ದುಡ್ಡು ಹೇಗೆ ತಯಾರಿಸುತ್ತಾರೆ ನೋಡಿ ಇಂಟ್ರೆಸ್ಟಿಂಗ್ ವಿಡಿಯೋ

0 5

ನಮಗೆ ದಿನನಿತ್ಯ ಕರೆನ್ಸಿ ನೋಟುಗಳು ಬೇಕಾಗುತ್ತವೆ, ಹಣವಿಲ್ಲದೆ ಜೀವನ ಅಸಾಧ್ಯ ಹೀಗಿರುವಾಗ ನಾವು ಬಳಸುವ ಕರೆನ್ಸಿ ನೋಟುಗಳು ಫ್ಯಾಕ್ಟರಿಯಲ್ಲಿ ಹೇಗೆ ಮುದ್ರಣವಾಗುತ್ತವೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಫ್ಯಾಕ್ಟರಿಯಲಿ ಕರೆನ್ಸಿ ನೋಟುಗಳು ಹೇಗೆ ಪ್ರಿಂಟ್ ಆಗುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಯಾವುದೇ ದೇಶದಲ್ಲಾದರೂ ಕರೆನ್ಸಿ ನೋಟುಗಳನ್ನು ಮುದ್ರಿಸಲು ಕಾಟನ್ ಬೆಲ್ಟ್ಸ್ ಬಳಸುತ್ತಾರೆ, ಅಂದರೆ ಹೈ ಕ್ವಾಲಿಟಿ ಕಾಟನ್ ಅನ್ನು ಶೇಖರಣೆ ಮಾಡಿ ಕಾಟನ್ ಟ್ರೈನಿಂಗ್ ಪ್ರೋಸೆಸ್ ನಲ್ಲಿ ಕ್ಲೀನ್ ಮಾಡಿ ದೊಡ್ಡ ಬಂಡಲ್ ರೀತಿ ತಯಾರು ಮಾಡುತ್ತಾರೆ.‌ ಮೊದಲು ಈ ಬಂಡಲ್ ಅನ್ನು ಸಣ್ಣ ಸಣ್ಣ ಪೀಸಸ್ ಆಗಿ ವಿಂಗಡಣೆ ಮಾಡುತ್ತಾರೆ. ನಂತರ ಅದನ್ನು ದೊಡ್ಡ ವಾಟರ್ ಟ್ಯಾಂಕ್ ನಲ್ಲಿ ಕಲಸುತ್ತಾರೆ ನಂತರ ಒಂದು ಮಷೀನ್ ಗೆ ಹಾಕಿದಾಗ ಅದರಲ್ಲಿರುವ ನೀರು ಹೊರಬರುತ್ತದೆ ಮತ್ತು ಕಾಟನ್ ಅನ್ನು ತೆಳುವಾದ ಲೇಯರ್ ರೀತಿ ಬದಲಾಯಿಸುತ್ತದೆ. ಆಗ ಕರೆನ್ಸಿ ತಯಾರಿಸುವ ಶೀಟ್ ಆಗುತ್ತದೆ ನಂತರ ಈ ಶೀಟಿನ ಮೇಲೆ ವಾಟರ್ ಮಾರ್ಕ್ ಪ್ರಿಂಟ್ ಮಾಡುತ್ತಾರೆ.

ನೋಟಿನ ಮೇಲೆ ರೈಟ್ ಸೈಡಿನಲ್ಲಿ ಶ್ಯಾಡೊ ರೀತಿ ಗಾಂಧೀಜಿ ಅವರ ಭಾವಚಿತ್ರ ಕಾಣುತ್ತದೆ ಅದೇ ವಾಟರ್ ಮಾರ್ಕ್. ನಂತರ ಇದರ ಮೇಲೆ ಎಲೋಗ್ರಾಮ ಸ್ಟಿಪ್ನಿಸ್ ಎಂದರೆ ಗಾಂಧೀಜಿ ಮುಖದ ಮುಂದೆ ಗ್ರೀನ್ ಮತ್ತು ಸಿಲ್ವರ್ ಕಲರಿನ ಮಿಂಚು ಮಿಂಚಾಗಿ ಒಂದು ಲೈನ್ ಇರುತ್ತದೆ, ಇದರಿಂದಲೇ ನೋಟು ವರ್ಜಿನಲ್ ಅಥವಾ ಡುಬ್ಲಿಕೇಟ್ ಎಂಬುದು ತಿಳಿಯುತ್ತದೆ. ನಂತರ ಕ್ವಾಲಿಟಿ ಇನ್ಸ್ಪೆಕ್ಷನ್ ಡಿಪಾರ್ಟ್ಮೆಂಟ್ ಅವರು ಈ ನೋಟನ್ನು ಇನ್ಸ್ಪೆಕ್ಷನ್ ಮಾಡುತ್ತಾರೆ. ನಂತರ ಈ ರೋಲರ್ ಶೀಟ್ ಅನ್ನು ಕಟಿಂಗ್ ಮಷೀನ್ ಸಹಾಯದಿಂದ ಮೂರು ಸಣ್ಣ ಸಣ್ಣ ರೋಲರ್ಸ್ ಆಗಿ ಕಟ್ ಮಾಡುತ್ತಾರೆ. ಈ ರೋಲ ಅನ್ನು ಒಂದರ ಮೇಲೆ ಒಂದು ಇಟ್ಟು ಸ್ಕ್ವೇರ್ ಶೇಪ್ ನಲ್ಲಿ ಕಟ್ ಮಾಡುತ್ತಾರೆ. ಕಟ್ ಆದ ಶೀಟ್ಸ್ ಮೇಲೆ ರಫ್ ಶೀಟ್ಸ್ ಹಾಕುತ್ತಾರೆ ಏಕೆಂದರೆ ಪ್ರಿಂಟಿಂಗ್ ಮಷೀನ್ ಇರುವಲ್ಲಿ ಶೀಟ್ಸ್ ತೆಗೆದುಕೊಂಡು ಹೋಗುವಾಗ ಯಾವುದೇ ಡ್ಯಾಮೇಜ್ ಆಗಬಾರದು ಎಂದು ಹೀಗೆ ಮಾಡುತ್ತಾರೆ.‌

ನಂತರ ಕೆಲಸಗಾರರು ಈ ಶೀಟ್ಸ್ ಗಳನ್ನು ಪ್ರಿಂಟಿಂಗ್ ಮಷೀನ್ ನಲ್ಲಿ ಇನ್ಸಟ್ ಮಾಡುತ್ತಾರೆ. ಈ ಶೀಟ್ಸ್ ಗಳು ಕನ್ವರ್ ಬೆಲ್ಟ್ ಸಹಾಯದಿಂದ ಪ್ರಿಂಟಿಂಗ್ ಮಾಡುವ ಸ್ಥಳಕ್ಕೆ ಹೋಗುತ್ತವೆ. ಅಲ್ಲಿ 10 ರೂಪಾಯಿ ನೋಟನ್ನು ತಯಾರಿಸಲು ಚಾಕ್ಲೇಟ್ ಬ್ರೌನ್ ಕಲರ್, 20 ರೂಪಾಯಿ ನೋಟನ್ನು ಮುದ್ರಿಸಲು ಗ್ರೀನಿಷ್ ಯೆಲೋ ಕಲರ್, 50 ರೂಪಾಯಿ ನೋಟು ಮುದ್ರಿಸಲು ಲೈಟ್ ಬ್ಲ್ಯೂ ಕಲರ್, 100 ರೂಪಾಯಿ ನೋಟನ್ನು ಮುದ್ರಿಸಲು ಲೆವೆಂಡರ್ ಕಲರ್ ಹೀಗೆ ಆಯಾ ನೋಟುಗಳನ್ನು ಮುದ್ರಿಸಲು ಬೇರೆ ಬೇರೆ ಕಲರ್ ಅನ್ನು ಬಳಸುತ್ತಾರೆ. ಯಾವ ನೋಟ್ ಅನ್ನು ಮುದ್ರಿಸಲು ಯಾವ ಕಲರ್ ಹಾಕಬೇಕೋ ಆ ಕಲರ್ ಅನ್ನು ಮಷೀನ್ ನಲ್ಲಿ ಹಾಕುತ್ತಾರೆ ಇದರಿಂದ ಶೀಟ್ಸ್ ನಲ್ಲಿ ಆ ಕಲರ್ ಅಪ್ಲೈ ಆಗುತ್ತದೆ.

ಕಟಿಂಗ್ ಮಷೀನ್ ಬೇರೆಬೇರೆ ಡಿಸೈನ್, ಬೇರೆಬೇರೆ ಸೈಜ್ ಅನ್ನು ಹೊಂದಿರುತ್ತದೆ ಏಕೆಂದರೆ 2,000 ರೂಪಾಯಿ ನೋಟು ದೊಡ್ಡದಾಗಿರುತ್ತದೆ 10 ರೂಪಾಯಿ ನೋಟು ಸಣ್ಣದಾಗಿರುತ್ತದೆ‌. ಪೂರ್ತಿಯಾಗಿ ನೋಟ್ ಪ್ರಿಂಟ್ ಆದನಂತರ ಮಷೀನ್ ನಿಂದ ಹೊರತೆಗೆಯುತ್ತಾರೆ. ಕೊನೆಯದಾಗಿ ಕರೆನ್ಸಿ ಇನ್ಸ್ಪೆಕ್ಷನ್ ಡಿಪಾರ್ಟ್ಮೆಂಟ್ ಅವರು ನೋಟನ್ನು ಚೆಕ್ ಮಾಡುತ್ತಾರೆ. ಮಷೀನ್ ಸಹಾಯದಿಂದ ನೋಟನ್ನು ಕಡಿಮೆ ಸಮಯದಲ್ಲಿ ಪ್ರಿಂಟ್ ಮಾಡಲಾಗುತ್ತದೆ ಆದರೆ ಅದರ ಕ್ವಾಲಿಟಿ ಚೆಕ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ನಂತರ ಕಟಿಂಗ್ ಮಷೀನ್ ಸಹಾಯದಿಂದ ಶೀಟ್ಸ್ ಅನ್ನು ಒಂದೊಂದು ನೋಟ್ ಆಗಿ ಕಟ್ ಮಾಡುತ್ತಾರೆ. ಈ ರೀತಿ ಕಟ್ ಮಾಡಿದ ಒಂದೊಂದು ಕಟ್ಟನ್ನು ಆರಬಿಐ ಗೆ ಕಳುಹಿಸುತ್ತಾರೆ. ಈ ರೀತಿ ಫ್ಯಾಕ್ಟರಿಯಲ್ಲಿ ನಾವು ಬಳಸುವ ಕರೆನ್ಸಿ ನೋಟುಗಳು ಪ್ರಿಂಟ್ ಆಗುತ್ತದೆ.

Leave A Reply

Your email address will not be published.