ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಡಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ

0 3

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುವ ಈ ಜೋಡಿ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಎಂದು ಪ್ರಸಿದ್ಧರಾಗಿರುವ ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989 ರಲ್ಲಿ ಹಾಸನ ಜಿಲ್ಲೆಯ ಶಾಂತಿ ಗ್ರಾಮದವರು. ಇವರು ಮೊದಲ ಬಾರಿ ಹಾಳಾಗೋದೆ ಹಾಡಿನ ಮೂಲಕ ಪ್ರಸಿದ್ಧರಾದರು. ಗಾಯಕ, ಗೀತ ರಚನಕಾರ, ಸಂಗೀತ ಸಂಯೋಜನೆ ಹಾಗೂ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಅವರು ಹಲವಾರು ರ‍್ಯಾಪ್ ಹಾಗೂ ಪಾಪ್ ಸಂಗೀತವನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟರು. ಚಂದನ್ ಶೆಟ್ಟಿ ಅವರು 2012 ರಲ್ಲಿ ಅಲೆಮಾರಿ ಸಿನಿಮಾದ ಮೂಲಕ ಗೀತ ರಚನೆಕಾರರಾಗಿ ಹಾಗೂ ಕನ್ನಡದ ಅರ್ಜುನ್ ಜನ್ಯ ರವರ ಬಳಿ ಸಹ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಚಂದನ್ ಶೆಟ್ಟಿ ಅವರ ಹಾಳಾಗೋದೆ, 3 ಪೆಗ್, ಚಾಕಲೇಟ್ ಗರ್ಲ್, ಟಕೀಲಾ, ಕಿರಿಕ್ ಕೀರ್ತಿ ಅವರ ಜೊತೆ ನಮ್ಮ ಬೆಂಗಳೂರು, ನನ್ನ ಪ್ರೀತಿ ಸುಳ್ಳಲ್ಲ, ಫಾಯಾರ್, ಶೋಕಿಲಾಲ, ಬ್ಯಾಡ ಬಾಯ್, ಗೆಟ್ ಹೈ, ಪಾರ್ಟಿ ಫ್ರೀಕ್ ಹಾಡಿನ ಮೂಲಕ ಜನರ ಪ್ರೀತಿ ಗಳಿಸಿದರು. ಇವರ ಕೋಲುಮಂಡೆ ಜಾನಪದ ಗೀತೆಯು ವಿವಾದಕ್ಕಿಡಾಗಿತ್ತು, ಇದರಲ್ಲಿ ಶರಣೆ ಸಂಕಮ್ಮ ನವರನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಜನ ಇದ್ದನ್ನು ವಿರೋಧಿಸಿದರು. ಪೊಗರು ಸಿನಿಮಾದ ಖರಾಬು ಹಾಡು ಹೊಸ ದಾಖಲೆಯನ್ನು ಬರೆಯಿತು. ಚಂದನ್ ಶೆಟ್ಟಿ ಅವರು ಕನ್ನಡದ ಬಿಗ್ ಬಾಸ್ ಸೀಸನ್ 5 ರ ವಿಜೇತರಾಗಿದ್ದಾರೆ. ಇದೇ ಸೀಸನ್ ನ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾದರು.

ನಿವೇದಿತಾ ಗೌಡ ಬಿಗ್ ಬಾಸ್ ನ ಸ್ಪರ್ಧಿ ಹಾಗೂ ಮಾಡಲ್ ಆಗಿದ್ದಾರೆ. ಇವರು 12 ಮೇ, 2000 ರಂದು ಮೈಸೂರಿನಲ್ಲಿ ಜನಿಸಿದರು. ಇವರು ಎಸ್ ಬಿಆರ್ ಆರ್ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಸಿಎ ಪದವಿಯನ್ನು ಪಡೆದರು. ತಮ್ಮ ಕನ್ನಡ ಹಾಗೂ ಆಂಗ್ಲ ಭಾಷೆಯ ಮಿಶ್ರಿತ ಮಾತುಗಳಿಂದ ಹಾಗೂ ಡಬ್ ಸ್ಮಾಷ್ ಮೂಲಕ ಜನರ ಗಮನ ಸೆಳೆದರು. ಬಿಗ್ ಬಾಸ್ ಸೀಸನ್ 5 ರಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿದ್ದರು. 2019 ರಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿ ತುಂಬಾ ಟೀಕೆಗೊಳಗಾಗಿದ್ದರು. ಫೆಬ್ರುವರಿ 26, 2020 ರಂದು ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರನ್ನು ವಿವಾಹವಾದರು. ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಈ ಜೋಡಿ ಹಲವಾರು ಡ್ಯಾನ್ಸ್ ಹಾಗೂ ಅವರ ಸಂತೋಷದ ಕ್ಷಣಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಕೆಲವು ದಿನಗಳ ಹಿಂದೆ ಅಷ್ಟೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದು ಆ ವಿಡಿಯೋ ಈಗ ಬಹಳಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಕೆಲವರು ಇಬ್ಬರಿಗೂ ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಈ ಕೊರೊನ ಸಮಯದಲ್ಲಿ ಜನ ಸಂಕಷ್ಟದಲ್ಲಿ ಇದ್ದಾಗ ಇವೆಲ್ಲಾ ಶೋಕಿ ಬೇಕಿತ್ತಾ ಎಂದು ಕಾಮೆಂಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಲ್ಲಿ ನೀವು ಕೂಡಾ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ಡ್ಯಾನ್ಸ್ ವಿಡಿಯೋ ತುಣುಕುಗಳನ್ನು ಕಾಣಬಹುದು.

Leave A Reply

Your email address will not be published.