ಬಹಳ ವರ್ಷಗಳ ಹಿಂದಿನ ಸಿನಿಮಾ ಆದರೂ ಈಗಲೂ ಕುತೂಹಲದಿಂದ ನೋಡುವ ಸಿನಿಮಾಗಳಲ್ಲಿ ಶ್ ಸಿನಿಮಾ ಕೂಡ ಒಂದಾಗಿದೆ. ಶ್ ಸಿನಿಮಾವು ಒಳ್ಳೆಯ ಕಥೆ, ಫೈಟ್, ಹಾಡುಗಳನ್ನು ಹೊಂದಿರುವ ಚಿತ್ರವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಶ್ ಚಿತ್ರದ ಬಗ್ಗೆ ನಾಯಕನಾದ ಕುಮಾರ್ ಗೋವಿಂದು ಅವರ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ಉಪೇಂದ್ರ ಅವರ ನಿರ್ದೇಶನದಲ್ಲಿ, ಕುಮಾರ ಗೋವಿಂದು ಅವರು ನಾಯಕನಾಗಿ ನಟಿಸಿದ ಶ್ ಚಿತ್ರ ರಿಲೀಸ್ ಆದ ತಕ್ಷಣ ಗೋವಿಂದು ಅವರ ಸ್ನೇಹಿತರು ತುಂಬಾ ಚೆನ್ನಾಗಿದೆ ಎಂದರು. ಶ್ ಸಿನಿಮಾ ಮಾಡಲು 31 ಲಕ್ಷ ರೂಪಾಯಿ ಖರ್ಚಾಗಿದೆ. ರವಿ ಸರ್ ಸಿನಿಮಾ ನೋಡಿ ಫೈಟ್ ಚೆನ್ನಾಗಿ ಬಂದಿದೆ ಇಲ್ಲಿಯವರೆಗೆ ಯಾರು ಈ ರೀತಿ ಫೈಟ್ ಮಾಡಿಲ್ಲ. ಕ್ಲೈಮಾಕ್ಸ್ ನಲ್ಲಿ ಒಂದು ಫೈಟ್ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದರು ಅವರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಗೋವಿಂದು ಅವರಿಗೆ ಬಹಳ ಖುಷಿ ಕೊಟ್ಟಿತು. ರಾಜಕುಮಾರ್ ಅವರಿಗೆ ಈ ಸಿನಿಮಾದ ಫಸ್ಟ್ ಇನ್ವಿಟೇಶನ್ ಕೊಡಲಾಯಿತು. ಪಲ್ಲವಿ ಥಿಯೇಟರ್ ನಲ್ಲಿ ರಿಲೀಸ್ ಮಾಡಲಾಯಿತು ಜನ ತುಂಬಿ ಹೋದರು. ಶಿವರಾಜ್ ಕುಮಾರ್ ಅವರು ಸಿನಿಮಾ ನೋಡಲು ಬಂದಿದ್ದರು, ಅವರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಮರಾಜು ಅವರು ಈ ಸಿನಿಮಾವನ್ನು ತೆಲುಗಿಗೆ ಕೊಡುತ್ತೀರಾ ಎಂದು ಗೋವಿಂದು ಅವರ ಬಳಿ ಕೇಳಿದರು. ಅಲ್ಲಿಯವರೆಗೆ ಗೋವಿಂದು ಅವರಿಗೆ ಯಾರೂ ಪರಿಚಯ ಇರಲಿಲ್ಲ ಶ್ ಸಿನಿಮಾ ನಂತರ ಬಹಳ ಜನರು ಪರಿಚಯವಾದರು. ರಾಮರಾಜು ಅವರಿಂದ ಅಲ್ಲು ಅರ್ಜುನ್ ಅವರ ಪರಿಚಯವಾಯಿತು, ಅವರು ಶ್ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರಿಂದ 4-5 ಲಕ್ಷ ರೂಪಾಯಿ ಹಣ ದೊರೆಯಿತು. ಗೋವಿಂದು ಅವರು ತಮ್ಮ ಸಿನಿಮಾ ಬಗ್ಗೆ ಮಾರ್ಕೆಟಿಂಗ್ ಮಾಡಲು ತಿಳಿಯದೆ ರವಿ ಸರ್ ಬಳಿ ಸಹಾಯ ಮಾಡಿ ಎಂದರು, ಅವರು ಹೇಳಿ ಸಿನಿಮಾ ತೋರಿಸಿ ಮಾರ್ಕೆಟಿಂಗ್ ಮಾಡಿದರು ಇದರಿಂದ ಅವರಿಗೆ ಹೆಚ್ಚಿನ ಹಣ ಬಂತು. ಬಹುತೇಕ ಎಲ್ಲ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಯಿತು ಥಿಯೇಟರ್ ಹೌಸಪುಲ್ ಆಯಿತು. ಎಲ್ಲಾ ಥಿಯೇಟರ್ ಗಳಲ್ಲಿ ಸಿನಿಮಾ ನೋಡಲು ಜನ ರಶ್, ಪಟಾಕಿ ಹೊಡೆದು ಸಂಭ್ರಮ ಪಡುತ್ತಿರುವುದನ್ನು ನೋಡಿ ಗೋವಿಂದು ಅವರ ಕಣ್ಣಲ್ಲಿ ನೀರು ತುಂಬಿತು. ಅವರ ಜೀವನದಲ್ಲಿ ಒಳ್ಳೆಯ ಅನುಭವ ಈ ಸಿನಿಮಾ ತಂದುಕೊಟ್ಟಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಅವಮಾನ, ಅನುಮಾನ, ಸನ್ಮಾನ ಇರುತ್ತದೆ ಎಂದು ಗೋವಿಂದು ಅವರು ಹೇಳಿಕೊಂಡರು. ನೆಗೆಟಿವ್ ವಿಷಯಗಳ ಬಗ್ಗೆ ಮೊದಲೆ ನಮಗೆ ಗೊತ್ತಿರಬಾರದು, ಗೊತ್ತಿಲ್ಲದೇ ಇರುವುದು ಒಳ್ಳೆಯದು ಎಂದು ಗೋವಿಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಿನಿಮಾ ವ್ಯಾಪಾರವಾಗಿತ್ತು ಆದರೆ ಗೋವಿಂದು ಅವರ ಕೈಗೆ ಹಣ ಬರಲಿಲ್ಲ. ಗೋವಿಂದು ಅವರು ಸಿನಿಮಾಕ್ಕೆ ಹಾಕಿದ ಹಣ ಬಂದ ನಂತರ ಬರುವ ಲಾಭದಲ್ಲಿ ಉಪೇಂದ್ರ ಅವರಿಗೆ ಸರ್ಪ್ರೈಸ್ ಕೊಡುವ ಆಲೋಚನೆ ಹೊಂದಿದ್ದರು. ಚಿತ್ರದ ಕಥೆಯನ್ನು ಗೋವಿಂದು ಅವರು ಶಿವಣ್ಣ ಅವರಿಗೆ ಹೇಳಿದಾಗ ಶಿವಣ್ಣ ಅವರು ಮೊದಲೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಶ್ ಚಿತ್ರ ಬಿಡುಗಡೆಯಾದ ನಂತರ ಗೋವಿಂದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಅವಕಾಶಗಳು ದೊರೆಯಿತು.

ಗೋವಿಂದು ಅವರಿಗೆ ಸಿನಿಮಾ ಹಿಟ್ ಆದ ನಂತರ ಹೀರೋಗಳಿಗೆ ಅವಕಾಶ ಸಿಗುತ್ತದೆ ಅವರನ್ನು ಹುಡುಕಿಕೊಂಡು ನಿರ್ಮಾಪಕರು, ನಿರ್ದೇಶಕರು ಮನೆಗೆ ಬರುತ್ತಾರೆ ಎನ್ನುವುದು ಮೊದಲು ಗೊತ್ತಿರಲಿಲ್ಲ. ಗೋವಿಂದು ಅವರು ಶ್ ಸಿನಿಮಾದ ನಂತರ ನಟಿಸಿದ ಯಾವುದೇ ಚಿತ್ರವೂ ಹಿಟ್ ಆಗಲಿಲ್ಲ. ಓ ಗಂಡಸರೇ ನೀವೆಷ್ಟು ಒಳ್ಳೆಯವರು ಎಂಬ ಸಿನಿಮಾದಲ್ಲಿ ಗೋವಿಂದು ಅವರು ನಟನೆ ಮಾಡಿದ್ದರು ಆದರೆ ಅದು ನೆಗೆಟಿವ್ ರೋಲ್ ಇರುವುದರಿಂದ ಹಿಟ್ ಆಗಲಿಲ್ಲ. ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕರು ಹಂಸಲೇಖ ಅವರಾಗಿದ್ದರು. ಹಂಸಲೇಖ ಅವರೊಂದಿಗೆ ಕೆಲಸ ಮಾಡಿರುವುದು ಒಳ್ಳೆಯ ಅನುಭವವನ್ನು ನೀಡಿದೆ ಎಂದು ಕುಮಾರ್ ಗೋವಿಂದು ಅವರು ಹೇಳಿಕೊಂಡರು. ನಂತರ ರಾಜಕುಮಾರ್ ಅವರ ಬರ್ತಡೆಗೆ ಅವರ ಮನೆಗೆ ಹೋದಾಗ ರಾಜಕುಮಾರ್ ಅವರು ಉಳಿದವರ ಹತ್ತಿರ ಶ್ ಚಿತ್ರದ ಹೀರೊ ಇವರು ಎಂದು ಕುಮಾರ್ ಗೋವಿಂದು ಅವರನ್ನ ಪರಿಚಯ ಮಾಡಿಕೊಟ್ಟರು, ಅಲ್ಲದೆ ರಾಜಕುಮಾರ್ ಅವರು ಕುಮಾರ್ ಗೋವಿಂದು ಅವರ ಹತ್ತಿರ ಕರ್ನಾಟಕದ ತುಂಬಾ ನನ್ನ ಅಭಿಮಾನಿಗಳಿದ್ದಾರೆ ಆದರೆ ನಮ್ಮ ಮನೆಯವರು ನಿನ್ನ ಅಭಿಮಾನಿಗಳು, ಶ್ ಸಿನಿಮಾವನ್ನು ನೋಡುತ್ತಿರುತ್ತಾರೆ. ಶ್ ಸಿನಿಮಾದಲ್ಲಿ ನೀವು ತುಂಬಾ ಚೆನ್ನಾಗಿ ಫೈಟ್ ಮಾಡಿದ್ದೀರಾ, ಎರಡು ಸಾರಿ ಚಿತ್ರವನ್ನು ನೋಡಿದ್ದೇನೆ ಎಂದು ಹೇಳಿದರು ಇದನ್ನು ಕೇಳಿದ ಗೋವಿಂದು ಅವರು ಸಿನಿಮಾದ ಶಕ್ತಿ ಏನೆಂದು ನನಗೆ ತಿಳಿಯಿತು ಎಂದು ಹೇಳಿದರು. ಯಾವುದೇ ಸಿನಿಮಾ ಮಾಡಬೇಕು ಎಂದರೂ 100% ಪರಿಶ್ರಮಪಟ್ಟು ಮಾಡಿ ಅದು ನಿಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬ ಸಲಹೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *