ಕೆಆರ್ ಎಸ್ ಡ್ಯಾಮ್ ಹಾಗೂ ಕಾವೇರಿ ನೀರು ಇವೆರಡರ ಕುರಿತಾಗಿ ಕರ್ನಾಟಕ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ಇರುವಂತಹ ಭಿನ್ನ, ಒಡಕು ನಮಗೆಲ್ಲರಿಗೂ ಗೊತ್ತಿರುವುದೇ. ನಮ್ಮ ಕರ್ನಾಟಕದ ಜನರು ಕಾವೇರಿ ನೀರು ಮತ್ತು ಕೆಆರ್ ಎಸ್ ಡ್ಯಾಮ್ ಅನ್ನು ಯಾಕೆ ಅಷ್ಟೊಂದು ಹಚ್ಚಿಕೊಂಡಿದ್ದಾರೆ? ಕನ್ನಡಿಗರಿಗೂ ಮತ್ತು ಕೆಆರ್ ಎಸ್ ಡ್ಯಾಮ್ ಇಗೂ ಇರುವ ಸಂಬಂಧ ಏನು ಎನ್ನುವುದರ ಬಗ್ಗೆ ತುಂಬಾ ಜನರಿಗೆ ತಿಳಿಯದೆ ಇರುವಂತಹ ವಿಷಯ. ಕೆಆರ್ ಎಸ್ ಡ್ಯಾಮ್ ಅನ್ನು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ಎದುರಾದ ಅಂತಹ ಸಂಕಷ್ಟಗಳು ಮತ್ತು ಅದನ್ನು ನಿರ್ಮಿಸಿದ ಬಗೆ ಎರಡು ನಿಜಕ್ಕೂ ರೋಚಕವಾದ ಸಂಗತಿಯೇ ಸರಿ. ಕೆಆರ್ ಎಸ್ ಡ್ಯಾಮ್ ನಿರ್ಮಾಣದ ಹಿಂದಿರುವ ಘಟನೆಯ ಬಗ್ಗೆ ಅದರ ಕಥೆಯ ಬಗ್ಗೆ ಈ ಲೇಖನದ ಮೂಲಕ ಸ್ವಲ್ಪ ತಿಳಿದುಕೊಳ್ಳೋಣ.

ಸ್ವಾತಂತ್ರ್ಯಪೂರ್ವದಲ್ಲಿ ಈಗ ಇರುವ ಕರ್ನಾಟಕ ರಾಜ್ಯ ಮೈಸೂರು ಪ್ರಾಂತ್ಯ ಆಗಿತ್ತು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಹಾಗಾಗಿ ಈಗಿರುವ ಮಂಡ್ಯ ತುಂಬಾ ಬರಡು ಭೂಮಿಯಾಗಿತ್ತು. ಮೈಸೂರು ಸಂಸ್ಥಾನ ಆಗ ಬ್ರಿಟಿಷರ ಅಧೀನದಲ್ಲಿತ್ತು. 1872 ರಲ್ಲಿ ಬ್ರಿಟಿಷ್ ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿತು ಆದರೆ ನಂತರದ ದಿನಗಳಲ್ಲಿ ಭೀಕರ ಬರಗಾಲ ಉಂಟಾದ ಪರಿಣಾಮವಾಗಿ ಆ ಯೋಜನೆಯನ್ನು ಅಲ್ಲಿಗೆ ಕೈಬಿಡಲಾಗುತ್ತದೆ. ನಂತರ ಕೆಲವು ದಿನಗಳಲ್ಲಿ ಮೈಸೂರು ಬ್ರಿಟಿಷರ ಆಡಳಿತದಿಂದ ಹೊರಬಂದು ಸ್ವತಂತ್ರವಾಗುತ್ತದೆ. ಆಗ ಮೈಸೂರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ನೋಡಿಕೊಳ್ಳುತ್ತಿದ್ದರು . ಆಗ ಅವರು ಮೈಸೂರಿನ ಎಲ್ಲಾ ಕಡೆ ಹಾಗೂ ಮಂಡ್ಯದ ಕೆಲವೊಂದು ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿರುವ ಸಂದರ್ಭದಲ್ಲಿ ಮಂಡ್ಯದ ಬರಡು ಭೂಮಿಯನ್ನು ನೋಡಿ ಮನಸ್ಸಿಗೆ ತುಂಬಾ ನೋವನ್ನು ಪಟ್ಟುಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಕಾವೇರಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ಸಹ ಕಂಡು ಮನಸ್ಸಿಗೆ ತುಂಬಾ ಬೇಜಾರಾಗುತ್ತೆ ಆ ಸಂದರ್ಭದಲ್ಲಿ ಹುಟ್ಟಿದ್ದೆ ಕನ್ನಂಬಾಡಿ ಕಟ್ಟೆಯನ್ನು (ಕೆಆರ್ಎಸ್ ಡ್ಯಾಮ್) ಕಟ್ಟುವ ಕನಸು. ಆದರೆ ಆ ಹೊತ್ತಿಗಾಗಲೇ ಬ್ರಿಟಿಷ್ ಸರ್ಕಾರಗಳು ಕೆಲವು ಕಡೆ ಅತ್ಯಾಧುನಿಕವಾಗಿ ಹಾಗೂ ಆಡಂಬರ ರೀತಿಯಲ್ಲಿ ಡ್ಯಾಂಗಳನ್ನು ಕಟ್ಟಬೇಕು ಎಂದು ನಿರ್ಧರಿಸಿ ರುತ್ತದೆ.

ಅಷ್ಟೇ ಅಲ್ಲದೆ ಅವುಗಳ ಬಗ್ಗೆ ಒಂದು ನೀಲಿ ನಕ್ಷೆಯನ್ನು ಸಹ ತಯಾರಿಸಿ ಆ ನಿರೀಕ್ಷೆಯನ್ನು ಮಹಾರಾಜರಿಗೆ ಸಹ ನೀಡಿರುತ್ತಾರೆ. ಅದರ ಮೂಲಕ ಕೆ ಆರ್ ಎಸ್ ಡ್ಯಾಮನ್ನು ಕಟ್ಟಬೇಕು ಅಂದುಕೊಂಡಾಗ ನೀಲಿನಕ್ಷೆ ಅವರ ಕೈ ಸೇರುತ್ತೆ. ಆಗ ಮಹಾರಾಜರು ಅದನ್ನು ಕಟ್ಟುವ ಸಲುವಾಗಿ ಒಬ್ಬ ತಾಂತ್ರಿಕ ನಿಪುಣನ್ನನ್ನು ಹುಡುಕುತ್ತಿರುತ್ತಾರೆ. ಆಗ ಅವರಿಗೆ ಕಣ್ಣಿಗೆ ಕಂಡಿದ್ದೆ ಬೊಂಬೈ ನಲ್ಲಿ ಇದ್ದಂತಹ ಸರ್ ಎಂ ವಿಶ್ವೇಶ್ವರಯ್ಯನವರು.

ಸರ್ ಎಂ ವಿಶ್ವೇಶ್ವರಯ್ಯನವರಿಗೆ ಈ ಸುದ್ದಿ ತಲುಪಿದಾಗ ತನ್ನ ತಾಯ್ನಾಡಿಗೆ ಏನಾದರೂ ಒಂದು ಸೇವೆಯನ್ನು ಸಲ್ಲಿಸಬಹುದು ಎನ್ನುವ ಉದ್ದೇಶದಿಂದ ಬಹಳಷ್ಟು ಖುಷಿಯಿಂದಲೇ ಯೋಜನೆ ಬಗ್ಗೆ ಒಪ್ಪಿಗೆ ಸೂಚಿಸುತ್ತಾರೆ. ತಕ್ಷಣವೇ ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರು ಅರಮನೆಗೆ ಬಂದು ಬ್ರಿಟಿಷರು ನೀಡಿದಂತಹ ನೀಲಿ ನಕ್ಷೆಯನ್ನು ನೋಡಿ, ಅದರ ಬಗ್ಗೆ ಮತ್ತು ಸ್ವಲ್ಪ ಕೂಲಂಕುಶವಾಗಿ ಗಮನವಹಿಸಿ ಕೊನೆಯದಾಗಿ ಒಂದು ನೀಲಿನಕ್ಷೆಯನ್ನು ತಯಾರಿಸಿ ಕೊಡುತ್ತಾರೆ. ಎಲ್ಲರೂ ಅಂದುಕೊಂಡ ಹಾಗೆ ನೀಲಿ ನಕ್ಷೆ ತಯಾರಾಗಿತ್ತು, ಆದರೆ ಅಣೆಕಟ್ಟ ನಿರ್ಮಿಸುವುದು ಅಷ್ಟೊಂದು ಸುಲಭದ ಕೆಲಸವೇನೂ ಆಗಿರಲಿಲ್ಲ ಅದಕ್ಕೆ ಬೇಕಾದಂತಹ ಹಣದ ಸಮಸ್ಯೆಯಿತ್ತು. ಆ ಕಾಲಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗಿತ್ತು ಅಷ್ಟು ಹಣ ಮೈಸೂರು ಸಂಸ್ಥಾನದ ಬಳಿ ಇರಲಿಲ್ಲ. ಕೆ ಆರ್ ಎಸ್ ಡ್ಯಾಮನ್ನು ಕಟ್ಟಲು ಮೈಸೂರು ಸಂಸ್ಥಾನದ ಮೂರುವರ್ಷದ ಆದಾಯವನ್ನು ಈ ಒಂದು ಡ್ಯಾಮ್ನ ನಿರ್ಮಾಣದ ಸಲುವಾಗಿ ಸುರಿಯ ಬೇಕಾಗಿತ್ತು‌. ಹಾಗಾಗಿ ಈ ಒಂದು ನಿರ್ಧಾರವನ್ನು ಕೈಬಿಡಬೇಕಾಗಿತ್ತು ಅದಕ್ಕೆ ಕಾರಣ ಆ ಸಮಯದಲ್ಲಿ ಮೈಸೂರು ಸಂಸ್ಥಾನದಲ್ಲಿ ವಿತ್ತ ಸಚಿವರಾಗಿದ್ದ ಬ್ಯಾನರ್ಜಿಯವರು. ಇದು ಒಂದು ಡ್ಯಾಮನ್ನು ಕಟ್ಟುವ ಸಲುವಾಗಿ ಮೈಸೂರು ಸಂಸ್ಥಾನದ ಮೂರು ವರ್ಷದ ಆದಾಯವನ್ನು ಒಂದು ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುವುದು ಮೂರ್ಖತನದ ಕೆಲಸ ಇದು ಅಷ್ಟೊಂದು ಸಮಂಜಸವಲ್ಲ, ಇಂದು ಈ ಅಣೆಕಟ್ಟನ್ನು ನಿರ್ಮಿಸುವ ಕೆಲಸವನ್ನು ಕೈಬಿಡುತ್ತಾರೆ.

ಇದರಿಂದಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ತಾನು ತುಂಬಾ ಆಸೆ ಪಟ್ಟು ಮಾಡಬೇಕೆಂದುಕೊಂಡ ಅಂತಹ ಕೆಲಸ ನಿಂತುಹೋಗಿರುವುದಕ್ಕಾಗಿ ಹಾಗೂ ಆ ಸಂದರ್ಭದಲ್ಲಿ ತನ್ನ ಬಳಿ ಅಷ್ಟೊಂದು ಹಣ ಇಲ್ಲದೆ ಇರುವ ಕಾರಣಕ್ಕೆ ಬೇಸರ ಮಾಡಿಕೊಳ್ಳುತ್ತಾರೆ. ಇಂದು ಯಾರನ್ನ ತಮಿಳುನಾಡಿನವರು ಆಗಿರಬಹುದು ಅಥವಾ ಕರ್ನಾಟಕ ರಾಜ್ಯದ ವರ್ ಆಗಿರಬಹುದು ಯಾರೆಲ್ಲಾ ಕಾವೇರಿ ನೀರನ್ನು ಬಳಸಿಕೊಳ್ಳುತ್ತಿದ್ದರು ಅವರೆಲ್ಲರೂ ಮೊಟ್ಟಮೊದಲು ನೆನಪಿಸಿಕೊಳ್ಳಬೇಕಾಗಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿವಾಹವಾಗಿರುವ ಗುಜರಾತ್ ಮೂಲದ ಪ್ರತಾಪ ಕುಮಾರಿ ಅವರನ್ನು. ಕಾರಣ ಏನಪ್ಪಾ ಅಂದ್ರೆ ಒಂದು ಸಲ ಮಹಾರಾಜರು ಯೋಜನೆ ಕೈ ಬಿಟ್ಟು ಹೋಗಿದ್ದರ ಕುರಿತಾಗಿ ಯೋಚನೆ ಮಾಡುತ್ತಿದ್ದಾಗ ಅವರ ಬಳಿ ಬಂದು ಮಾತನಾಡಿದ ಅವರ ಪತ್ನಿ ಮಹಾರಾಜರ ಬೇಸರಕ್ಕೆ ಕಾರಣವನ್ನು ತಿಳಿದುಕೊಂಡು, ನನ್ನ ಬಳಿ ಸಾಕಷ್ಟು ಒಡವೆಗಳಿವೆ ನಾನು ಅವುಗಳನ್ನು ಪ್ರತಿದಿನ ಹಾಕಿಕೊಂಡು ತಿರುಗಾಡಲು ಏನೂ ಆಗುವುದಿಲ್ಲ ಹಾಗಾಗಿ ನೀವು ನನ್ನ ಬಳಿ ಇರುವಂತಹ ಒಡವೆಗಳನ್ನು ಮಾರಿ, ಡ್ಯಾಮ ನಿರ್ಮಾಣ ಮಾಡಬೇಕಾದಂತ ಹಣವನ್ನು ಒದಗಿಸಿ ಎಂದು ತನ್ನೆಲ್ಲಾ ಕೊಡುಗೆಗಳನ್ನು ಮಹಾರಾಜರಿಗೆ ನೀಡುತ್ತಾರೆ.

ಈ ಒಂದು ವಿಷಯ ಇಡೀ ಮೈಸೂರು ಸಂಸ್ಥಾನದಲ್ಲಿ ಮಹಾರಾಣಿ ಅವರೇ ಸ್ವತಹ ತಮ್ಮೆಲ್ಲ ಒಡವೆಗಳನ್ನು ಕೊಟ್ಟು ಆಣೆಕಟ್ಟು ನಿರ್ಮಾಣ ಮಾಡಲು ಹೇಳಿದ್ದಾರೆ ಎಂದು ಸುದ್ದಿಯಾಗುತ್ತದೆ. ಈ ವಿಷಯ ಇಡೀ ಮೈಸೂರು ಸಂಸ್ಥಾನದ ತುಲ ಪ್ರಚಾರವಾದ ಇದರಿಂದ ಪ್ರೇರೇಪಿತರಾದ ಜನರು ತಮ್ಮ ಬಳಿ ಇದ್ದ ಒಡವೆಗಳು ತಾವು ಕೂಡ ಹಣವನ್ನು ಸಹ ಮೈಸೂರು ಅರಮನೆಗೆ ತಲುಪಿಸುತ್ತಾರೆ. ಇದರಿಂದ ಪ್ರೇರೇಪಿತರಾದ ಅಂತಹ ಮೈಸೂರು ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವಂತಹ ದಿವಾನರು ಚಿಕ್ಕ ಚಿಕ್ಕ ಅಧಿಕಾರಿಗಳು ಸಹ ಸ್ವತಹ ಮೈಸೂರು ರಾಣಿಯ ತನ್ನ ಒಡವೆಗಳನ್ನು ನೀಡಿರಬೇಕಾದರೆ ತಮ್ಮ ಮನೆಯಲ್ಲಿ ತಮ್ಮ ಹೆಂಡತಿಯರು ಒಡವೆಗಳನ್ನು ಹಾಕಿಕೊಂಡು ತಿರುಗಾಡುವುದುರಲ್ಲಿ ಅರ್ಥವಿಲ್ಲ ಎಂದು ತಮ್ಮ ಬಳಿಯಿದ್ದ ಹಣ ಹಾಗೂ ಒಡವೆಗಳನ್ನೆಲ್ಲ ತಂದು ಕೊಡುತ್ತಾರೆ. ತದನಂತರ ಅಷ್ಟು ಒಡವೆಗಳನ್ನು ಮಾರಾಟಮಾಡಿ ಬೊಂಬೈ ನಲ್ಲಿ ಹಣವನ್ನು ಪಡೆದು ಅಷ್ಟರ ನಂತರ ಕೆಆರ್ ಎಸ್ ಅಣೆಕಟ್ಟನ್ನು ಕಟ್ಟಲು ಆರಂಭಿಸುತ್ತಾರೆ.

1911ರಲ್ಲಿ ಅಣೆಕಟ್ಟನ್ನು ಕಟ್ಟಲು ಶುರುವಾದ ಕೆಲಸ 1932 ರಲ್ಲಿ ಈ ಅಣೆಕಟ್ಟನ್ನು ಕಟ್ಟುವ ಕಾರ್ಯ ಪೂರ್ಣಗೊಳ್ಳುತ್ತದೆ . ಡ್ಯಾಮನ್ನು ಕಟ್ಟುವ ಜಾಗದಲ್ಲಿ ಕನ್ನಂಬಾಡಿ ಎನ್ನುವ ಒಂದು ಗ್ರಾಮ ಇದ್ದಿತ್ತು. ಹಾಗಾಗಿ ಅದನ್ನು ಕನ್ನಂಬಾಡಿ ಅಣೆಕಟ್ಟು ಎಂದು ಕರೆಯಲು ಶುರುವಾಗಿತ್ತು. ಈ ರೀತಿಯಾಗಿ ಕರ್ನಾಟಕದ ಪ್ರತಿಮನೆಯಲ್ಲೂ ಜನರ ಸಹಕಾರ ಸಹಾಯದಿಂದ ನಿರ್ಮಿಸಿದ ಕನ್ನಂಬಾಡಿ ಅಣೆಕಟ್ಟು ಕರ್ನಾಟಕದ ಪ್ರತಿಯೊಬ್ಬ ಜನರ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *