಿಲ್ಲ

0 9

ಮನುಷ್ಯ ಆಧುನಿಕ ಜೀವನಕ್ಕಾಗಿ ಮರಗಿಡಗಳನ್ನು ಕಡಿದನು ಆದರೆ ನಿಸರ್ಗದಲ್ಲಿ ಎಂತಹ ರೋಗಕ್ಕೂ ಪರಿಹಾರ ನೀಡುವ ಗುಣಗಳಿರುವ ಗಿಡಗಳಿದ್ದವು. ನಮ್ಮ ಸುತ್ತಮುತ್ತ ಹಳ್ಳಿಗಳಲ್ಲಿ ಕಂಡುಬರುವ ಅನೇಕ ಗಿಡಗಳು ತನ್ನದೇ ಆದ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಅಂತಹ ಗಿಡಗಳಲ್ಲಿ ಅಪರೂಪವಾಗಿರುವ ಅತಿಬಲ ಗಿಡದ ಪೌರಾಣಿಕ ಹಿನ್ನಲೆ, ಅದರ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಅತಿಬಲ ಗಿಡಗಳು ಬಯಲುಸೀಮೆಯಲ್ಲಿ ಹೆಚ್ಚು ಕಂಡುಬರುತ್ತದೆ. ಮಲೆನಾಡಿನಲ್ಲಿ ಈ ಗಿಡಗಳು ಅಲ್ಲಲ್ಲಿ ಮಾತ್ರ ಕಂಡುಬರುತ್ತದೆ. ಅತಿಬಲ ಗಿಡಗಳ ಬಗ್ಗೆ ರಾಮಾಯಣದಲ್ಲಿ ನೋಡಬಹುದು. ರಾಮ ಲಕ್ಷ್ಮಣರಿಗೆ ಶಾಸ್ತ್ರ ಮತ್ತು ಶಸ್ತ್ರ ವಿದ್ಯೆಯನ್ನು ಬೋಧಿಸಿದ ವಿಶ್ವಾಮಿತ್ರ ಮಹರ್ಷಿಗಳು ಬಲ ಅತಿಬಲ ಎಂಬ ಮಂತ್ರವೊಂದನ್ನು ಹೇಳಿಕೊಡುವುದುನ್ನು ಯಾರೂ ಕೇಳಿಸಿಕೊಳ್ಳಬಾರದು ಎಂಬ ಕಾರಣಕ್ಕೆ ನಿರ್ಜನ ಪ್ರದೇಶದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಮಂತ್ರೋಪದೇಶ ಮಾಡುತ್ತಾರೆ ಆಗ ಅಲ್ಲಿದ್ದ ಎರಡು ಗಿಡಗಳು ಮಂತ್ರವನ್ನು ಕೇಳಿಸಿಕೊಂಡವು, ಆ ಗಿಡಗಳಿಗೆ ತಾವು ರಹಸ್ಯ ಮಂತ್ರವನ್ನು ಕೇಳಿಸಿಕೊಂಡೆವು ಎಂಬ ಭೀತಿ ಶುರುವಾಯಿತು. ನಂತರ ಅವು ವಿಶ್ವಾಮಿತ್ರರ ಬಳಿ ತಮ್ಮ ತಪ್ಪನ್ನು ತಿಳಿಸಿ ಕ್ಷಮೆ ಕೇಳಿದವು ಆಗ ವಿಶ್ವಾಮಿತ್ರರು ಜಗತ್ತಿನ ಎಲ್ಲೆಡೆ ಬೆಳೆದು ಜನರಿಗೆ ಆರೋಗ್ಯ ಹಾಗೂ ಬಲ ಒದಗಿಸಿ ಎಂದು ಆಶೀರ್ವಾದ ಮಾಡಿ ಕಳುಹಿಸಿದರು. ಆ ಎರಡು ಗಿಡಗಳಿಗೆ ಬಲ ಮತ್ತು ಅತಿಬಲ ಎಂಬ ಹೆಸರು ಬಂದಿತು. ಹೃದಯ ಖಾಯಿಲೆಯಿಂದ ಹಿಡಿದು ಪುರುಷತ್ವದ ಸಮಸ್ಯೆಯವರೆಗೆ ಅತಿಬಲ ಗಿಡ ಪರಿಹಾರ ಕೊಡುತ್ತದೆ. ಸುಂದರವಾದ ಹಳದಿ ಅಥವಾ ಮಿಶ್ರ ಬಣ್ಣದ ಹೂವುಗಳಿರುವ ಈ ಗಿಡ ಹೃದಯಾಕಾರದ ಎಲೆಗಳನ್ನು ಅಂಟು ಅಂಟಾದ ಸಣ್ಣ ರೋಮಗಳನ್ನು ಹೊಂದಿರುತ್ತದೆ.

ಅತಿಬಲ ಗಿಡದ ನಾಲ್ಕೈದು ಎಲೆಗಳನ್ನು ನೀರಿನಲ್ಲಿ ನೆನೆಸಿ ಕುದಿಸಿ ಆನಂತರ ಶೋಧಿಸಿದ ಕಷಾಯವನ್ನು ದಿನಕ್ಕೆ 3 ಬಾರಿ ಕುಡಿಯುತ್ತಾ ಬಂದರೆ ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಕರಗಿ ಮೂತ್ರ ನಾಳದ ಮೂಲಕ ಹೊರಗೆ ಹೋಗುತ್ತದೆ. ಕಣ್ಣಿನ ಸಮಸ್ಯೆ ಇದ್ದರೆ ಅತಿಬಲ ಗಿಡದ ಎಲೆಗಳನ್ನು ಕಷಾಯ ಮಾಡಿಕೊಂಡು ಕುಡಿಯುವುದರ ಮೂಲಕ ದೃಷ್ಟಿದೋಷವನ್ನು ನಿವಾರಿಸಿಕೊಳ್ಳಬಹುದು. ಹಳ್ಳಿಗಳಲ್ಲೇ ಇರಲಿ ಬೆಂಗಳೂರಿನಲ್ಲೇ ಇರಲಿ ಬೀದಿನಾಯಿಗಳು ಹೆಚ್ಚಿವೆ ನಾಯಿ ಕಚ್ಚಿದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ ಇಲ್ಲವೆಂದರೆ ಸೆಪ್ಟಿಕ್ ಆಗುತ್ತದೆ ಆದರೆ ನಾಯಿ ಕಚ್ಚಿದರೆ ಮನೆಯಲ್ಲೇ ಪರಿಹಾರ ಮಾಡಿಕೊಳ್ಳಬಹುದು. ಅತಿಬಲ ಗಿಡದ ಎಲೆಗಳನ್ನು ಜಜ್ಜಿ ಅದರ ರಸವನ್ನು ನಾಯಿ ಕಚ್ಚಿದ ಜಾಗಕ್ಕೆ ಹಚ್ಚಿ ಬಟ್ಟೆಯಿಂದ ಕಟ್ಟಿಕೊಳ್ಳಬೇಕು, ನಂಜು ಏರುವುದಿಲ್ಲ ಮತ್ತು ಗಾಯ ಬೇಗ ವಾಸಿಯಾಗುತ್ತದೆ. ಬೇರೆಬೇರೆ ಗಾಯಗಳಾದಾಗ ಅತಿಬಲ ಗಿಡದ ಎಲೆಯ ರಸವನ್ನು ಹಚ್ಚುವುದರಿಂದ ರಕ್ತಸ್ರಾವವನ್ನು ನಿಲ್ಲಿಸಬಹುದು ಹಾಗೂ ಗಾಯ ವಾಸಿಯಾಗುತ್ತದೆ.

ವಿಷಮಶೀತ ಜ್ವರ ಬಂದಾಗ ಅತಿಬಲ ಗಿಡದ ಎಲೆಯ ಕಷಾಯಕ್ಕೆ ಕಲ್ಲುಸಕ್ಕರೆ ಸೇರಿಸಿಕೊಂಡು ಕುಡಿಯುವುದರಿಂದ ಜ್ವರ ಕಡಿಮೆಯಾಗುವುದಲ್ಲದೆ ದೇಹಕ್ಕೆ ಶಕ್ತಿ ಸಿಗುತ್ತದೆ. ವಾರಕ್ಕೆ ಎರಡು ಮೂರು ಬಾರಿ ಅತಿಬಲ ಗಿಡದ ಎಲೆಯ ಕಷಾಯ ಕುಡಿಯುತ್ತಾ ಬಂದರೆ ಹೃದಯದ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ಈ ಕಷಾಯವನ್ನು ದಿನಕ್ಕೆರಡು ಬಾರಿ ಎರಡು ಚಮಚ ಮಕ್ಕಳಿಗೆ ಕುಡಿಸುವುದರಿಂದ ಜಂತುಹುಳು ಸಮಸ್ಯೆ ನಿವಾರಣೆಯಾಗುತ್ತದೆ. ಸೊಂಟ ನೋವಿನಿಂದ ಬಳಲುತಿದ್ದರೆ ರಾತ್ರಿ ನೋವಿರುವ ಜಾಗದಲ್ಲಿ ಎಣ್ಣೆಯಿಂದ ಮಸಾಜ್ ಮಾಡಿ ಅತಿಬಲ ಗಿಡದ ಎಲೆಯಿಂದ ಪಟ್ಟಿ ಹಾಕಿ ಬಟ್ಟೆಯಿಂದ ಕಟ್ಟಿಕೊಂಡರೆ ಬೆಳಗ್ಗೆ ಅನ್ನುವಷ್ಟರಲ್ಲಿ ನೋವು ಉಪಶಮನವಾಗುತ್ತದೆ. 50 ಗ್ರಾಂ ಅತಿಬಲ ಬೀಜ 100ಗ್ರಾಂ ಶತಾವರಿ ಬೇರಿನ ಪುಡಿಯನ್ನು ಜೋನಿಬೆಲ್ಲ ಅಥವಾ ಕಪ್ಪು ಬೆಲ್ಲದೊಂದಿಗೆ ಸೇರಿಸಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಉಂಡೆಗಳನ್ನಾಗಿ ಮಾಡಿಟ್ಟುಕೊಂಡು ಪ್ರತಿನಿತ್ಯ ಎರಡು ಬಾರಿ ಹಾಲಿನ ಜೊತೆಗೆ ಸೇವಿಸುತ್ತಾ ಬಂದರೆ ಪುರುಷರಲ್ಲಿ ಕಂಡುಬರುವ ಪುರುಷತ್ವ ಸಮಸ್ಯೆಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಕೆಮ್ಮು, ಅಸ್ತಮಾ ರೋಗಕ್ಕೆ ಸಹ ಅತಿಬಲ ಗಿಡದ ಕಷಾಯ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಅತಿಬಲ ಗಿಡದ ಎಲ್ಲಾ ಅಂಗಗಳು ಮಹತ್ವವನ್ನು ಪಡೆದುಕೊಂಡಿದೆ. ಅತಿಬಲ ಗಿಡದಿಂದ ಎಣ್ಣೆಯನ್ನು ಮಾಡಿ ಬಳಸುವುದರಿಂದ ದೇಹಕ್ಕೆ ಪುಷ್ಟಿ ದೊರಕುತ್ತದೆ. ಅತಿಬಲ ಗಿಡವನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ ಅದನ್ನು ಮೈಯಿಗೆ ಹಚ್ಚಿಕೊಳ್ಳುವುದರಿಂದ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಮಹಾಭಾರತದಲ್ಲಿ ಗಾಂಧಾರಿ ಅತಿಬಲ ಗಿಡವನ್ನು ಬೆರೆಸಿದ ಎಣ್ಣೆಯನ್ನು ಕುರು ಸಾರ್ವಭೌಮನಿಗೆ ಹಚ್ಚಿದ್ದಳಂತೆ ಹೀಗಾಗಿ ಅವನ ದೇಹ ವಜ್ರದೇಹವಾಯಿತು ಎಂಬ ನಂಬಿಕೆ ಇದೆ. ಈ ಗಿಡದ ಕಷಾಯವನ್ನು ಕುಡಿದರೆ ಡಾಕ್ಟರ್ ಹತ್ತಿರ ಹೋಗುವುದೇ ಬೇಡ. ಇದೊಂದು ಅಪರೂಪದ ವಿಶೇಷ ಗುಣವನ್ನು ಹೊಂದಿರುವ ಗಿಡವಾಗಿದ್ದು, ಈ ಗಿಡವನ್ನು ಎಲ್ಲಾದರೂ ನೋಡಿದರೆ ಕತ್ತರಿಸಬೇಡಿ ಬೆಳೆಸಿ. ಸಾಧ್ಯವಾದರೆ ನಿಮ್ಮ ಮನೆಗಳಲ್ಲಿ ಈ ಗಿಡವನ್ನು ಬೆಳೆಸಿ. ನಿಸರ್ಗದಲ್ಲಿರುವ ಗಿಡಮೂಲಿಕೆಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ಇನ್ನಾದರೂ ಎಲ್ಲರೂ ಪಾಲಿಸೋಣ.

Leave A Reply

Your email address will not be published.