ಶಿವರಾತ್ರಿಯಿಂದ ಈ ರಾಶಿಯವರಿಗೆ ಶಿವನ ವಿಶೇಷ ಅನುಗ್ರವಿದೆ, ಕಾಲಿಟ್ಟ ಜಾಗದಲ್ಲಿ ಜಯ ಖಚಿತ

0 5

ಪ್ರತಿಯೊಂದು ಪ್ರಮುಖ ದಿನವು ರಾಶಿಚಕ್ರದಲ್ಲಿ ಬದಲಾವಣೆಯನ್ನು ತರುತ್ತದೆ. ಮಾರ್ಚ್ ಒಂದರಂದು ಇರುವ ಶಿವರಾತ್ರಿಯ ದಿನದಂದು ಕೆಲವು ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾದರೆ ಯಾವ ರಾಶಿಯ ಜನರಿಗೆ ಶಿವನ ಅನುಗ್ರಹ ದೊರೆಯಲಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ಭಾರತ ದೇಶದಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಮಹತ್ವವಿದೆ. ಹಿಂದೂ ಹಬ್ಬಗಳಲ್ಲಿ ಪ್ರಮುಖ ಹಬ್ಬ ಶಿವರಾತ್ರಿ ಕೂಡ ಒಂದು. ಮೂರು ಲೋಕಕ್ಕೂ ಅಧಿಪತಿಯಾದ ಶಿವನನ್ನು, ಮಹಾದೇವ, ನಟರಾಜ, ಬೈರವ, ಪಶುಪತಿ ಹೀಗೆ ಹಲವು ನಾಮಗಳಿಂದ ಕರೆಸಿಕೊಳ್ಳುವ ಮಹಾಯೋಗಿಯನ್ನು ಆರಾಧಿಸುವ ದಿನ. ಪ್ರತಿ ವರ್ಷ ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್​ 1ರಂದು ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಶಿವನಿಗೆ ಅತ್ಯಂತ ಶ್ರೇಷ್ಠವಾದ ಬಿಲ್ವಪತ್ರೆಯನ್ನು ಅರ್ಪಿಸಿ ಮನಃಪೂರ್ವಕವಾಗಿ ಬೇಡಿಕೊಂಡರೆ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಇಡಿ ರಾತ್ರಿ ಅಖಂಡ ಜಾಗರಣೆ ಮಾಡಿ, ಭಕ್ರಿಯಿಂದ ರುದ್ರನನ್ನು ಆರಾಧಿಸಲಾಗುತ್ತದೆ.  

ಶಿವ ಕಷ್ಟನಿವಾರಕನಾಗಿರುತ್ತಾನೆ ಹೀಗಿದ್ದಾಗ ಈ ಬಾರಿ ಶಿವರಾತ್ರಿಯಂದು ಕೆಲವು ರಾಶಿಯ ಮೇಲೆ ಧನಾತ್ಮಕ ಪರಿಣಾಮ, ಕೆಲವು ರಾಶಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಲಿದೆ. ಶಿವನು ರಾಶಿ ಚಕ್ರದ ಮೊದಲ ರಾಶಿಯಾಗಿರುವ ಮೇಷ ರಾಶಿಯ ಜನರನ್ನು ಅನುಗ್ರಹಿಸುತ್ತಾನೆ. ಶಿವ ಮಂಗಳನ ಅಧಿಪತಿ ಹೀಗಾಗಿ ಶಿವರಾತ್ರಿಯಂದು ಮೇಷ ರಾಶಿಯ ಜನರು ಹಾಲು ಮತ್ತು ಗಂಗಾಜಲವನ್ನು ಶಿವನಿಗೆ ಅರ್ಪಿಸಿದರೆ ಜೀವನದಲ್ಲಿ ಕಷ್ಟಗಳನ್ನು ಕಳೆದು, ಇಷ್ಟಾರ್ಥಗಳು ಸಿದ್ದಿಯಾಗಲಿವೆ. ವೃಶ್ಚಿಕ ರಾಶಿಯ ಮೇಲೆ ಶಿವರಾತ್ರಿಯಂದು ಶಿವನ ಅನುಗ್ರಹ ಇರಲಿದೆ. ಈ ದಿನ ವೃಶ್ಚಿಕ ರಾಶಿಯ ಜನರು ಶಿವನಿಗೆ ನೀರಿನ ಅಭಿಷೇಕ ಮಾಡಿದರೆ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸುಗಳಿಸುತ್ತಾರೆ.

ಶನಿ ಮಕರ ರಾಶಿಯ ಅಧಿಪತಿ. ಶನಿ ಮತ್ತು ಮಹಾದೇವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಹೀಗಾಗಿ ಮಕರ ರಾಶಿಯ ಜನರು ಶಿವರಾತ್ರಿಯಂದು ಶಿವನ ಆರಾಧನೆ ಮಾಡಿದರೆ ಶನಿ ಮತ್ತು ಮಹಾದೇವ ಇಬ್ಬರ ಅನುಗ್ರಹವೂ ದೊರೆಯಲಿದೆ. ಕುಂಭ ರಾಶಿಗೂ ಕೂಡ ಶನಿ ಅಧಿಪತಿ. ಹೀಗಾಗಿ ಕುಂಭ ರಾಶಿಯವರು ಶಿವನನ್ನು ಆರಾಧಿಸಿದರೆ ಹೆಚ್ಚು ಉನ್ನತಿ ಪಡೆಯಬಹುದು.

ಈ ಶಿವರಾತ್ರಿಯಂದು ಶಿವನಿಗೆ ಹಾಲು, ಬಿಲ್ವಪತ್ರೆ, ಗಂಗಾಜಲವನ್ನು ಅರ್ಪಿಸಿ ಆಶೀರ್ವಾದವನ್ನು ಪಡೆಯಿರಿ. ಯಾವ ರಾಶಿಯವರಾದರೂ ಶಿವರಾತ್ರಿಯಂದು ಶಿವನನ್ನು ಆರಾಧಿಸುವುದರಿಂದ ಉತ್ತಮ ಫಲ ಸಿಗುತ್ತದೆ. ಶಿವರಾತ್ರಿಯಂದು ಶಿವನನ್ನು ಆರಾಧಿಸಿ ಅನುಗ್ರಹ ಪಡೆಯಿರಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ,

Leave A Reply

Your email address will not be published.