ಈ ಸೊಪ್ಪನ್ನು ಹೊನಗೊನ್ನೆ ಸೊಪ್ಪು ಎಂಬುದಾಗಿ ಕರೆಯಲಾಗುತ್ತದೆ ಇದರ ಪರಿಚಯ ಹಳ್ಳಿಯ ಜನರಿಗೆ ಇದ್ದೆ ಇರುತ್ತದೆ, ಆದ್ರೆ ಕೆಲವರಿಗೆ ಇದರಲ್ಲಿ ಇರುವಂತ ಔಷದಿ ಗುಣಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ. ಈ ಹೊನಗೊನ್ನೆ ಸೊಪ್ಪು ಯಾವೆಲ್ಲ ಬೇನೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ತಿಳಿಯೋಣ.

ಹೊನಗೊನ್ನೆ ಸೊಪ್ಪಿನ ಔಷಧಿ ಗುಣಗಳು: ಮೂಲವ್ಯಾಧಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಹೌದು
ಹೊನಗೊನ್ನೆ ಸೊಪ್ಪಿನ ರಸ ೨ ತೊಲ, ಮೂಲಂಗಿ ಸೊಪ್ಪಿನ ರಸ ೨ ತೊಲ ಮಿಶ್ರ ಮಾಡಿ ಸ್ವಲ್ಪ ಸೈಂಧಲವಣ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಕೆಲವರಲ್ಲಿ ಕಣ್ಣಿನ ಪೊರೆ ಸಮಸ್ಯೆ ಉಂಟಾಗುತ್ತದೆ ಇದಕ್ಕೆ ಹೊನಗೊನ್ನೆ ಸೊಪ್ಪಿನ ರಸದಲ್ಲಿ ಉತ್ತರಾಣಿ ಬೇರನ್ನು ತೇಯ್ದು ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣಿನ ಪೊರೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ದೆ ದೇಹದ ಮೇಲೆ ಆಗುವಂತ ಗಾಯಗಳಿಗೆ ಹೊನಗೊನ್ನೆ ಗಿಡದ ಎಲೆ 2 ಹಿಡಿಯಷ್ಟು ತೆಗೆದುಕೊಂಡು ಅದಕ್ಕೆ ಅವರೆಕಾಳು ಗಾತ್ರದ ಆರತಿಕರ್ಪೂರ ಸೇರಿಸಿ ನಯವಾಗಿ ಅರೆದು ಮುಲಾಮಿನಂತೆ ಮಾಡಿಕೊಂಡು ಎಲ್ಲಾ ಬಗೆಯ ಗಾಯಗಳಿಗೆ ಲೇಪನವಾಗಿ ಬಳಸಿ ಗಾಯ ನಿವಾರಿಸಿಕೊಳ್ಳಬಹುದು.

ಎಂತಹ ಮೂತ್ರ ರೋಗ ಇದ್ರೂ ಕೂಡ ಈ ಮನೆಮದ್ದು ನಿವಾರಿಸುತ್ತದೆ ಹೊನಗೊನ್ನೆ ಬೇರನ್ನು ಆಡಿನ ಹಾಲಿನಲ್ಲಿ ಅರೆದು ಕುಡಿಯುವುದರಿಂದ ಬಹುಮೂತ್ರ ರೋಗ ವಾಸಿಯಾಗುತ್ತದೆ. ಮಕ್ಕಳಲ್ಲಿ ಕಾಣಿಸುವ ಉರಿಮೂತ್ರಕ್ಕೂ ಇದು ಒಳ್ಳೆಯ ಮದ್ದು. ಇನ್ನು ಕೆಲವರಲ್ಲಿ ಜ್ವರ ಬಂದು ಹೋದ ಮೇಲೆ ಬಾಯಿಗೆ ರುಚಿನೇ ಇರೋದಿಲ್ಲ ಅಂತಹ ಸಮಯದಲ್ಲಿ ಹೊನಗೊನ್ನೆ ಸೊಪ್ಪಿನ ಪಲ್ಯ ಮಾಡಿ ತಿನ್ನುವುದರಿಂದ, ಜ್ವರ ಬಿಟ್ಟ ನಂತರ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ೮ ದಿನ ಬಿಡದೆ ತಿಂದರೆ ಒಳ್ಳೆಯದು.ಹೊನಗೂನ್ನೆ ಸೊಪ್ಪಿನ ಸಾರು ಅಥವಾ ಪಲ್ಯ ಮಾಡಿ ಸೇವಿಸುವುದರಿಂದ ಕಣ್ಣುಗಳ ವ್ಯಾಧಿಗಳು ಬರುವುದಿಲ್ಲ. ಹೀಗೆ ಹತ್ತಕ್ಕೂ ಹೆಚ್ಚು ಬೇನೆಗಳಿಗೆ ಈ ಸೊಪ್ಪು ಔಷಧಿಯಾಗಿ ಕೆಲಸ ಮಾಡುತ್ತದೆ.

ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:- ಶ್ರೀ ಪ್ರತ್ಯಂಗಿರಾ ದೇವಿ ಜ್ಯೋತಿಷ್ಯ ಕೇಂದ್ರ ಕಾಶಿ ಪಂಡಿತರಾದ ಶ್ರೀ ಶ್ರೀ ಅಘೋರಿ ನಾಥ್ ಗುರೂಜಿ 9980877934 ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ದಾಂಪತ್ಯದಲ್ಲಿ ಕಲಹ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಅಷ್ಟೇ ಅಲ್ಲದೆ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

Leave a Reply

Your email address will not be published. Required fields are marked *