ವೃಶ್ಚಿಕ ರಾಶಿಯವರು ಬೇಗ ಶಾರ್ಟ್ ಟೆಂಪರ್ ಆಗೋದ್ಯಾಕೆ ಗೊತ್ತಾ, ಇವರ ಗುಣ ಸ್ವಭಾವ ಇಲ್ಲಿದೆ ನೋಡಿ

0 14,696

Kannada Astrologer: ಪ್ರತಿಯೊಂದು ಜನರು ಸಹ ಒಂದೇ ತರವಾದ ಸ್ವಭಾವವನ್ನು ಹೊಂದಿರುವುದು ಇಲ್ಲ ಕೆಲವರು ಶಾಂತ ಸ್ವಭಾದವರು ಹಾಗೆಯೇ ಕೋಪದ ಸ್ವಭಾವದವರು ಆಗಿರುತ್ತಾರೆ ಇದು ಅವರ ರಾಶಿಯನ್ನು ಅವಲಂಬಿಸಿ ಇರುತ್ತದೆ ಕೆಲವರು ಸಣ್ಣ ಮಾತಿಗೂ ಸಹ ಕೋಪ ಹೊಂದುತ್ತಾರೆ ವೃಶ್ಚಿಕ ರಾಶಿಯವರು ಹೆಚ್ಚಾಗಿ ಕೋಪದ ಸ್ವಭಾವದವರು ಹಾಗೆಯೇ ಮಹತ್ವಾಕಾಂಕ್ಷಿ ಗಳು ಆಗಿರುತ್ತಾರೆ ತುಂಬಾ ಸ್ವಾಭಿಮಾನ ಇರುವ ವ್ಯಕ್ತಿಗಳಾಗಿ ಇರುತ್ತಾರೆ

ವೃಶ್ಚಿಕ ರಾಶಿಯವರಿಗೆ ಹೆಚ್ಚಾಗಿ ಕೋಪ ಬರುತ್ತದೆ ರಾಶಿಗಳಿಗೆ ಅನುಗುಣವಾಗಿ ಸ್ವಭಾವ ಸಹ ಭಿನ್ನವಾಗಿರುತ್ತದೆ ವೃಶ್ಚಿಕ ರಾಶಿಯವರಿಗೆ ಅವರ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವ ಜನರನ್ನು ಬಯಸುತ್ತಾರೆ. ವೃಶ್ಚಿಕ ರಾಶಿ ಚೇಳಿನ ಸಂಕೇತವಾಗಿದ್ದು ಅವರು ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಮಾತನಾಡುವುದನ್ನು ನಂಬುತ್ತಾರೆ ಯಾರದು ಏನಾದರೂ ಹೇಳಿದರೆ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಇರುತ್ತದೆ ಯಾರ ಹತ್ತಿರ ಸಹ ಭಾವನಾತ್ಮಕವಾಗಿ ಇರುವುದು ಇಲ್ಲ ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯವರ ಕೋಪದ ಸ್ವಭಾವ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯ ಜಲ ತತ್ವ ರಾಶಿಯಾಗಿದೆ ವೃಶ್ಚಿಕ ರಾಶಿಯವರು ಯಾವುದಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಕೊಂಡರೆ ಮಾಡಿಯೇ ತೋರಿಸುತ್ತಾರೆ ತುಂಬಾ ಸ್ವಾಭಿಮಾನ ಇರುವ ವ್ಯಕ್ತಿಗಳಾಗಿ ಇರುತ್ತಾರೆ ವೃಶ್ಚಿಕ ರಾಶಿಯವರಿಗೆ ಹೆಚ್ಚಾಗಿ ಕೋಪ ಬರುತ್ತದೆ ಯಾವುದೇ ಭಾವನೆ ಇರುತ್ತದೆ ಯಾವುದಕ್ಕು ಸಹ ಭಯ ಇರುವುದು ಇಲ್ಲ ಹಾಗೆಯೇ ವೃಶ್ಚಿಕ ರಾಶಿಯವರಿಗೆ ತುಂಬಾ ಶಕ್ತಿ ಇರುತ್ತದೆ ಸಣ್ಣ ಸಣ್ಣ ವಿಷಯಗಳಿಗೂ ಸಹ ಚಿಂತಿಸುತ್ತಾರೆ

ಹಾಗೆಯೇ ಧೈರ್ಯ ತುಂಬಾ ಜಾಸ್ತಿ ಇರುತ್ತದೆ ತರಲೆ ಮಾತುಗಳಿಗೆ ವೃಶ್ಚಿಕ ರಾಶಿಯವರು ತಲೆ ಕೆಡಿಸಿಕೊಳ್ಳುವುದಿಲ್ಲ ಯಾರೇ ಆದರೂ ಸಹ ನೇರ ನೇರ ಮಾತನಾಡುವ ಸ್ವಭಾವ ಇವರದ್ದು ಆಗಿರುತ್ತದೆ .ಯಾರದು ಏನಾದರೂ ಹೇಳಿದರೆ ಸೇಡು ತೀರಿಸಿಕೊಳ್ಳುವ ಪ್ರವೃತ್ತಿ ಇರುತ್ತದೆ ಯಾರ ಹತ್ತಿರ ಸಹ ಭಾವನಾತ್ಮಕವಾಗಿ ಇರುವುದು ಇಲ್ಲ ಹಾಗೆಯೇ ಎಲ್ಲರನ್ನೂ ಅನುಮಾನದಿಂದಲೇ ನೋಡುತ್ತಾರೆ ಬೇರೆಯವರ ಬಗ್ಗೆ ವ್ಯಗ್ಯದ ಭಾವನೆ ಇರುತ್ತದೆ ಹಾಗೆಯೇ ಮಾತನಾಡುತ್ತಾರೆ ಸಹಿಸಿಕೊಳ್ಳುವ ಪ್ರವೃತ್ತಿ ಇರುವುದು ಇಲ್ಲ ಬೇರೆಯವರ ಗುಣ ಕೆಲಸದ ಬಗ್ಗೆ ಸದಾ ಟೀಕೆ ಮಾಡುತ್ತಾರೆ .

ವೃಶ್ಚಿಕ ರಾಶಿಯವರು ಕರ್ಕ ರಾಶಿಯವರ ಜೊತೆಗೆ ಚೆನ್ನಾಗಿ ಇರುತ್ತಾರೆ ಹಾಗೆಯೇ ಮೀನ ರಾಶಿಯವರ ಜೊತೆಗೆ ಸಹ ಚೆನ್ನಾಗಿ ಇರುತ್ತದೆ ಮಕರ ರಾಶಿಯವರ ಜೊತೆಗೆ ಸಹ ಚೆನ್ನಾಗಿ ಇರುತ್ತಾರೆ ಕರ್ಕಾಟಕ ಹಾಗೂ ಮೀನ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆಯಿಂದ ಇರುತ್ತಾರೆ ಹಾಗೆಯೇ ವೃಶ್ಚಿಕ ರಾಶಿಯವರಿಗೆ ಕಿಡ್ನಿಯ ಸಂಬಂಧಪಟ್ಟ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ ರಕ್ತದ ಒತ್ತಡ ಹೀಗೆ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ

ಮಂಡಿ ನೋವು ಜೋಮು ಹಿಡಿಯುವುದು ಹಾಗೆಯೇ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವೃಶ್ಚಿಕ ರಾಶಿಯವರಿಗೆ ಎಲೆಟ್ರಿಕಲ್ ಸಂಬಧಿಸಿದಂತೆ ಕೆಲಸ ಸಿಗುತ್ತದೆ ಹಾಗೆಯೇ ಎಲೆಟ್ರಿಕಲ್ ಸಂಭಂದಿಸಿದ ವಿಷಯವನ್ನು ಓದುವ ಮೂಲಕ ತುಂಬಾ ಒಳ್ಳೆಯದು ಆಗುತ್ತದೆ ಹಾಗೆಯೇ ಕೆಮಿಕಲ್ ರಿಸೀರ್ಚ್ ಬಗ್ಗೆ ಓದುವದರಿಂದ ತುಂಬಾ ಒಳ್ಳೆಯದು ಸ್ಪೋರ್ಟ್ ಅಲ್ಲಿ ತುಂಬಾ ಚೆನ್ನಾಗಿ ಆಟ ಆಡುತ್ತಾರೆ ಸರ್ಜನ್ ಆಗುವ ಸಾಧ್ಯತೆ ಇರುತ್ತದೆ ಮಿಲಿಟರಿಯಲ್ಲಿ ಸಹ ಕೆಲಸ ಮಾಡುವ ಸಾಧ್ಯತೆ ಇರುತ್ತದೆ .

ವೃಶ್ಚಿಕ ರಾಶಿಯವರಿಗೆ ಒಂದು ಮೂರು ಐದು ಆರು ಲಕ್ಕಿ ಸಂಖ್ಯೆ ಆಗಿದೆ ಎರಡು ಮತ್ತು ಏಳು ಅಶುಭ ಸಂಖ್ಯೆಯಾಗಿದೆ ವೃಶ್ಚಿಕ ರಾಶಿಯವರಿಗೆ ಹಳದಿ ಹಸಿರು ಕಿತ್ತಳೆ ಬಣ್ಣ ತುಂಬಾ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಕೆಂಪು ಹಾಗೂ ಕಪ್ಪು ಬಣ್ಣದ ವೃಶ್ಚಿಕ ರಾಶಿಯವರಿಗೆ ಅಶುಭದಾಯಕವಾಗಿ ಇರುತ್ತದೆ ವಾಹನ ತೆಗೆದುಕೊಳ್ಳಬೇಕಾದರು ಸಹ ಬಣ್ಣಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆಗಳು ಆಗುತ್ತದೆ

ವೃಶ್ಚಿಕ ರಾಶಿಯವರ ನೆಚ್ಚಿನ ದೇವರು ಸುಬ್ರಮಣ್ಯ ಹಾಗು ಆಂಜನೇಯ ಸ್ವಾಮಿ ಹಾಗೆಯೇ ಸುಬ್ರಮಣ್ಯ ದೇವಸ್ಥಾನಕ್ಕೆ ಮಂಗಳವಾರ ಹೋಗುವ ಮೂಲಕ ಇಷ್ಟಾರ್ಥ ಸಿದ್ದಿಸಿಕೊಳ್ಳಬಹುದು ಹಾಗೆಯೇ ದೇವಸ್ಥಾನದಲ್ಲಿ ಕೆಂಪು ಬಣ್ಣದ ಹೂವು ಕೊಡಬೇಕು ಶನಿವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿರಬೇಕು. ಪ್ರತಿದಿನ ಓಂ ಶ್ರವಣ ಭವ ಎಂದು ಬರುವ ಸುಬ್ರಹ್ಮಣ್ಯನ ಮಂತ್ರವನ್ನು ಕೇಳಿಸಿಕೊಳ್ಳಬೇಕು ಹೀಗೆ ವೃಶ್ಚಿಕ ರಾಶಿಯವರು ಬೇರೆಯವರ ಜೊತೆಗೆ ಹೀಗೆ ಬೆರೆಯುತ್ತಾರೆ ಹಾಗೆಯೇ ವೃಶ್ಚಿಕ ರಾಶಿಯವರು ಈ ಮೇಲಿನ ಬಣ್ಣಗಳ ವಸ್ತುಗಳು ಹಾಗೂ ಬಟ್ಟೆಗಳನ್ನು ಇಟ್ಟುಕೊಳ್ಳಬೇಕು .

Leave A Reply

Your email address will not be published.