ಶ್ವಾಸಕೋಶದ ಅರೋಗ್ಯ ವೃದ್ಧಿಸುವ ಜೊತೆಗೆ ಶರವೇಗದಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಿಸುವ ಕಷಾಯ

0 2

ಸುಮಾರು ಒಂದು ವರ್ಷಗಳಿಂದ ಜನರಿಗೆ ಅಮೃತ ಬಳ್ಳಿಯು ಮತ್ತೆ ಪರಿಚಯವಾಗಿದೆ. ಯಾಕೆಂದರೆ ವೈರಸ್ ಹಾವಳಿಯಿಂದ ತಪ್ಪಿಸಿಕೊಳ್ಳಲು ಜನರು ಅಮೃತ ಬಳ್ಳಿಯ ಮೊರೆ ಹೋಗುತ್ತಿದ್ದಾರೆ. ಅಮೃತ ಬಳ್ಳಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈರಸ್ ಹಾವಳಿಯಿಂದಾಗಿ ರೋಗ ನಿರೋಧಕ ಶಕ್ತಿ ಅತೀ ಹೆಚ್ಚು ಉದ್ವೇಗಕ್ಕೆ ಒಳಗಾಗಿ ನಮ್ಮ ಶ್ವಾಸ ಕೋಶವನ್ನು ಹಾಳು ಮಾಡುತ್ತದೆ ಆಗ ಮನುಷ್ಯನು ಸಾಯುವ ಸಾಧ್ಯತೆಗಳು ಹೆಚ್ಚಿರುತ್ತವೆ ವೈರಸ್ ನಿಂದ ಮನುಷ್ಯ ಸಾಯುವುದಿಲ್ಲ ಹೀಗಾಗಿ ನಮ್ಮ ಇಮ್ಯೂನಿಟಿಗೆ ಪಾಠ ಮಾಡುವಂತಹ ಔಷಧಿ ಬೇಕಾಗುತ್ತದೆ. ಇದಕ್ಕೆ ಅಮೃತ ಬಳ್ಳಿ ಒಂದು ಒಳ್ಳೆಯ ಆಯ್ಕೆ ಎಂದು ಹೇಳಬಹುದು.

ಅಮೃತ ಬಳ್ಳಿಯನ್ನು ಯಾವ್ಯಾವ ರೋಗಕ್ಕೆ ಬಳಸಬಹುದು ಎನ್ನುವುದಕ್ಕಿಂತ ಯಾವ ರೋಗಕ್ಕೆ ಬಳಸಬಾರದು ಎಂದು ಹೇಳಲು ಸುಲಭವಾಗುತ್ತದೆ ಏಕೆಂದರೆ ಒಬ್ಬ ವೈದ್ಯನ ಬಳಿ ಅಮೃತ ಬಳ್ಳಿ ಹೊಂದಿದ್ದರೆ ಅದನ್ನು ಬಹುಶಃ ಬಹುತೇಕ ಎಲ್ಲಾ ಖಾಯಿಲೆಗಳಿಗೆ ಇದನ್ನು ಬಳಸಬಹುದು ಏಕೆಂದರೆ ಅಷ್ಟರ ಮಟ್ಟಿಗೆ ಈ ಬಳ್ಳಿಯು ರೋಗ ನಾಶಕವಾಗಿದೆ ಹಾಗೂ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರಾಣದಲ್ಲಿ ಅಮೃತ ಬಳ್ಳಿಯು ಹುಟ್ಟಿರುವುದರ ಬಗ್ಗೆ ಕಥೆಗಳಿವೆ. ರಾಮ-ರಾವಣರ ಯುದ್ಧ ಮುಗಿದ ನಂತರ ಕಪಿ ಸೈನ್ಯ ರಾವಣನ ಶಕ್ತಿಯಿಂದ ವಿಷ ತಗುಲಿ ಸತ್ತು ಹೋಗಿರುತ್ತವೆ. ಅವರನ್ನು ಬದುಕಿಸಲು ದೇವತೆಗಳು ಅವುಗಳ ಮೇಲೆ ಅಮೃತವನ್ನು ಸಿಂಚನ ಮಾಡುತ್ತಾರೆ ನಂತರ ಕಪಿಗಳು ಮೈಕೊಡವಿ ಏಳುವಾಗ ಭೂಮಿಯ ಮೇಲೆ ಬಿದ್ದ ಅಮೃತದಿಂದ ಅಮೃತ ಬಳ್ಳಿಯು ಹುಟ್ಟಿತು ಎಂಬ ಕಥೆಯು ಪುರಾಣಗಳಲ್ಲಿ ಹೇಳಲಾಗಿದೆ. ಈ ಕಥೆಯು ಎಷ್ಟು ಸತ್ಯ ಎಂಬುದು ತಿಳಿದಿಲ್ಲ, ಆದರೆ ಇದರ ಗುಣಗಳು ಮಾತ್ರ ಅದ್ಭುತವಾಗಿದೆ.

ಅಮೃತ ಬಳ್ಳಿಯನ್ನು ಚರ್ಮರೋಗ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಐಬಿಎಸ್ ಎನ್ನುವ ಖಾಯಿಲೆ, ಶ್ವಾಸಕೋಶಕ್ಕೆ ಸಂಬಂಧಪಟ್ಟ ಖಾಯಿಲೆಗಳು, ಬಹುತೇಕ ಎಲ್ಲಾ ರೀತಿಯ ಜ್ವರಗಳಿಗೆ ಬಳಸಲಾಗುತ್ತದೆ. ಅಮೃತ ಬಳ್ಳಿಯು ಉಷ್ಣ ಗುಣವನ್ನು ಹೊಂದಿದೆ ಹೀಗಾಗಿ ಇದನ್ನು ಬಳಸುವಾಗ ಸ್ವಲ್ಪ ಜಾಗೃತಿ ವಹಿಸಿಕೊಳ್ಳಬೇಕು ಅಥವಾ ಇದರ ಜೊತೆ ತಂಪು ಗುಣವನ್ನು ಹೊಂದಿರುವ ಲಾವಂಚ, ಸೊಗದೆ ಬೇರು ಇಂತಹದನ್ನು ಹಾಕಿ ಕಷಾಯ ಮಾಡಿ ಕುಡಿದರೆ ಒಳ್ಳೆಯದು. ಅಮೃತ ಬಳ್ಳಿಯ ಕಷಾಯವನ್ನು ವಾರದಲ್ಲಿ ಎರಡರಿಂದ ಮೂರು ದಿನ ಕುಡಿಯುವುದರಿಂದ ಸಹಜವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಯುರ್ವೇದದ ಪ್ರಕಾರ ಮಳೆಗಾಲದ ಸಂದರ್ಭದಲ್ಲಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ ಆದ್ದರಿಂದ ಈ ಕಷಾಯಕ್ಕೆ ಸಣ್ಣ ಶುಂಟಿಯನ್ನು ಬಳಸಿ ಕುಡಿಯುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಬರುವ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಅಮೃತ ಬಳ್ಳಿಯು ಕಹಿಯಾಗಿರುತ್ತದೆ. ಅಮೃತ ಬಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಚಕ್ರಾಕಾರದ ಚಿಹ್ನೆ ಕಾಣುತ್ತದೆ. ಇದನ್ನು ಚಕ್ರ ಲಕ್ಷಣಿಕ ಎಂದು ಕರೆಯುತ್ತಾರೆ. ಇದರ ಮೂಲಕ ಅಮೃತ ಬಳ್ಳಿಯನ್ನು ಸುಲಭವಾಗಿ ಗುರುತಿಸಬಹುದು. ಆರೋಗ್ಯವಾಗಿರುವ ವ್ಯಕ್ತಿಗೆ ಹಾಗೂ ಒಬ್ಬ ವ್ಯಕ್ತಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಾದರೆ 1 ಗ್ರಾಂ ಅಥವಾ ಕಿರು ಬೆರಳಿನ ತುದಿಯ ಒಂದು ಭಾಗದ ಅಳತೆಯಷ್ಟು ಅಮೃತ ಬಳ್ಳಿಯನ್ನು ತೆಗೆದುಕೊಳ್ಳಬೇಕು ಹಾಗೂ ಮನೆಯಲ್ಲಿ ನಾಲ್ಕು ಜನ ಇದ್ದರೆ ನಾಲ್ಕು ಪಟ್ಟು ಹಾಕಬೇಕು ಇದನ್ನು ಒಂದು ಪಾತ್ರೆಗೆ ಹಾಕಿ ನಾಲ್ಕು ಲೋಟ ನೀರನ್ನು ಕುದಿಯಲು ಬಿಡಬೇಕು. ನಾಲ್ಕು ಲೋಟದಿಂದ ಒಂದು ಲೋಟದವರೆಗೆ ನೀರು ಬತ್ತಿದ ಮೇಲೆ ಅದನ್ನು ಸೋಸಿ ಕುಡಿಯಬೇಕು ಇದಕ್ಕೆ ಸ್ವಲ್ಪ ಜೋನಿ ಬೆಲ್ಲ ಅಥವಾ ಒಂದು ಚಿಟಿಕೆ ಏಲಕ್ಕಿಯನ್ನು ಬಳಸಬಹುದು.

ಇತ್ತೀಚಿನ ದಿನಗಳಲ್ಲಿ ಜನರು ಅಮೃತ ಬಳ್ಳಿ ಕಷಾಯ ಕುಡಿದು ಯಾವ ತೊಂದರೆಯೂ ಆಗುವುದಿಲ್ಲ ಎಂದು ವೈದ್ಯರ ಬಳಿ ಹೋಗುತ್ತಿಲ್ಲ. ಏನಾದರೂ ಸಮಸ್ಯೆಗಳು ಕಂಡಾಗ ವೈದ್ಯರ ಬಳಿ ಹೋಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಈ ಕಷಾಯ ಕುಡಿಯುವುದರಿಂದ ಆರೋಗ್ಯದಲ್ಲಿ ಯಾವ ಸಮಸ್ಯೆ ಬರುವುದಿಲ್ಲ ಎಂಬುದು ತಪ್ಪು ಕಲ್ಪನೆಯಾಗಿದೆ. ಇದು ಆರೋಗ್ಯದಲ್ಲಿ ಸಮಸ್ಯೆಗಳಾದಾಗ ಅತೀ ಹೆಚ್ಚು ಮಾರಕವಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಈ ಉತ್ತಮ ಮಾಹಿತಿಯನ್ನು ಎಲ್ಲರ ಜೊತೆ ಹಂಚಿಕೊಳ್ಳಿ.

Leave A Reply

Your email address will not be published.