ಅತ್ತಿಬಲ ಎನ್ನುವ ಗಿಡವು ಒಂದು ಗಿಡಮೂಲಿಕೆಯ ಔಷಧವಾಗಿದೆ. ಈ ಗಿಡವು ಅನೇಕ ರೋಗಗಳಿಗೆದಿವ್ಯ ಔಷಧವಾಗಿದೆ. ಜೊತೆಗೆ ದೇಹಕ್ಕೆ ಅತ್ಯುತ್ತಮ ಬಲವನ್ನು ನೀಡುತ್ತದೆ. ಈ ಗಿಡದ ಹೂವು ಎಲೆ ಕಾಂಡ ಬೇರು ಪ್ರತಿಯೊಂದು ಸಹ ಔಷಧವಾಗಿ ಬಳಸಲಾಗುತ್ತದೆ. ಪ್ರಾಚೀನ ಕಾಲದಿಂದ ಹಿಡಿದು ಈಗಿನ ಕಾಲದ ವರೆಗೂ ಆಯುರ್ವೇದದಲ್ಲಿ ಇದನ್ನು ಔಷಧಕ್ಕಾಗಿ ಬಳಸುತ್ತಾರೆ. ಈ ಔಷಧ ಗಿಡವನ್ನು ರಾಮಾಯಣ-ಮಹಾಭಾರತ ಕಾಲದಲ್ಲಿಯೂ ಸಹ ಬಳಸಿದ್ದರು ಎಂಬ ಪ್ರತೀತಿ ಇದೆ. ಗಾಂಧಾರಿಯು ತನ್ನ ಪುತ್ರ ದುರ್ಯೋಧನ ಶಕ್ತಿಶಾಲಿ ಆಗುವ ಸಲುವಾಗಿ ಈ ಗಿಡದ ಎಲೆಯನ್ನು ದುರ್ಯೋಧನನಿಗೆ ಕುಡಿಯಲು ನೀಡಿದ್ದರು ಎಂದು ಪುರಾಣದಲ್ಲಿಯೂ ಸಹ ಕೇಳಿಬರುತ್ತದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅತ್ಯಂತ ಶಕ್ತಿಶಾಲಿಯಾದಂತಹ ಅತ್ತಿಬಲ ಗಿಡವು ನಮ್ಮ ದೇಶದ ಎಲ್ಲಾ ಭಾಗಗಳಲ್ಲಿಯೂ ದೊರಕುತ್ತದೆ. ಕೆಲವೊಂದು ಭಾಗಗಳಲ್ಲಿ ಈ ಗಿಡಗಳಿಗೆ ಕೆಲವೊಂದು ಹೆಸರನ್ನು ಹೇಳಿ ಕರೆಯಲಾಗುತ್ತದೆ. ತುತ್ತಿ ಗಿಡ, ಅತ್ತಿಬಲ ಗಿಡ, ಪೆಟ್ಟಿಗೆ ಗಿಡ, ಕುರುವೆಗಿಡ ಹಾಗೂ ಶ್ರೀಮುದ್ರಿಕೆ ಗಿಡ ಹೀಗೆ ಹಲವು ಹೆಸರುಗಳಲ್ಲಿ ಕರೆಯಲಾಗುತ್ತದೆ. ಈ ಗಿಡವು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇಂತಹ ಮೈಮೇಲೆ ಗಾಯಗಳಾದಾಗ ಅತ್ತಿಬಲ ಗಿಡದ ಎಲೆಯನ್ನು  2 ಲೀಟರ್ ನೀರಿಗೆ ನಾಲ್ಕರಿಂದ ಐದು  ಹಾಕಿ ಕುದಿಸಿ ಸೇವಿಸುವುದರಿಂದ ಗಾಯಗಳು ಬೇಗನೆ ಒಣಗುತ್ತದೆ. ಪ್ಯಾರಲಿಸಿಸ್ ಅಟ್ಯಾಕ್ ಆದವರಿಗೆ ಅತ್ತಿಬಲ ಗಿಡದ ಎಲೆಯನ್ನು ಎಳ್ಳೆಣ್ಣೆಯಲ್ಲಿ ಸರಿಯಾಗಿ ಕುದಿಸಬೇಕು.

ಎಣ್ಣೆಯನ್ನು ಪ್ರತಿನಿತ್ಯ ಅವರಿಗೆ ಲೇಪನ ಮಾಡುವುದರಿಂದ ಅತ್ಯಂತ ವೇಗವಾಗಿ ಗುಣಮುಖರಾಗುತ್ತಾರೆ. ಅದರ ಈ ಗಿಡದ ಎಲೆಯ ರಸವನ್ನು ಕುಡಿಯುವುದು ಕೂಡ ಉತ್ತಮವಾಗಿದೆ. ಹಲ್ಲು ನೋವಿಗೆ ಅತ್ತಿಬಲ ಗಿಡದ ಎಲೆಯ ಪೌಡರನ್ನು  ಎರಡು ಲೋಟ ನೀರಿನಲ್ಲಿ ಅರ್ಧ ಚಮಚ ಪೌಡರನ್ನು ಹಾಕಿ ಸರಿಯಾಗಿ ಕುದಿಸಿ ಆ ನೀರನ್ನು ಬಾಯಿಗೆ ಹಾಕಿ ಬಾಯಿ ಮುಕ್ಕಳಿಸುವುದನ್ನು ಮಾಡುವುದರಿಂದ ಹಲ್ಲಿನ ನೋವು ವಾಸಿಯಾಗುತ್ತದೆ. ಹಾಗೆ ದೇಹದ ಸಂಧುಗಳನೋವು ಮತ್ತು ಮೂಳೆಗಳ ಸವೆತದಿಂದ ಬರುವಂತಹ ನೋವುಗಳಿಗೆ ಅತ್ತಿಬಲ ಸೊಪ್ಪಿನ ಎಲೆ ಮತ್ತು ಬೇರಿನಿಂದ ತಯಾರಿಸಿದ ಎಣ್ಣೆಯನ್ನು ಲೇಪಿಸುವುದರಿಂದ ಎಲ್ಲಾ ನೋವುಗಳು ಕಡಿಮೆಯಾಗುತ್ತದೆ. ಪೈಲ್ಸ್ ತೊಂದರೆ ಇರುವವರಿಗೆ ಮೋಶನ್ ಸರಿಯಾಗಿ ಆಗದೆ ತೊಂದರೆ ಅನುಭವಿಸುತ್ತಿರುವವರಿಗೆ ಅತ್ತಿಬಲ ಎಲೆಯ ಪೌಡರನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಕಾಲು ಚಮಚ ಪೌಡರ್ ಹಾಕಬೇಕು.

ಅದನ್ನು ಊಟವಾದನಂತರ ಸೇವಿಸುವುದರಿಂದ ಮೋಷನ್ ಸರಿಯಾಗಿ ಪಾಸ್ ಆಗುತ್ತದೆ. ಜೊತೆಗೆ ಈ ಅತ್ತಿಬಲದ ಎಲೆಯನ್ನು ಜಜ್ಜಿ ಅದನ್ನು ಹರಳೆಣ್ಣೆ ಜೊತೆಗೆ ಮಿಕ್ಸ್ ಮಾಡಿ ಆ ಜಾಗಕ್ಕೆ ಹಚ್ಚುವುದರಿಂದ ಪೈಲ್ಸ್ ಬೇಗನೆ ವಾಸಿಯಾಗುತ್ತದೆ. ಒಣ ತ್ವಚೆಗೆ ಅತ್ತಿಬಲ ಗಿಡದ ಎಲೆಯ ಪೌಡರನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಒಣ ತ್ವಚೆಯು ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ. ಬಲಹೀನತೆ ಮತ್ತು ನಿಶ್ಯಕ್ತಿ ಇರುವವರಿಗೆ ಅತ್ತಿಬಲ ಬೀಜದ ಪೌಡರನ್ನು ಸೇವಿಸುವುದರಿಂದ ಇಂತಹ ಸಮಸ್ಯೆಗಳು ಗುಣಮುಖವಾಗುತ್ತದೆ. ಹೀಗೆ ಅತ್ತಿಬಲ ಗಿಡವುಅನೇಕ ರೋಗಗಳಿಗೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ರಾಮಬಾಣವಾಗಿದೆ.

Leave a Reply

Your email address will not be published. Required fields are marked *