ಪುನೀತ್‌ ರಾಜ್‌ಕುಮಾರ್‌ ಬ್ಯಾನರ್‌ನ ಲಾ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿದ ಚೆಲುವೆ ರಾಗಿಣಿ ಚಂದ್ರನ್‌ ಇವರು ಒಬ್ಬ ಮಾಡೆಲ್‌ ಡ್ಯಾನ್ಸರ್‌ ಹಾಗೂ ಟ್ರೈನರ್‌ ಆಗಿಯೂ ಕೂಡಾ ತಮ್ಮನ್ನು ಗುರುತಿಸಿಕೊಂಡವರು. ಕೋರೋನ ಲಾಕ್‌ಡೌನ್‌ ಸಮಯದಲ್ಲಿ ಅವರಿಗೆ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ತಾವು ಕುಟುಂಬದ ಜೊತೆಗೆ ಕಾಲ ಕಳೆದ ಬಗೆಯನ್ನು ಅವರು ಈ ರೀತಿಯಾಗಿ ವಿವರಿಸಿದ್ದಾರೆ. ಲಾಕ್‌ಡೌನ್‌ ಸಮಯವನ್ನು ಬಹಳಷ್ಟು ಪ್ರಯೋಜನಕಾರಿ ಆಗಿ ಕಳೆಯುತ್ತಿದ್ದಾರೆ ರಾಗಿಣಿ ಚಂದ್ರನ್‌. ಒಂದು ಕಡೆ ತನ್ನ ಡ್ಯಾನ್‌ ಮತ್ತು ಫಿಟ್‌ನೆಸ್‌ ಟ್ರೈನರ್‌ ಕೆಲಸವನ್ನು ಆನ್‌ಲೈನ್‌ ಮೂಲಕ ಜೀವಂತವಾಗಿಡುತ್ತಾ, ಇತ್ತ ಫ್ಯಾಮಿಲಿ ಜೊತೆಗೆ ಮನಸ್ಫೂರ್ತಿಯಾಗಿ ತೊಡಗಿಸಿಕೊಳ್ಳುತ್ತಾ, ನೂರೆಂಟು ಬಗೆ ಬಗೆಯ ರೆಸಿಪಿಗಳನ್ನು ರೆಡಿ ಮಾಡುತ್ತಾ ಬೊಂಬಾಟ್‌ ಆಗಿ ದಿನ ದೂಡುತ್ತಿದ್ದಾರೆ. ಈ ಲಾಕ್‌ಡೌನ್‌ ಟೈಮ್‌ನಲ್ಲಿ ರಾಗಿಣಿ ಅವರಿಗೆ ಅವಿಸ್ಮರಣೀಯ ಅನಿಸಿದ ಕ್ಷಣ ಅಂದರೆ ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನಿಸಿಕೊಂಡಿದ್ದು. ಇದರ ಹಿಂದಿನ ಕತೆ ಇಂಟರೆಸ್ಟಿಂಗ್‌. ಹಾಗೂ ಇದರ ಜೊತೆ ಜೊತೆಗೆ ತನ್ನ ತಂಗಿಯ ಜೊತೆ ಕೂಡಾ ಡ್ಯಾನ್ಸ್ ಮಾಡುತ್ತಾ ಸಮಯ ಕಳೆಯುತ್ತಾರೆ ರಾಗಿಣಿ ಚಂದ್ರನ್.

ಕೋರೋನ ಲಾಕ್ ಡೌನ್ ಇಲ್ಲದೇ ಉಳಿದ ಸಮಯಗಳಲ್ಲಿ ಅಥವಾ ದಿನಗಳಲ್ಲಿ ಮನೆಯಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿ ಆಗಿ ಬಿಡುತ್ತಾರೆ. ಆದರೆ ಈ ಸಮಯದಲ್ಲಿ ಫ್ಯಾಮಿಲಿ ಕ್ಷಣಗಳನ್ನು ಆಪ್ತವಾಗಿ ಸವಿಯೋದು ಸಾಧ್ಯವಾಯ್ತು ಎನ್ನುತ್ತಾರೆ ರಾಗಿಣಿ. ಇವರು ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಅತ್ತೆಗೆ ಅದ್ಭುತ ರುಚಿಯ ಮಶ್ರೂಮ್‌ ಸೂಪ್‌ ಮಾಡಿಕೊಟ್ಟಿದ್ದಾರೆ. ಅತ್ತೆ ಮಾಡಿರೋ ಬಿರಿಯಾನಿಯನ್ನು ರುಚಿಕಟ್ಟಾಗಿ ಸವಿದಿದ್ದಾರೆ. ಇವರ ಮಾವ ದೇವರಾಜ್‌ ಅವರು ಡೈನಾಮಿಕ್‌ ಸ್ಟಾರ್‌ ಎಂದೇ ಗುರುತಿಸಿಕೊಂಡವರು. ಅವರಿಗೆ ತನ್ನ ಸೊಸೆಯ ಅಡುಗೆ ಯಾವ ಪರಿ ಇಷ್ಟ ಆಗಿದೆ ಅಂದರೆ ಕೊರೋನಾ ಸಮಯದಲ್ಲಿ ತನ್ನ ಸೊಸೆ ಮಾಡಿದ ಅಡುಗೆ ಸವಿಯೋ ಭಾಗ್ಯ ಸಿಕ್ಕಿತು ಅಂತ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

ಉರ್ಹಿತ್‌ ಮಿಕ್ಸ್‌ ಎಂಬ ಸ್ಟುಡಿಯೋದಲ್ಲಿ ರಾಗಿಣಿ ಪ್ರಜ್ವಲ್ ಅವರು ಡ್ಯಾನ್ಸ್‌ ಯೋಗ ಫಿಟ್‌ನೆಸ್‌ ಕಲಿಸಿಕೊಡುತ್ತಾರೆ. ಲಾಕ್‌ಡೌನ್‌ನಿಂದ ಸ್ಟುಡಿಯೋ ಮುಚ್ಚಿದೆ ಆದರೂ ಆನ್‌ಲೈನ್‌ ಕ್ಲಾಸ್‌ ನಡೆಸುತ್ತಾ ಇದ್ದಾರೆ. ಆದರೆ ನೇರವಾಗಿ ಕ್ಲಾಸ್‌ ಮಾಡುವ ಎಫೆಕ್ಟ್ ಆನ್‌ಲೈನ್‌ ಕ್ಲಾಸ್‌ನಲ್ಲಿ ಸಿಗುವುದಿಲ್ಲ ಎನ್ನುತ್ತಾರೆ ರಾಗಿಣಿ ಪ್ರಜ್ವಲ್. ಮುಖ್ಯವಾಗಿ ತಿದ್ದುವಿಕೆಗೆ ಸಂಬಂಧಿಸಿದ ಹಾಗೇ ಒಂದಿಷ್ಟು ತೊಂದರೆಗಳಾಗುತ್ತವೆ ಆದರೆ ಆ ಎಲ್ಲ ನೆಗೆಟಿವ್‌ ಅಂಶಗಳನ್ನೂ ಪಕ್ಕಕ್ಕೆ ಸರಿಸಿ ಪಾಸಿಟಿವ್‌ ಆಗಿ ಮುಂದೆ ಹೋಗೋದು ಇವರಿಗಿಷ್ಟ. ಲಾಕ್‌ಡೌನ್‌ ಆರಂಭದ ದಿನಗಳ ಕಸಿವಿಸಿ, ಬೇಸರವನ್ನು ಅವರು ಈ ಮನಸ್ಥಿತಿಯಿಂದಲೇ ದಾಟಿ ಮುಂದೆ ಬಂದಿದ್ದಾರೆ. ವರ್ಕೌಟ್‌ಗೆ ಸಂಬಂಧಿಸಿದ ಹಾಗೆ ಸಾಕಷ್ಟು ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ ರಾಗಿಣಿ. ವಾಟರ್‌ ಬಾಟಲ್‌ಗಳನ್ನು ವೈಟ್‌ ಲಿಫ್ಟಿಂಗ್‌ ಆಗಿ ಬಳಸಿಕೊಂಡಿದ್ದಾರೆ. ಎರಡು ಲೀಟರ್‌ ವಾಟರ್‌ ಬಾಟಲ್‌ಗೆ ನೀರು ತುಂಬಿಸಿ ಅದರಲ್ಲೇ ವೈಟ್‌ ಲಿಫ್ಟಿಂಗ್‌ ಮಾಡುತ್ತಾರೆ. ಮನೆಯ ಮೆಟ್ಟಿಲುಗಳ ಮೇಲೆ ಏರೋಬಿಕ್ಸ್‌ ಪ್ರಯೋಗ ಮಾಡೋದು ಕಲಿಯುತ್ತಿದ್ದಾರೆ. ಇಂಥಾ ಪ್ರಯೋಗಶೀಲತೆ ನಡುವೆಯೇ ಇವರ ಲಾಕ್‌ಡೌನ್‌ ದಿನಗಳು ಮುಗಿಯುತ್ತಾ ಬರುತ್ತಿವೆ. ಈ ಅವಧಿಯನ್ನು ಒಂಚೂರೂ ವೇಸ್ಟ್‌ ಮಾಡದೆ ಬಳಸಿಕೊಂಡ ತೃಪ್ತಿ ರಾಗಿಣಿ ಅವರಲ್ಲಿದೆ. ಇದೆಲ್ಲದರ ಜೊತೆಗೆ ತಮ್ಮ ತಂಗಿಯ ಜೊತೆಗೆ ರಾಗಿಣಿ ಪ್ರಜ್ವಲ್ ಡ್ಯಾನ್ಸ್ ಮಾಡುತ್ತಲ್ಲಿರುವ ವಿಡಿಯೋ ಒಂದು ವೈರಲ್ ಆಗಿದ್ದು ಅದನ್ನು ಇಲ್ಲಿ ಕಾಣಬಹುದು.

Leave a Reply

Your email address will not be published. Required fields are marked *