ಧನಸ್ಸು ರಾಶಿಯವರಿಗೆ ಮಾರ್ಚ್ ತಿಂಗಳು ಹೇಗಿರಲಿದೆ ಅದೃಷ್ಟ ಸಂಖ್ಯೆ ಯಾವುದು ನೋಡಿ

0 1

ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ತಿಂಗಳಿನಲ್ಲಿಯು ಗ್ರಹಗಳ ಬದಲಾವಣೆಯಿಂದ ವಿಭಿನ್ನ ರಾಶಿ ಫಲಗಳು ದೊರೆಯುತ್ತವೆ. ಒಂದೊಂದು ರಾಶಿ ಜನ್ಮದಲ್ಲಿ ಪ್ರತಿ ತಿಂಗಳು ಬೇರೆ ಬೇರೆ ಫಲ ಸಿಗಲಿದೆ. ಮಾರ್ಚ್ ತಿಂಗಳಿನಲ್ಲಿ ಧನಸ್ಸು ರಾಶಿಯವರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ.

ಧನಸ್ಸು ರಾಶಿಯಲ್ಲಿ ಜನಿಸಿದವರು ಮೂಲ ನಕ್ಷತ್ರ ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರಗಳಲ್ಲಿ ಜನಿಸಿರುತ್ತಾರೆ. ಧನಸ್ಸು ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿ. ಈ ರಾಶಿಯ ಅದೃಷ್ಟ ದೇವರು ಮಹಾವಿಷ್ಣು. ಈ ರಾಶಿಯವರ ವಿಶೇಷ ಗುಣಗಳೆಂದರೆ ವಿದ್ವಾಂಸರು, ವಿಜಯಿಗಳು ಆಗಿರುತ್ತಾರೆ. ಇವರಿಗೆ ಮೇಷ ಮತ್ತು ಸಿಂಹ ರಾಶಿಗಳು ಮಿತ್ರ ರಾಶಿಗಳಾಗಿರುತ್ತಾರೆ. ಕಟಕ, ಮೀನ, ವೃಶ್ಚಿಕ ರಾಶಿಯವರು ಶತ್ರು ರಾಶಿಗಳಾಗಿರುತ್ತಾರೆ. ಮಾರ್ಚ್ ತಿಂಗಳಿನಲ್ಲಿ 1, 4, 12, 15, 18, 29, 30ನೆ ತಾರೀಖು ಧನಸ್ಸು ರಾಶಿಯವರಿಗೆ ಶುಭಕರವಾಗಿದೆ. ಈ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಧನಾತ್ಮಕ ಫಲವು ಉಂಟಾಗಲಿದೆ, ಋಣಾತ್ಮಕ ಫಲವು ಉಂಟಾಗಲಿದೆ.

ಈ ರಾಶಿಯವರ ಕಲ್ಪನೆಗೆ ತಕ್ಕಹಾಗೆ ಜೀವನದಲ್ಲಿ ಬದಲಾವಣೆಗಳು ಆಗುವುದಿಲ್ಲ ಆದರೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಈ ತಿಂಗಳಿನಲ್ಲಿ ಈ ರಾಶಿಯ ಕೆಲವರು ವಾಹನಗಳನ್ನು ಕೊಂಡುಕೊಳ್ಳಬಹುದು, ಕೆಲವರು ತಮ್ಮ ಕುಟುಂಬದ ಉಪ ಕಸುಬನ್ನು ಪ್ರಾರಂಭಿಸಬಹುದು. ಈ ತಿಂಗಳಿನಲ್ಲಿ ನಿಮ್ಮ ಮಾತಿನ ಚಾಕಚಕ್ಯತೆಗಳು ಉಪಯುಕ್ತವಾಗಲಿದೆ. ರಾಜಕಾರಣಿಗಳು ಈ ತಿಂಗಳಿನಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣಬಹುದು. ಅಧಿಕಾರಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಲಾಭವಿದೆ ಅಲ್ಲದೆ ಉನ್ನತ ಸ್ಥಾನಕ್ಕೆ ಹೋಗುವ ಸಂಭವವಿದೆ. ಈ ರಾಶಿಯ ವಿದ್ಯಾರ್ಥಿಗಳು ಬಹುಕಾಲ ದೂರದ ಊರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ನೆಲೆಸಬೇಕಾಗುತ್ತದೆ. ಈ ರಾಶಿಯವರು ಆಧುನಿಕ ಪದ್ಧತಿಯ ಮೂಲಕ ವ್ಯವಸಾಯದಿಂದ ಸಾಕಷ್ಟು ಆದಾಯವನ್ನು ಗಳಿಸುತ್ತಾರೆ.

ಮಾರ್ಚ್ ತಿಂಗಳಿನಲ್ಲಿ ಅನುಕೂಲಕರ ವಾತಾವರಣ ಸಿಗಲಿದೆ. ಮಾರ್ಚ್ ತಿಂಗಳಿನಲ್ಲಿ ಧನಸ್ಸು ರಾಶಿಯವರು ಉದ್ಯೋಗವನ್ನು ಬದಲಾವಣೆ ಮಾಡಬಹುದು. ಮಾರ್ಚ್ ತಿಂಗಳಿನಲ್ಲಿ ಧನಸ್ಸು ರಾಶಿಯ ಹೆಣ್ಣು ಮಕ್ಕಳಿಗೆ ಯೋಗ ಪ್ರಾಪ್ತಿಯಾಗುತ್ತದೆ, ಸಂಗೀತ, ಸಾಹಿತ್ಯ, ಕಲೆ ಕ್ಷೇತ್ರದಲ್ಲಿ ಅನುಕೂಲವಿದೆ. ಈ ರಾಶಿಯವರ ಪತಿ ಅಥವಾ ಪತ್ನಿಗೆ ಕೆಲವು ಅನಾರೋಗ್ಯ ಕಾಣಿಸಿಕೊಳ್ಳಬಹುದು. ರಕ್ತದೊತ್ತಡ, ಮಧುಮೇಹ ಖಾಯಿಲೆಗೆ ಒಳಗಾಗಬಹುದು ಸೂಕ್ತ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ಮಾರ್ಚ್ 1 ರಿಂದ 15ನೆ ತಾರೀಖಿನವರೆಗೆ ದೃಢವಾದ ನಿರ್ಧಾರ, ಅಚಲವಾದ ನಂಬಿಕೆ, ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದಾದರೆ ಯಶಸ್ಸು ಸಿಗುತ್ತದೆ ಆದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು.

ಮಾರ್ಚ್ ತಿಂಗಳಿನಲ್ಲಿ ಈ ರಾಶಿಯವರಿಗೆ ಹಣದ ಕೊರತೆ ಉಂಟಾಗುವುದಿಲ್ಲ. ಈ ರಾಶಿಯವರು ಮನೆ ಜಾಗ ಖರೀದಿ ಮಾಡುವ ಸಂಭವವಿದೆ. ಮಾರ್ಚ್ ಕೊನೆಯಲ್ಲಿ ಉದ್ಯೋಗದಲ್ಲಿ ಬಡ್ತಿ ಹೊಂದುವ ಸಾಧ್ಯತೆಗಳಿವೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಪರಿಶ್ರಮ ಪಟ್ಟರೆ ಉತ್ತಮ ಅಂಕಗಳು ಲಭಿಸುತ್ತವೆ. ರಾಜಕೀಯ, ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಯಶಸ್ಸು ಸಿಗುತ್ತದೆ. ಮಾರ್ಚ್ ತಿಂಗಳಿನಲ್ಲಿ ಮಾತಿನ ಮೇಲೆ ಎಚ್ಚರಿಕೆ ಇರಬೇಕು. ಕುಲದೇವರನ್ನು ಹೆಚ್ಚು ಆರಾಧಿಸಬೇಕು. ನಿಮ್ಮ ರಾಶಿ ಧನಸ್ಸು ಆಗಿದ್ದಲ್ಲಿ ಉತ್ತಮ ಫಲವನ್ನು ಮಾರ್ಚ್ ತಿಂಗಳಲ್ಲಿ ಪಡೆಯುತ್ತೀರಿ. ಈ ಮಾಹಿತಿಯನ್ನು ಇತರರಿಗೂ ತಿಳಿಸಿ.

Leave A Reply

Your email address will not be published.