ನಾವಿಂದು ನಿಮಗೆ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳುವ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕಬ್ಬಿಣದ ಅಂಶ ಎನ್ನುವುದು ನಮ್ಮ ದೈಹಿಕ ಸಾಮರ್ಥ್ಯವನ್ನು ನಿರ್ಧಾರ ಮಾಡುತ್ತದೆ ನಮ್ಮ ಮಾಂಸಖಂಡಗಳ ಶಕ್ತಿ ಮತ್ತು ಚೈತನ್ಯವನ್ನು ರೂಪಿಸುತ್ತದೆ. ಏಕೆಂದರೆ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ನಿರ್ವಹಿಸುವುದೇ ಕಬ್ಬಿಣದ ಅಂಶ. ಹೀಗಾಗಿ ಅನಿಮಿಯಾ ಸಮಸ್ಯೆಯಿಂದ ನಮ್ಮನ್ನು ದೂರ ಇರಿಸುತ್ತದೆ ಆದರೆ ನಾವು ಇಂದು ಸೇವನೆ ಮಾಡುತ್ತಿರುವಂತಹ ಬಹುತೇಕ ಆಹಾರ ಪದಾರ್ಥಗಳು ಅನಾರೋಗ್ಯಕ್ಕೆ ಹತ್ತಿರವಾಗಿರುವುದರಿಂದ ನಮಗೆ ಸಿಗಬೇಕಾದಂತಹ ಪೌಷ್ಟಿಕ ಸತ್ವಗಳು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಸಾಕಷ್ಟು ಜನರು ಇಂತಹ ಅಪೌಷ್ಟಿಕತೆಗೆ ಹುಟ್ಟಿನಿಂದಲೂ ಗುರಿಯಾಗಿದ್ದಾರೆ.

ಆದರೆ ನಾವು ಸೇವನೆ ಮಾಡುವ ಹಲವಾರು ಆರೋಗ್ಯಕರ ಪದಾರ್ಥಗಳಲ್ಲಿ ಕಬ್ಬಿಣದ ಅಂಶ ಅಪಾರ ಪ್ರಮಾಣದಲ್ಲಿ ಕಂಡುಬರುತ್ತದೆ ಅಂತಹ ಆಹಾರ ಪದಾರ್ಥಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಕಬ್ಬಿಣದ ಅಂಶ ಹೆಚ್ಚಾಗಿರುವಂತಹ ನಮ್ಮ ದಿನನಿತ್ಯದ ಆಹಾರ ಪದಾರ್ಥ ಯಾವುದು ಎಂದರೆ ಅದು ಅವಲಕ್ಕಿ. ಇದನ್ನು ನೀವು ಹುರಿದು ಕೂಡ ಸೇವಿಸಬಹುದು ಒಗ್ಗರಣೆ ಹಾಕಿಕೊಂಡು ತಿನ್ನಬಹುದು ಇಲ್ಲವೆಂದರೆ ಬೇಯಿಸಿ ಕೂಡ ಸವಿಯಬಹುದು.

ಒಟ್ಟಾರೆಯಾಗಿ ಅವಲಕ್ಕಿ ನ ಸೇವನೆ ಮಾಡುವುದರಿಂದ ನಿಮಗೆ ನೂರು ಗ್ರಾಂ ಅವಲಕ್ಕಿಯಲ್ಲಿ ಇಪ್ಪತ್ತು ಮಿಲಿ ಗ್ರಾಂ ಕಬ್ಬಿಣದಂಶ ದೊರೆಯುತ್ತದೆ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯದ ಲಾಭವನ್ನು ಪಡೆದುಕೊಳ್ಳಬಹುದು.

ಇನ್ನು ಬೇಯಿಸಿದ ಸೋಯಾಅವರೆ ಸಾಕಷ್ಟು ಕಬ್ಬಿಣಾಂಶವನ್ನು ಒಳಗೊಂಡಿರುತ್ತದೆ ಇದರಲ್ಲಿ ಯಾವುದೇ ರೀತಿಯ ಕಬ್ಬಿಣಾಂಶದ ಕೊರತೆ ಕಂಡುಬರುವುದಿಲ್ಲ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದರಿಂದ ಯಾವುದಾದರೂ ಖಾದ್ಯವನ್ನು ತಯಾರಿಸಿ ಸೇವಿಸಬಹುದು ಆದರೆ ಇದರ ಸೇವನೆಯ ನಂತರ ನಿಂಬೆ ಹಣ್ಣಿನ ರಸವನ್ನು ಕುಡಿಯುವುದನ್ನು ಮರೆಯಬೇಡಿ ಇದು ಕಬ್ಬಿಣದ ಅಂಶವನ್ನು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹೀರಿಕೊಡುತ್ತದೆ. ಮುಂದಿನದಾಗಿ ನಿಮಗೆ ರಾಜಗಿರಿಲಾಡಿನ ಬಗ್ಗೆ ತಿಳಿದಿರಬಹುದು ಇದರ ಒಂದು ಲಾಡಿನಲ್ಲಿ ನಿಮಗೆ ಬರೋಬ್ಬರಿ ಇಪ್ಪತ್ತೇಳು.ಮೂರು ಮಿಲಿ ಗ್ರಾಂ ಕಬ್ಬಿಣದಂಶ ಸಿಗಲಿದೆ. ಇದನ್ನು ಹುರಿದು ತಿನ್ನಬಹುದು ಅಥವಾ ಬೆಲ್ಲದ ಜೊತೆ ಸೇರಿಸಿ ತಿನ್ನಬಹುದು ಇದರಲ್ಲಿ ಪೌಷ್ಟಿಕ ಸತ್ವಗಳ ಪ್ರಮಾಣ ಕೂಡ ಹೆಚ್ಚಾಗಿದೆ.

ಮುಂದಿನದಾಗಿ ಎಲೆಕೋಸಿನ ಮೇಲ್ಭಾಗದಲ್ಲಿ ಕಂಡುಬರುವಂತಹ ಎಲೆಗಳನ್ನು ಇದುವರೆಗೂ ನೀವು ಹೊರಗೆಸೆಯುತ್ತಿದ್ದರೆ ಅಂತಹ ಅಭ್ಯಾಸವನ್ನು ಕೈಬಿಡಿ. ಅವುಗಳಲ್ಲಿ ನಿಮಗೆ ಅಪಾರ ಪ್ರಮಾಣದ ಕಬ್ಬಿಣದ ಅಂಶ ಸಿಗಲಿದೆ ಅತ್ಯುತ್ತಮ ರೀತಿಯಲ್ಲಿ ಇದರಲ್ಲಿ ಖನಿಜಾಂಶಗಳು ಇರುವ ಕಾರಣ ಇವುಗಳನ್ನು ನೀವು ಎಸೆಯದೆ ಬಳಸಬಹುದು. ಇದರಿಂದ ನಿಮಗೆ ನಲವತ್ತು ಮಿಲಿಗ್ರಾಂ ಕಬ್ಬಿಣದ ಅಂಶ ದೊರೆಯುತ್ತದೆ ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಸೇವನೆ ಮಾಡುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ.

ಮುಂದಿನ ದಾಗಿ ಪ್ರತಿ ನೂರು ಗ್ರಾಂ ಕೆಂಪು ಮಾಂಸದಲ್ಲಿ ನಿಮಗೆ 18.8 ಮಿಲಿಗ್ರಾಂ ನಷ್ಟು ಕಬ್ಬಿಣದಂಶ ದೊರೆಯುತ್ತದೆ.ಆಗಾಗ ಇದರ ಸೇವನೆ ಮಾಡುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಈ ರೀತಿಯಾಗಿ ನಾವು ಮೇಲೆ ತಿಳಿಸಿರುವಂತ ಆಹಾರ ಪದಾರ್ಥಗಳ ಸೇವನೆಯನ್ನು ಮಾಡುವುದರಿಂದ ನೀವು ಕಬ್ಬಿಣಾಂಶದ ಕೊರತೆಯನ್ನು ಎದುರಿಸುತ್ತಿದ್ದರೆ ಅದರಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *