Ultimate magazine theme for WordPress.

ಶರೀರದ ಉಷ್ಣತೆ ಕಡಿಮೆ ಮಾಡುವ ಜೊತೆಗೆ ತೂಕ ಇಳಿಸಲು ಸಹಕಾರಿ ಮನೆಮದ್ದು

0 6

ಖಾಲಿ ಹೊಟ್ಟೆಯಲ್ಲಿ ನಾವು ಏನೇ ಕುಡಿದರೂ ಸಹ ಅದು ನಮ್ಮ ಅರಿಗ್ಯಕ್ಕೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಇಂತಹ ಒಂದು ಅದ್ಭುತವಾದ ಪಾನೀಯವೇ ಜೀರಿಗೆ ನೀರು ಆಗಿದೆ. ಈ ಜೀರಿಗೆ ನೀರಿನಿಂದ ನಮ್ಮ ದೇಹಕ್ಕೆ ಏನೆಲ್ಲ ಲಾಭಗಳು ಇವೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಜೀರಿಗೆ ನೀರನ್ನು ಕುಡಿಯುವುದರಿಂದ ದೇಹವು ತಂಪಾಗಿ ಇರುತ್ತದೆ ಮತ್ತು ದೇಹದ ಉಷ್ಣವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಕೂಡಾ ಜಲಜೀರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಇರುವಂತಹ ದೇಹವನ್ನು ತಂಪಾಗಿಸಿಡುವ ಗುಣವೇ ಮುಖ್ಯವಾಗಿ ಕಾರಣವಾಗಿದೆ. ಜೀರಿಗೆ ನೀರು ತೂಕ ಇಳಿಸಲು ಸಹ ಸಹಾಯಕಾರಿ ಆಗಿದೆ. ಜೀರಿಗೆ ಹೆಚ್ಚಾಗಿ ಏಷ್ಯಾದಲ್ಲಿ ಬಳಕೆ ಮಾಡುವಂತಹ ಒಂದು ಸಾಂಬಾರು ಪದಾರ್ಥವಾಗಿದೆ. ಜೀರಿಗೆಯಲ್ಲಿ ಇರುವ ಪ್ರಮುಖ ಪೋಷಕಾಂಶಗಳು , ಆಂಟಿ ಆಕ್ಸಿಡೆಂಟ್ ಗಳು ದೇಹದ ಆರೋಗವನ್ನು ಕಾಪಾಡುತ್ತವೆ. ಜೀರಿಗೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ.

ಅಡುಗೆಯಲ್ಲಿ ಬಳಸುವುದರಿಂದ ಅದು ದೇಹವನ್ನು ತಂಪಾಗಿ ಇಡುತ್ತದೆ ಮತ್ತು ಕೆಲವೊಂದಿಷ್ಟು ಅನಾರೋಗ್ಯದಿಂದ ಕೂಡಾ ದೂರ ಇಡುತ್ತದೆ. ಜೀರಿಗೆಯು ನಾರಿನ ಅಂಶವನ್ನು ಹೊಂದಿದ್ದು ಇದು ಜೀರ್ಣ ಕ್ರಿಯೆಗೂ ಕೂಡಾ ಸಹಾಯಕಾರಿ ಆಗುತ್ತದೆ. ಒಂದು ಲೋಟ ಜೀರಿಗೆ ನೀರನ್ನು ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅವತ್ತಿನ ದಿನ ಪೂರ್ತಿ ತುಂಬಾ ಪರಿಣಾಮಕಾರಿ ಆಗಿ ಇರುತ್ತದೆ. ಒಂದು ಲೋಟ ಜೀರಿಗೆ ನೀರನ್ನು ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅವತ್ತಿನ ದಿನದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡಿಕೊಳ್ಳಬಹುದು. ಯಾಕಂದರೆ ಜೇರಿಗೆಯಲ್ಲಿ ಕೆಲವೊಂದು ಸಾರಭೂತ ತೈಲಗಳು ಮತ್ತು ಪೋಷಕಾಂಶಗಳು ,ಮ್ಯಾಗ್ನಿಶಿಯಂ ಸಹ ಇದ್ದು ಇವು ಜೀರ್ಣ ಕ್ರಿಯೆಗೆ ಸಹಕಾರ ನೀಡುತ್ತದೆ. ಜೀರಿಗೆಯು ದೇಹದಲ್ಲಿ ಇರುವಂತಹ ಕೆಲವು ವಿಷಕಾರಿ ಅಂಶಗಳನ್ನ ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಎಷ್ಟೋ ರೋಗಗಳು ಗುಣವಾಗುತ್ತವೆ ಮುಖ್ಯವಾಗಿ ಆಸಿಡಿಟಿ , ಗ್ಯಾಸ್ ಮತ್ತು ವಾಕರಿಕೆ ಸಮಸ್ಯೆ ಇವು ಸಂಪೂರ್ಣವಾಗಿ ಗುಣವಾಗುತ್ತವೆ. ಜೀರಿಗೆಯು ನಮ್ಮ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣಅಂಶ ಮತ್ತು ಆಹಾರದ ನಾರಿನ ಅಂಶವನ್ನು ಹೊಂದಿರುವ ಜೀರಿಗೆಯು ಜೀರ್ಣಕ್ರಿಯೆ ವ್ಯಸ್ಥೆಯನ್ನು ಸರಿಯಾಗಿ ಇಡುತ್ತದೆ.

ಜೀರಿಗೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಎ ಮತ್ತು ವಿಟಮಿನ್ ಸಿ ಇದೆ. ಇವುಗಳು ಆಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತವೆ ಸೋಂಕುಗಳ ವಿರುದ್ಧ ಹೋರಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ತೂಕ ಇಳಿಸಲು ಸಹಾಯ ಆಗುತ್ತದೆ. ಒಬೆಸಿಟಿ, ದೇಹದ ತೂಕ ಜಾಸ್ತಿ ಇದ್ದವರು ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಜಲಜೀರವನ್ನು ಸತತವಾಗಿ ಒಂದು ತಿಂಗಳು ಕುಡಿಯಬೇಕು. ಇದರಿಂದ ದೇಹದಲ್ಲಿ ಇರುವ ಕೊಬ್ಬು ಕರಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಜೀರಿಗೆಯಲ್ಲಿ ಕ್ಯಾಲರಿ ಕಡಿಮೆ ಇರುತ್ತದೆ ಇದು ಚಯಾಪಚಯವನ್ನು ಹೆಚ್ಚಿಸಿ ಕ್ಯಾಲರಿ ಕಡಿಮೆ ವಹಿಸುವಂತೆ ಮಾಡುತ್ತದೆ. ಹಾಗೇ ಜೀರಿಗೆಯು ಉಸಿರಾಟದ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ. ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯ ವಿರೋಧಿ ಮತ್ತು ಶಿಲೀಂದ್ರ ವಿರೋಧಿ ಗುಣವನ್ನು ಹೊಂದಿರುವ ಜೀರಿಗೆಯು ಉಸಿರಾಟದ ಸಮಾಯೆಗೆ ತುಂಬಾನೇ ಪರಿಣಾಮಕಾರಿಯದಂತಹ ಮನೆಮದ್ದಾಗಿದೆ.

ಅಸ್ತಮಾ, ಕಫ ಕಟ್ಟುವ ಅಂಶಗಳನ್ನು ಸಹ ದೂರ ಮಾಡುತ್ತದೆ. ಕಫ ಕಟ್ಟಿ ಉಸಿರಾಟದ ಸಮಸ್ಯೆ ಆಗಿದ್ದರೆ ಅದನ್ನು ಸಹ ದೂರ ಮಾಡುತ್ತದೆ. ಸಾಮಾನ್ಯ ಶೀತ ನೆಗಡಿಯ ವಿರುದ್ಧವೂ ಜೀರಿಗೆ ಹೋರಾಡುತ್ತದೆ. ಜೀರಿಗೆಯಲ್ಲಿ ಇರುವ ವಿಟಮಿನ್ ಸಿ ಪ್ರತಿರೋಧ ವ್ಯಸ್ಥೆಯನ್ನು ಬಲಪಡಿಸಿ ಸೋಂಕುಗಳಿಂದ ಉಂಟಾದ ಶೀತ ನೆಗಡಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಯಾವಾಗಲಾದರೂ ಸೋಂಕಿನಿಂದ ಶೀತ ಜ್ವರ ಬಂದಿದ್ದರೆ ಬೇಗನೆ ಜೀರಿಗೆ ನೀರನ್ನು ಕುಡಿದು ಆರಾಮ ಮಾಡಿಕೊಳ್ಳಬಹುದು.

Leave A Reply

Your email address will not be published.