ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಹನುಮಾನ್ ಚಾಲೀಸಾವನ್ನು ಪಠಿಸಿ ನಕಾರಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಿ

0 2

ಜೀವನದಲ್ಲಿ ಕಷ್ಟಗಳಿಂದ ಎದೆಗುಂದಿದ್ದರೆ ಭಗವಾನ್ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವ ವಿಧಾನದ ಮತ್ತು ಪಠಿಸುವುದರಿಂದ ಜೀವನದಲ್ಲಿ ಆಗುವ ಬದಲಾವಣೆಯನ್ನು ಈ ಲೇಖನದ ಮೂಲಕ ತಿಳಿಯೋಣ

ಹನುಮಂತನನ್ನು ಸ್ಮರಿಸಿದರೆ ನೂರಾನೆ ಶಕ್ತಿ ಬರುತ್ತದೆ. ಇದು ಭಗವಾನ್ ಹನುಮಂತನನ್ನು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆಯಾಗಿದೆ. ಸಂತ ತುಳಸಿದಾಸರು ಕ್ರೂರಿ ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸಮಯದಲ್ಲಿ ಇದನ್ನು ಬರೆದಿದ್ದಾರೆ. ಹಿಂದೂ ಪುರಾಣದಲ್ಲಿ ಹನುಮಾನ್ ಎಂದರೆ ಸಂಕಟ ಮೋಚನ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಜೀವನದ ಎಲ್ಲ ಸಮಸ್ಯೆಗಳು ದೂರವಾಗಿ ಧೈರ್ಯ ಬರುತ್ತದೆ. ಬೆಳಗ್ಗೆ ಮತ್ತು ಸಂಜೆ ಹನುಮಾನ್ ಚಾಲೀಸಾವನ್ನು ಓದಬಹುದು. ಬೆಳಿಗ್ಗೆ ಸ್ನಾನ ಮಾಡಿದ ನಂತರ ಹನುಮಾನ್ ಚಾಲೀಸಾವನ್ನು ಓದಬೇಕು.

ಜೀವನದಲ್ಲಿ ಧೈರ್ಯ ಕಳೆದುಕೊಂಡವರು, ನೆಮ್ಮದಿ ಕಳೆದುಕೊಂಡವರು ಈ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಜೀವನದಲ್ಲಿ ಕಷ್ಟ ಎದುರಿಸುವ ಶಕ್ತಿ, ಸಾಮರ್ಥ ಹೆಚ್ಚುತ್ತದೆ. ಯಾರೇ ಆದರೂ ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.