ಉರಿಮೂತ್ರ ಸಮಸ್ಯೆಯಿಂದ ತಕ್ಷಣವೇ ರಿಲೀಫ್ ನೀಡುವ ಮನೆಮದ್ದು

0 44

ಬಹಳಷ್ಟು ಜನರು ಉರಿಮೂತ್ರ ಸಮಸ್ಯೆಯನ್ನು ಎದುರಿಸುತ್ತಾರೆ ಅದರಲ್ಲೂ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಗೆ ಮನೆಯಲ್ಲಿ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆಮದ್ದನ್ನು ತಯಾರಿಸಿ ಸೇವಿಸುವುದರಿಂದ ನಿವಾರಣೆ ಮಾಡಿಕೊಳ್ಳಬಹುದು. ಹಾಗಾದರೆ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಬಹಳಷ್ಟು ಜನರು ಉರಿಮೂತ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇನ್ಫೆಕ್ಷನ್ ಇರುವುದಿಲ್ಲ ಆದರೂ ಸಮಸ್ಯೆ ನಿವಾರಣೆಯಾಗುವುದಿಲ್ಲ. ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವರಿಗೆ ಆಗಾಗ ಯೂರಿನ್ ಇನ್ಫೆಕ್ಷನ್ ಆಗುತ್ತದೆ, ಕೆಲವರಿಗೆ ಯೂರಿನ್ ರಿಪೋರ್ಟ್ ನೋರ್ಮಲ್ ಇರುತ್ತದೆ ಆದರೆ ಉರಿಮೂತ್ರ ಸಮಸ್ಯೆಯನ್ನು ಎದುರಿಸುತ್ತಾರೆ ಇದಕ್ಕೆ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು. ನಾವು ಸೇವಿಸುವ ಆಹಾರದಲ್ಲಿ ಬೂದುಗುಂಬಳಕಾಯಿ ಇರಬೇಕು, ಅದರ ಜ್ಯೂಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದು ಮುಷ್ಟಿ ಗರಿಕೆ ಹುಲ್ಲನ್ನು ಸಣ್ಣದಾಗಿ ಕಟ್ ಮಾಡಿ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು ರಸವನ್ನು ತೆಗೆದು, ಒಂದು ಗ್ಲಾಸ್ ಗರಿಕೆ ಹುಲ್ಲಿನ ರಸಕ್ಕೆ ಒಂದು ಚಮಚ ಶುದ್ಧ ಶ್ರೀಗಂಧ ಸೇರಿಸಿ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಆಗದೆ ಇದ್ದರೆ 12 ಗಂಟೆಗೆ ಕುಡಿಯಬೇಕು, ಸಂಜೆ ಸಮಯದಲ್ಲಿ ಇದನ್ನು ಕುಡಿಯಬಾರದು. ಜೀರ್ಣಶಕ್ತಿ ಸಮಸ್ಯೆ ಇರುವವರು ಹಾಗೂ ಆಗಾಗ ಕೋಲ್ಡ್ ಆಗುವವರು ಇದನ್ನು ಕುಡಿಯುವಾಗ ಎಚ್ಚರವಹಿಸಬೇಕು. ಇದನ್ನು ಕುಡಿಯುವುದರಿಂದ ಯೂರಿನ್ ಇನ್ಫೆಕ್ಷನ್ ಆಗುವುದು ಕಡಿಮೆಯಾಗುತ್ತದೆ ಮತ್ತು ಉರಿಮೂತ್ರ ಆದರೆ ನಿವಾರಣೆಯಾಗುತ್ತದೆ. ದೇಹ ತಂಪಾಗುತ್ತದೆ, ದೇಹಕ್ಕೆ ಶಕ್ತಿ ಸಿಗುತ್ತದೆ, ಅಲ್ಲದೆ ನಮ್ಮ ದೇಹದಲ್ಲಿ ಯೂರಿನ್ ಸಿಸ್ಟಮ್ ಗೆ ಬಲ ಬರುತ್ತದೆ.

ವರುಣ ಮುದ್ರೆ ಮಾಡುವುದು ಅಂದರೆ ಎರಡು ಕೈಗಳ ಹೆಬ್ಬೆರಳು ಮತ್ತು ಕಿರುಬೆರಳನ್ನು ಸೇರಿಸಿ ಉಳಿದ ಬೆರಳನ್ನು ಸಾಧ್ಯವಾದಷ್ಟು ನೇರವಾಗಿ ಇಟ್ಟುಕೊಂಡು ಕುಳಿತುಕೊಳ್ಳಬೇಕು. ಬೆಳಗ್ಗೆ 10 ನಿಮಿಷ ಸಂಜೆ 10 ನಿಮಿಷಗಳ ಕಾಲ ವರುಣ ಮುದ್ರೆ ಮಾಡುವುದರಿಂದ ದೇಹ ತಂಪಾಗುತ್ತದೆ ಮತ್ತು ಉರಿಮೂತ್ರ ಸಮಸ್ಯೆ ನಿಧಾನವಾಗಿ ನಿವಾರಣೆಯಾಗುತ್ತದೆ. ಉರಿಮೂತ್ರ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆಯನ್ನು ಪಡೆಯಲೇಬೇಕು. ಯೂರಿನ್ ಇನ್ಫೆಕ್ಷನ್ ಆದರೆ ಅದನ್ನು ಕಡೆಗಣಿಸಬಾರದು. ಅದರೊಂದಿಗೆ ಮನೆ ಮದ್ದನ್ನು ಮಾಡಿಕೊಳ್ಳುವುದು ಉತ್ತಮ. ಈ ಮನೆ ಮದ್ದುಗಳನ್ನು ಯಾವುದೇ ಖರ್ಚಿಲ್ಲದೆ, ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಉರಿಮೂತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

Leave A Reply

Your email address will not be published.