ಮಾಲಾಶ್ರೀ ಅವರು ದಕ್ಷಿಣ ಭಾರತದ ಖ್ಯಾತ ನಟಿ! ಮೂಲತಃ ತೆಲುಗು ಕುಟುಂಬದ ಹಿನ್ನಲೆ ಇರುವ ಮಾಲಾಶ್ರೀ ಅವರು ಕನ್ನಡ ಸೇರಿದಂತೆ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಒಳ್ಳೆಯ ಟಾಪ್ ನಟಿಯಾಗಿ ಮಿಂಚಿದ ಮಾಲಾಶ್ರೀ ಅವರು1969 ರಲ್ಲಿ ಜನಿಸಿದರು. 34 ಸಿನಿಮಾಗಳಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ ನಂತರ ಇವರಿಗೆ ತುಂಬಾ ಹೆಸರು ತಂದು ಮಾಡಿಕೊಟ್ಟ ಸಿನಿಮಾ ನಂಜುಂಡಿ ಕಲ್ಯಾಣ. ಇನ್ನು ಇವರನ್ನು ಹೀರೋಯಿನ್ನಾಗಿ ಪಾರ್ವತಮ್ಮ ರಾಜಕುಮಾರ್ ಅವರು ಆಯ್ಕೆ ಮಾಡಿದ್ದರು. ನಂತರ ಮಾಲಾಶ್ರೀ ಅವರು ನಿರ್ಮಾಪಕರಾದ ರಾಮು ಅವರನ್ನು ಮದುವೆಯಾಗಿ ಸದ್ಯ ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ವಿಶ್ವ ಹೆಣ್ಣುಮಕ್ಕಳ ದಿನ (daughters day ) ಇದರ ಅಂಗವಾಗಿ ಮಾಲಾಶ್ರೀ ಅವರು ತಮ್ಮ ಹಾಗು ತಮ್ಮ ಮಗಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.

ಮಾಲಾಶ್ರೀ ಅವರ ಮುದ್ದಾದ ಮಗಳ ಹೆಸರು ಅನನ್ಯ ಎಂದು. ವಿಶ್ವ ಹೆಣ್ಣುಮಕ್ಕಳ ದಿನದಂದು ತಮ್ಮ ಮುದ್ದಿನ ಮಗಳ ಜೊತೆ ಇರುವ ಅಪರೂಪದ ಫೋಟೋಗಳನ್ನು ಹಂಚಿಕೊಂಡು “ನೀನೆ ನನ್ನ ಸರ್ವಸ್ವ, ನೀನೆ ನನ್ನ ಜೀವ ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿದ್ದಾರೆ ನಟಿ ಮಾಲಾಶ್ರೀ. ಸದ್ಯ ಮಾಲಾಶ್ರೀ ಹಾಗು ಅವರ ಮಗಳ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈ’ರಲ್ ಆಗಿದ್ದು, ಸಾಕಷ್ಟು ಜನ ಇದನ್ನು ಲೈಕ್ ಮಾಡಿ ಶೇರ್ ಮಾಡಿದ್ದಾರೆ. ಸದ್ಯ ಮಾಲಾಶ್ರೀ ಅವರ ಮಗಳು ಇನ್ನೂ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಇತ್ತ ಮಾಲಾಶ್ರೀ ಅವರು ಸಿನಿಮಾ ನಿರ್ಮಾಣ ಕೆಲಸದಲ್ಲಿ ಬ್ಯುಸಿ ಇರುತ್ತಾರೆ.

ಇನ್ನೂ ತಾಯಿಯ ಹಾಗೆಯೇ ಮಗಳು ಅನನ್ಯಾ ಕೂಡಾ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಅನನ್ಯಾ ಬಣ್ಣದ ಲೋಕಕ್ಕೆ ಕಾಲಿಡುವ ಬಗ್ಗೆ ಮಾಲಾಶ್ರೀ ಹಾಗೂ ಅವರ ಪತಿ ರಾಮು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.

Leave a Reply

Your email address will not be published. Required fields are marked *