ಆ ದೇಶದಲ್ಲಿ ಒಂದು KG ಟೊಮೊಟೊಗೆ ಕಂತೆ ಕಂತೆ ಹಣ ಕೊಡಬೇಕು

0 0

ಜಗತ್ತಿನ ಅತ್ಯಂತ ಅಪಾ ಯಕಾರಿ ದೇಶ ಯಾವುದು ಎಂದರೆ ನಮ್ಮ ಮನಸ್ಸಿನಲ್ಲಿ ಬರುವುದು ಪಾ’ಕಿಸ್ತಾನ, ಅ’ಫ್ಘಾನಿಸ್ತಾನ, ಇರಾಕ್, ಇರಾನ್ ದೇಶಗಳು ಆದರೆ ಈ ಪ್ರಶ್ನೆಗೆ ಸೂಕ್ತವಾದ ಉತ್ತರ ಈ ದೇಶಗಳಲ್ಲ. ಹಾಗಾದರೆ ಅದು ಯಾವ ದೇಶ ಹಾಗೂ ಅಲ್ಲಿನ ಸ್ಥಿತಿ ಹೇಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದಕ್ಷಿಣ ಅಮೆರಿಕಾ ಖಂಡದ ವೆನೆಜುವೆಲಾ ದೇಶ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ. ಈ ದೇಶದ ನಂತರ ಆ’ಫ್ಘಾನಿಸ್ತಾನ, ನೈಜೀರಿಯಾ, ಕೋಲಂಬಿಯಾ ಮೊದಲಾದ ರಾಷ್ಟ್ರಗಳ ಹೆಸರು ಬರುತ್ತದೆ. ವೆನೆಜುವೆಲಾ ದೇಶ ಒಂದು ಕಾಲದಲ್ಲಿ ದಕ್ಷಿಣ ಅಮೇರಿಕಾ ಖಂಡದ ಪ್ರಭಾವಿ ಹಾಗೂ ಶ್ರೀಮಂತ ದೇಶವಾಗಿತ್ತು. ಈ ದೇಶದ ರಾಜಧಾನಿ ಕಾರಾಕಸ್ ಎಂಬ ನಗರ. ಈ ದೇಶದಲ್ಲಿ ನಡೆದ ಆರ್ಥಿಕ, ಸಾಮಾಜಿಕ, ರಾಜಕೀಯ ಅಸ್ತವ್ಯಸ್ತತೆಯ ಪರಿಣಾಮವಾಗಿ ಇಂದು ಜಗತ್ತಿನ ಅತಿ ಹೆಚ್ಚು ಕ್ರೈಂ ರೇಟನ್ನು ಹೊಂದಿರುವ ದೇಶವಾಗಿದೆ. 2012 ರಿಂದ ಈ ದೇಶದ ಹಣದ ಮೌಲ್ಯ ಶೇಕಡಾ 946 ರಷ್ಟು ಕುಸಿತವಾಗಿದೆ, ಅಲ್ಲದೆ ಜಗತ್ತಿನಲ್ಲಿ ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಷ್ಟ್ರವೂ ಆಗಿದೆ. ಅಲ್ಲಿ ದಿನಬಳಕೆಯ ವಸ್ತುಗಳು ಹೆಚ್ಚಿನ ದರವನ್ನು ಹೊಂದಿದೆ. ಈ ದೇಶದ ಪಕ್ಕದ ದೇಶವಾದ ಕೋಲಂಬಿಯಾ ದೇಶದಲ್ಲಿ ಡ್ರ’ ಗ್ ದೊರೆ ಎಂದೆ ಹೆಸರಾಗಿದ್ದ ಫ್ಯಾಬ್ಲೋ ಎಸ್ಕೋಬಾರ್ ನ ಚಟುವಟಿಕೆಯಿಂದ ಅರಾಜಕತೆ ಉಂಟಾಯಿತು. ಕೋಲಂಬಿಯಾ ದೇಶದ ಪಕ್ಕದ ದೇಶವಾದ ವೆನೆಜುವೆಲಾ ದೇಶಕ್ಕೂ ಹರಡಿತು. 1999ನೇ ಇಸ್ವಿಯಲ್ಲಿ ವೆನೆಜುವೆಲಾ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ ವ್ಯೂಗೋ ಚಾವೀಸ್ ಎಂಬ ಸಮರ್ಥ ನಾಯಕನನ್ನು 2004 ರಲ್ಲಿ ಆರಿಸಲಾಗಿತ್ತು ಆತ ಅನೇಕ ಜನಪರ ನೀತಿಗಳನ್ನು ಜಾರಿಗೆ ತಂದನು, 2012ರಲ್ಲಿ ಈತನ ಅವಧಿ ಮುಗಿದಿತ್ತು. ನಂತರ 2013ರ ಚುನಾವಣೆಯಲ್ಲಿ ನಿಕೋಲಾಸ್ ಎಂಬ ವ್ಯಕ್ತಿಯನ್ನು ನೂತನ ಅಧ್ಯಕ್ಷನನ್ನಾಗಿ ಆರಿಸಿದ ಅಲ್ಲಿನ ಜನರು 2013ರ ನಂತರ ನೂತನ ಸರ್ಕಾರದ ಆಡಳಿತದ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ನಿಕೋಲಾಸ್ ಜನರ ಅಭಿಪ್ರಾಯವನ್ನು ವಿರೋಧಿಸಿ ಬಲವಂತವಾಗಿ ಆಡಳಿತವನ್ನು ಮುನ್ನಡೆಸಿದ, ಅಲ್ಲದೆ ನಿರಂಕುಶ ಪ್ರಭುತ್ವವನ್ನು ನಡೆಸುತ್ತಿದ್ದನು. ಇದರಿಂದ ಜನರು ದಂಗೆಯೆದ್ದರು ಆಗ ಅಲ್ಲಿನ ಕೋರ್ಟ್ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಪ್ರಜಾಪ್ರಭುತ್ವ ನೀತಿಯ ಒಂದು ರೌಂಡ್ ಟೇಬಲ್ ಸಭೆ ನಡೆಸಿದಾಗ ನಿಕೋಲಾಸ್ ನ ನಿರಂಕುಶಪ್ರಭುತ್ವ ಬೇಡ ಪ್ರಜಾಪ್ರಭುತ್ವ ಆಧಾರಿತ ಸರ್ಕಾರ ಬೇಕು ಎಂಬ ಮಾತು ಹೆಚ್ಚಾಗಿ ಕೇಳಿಬಂತು. ಇದರಿಂದ 2015ರಲ್ಲಿ ನಿಕೋಲಾಸ್ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂತು ಆದರೂ ಸುಪ್ರೀಂಕೋರ್ಟ್ ನ ಆದೇಶವನ್ನು ವಿರೋಧಿಸಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಪ್ರಯತ್ನಿಸಿದನು. ದೇಶದ ಸಂವಿಧಾನವನ್ನು ತನಗೆ ಬೇಕಾದ ಹಾಗೆ ಬದಲಾಯಿಸಿಕೊಳ್ಳಲು ಒಂದು ಅಸೆಂಬ್ಲಿಯನ್ನು ರಚಿಸಿದನು.

ಇದರೊಂದಿಗೆ ಇತ್ತೀಚೆಗೆ ಬಂದ ಕೊರೋನವೈರಸ್ ಕಾರಣದಿಂದ ಅಲ್ಲಿನ ಜನಸಾಮಾನ್ಯರ ಸ್ಥಿತಿ ಅತಂತ್ರವಾಗಿದೆ. ಸರಿಯಾದ ಉದ್ಯೋಗ ಸಿಗದೆ ಅಲ್ಲಿನ ಯುವಕರು ಹೊಟ್ಟೆಪಾಡಿಗಾಗಿ ಸ್ಮಗ್ಲಿಂಗ್, ಕಿಡ್ನಾಪ್ ಇಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ವೆನೆಜುವೆಲಾ ದೇಶದ ರಾಜಧಾನಿ ಕಾರಾಕಸ್ ನಗರಕ್ಕೆ ಬರುವ ವಿದೇಶಿಯರು ಕಿಡ್ನಾಪ್ ಆಗುತ್ತಾರೆ. ಅಲ್ಲಿನ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಇಲ್ಲ. ಅಲ್ಲಿನ ಬೆಟ್ಟಗಳಲ್ಲಿ ಮನೆಗಳ ನಿರ್ಮಾಣವಾಗಿ ಸಮುದಾಯ ನಿರ್ಮಾಣವಾಗಿದೆ. ಅಲ್ಲಿ ಕಳ್ಳತನ ಹೆಚ್ಚಾಗಿ ನಡೆಯುತ್ತದೆ, ಕಳ್ಳತನ ಮಾಡುವವರು ಕೊಲೆ ಮಾಡಲು ಹೇಸುವುದಿಲ್ಲ. ಕಿಡ್ನಾಪ್ ಮಾಡಿ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ ಅವರ ಮೊಬೈಲ್ ಕಸಿದುಕೊಂಡು ಎಟಿಎಮ್ ಕಾರ್ಡ್ ನ್ನು ಕಿತ್ತುಕೊಂಡು ಅಕೌಂಟ್ ನಲ್ಲಿರುವ ಹಣವನ್ನು ಡ್ರಾ ಮಾಡಿ ಕೊಡುವಂತೆ ಹೇಳುತ್ತಾರೆ. ಹೀಗೆ ಮಾಡುವಾಗ ಕೇಳದವರನ್ನು ಕೊಲೆ ಮಾಡಲಾಗುತ್ತದೆ. ವೆನೆಜುವೆಲಾ ದೇಶದಲ್ಲಿ ಮಾರ್ಕೆಟ್ ಗಳಲ್ಲಿ ಸಹ ಕಳ್ಳತನ ನಡೆಯುತ್ತದೆ. ಕಿಡ್ನಾಪಿಂಗ್ ಇಲ್ಲಿ ಸಾಮಾನ್ಯವಾಗಿದೆ. ಜಾಹೀರಾತು ಪತ್ರಗಳಲ್ಲಿ ವಿಷವನ್ನು ಲೇಪಿಸಿ ಜನರನ್ನು ಮೂರ್ಛೆ ಹೋಗುವಂತೆ ಮಾಡುತ್ತಾರೆ ಆದ್ದರಿಂದ ಅಲ್ಲಿಯ ಸರ್ಕಾರ ಜಾಹೀರಾತು ಪತ್ರಗಳನ್ನು ಮಾರುವುದನ್ನು ನಿಷೇಧಿಸಿತು. ಮಕ್ಕಳನ್ನು ಅಪಹರಿಸಿ ಅವರ ಪೋಷಕರಿಗೆ ಹಣ ಕೊಡಲು ಬೆದರಿಕೆ ಕರೆ ಮಾಡಿ ಅವರಿಂದ ಹಣ ವಸೂಲು ಮಾಡಲಾಗುತ್ತದೆ. ಪಾರ್ಕಿಂಗ್ ಸ್ಥಳದಲ್ಲಿ, ತಿರುವು ಸ್ಥಳಗಳಲ್ಲಿ ಕಾರುಗಳನ್ನು ಅಡ್ದ ಹಾಕಿ ಕಾರುಗಳನ್ನು ಅಪಹರಿಸಲಾಗುತ್ತದೆ. ಈ ದೇಶದ ಕ್ಯಾಬ್ ಡ್ರೈವರ್ ಗಳು ಗ್ರಾಹಕರಿಂದ ಹೆಚ್ಚು ಹಣವನ್ನು ಪಡೆಯುತ್ತಾರೆ. ಈ ಎಲ್ಲ ಕಾರಣಗಳಿಂದ ವೆನೆಜುವೆಲಾ ದೇಶವು ವಾಸಿಸಲು ಯೋಗ್ಯವಾಗಿಲ್ಲ ಹಾಗೂ ಜಗತ್ತಿನ ಅತ್ಯಂತ ಅಪಾಯಕಾರಿ ದೇಶ ಎಂದು ಗುರುತಿಸಿಕೊಂಡಿದೆ. ಈ ದೇಶದ ಸಮಸ್ಯೆಯನ್ನು ಪರಿಹರಿಸಲು ಯುಎನ್ ಒ ಪ್ರಯತ್ನಿಸುತ್ತಿದೆ.

Leave A Reply

Your email address will not be published.