ಇವತ್ತಿನ ಈ ಲೇಖನದಲ್ಲಿ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ಇದರ ಉಪಯೋಗಗಳು ಏನು? ಹಾಗೂ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನೋದನ್ನ ತಿಳಿದುಕೊಳ್ಳೋಣ.

ಮಾರ್ಕೆಟ್ ನಲ್ಲಿ ಈಗ ವಿಧವಿಧವಾದ ಅಕ್ಕಿ ಸಿಗುತ್ತಿದೆ. ಅದರಲ್ಲಿ ಬಿಳಿ ಅಕ್ಕಿ, ಕೆಂಪು ಅಕ್ಕಿ ಅಷ್ಟೇ ಅಲ್ಲದೇ ಕಪ್ಪು ಅಕ್ಕಿಯೂ ಸಹ ಸಿಗುತ್ತಿದೆ. ಬಾಕಿ ಅಕ್ಕಿಗೆ ಹೋಲಿಸಿದರೆ ಕೆಂಪು ಅಕ್ಕಿ ಅಥವಾ ಬ್ರೌನ್ ರೈಸ್ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾಕಂದರೆ ಇದರಲ್ಲಿ ಹೆಚ್ಚಾಗಿ ಪ್ರೊಟೀನ್, ವಿಟಮಿನ್, ಮಗ್ನೇಷಿಯಂ, ಕ್ಯಾಲ್ಶಿಯಂ, ಮ್ಯಾನ್ಗನೀಸ್, ಫೈಬರ್, ಪೊಟ್ಯಾಶಿಯಂ, ವಿಟಮಿನ್ಸ ಬಿ, ಸೆಲಿನಿಯಂ ಈ ಎಲ್ಲಾ ಪುಷ್ಟಿಕಾಂಶಗಳೂ ಇರುವುದರಿಂದ ಕೆಂಪು ಅಕ್ಕಿ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೆಂಪಕ್ಕಿಯಲ್ಲಿ ಬಿಳಿ ಅಕ್ಕಿಯ ಹಾಗೆ ಯಾವುದೇ ರೀತಿಯ ನ್ಯೂಟ್ರಿಷಿಯನ್ ಹಾಳಾಗುವುದಿಲ್ಲ ಬದಲಿಗೆ ಎಲ್ಲ ನ್ಯೂಟ್ರಿಷಿಯನ್ ಗಳೂ ಸಹ ನಮಗೆ ಕೆಂಪು ಅಕ್ಕಿಯಿಂದ ಸಿಗುತ್ತಿವೆ. ಆದರೆ ಬಿಳಿ ಅಕ್ಕಿಯನ್ನ ತಿನ್ನುವುದರಿಂದ ನಮಗೆ ಯಾವ ಪ್ರಯೋಜನವೂ ಇಲ್ಲ ಬಿಳಿ ಅಕ್ಕಿಯನ್ನ ತಯಾರಿಸುವ ಸಂದರ್ಭದಲ್ಲಿ ಎಲ್ಲಾ ಪೋಶಕಾಂಶಗಳು ಸಹ ಹೋಗಿರುತ್ತವೆ. ಬಿಳಿ ಅಕ್ಕಿಯನ್ನು ಪಾಲಿಶ್ ಮಾಡುವ ಮೂಲಕ ತಯಾರಿಸಲಾಗುತ್ತದೆ. ಈ ಪಾಲಿಶ್ ಮಾಡುವುದರಿಂದಲೇ ಬಿಳಿ ಅಕ್ಕಿಯಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತಹ ಎಲ್ಲಾ ಪೋಷಕಾಂಶಗಳು ಸಹ ನಷ್ಟವಾಗಿ ಹೋಗುತ್ತವೆ. ಕೆಂಪು ಅಕ್ಕಿಯಲ್ಲಿ ಪಾಲಿಶ್ ಮಾಡದೆ ಹಾಗೆ ಇಡುವುದರಿಂದ ಪೋಷಕಾಂಶಗಳು ನಮಗೆ ದೊರೆಯುತ್ತವೆ.

ಬಿಳಿ ಅಕ್ಕಿ ಮತ್ತು ಕೆಂಪು ಅಕ್ಕಿಗೆ ಹೋಲಿಕೆ ಮಾಡಿ ನೋಡಿದರೆ, ಕೆಂಪು ಅಕ್ಕಿಯಲ್ಲಿ ಫೈಬರ್ ಮುಂತಾದ ಪೋಷಕಾಂಶಗಳು ಹೇರಳವಾಗಿ ದೊರೆಯುತ್ತವೆ ಆದರೆ ಬಿಳಿ ಅಕ್ಕಿಯಲ್ಲಿ ಇದ್ಯಾವುದೂ ಇರುವುದಿಲ್ಲ. ಬಿಳಿ ಅಕ್ಕಿ ನಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚು ಮಾಡುವ ಆಹಾರವಾಗಿದೆ. ಅಷ್ಟೇ ಅಲ್ಲದೇ ಇನ್ನೂ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಹಾಗೂ ನಮ್ಮ ದೇಹದ ತೂಕ ಹೆಚ್ಚಾಗಲೂ ಸಹ ಕೆಲವೊಮ್ಮೆ ಬಿಳಿ ಅಕ್ಕಿ ಕಾರಣವಾಗಿರುತ್ತದೆ. ಆದ್ರೆ ಕೆಂಪು ಅಕ್ಕಿಯನ್ನ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಅಂಶಗಳು ಇವೆ ಅವು ಈ ಕೆಳಗಿನಂತಿವೆ.

ಕೆಂಪು ಅಕ್ಕಿಯಲ್ಲಿ ಇರುವ ಸೆಲಿನಿಯಂ ಅಂಶವು ನಮ್ಮ ಹೃದಯ ಸಂಬಂಧಿತ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಂಟಿ ಕ್ಯಾನ್ಸರ್ ಎಜಿನ್ ಆಗಿ ಕೆಲಸ ಮಾಡುತ್ತದೆ. ಕೆಂಪಕ್ಕಿಯಲ್ಲಿ ಇರುವ ಹಿಮೋ ಪ್ರಿವೆಂಟಿವ್ ಅಂಶಗಳು ನಮ್ಮ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಆಹಾರ ಕೆಂಪು ಅಕ್ಕಿ ಆಗಿದೆ. ಹಾಗಾಗಿ ಬಿಳಿ ಅಕ್ಕಿಯ ಬದಲು ಕೆಂಪು ಅಕ್ಕಿಯನ್ನು ಸೇವಿಸುವುದು ಒಳ್ಳೆಯದು. ಇದು ನಮ್ಮ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನಕ್ಕೆ ಸೇರಿಸುತ್ತದೆ . ಹೈ ಬಿಪಿ ಇರುವವರು ಸಹ ಇದನ್ನೇ ಬಳಸಬಹುದು.

ಇನ್ನು ಕೆಂಪು ಅಕ್ಕಿಯಲ್ಲಿ ಫೈಬರ್ ಅಂಶ ಇರುವುದರಿಂದ ಇದು ಜೀರ್ಣ ಕ್ರಿಯೆಗೆ ಸಹ ನೆರವಾಗುತ್ತದೆ. ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಕಾರಿ ಆಗಿದೆ. ಹಾಗೆಯೇ ಕೆಂಪು ಅಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ದೇಹದಲ್ಲಿ ಇರುವಂತಹ ಪ್ರೀ ರಾಡಿಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿ ಸುಕ್ಕುಗಟ್ಟುವಿಕೆ, ವಯಸಾದ ಹಾಗೆ ಕಾಣುವುದನ್ನು ಕಡಿಮೇ ಮಾಡಲು ಸಹ ಈ ಕೆಂಪು ಅಕ್ಕಿ ಸಹಾಯಕಾರಿ ಆಗಿದೆ. ಇನ್ನು ಒಬೆಸಿಟಿ ಸಮಸ್ಯೆ ಮತ್ತು ದೇಹದ ತೂಕ ಹೆಚ್ಚು ಇರುವವರು ಬಿಳಿ ಅಕ್ಕಿಯಮ್ಮ ದೂರವಿಟ್ಟು ಕೆಂಪು ಅಕ್ಕಿಯನ್ನೇ ಸೇವಿಸಿ. ಹಾಗೇಇದರ ಜೊತೆಗೆ ಒಂದಿಷ್ಟು ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಸೇವನೆ ಇದರಿಂದ ಕ್ರಮೇಣವಾಗಿ ದೇಹದ ತೂಕ ಕಡಿಮೆ ಆಗುತ್ತದೆ. ಇನ್ನು ಕೆಂಪು ಅಕ್ಕಿಯಲ್ಲಿ ಇರುವ ಮ್ಯಾಂಗನೀಸ್ ಮತ್ತು ಮೆಗ್ನಿಶಿಯಂ ಇವು ಸಂತಾನೋತ್ಪತ್ತಿಗೆ ಸಹಾಯಕಾರಿ ಆಗಿದೆ. ಹಾಗೆ ನಮ್ಮ ನರಕೋಶಗಳ ಹಾಗೂ ನರಮಂಡಲದ ಆರೋಗ್ಯಕ್ಕೂ ಸಹ ಇದು ಸಹಾಯಕಾರಿ ಆಗಿದೆ. ನಾವು ದಿನಕ್ಕೆ ಒಂದು ಕಪ್ ಆಹ್ತು ಕೆಂಪು ಅಕ್ಕಿಯನ್ನ ಸೇವಿಸಿದರೂ ಸಹ ನಮ್ಮ ದೇಹಕ್ಕೆ ಬೇಕಾದ ಮ್ಯಾಂಗನೀಸ್ ಮತ್ತು ಮೆಗ್ನಿಶಿಯಂ ಇವು ದೊರೆಯುತ್ತದೆ. ಇವು ನಮ್ಮ ಮೆದುಳಿನ ಕಾರ್ಯಕ್ಕೂ ಸಹ ಸಹಾಯಕಾರಿ ಆಗಿದೆ. ಕೆಂಪು ಅಕ್ಕಿ ವಾತ , ಪಿತ್ತ, ಕಫ ಹೀಗೆ ಎಲ್ಲ ರೀತಿಯ ದೇಹ ಪ್ರಕೃತಿಯವರಿಗೂ ಹೊಂದುತ್ತದೆ. ಇವಿಷ್ಟು ಕೆಂಪು ಅಕ್ಕಿಯಿಂದ ನಮ್ಮ ದೇಹಕ್ಕೆ ಸಿಗುವಂತಹ ಕೆಲವು ಆರೋಗ್ಯಕರ ಲಾಭಗಳು.

Leave a Reply

Your email address will not be published. Required fields are marked *