ರಾಘವೇಂದ್ರ ಸ್ವಾಮಿಗಳ ಈ ವಿಶೇಷ ವ್ರತದಿಂದ ನಿಮ್ಮ ಎಂತ ಕಾರ್ಯವು ಸಿದ್ಧಿಯಾಗುತ್ತೆ

0 5,418

ಶ್ರೀ ರಾಘವೇಂದ್ರ ಸ್ವಾಮಿಯೂ ಭಾರತದ ತಮಿಳುನಾಡಿನ ಭುವನಗಿರಿ ಪಟ್ಟಣದಲ್ಲಿ ವೆಂಕಟನಾಥರಾಗಿ 1595  ರಲ್ಲಿ ಬ್ರಾಹ್ಮಣ ಪೋಷಕರಾದ ತಿಮ್ಮಣ್ಣ ಭಟ್ಟ ಮತ್ತು ಗೋಪಿಕಂಬರಿಗೆ ಜನಿಸಿದರು. ಅವರನ್ನು ಕೆಲವೊಮ್ಮೆ ವೆಂಕಟೇಶ್ವರರ ಗೌರವರ್ಥ ವೆಂಕಟಾಚಾರ್ಯ ಎಂದು ಕರೆಯುತ್ತಾರೆ. ಶ್ರೀ ರಾಘವೇಂದ್ರ ಸ್ವಾಮಿಯವರ ಆರಂಭಿಕ ಶಿಕ್ಷಣ ಮುಗಿಯುತ್ತೆತಿದ್ದಂತೆ ಅವರನ್ನು ಕುಂಭಕೊಂಣಂನ ಮಠಕ್ಕೆ ಸೇರಿಸಲಾಯಿತು.

ಪ್ರಾಚೀನ ವೈಧಿಕಾ ಗ್ರಂಥಗಳ ಶಿಕ್ಷಕ ಎಂದು ಕರೆಯಲಾಗುತಿತ್ತು. ನಂತರ 1614 ರಲ್ಲಿ ಅವರು ಸನ್ಯಾಸವನ್ನು ತೆಗೆದುಕೊಂಡು ರಾಘವೇಂದ್ರ ತೀರ್ಥ ಎಂಬ ಹೆಸರನ್ನು ಸ್ವೀಕರಿಸಿದರು ಮತ್ತು 1621 ರಲ್ಲಿ ರಾಘವೇಂದ್ರ ತೀರ್ಥರು ತಮ್ಮ ಗುರು ಸುಧೀಂದ್ರಾ ತೀರ್ಥರ ನಂತರ ಶ್ರೀ ಮಠದ ಮುಖ್ಯಸ್ಥರಾಗಿ 1621 ರಿಂದ 1671 ರ ವರೆಗೆ ಸೇವೆ ಸಲ್ಲಿಸಿದರು.ಈ ಅವಧಿಯಲ್ಲಿ ಅವರು ಮಾಧ್ವಾಚಾರ್ಯರನ್ನು ಅನುಸರಿಸುತ್ತಾ ದಕ್ಷಿಣ ಭಾರತದಾದ್ಯಂತ ಪ್ರಯಾಣಿಸಿದರು. ದ್ವೈತ ತತ್ವಶಾಸ್ತ್ರ ಮತ್ತು ಹಲವಾರು ಪವಾದಗಳಿಗೆ ಕಾರಣವಾಗಿದೆ.1671 ರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದಲ್ಲಿ ಸಮಾಧಿ ಪಡೆದರು.

ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಜಪಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಈ ಮೂಲ ಮಂತ್ರವು ಶ್ರೀ ರಾಘವೇಂದ್ರರ ಆಶೀರ್ವಾದವನ್ನು ಪಡೆಯಲು ಅತ್ಯಂತ ಶಕ್ತಿಯುತವಾದ ಮಂತ್ರವೆಂದು ಹೇಳಲಾಗುತ್ತದೆ. ಶ್ರೀ ರಾಘವೇಂದ್ರ ಮೂಲ ಮಂತ್ರವನ್ನು ಯಾವುದೇ ಸಮಸ್ಯೆಗಳಿಗಾಗಿ ಯಾರು ಬೇಕಾದರೂ ಜಪಿಸಬಹುದು.

ಶ್ರೀ ರಾಘವೇಂದ್ರನನ್ನು ಪೂಜೆಸಲು ನೀವು ರಾಘವೇಂದ್ರರ ಫೋಟೋ ಅಥವಾ ಯಂತ್ರವನ್ನು ಬಳಸುವುದರ ಮೂಲಕ ಆತನನ್ನು ಪೂಜಿಸಬಹದು.ನೀವು ಶ್ರೀ ರಾಘವೇಂದ್ರ ಸ್ವಾಮಿಯ ಪ್ರತಿಮೆಯನ್ನೂ ಬಳಸಬಹುದು. ಮಂತ್ರ ಸಿದ್ಧಿಯನ್ನು ಪಡೆಯಲು 48  ದಿನಗಳವರೆಗೆ 1008 ಬಾರಿ ಪಠಿಸಬೇಕು. ತುಳಸಿಯಿಂದ ಮಾಡಿದ ಮಾಲೆಯನ್ನು ಬಳಸಬೇಕು(ತುಳಸಿ ಜಪ ಮಾಲೆ ) ಓಂ ಶ್ರೀ ರಾಘವೇಂದ್ರಾಯ ನಮಃ ಎನ್ನುವುದು ರಾಯರ ಮೂಲ ಮಂತ್ರ.

ರಾಘವೇಂದ್ರ ಸ್ವಾಮಿಯ ಪೂಜೆ ಸರಳವಾದರೂ ಸ್ವಚ್ಛವಾಗಿರಬೇಕು.6 ಗುರುವಾರಗಳವರೆಗೆ ಸ್ವಾಮಿಯನ್ನು ಪೂಜಿಸಿ,7ನೇ ಗುರುವಾರ ಪೂಜೆಯನ್ನು ಸಮಾಪ್ತಿ ಮಾಡಬೇಕು.ಗುರುವಾರ ಮುಂಜಾನೆ ಬೇಗ ಎದ್ದು, ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಆ ಸ್ಥಳದಲ್ಲಿ ರಂಗೋಲಿ ಹಾಕಿ ಅದರ ಮೇಲೆ ಮರದ ಮಣೆ ಇಟ್ಟು ಮಣೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ರಂಗೋಲಿಯನ್ನು ಹಾಕಿ, ಅದರ ಮೇಲೆ ಸ್ವಚ್ಛಗೊಳಿಸಿದ  ರಾಯರ ಮೂರ್ತಿ ಅಥವಾ ಫೋಟೋವನ್ನಿಟ್ಟು ಗಂಧವನ್ನು ರಾಯರ ಹಣೆಗೆ ಇಟ್ಟು ಸಂಕಲ್ಪ ಮಾಡಿಕೊಳ್ಳಬೇಕು.. ಹೀಗೆ ದಿನೇ ಗಂಧವನ್ನು ಹಚ್ಚಬೇಕು

Leave A Reply

Your email address will not be published.