ನಯನತಾರಾ ಅವರು ಬಹು ಭಾಷೆಯ ನಟಿಯಾಗಿದ್ದಾರೆ. ಏಕೆಂದರೆ ಅವರು ಒಂದೇ ಭಾಷೆಯ ಸಿನಿಮಾಗಳನ್ನು ನಟನೆ ಮಾಡಿಲ್ಲ. ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಸೂಪರ್ ಎನ್ನುವ ಸಿನೆಮಾವನ್ನು ಮಾಡಿದ್ದಾರೆ. ಇದು ಹಲವಾರು ವೀಕ್ಷಕರ ಗಮನವನ್ನು ಸೆಳೆದಿದೆ. ಈಗ ವಿಘ್ನೇಶ್ ಶಿವನ್ ಅವರ ಜೊತೆ ನಯನತಾರಾ ಅವರು ವಿವಾಹವಾಗುತ್ತಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿದೆ. ಆದ್ದರಿಂದ ನಾವಿಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಟಿ ನಯನತಾರಾ ಅವರ ಮದುವೆ ಇಷ್ಟೊತ್ತಿಗಾಗಲೇ ಆಗಿರಬೇಕಿತ್ತು. ಕೆಲ ವರ್ಷಗಳ ಹಿಂದೆಯೇ ನಟ ಮತ್ತು ನಿರ್ದೇಶಕ ಪ್ರಭುದೇವ ಜೊತೆ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ಆಗಲೇ ಅವರು ಚಿತ್ರರಂಗದಿಂದ ಹೊರನಡೆಯುತ್ತಾರೆ ಎನ್ನಲಾಗಿತ್ತು. ಆನಂತರ ಅವರು ನಿರ್ದೇಶಕ ವಿಘ್ನೇಶ್‌ ಶಿವನ್‌ ಜೊತೆ ಪ್ರೇಮ್‌ ಕಹಾನಿ ಶುರು ಮಾಡಿದ್ದರು. ಅನೇಕ ಕಡೆಗಳಲ್ಲಿ ಜೊತೆಯಾಗಿ ಸುತ್ತಾಡಿಕೊಂಡಿರುವ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಬೇಕಿತ್ತು. ಆದರೆ, ತಮಿಳಿನ ಸ್ಟಾರ್ ನಟರೊಬ್ಬರ ದೆಸೆಯಿಂದ ಅದು ಸಾಧ್ಯವಾಗುತ್ತಿಲ್ಲ.

ದಕ್ಷಿಣ ಭಾರತದಲ್ಲಿ ‘ಲೇಡಿ ಸೂಪರ್ ಸ್ಟಾರ್’ ಎಂದೇ ಖ್ಯಾತಿ ಪಡೆದುಕೊಂಡಿರುವ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತಮಿಳು-ತೆಲುಗು ಭಾಷೆಯ ಸ್ಟಾರ್ ನಟರ ಸಿನಿಮಾಗಳಿಗೆ ಅವರು ಖಾಯಂ ನಾಯಕಿಯಾಗಿದ್ದಾರೆ. ಜೊತೆಗೆ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಒಂದು ಸಿನಿಮಾಕ್ಕೆ ಮೂರರಿಂದ ಐದು ಕೋಟಿ ರೂ.ಗಳವರೆಗೂ ಸಂಭಾವನೆ ಪಡೆಯುತ್ತಾರೆ. ಸದ್ಯ 34ರ ಹರೆಯದ ಈ ನಟಿಗೆ ಈಗ ಮದುವೆ ಆಗುವ ಆಲೋಚನೆ ಬಂದಿದೆ. ಆದರೆ ಅದು ಕೂಡ ಸಾಧ್ಯವಾಗುತ್ತಿಲ್ಲ. ತಮಿಳಿನ ಸ್ಟಾರ್ ನಟ ಅಜಿತ್ ಅವರಿಂದಾಗಿ ಮದುವೆ ಆಲೋಚನೆ ಮುಂದಕ್ಕೆ ಹಾಕಿಕೊಂಡಿದ್ದಾರಂತೆ ನಯನತಾರಾ.

ಬೋನಿ ಕಪೂರ್ ನಿರ್ಮಾಣದ ‘ವಲಿಮೈ’ ಚಿತ್ರದಲ್ಲಿ ಅಜಿತ್ ನಟಿಸುತ್ತಿದ್ದಾರೆ. ಅದರಲ್ಲಿ ಅವರು ಪೊಲೀಸ್‌ ಅಧಿಕಾರಿ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರಕ್ಕೆ ನಾಯಕಿಯನ್ನಾಗಿ ನಯನತಾರಾ ಅವರನ್ನು ಸೆಲೆಕ್ಟ್ ಮಾಡಬೇಕು ಎಂಬುದು ನಿರ್ದೇಶಕ ವಿನೋದ್ ಅವರ ಲೆಕ್ಕಾಚಾರ. ಅದಕ್ಕಾಗಿ ಒಂದು ಸುತ್ತಿನ ಮಾತುಕತೆಯನ್ನು ಮಾಡಲಾಗಿದೆಯಂತೆ. ಒಂದುವೇಳೆ ಆ ಸಿನಿಮಾದಲ್ಲಿ ನಯನತಾರಾ ನಟಿಸುವುದು ಪಕ್ಕಾ ಆದರೆ ಇನ್ನೂ 6-8 ತಿಂಗಳು ಮದುವೆ ಆಗುವಂತಿಲ್ಲ ಎಂಬುದು ಕೇಳಿ ಬಂದಿರುವ ಮಾಹಿತಿ ಆಗಿದೆ.

ಮುಂದಿನ ವರ್ಷದ ಆರಂಭದಲ್ಲೇ ರಜನಿಕಾಂತ್ ಅವರೊಂದಿಗೆ ನಟಿಸಿರುವ ‘ದರ್ಬಾರ್’ ರಿಲೀಸ್ ಆಗಲಿದೆ. ಅಲ್ಲದೆ, ಪ್ರಿಯಕರ ವಿಘ್ನೇಶ್ ಶಿವನ್ ನಿರ್ಮಾಣದ ‘ನೆಟ್ರಿಕನ್‌’ ಚಿತ್ರದಲ್ಲೂ ನಯನತಾರಾ ನಟಿಸುತ್ತಿದ್ದು, ಚಿತ್ರೀಕರಣವೂ ಬಿರುಸಿನಿಂದ ಸಾಗಿದೆ. ಹಾಗಾಗಿ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸವೆಲ್ಲ ಒಂದು ಹಂತಕ್ಕೆ ಮುಕ್ತಾಯಗೊಂಡಿದ್ದರಿಂದ ಮದುವೆ ಪ್ಲಾನ್ ಹಾಕಿಕೊಂಡಿದ್ದರು. ಈಗ ‘ವಲಿಮೈ’ನಿಂದಾಗಿ ಮದುವೆ ಕಾರ್ಯಕ್ರಮ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅಜಿತ್ ಸಿನಿಮಾದಲ್ಲಿ ನಯನತಾರಾ ನಟಿಸುವುದು ಕನ್ಫರ್ಮ್‌ ಆದರೆ ಇದು ಈ ಜೋಡಿ ಒಟ್ಟಿಗೆ ನಟಿಸಿದ ಆರನೇ ಸಿನಿಮಾವಾಗಲಿದೆ.

Leave a Reply

Your email address will not be published. Required fields are marked *