ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಹಣ್ಣು ಈ ನೇರಳೆ

0 1

ಕೆಲವು ಹಣ್ಣುಗಳಲ್ಲಿ ಔಷಧೀಯ ಗುಣಗಳು ಇರುವಂತೆ ಪ್ರಕೃತಿ ನಮಗೆ ವರವಾಗಿ ಕೊಟ್ಟಿದೆ. ಎಂತಹ ದೊಡ್ಡ ದೊಡ್ಡ ಖಾಯಿಲೆಗಳು ಸಣ್ಣ ಪುಟ್ಟ ಹಣ್ಣುಗಳಿಂದ ವಾಸಿಯಾಗುವುದು ಇರುತ್ತದೆ. ಈ ಹಣ್ಣನ್ನು ತಿಂದರೆ ಕಿಡ್ನಿಯಲ್ಲಿರುವ ಕಲ್ಲು ಕರಗುವುದಂತು ಖಂಡಿತ. ಬಾಯಲ್ಲಿ ಹಾಕಿದ ತಕ್ಷಣವೇ ಕರಗಿ ಹೋಗುವ ಹಣ್ಣುಗಳೇ ಈ ನೇರಳೆ ಹಣ್ಣುಗಳು. ಇದು ಪೋಷಕಾಂಶಗಳ ಆಗರವಾಗಿದೆ. ಈ ಹಣ್ಣಿನಲ್ಲಿ ಆ್ಯಂಟಿಬ್ಯಾಕ್ಟೀರಿಯಾ ಸಮೃದ್ಧವಾಗಿದೆ. ತ್ರೇತಾ ಯುಗದಲ್ಲಿ ರಾಮ ವನವಾಸದ ವೇಳೆಯಲ್ಲಿ ಈ ಹಣ್ಣುಗಳನ್ನೆ ಸೇವಿಸಿದ್ದನೆಂದು ಗುಜರಾತ್ ರಾಜ್ಯದಲ್ಲಿ ನೇರಳೆ ಹಣ್ಣನ್ನು ದೇವರ ಫಲವೆಂದು ಕರೆಯುವುದುಂಟು. ಗೊತ್ತಿಲ್ಲದೆ ಹೊಟ್ಟೆ ಸೇರಿದ ಕೂದಲು, ಉಗುರುಗಳನ್ನು ನೇರಳೆ ಹಣ್ಣು ಕರಗಿಸಿ ಜೀರ್ಣಿಸಿಬಿಡುವ ಶಕ್ತಿ ಹೊಂದಿದೆ. ಹೃದಯಕ್ಕೆ ನೇರಳೆ ಹಣ್ಣು ತುಂಬಾ ಒಳ್ಳೆಯದು. ಹೃದಯದಲ್ಲಿರುವ ಕಲ್ಮಶಗಳನ್ನು ಶುದ್ದೀಕರಣ ಮಾಡಿ ಕಾರ್ಯ ಕ್ಷಮತೆ ಹೆಚ್ಚಿಸುತ್ತದೆ.

ಇನ್ನೂ ನೇರಳೆ ಹಣ್ಣಿನ ರಸದಲ್ಲಿ ಸ್ವಲ್ಪ ಧನಿಯಾ ಪುಡಿ ಮಿಕ್ಸ್ ಮಾಡಿ ತೆಗೆದುಕೊಂಡರೆ ಜ್ವರ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಒಂದು ಗ್ಲಾಸ್ ನೀರಿನಲ್ಲಿ ಎರಡು ಮೂರು ಚಮಚ ನೇರಳೆ ರಸ, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಊರಿ ಮೂತ್ರ ಕಡಿಮೆಯಾಗುತ್ತದೆ. ಶುಗರ್ ಇರುವವರಿಗೆ ಈ ನೇರಳೆ ಹಣ್ಣು ಮಾತ್ರೆಗಳಿಂದ ದೂರ ಇಡುವುದಲ್ಲದೆ. ಕ್ರಮೇಣ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇದರಲ್ಲಿ ಗ್ಲೈಕೋಮಿಕ್ ಇಂಡೆಕ್ಸ್ ಇರುವುದರಿಂದ ಶುಗರ್ ನಿಯಂತ್ರಣಕ್ಕೆ ಸಿಗುತ್ತದೆ. ಸುಲಭವಾಗಿ ಆಹಾರ ಜೀರ್ಣಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ. ನೇರಳೆ ಹಣ್ಣಿನಿಂದ ಜಂತು ಹುಳುಗಳು ಸಾಯುತ್ತವೆ. ಮೈಗ್ರೇನ್‌ ತಲೆನೋವಿಗೆ ನೇರಳೆ ರಸಕ್ಕೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುವುದರಿಂದ ಕಡಿಮೆಯಾಗುತ್ತದೆ ಎಂದು ಒಂದು ಅದ್ಯಯನ ತಿಳಿಸಿದೆ.

ಇನ್ನೂ ಬಾಯಿಯ ದುರ್ವಾಸನೆ ಹೋಗಲಾಡಿಸಲು, ವಸಡು, ಹಲ್ಲಿನ ಸಮಸ್ಯೆಗೂ ನೇರಳೆ ಹಣ್ಣು ಪರಿಹಾರ ನೀಡುತ್ತದೆ. ನೇರಳೆ ರಕ್ತವನ್ನು ಶುದ್ದಿಗೊಳಿಸುತ್ತದೆ. ನೇರಳೆ ಹಣ್ಣು ತಿನ್ನುವುದರಿಂದ ಅತಿಬೇಧಿಯ ತಿವ್ರತೆ ಕ್ರಮೇಣ ಕಡಿಮೆಯಾಗುತ್ತದೆ. ನೇರಳೆ ಹಣ್ಣು ಸಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸುವ ಶಕ್ತಿ ಹೊಂದಿದೆಯಂತೆ. ಮತ್ತೆ ಕಲ್ಲು ಬೆಳೆಯದಂತೆ ನೋಡಿಕೊಂಡು ಕಿಡ್ನಿಯನ್ನು ಆರೋಗ್ಯಯುತವಾಗಿ ಇರಿಸುತ್ತದೆಯಂತೆ. ನೇರಳೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಾಂಶ ಇರೋದರಿಂದ ನಮ್ಮ ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚಿಸಿ ಅನಿಮಿಯಾದಿಂದ ಕಾಪಾಡುತ್ತದೆ. ಮೇಲಿಂದ ಮೇಲೆ ನೇರಳೆ ಹಣ್ಣು ತಿಂದು ಬಾಯಾರಿಕೆ ಅನ್ನಿಸಿದಲ್ಲಿ ಆ ತಕ್ಷಣವೇ ನೀರು ಕುಡಿಯುವುದು ಸರಿಯಲ್ಲ. ಸ್ವಲ್ಪ ಸಮಯದ ನಂತರ ಕುಡಿಯುವುದು ಉತ್ತಮ. ಮೆದುಳಿನ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ ನೇರಳೆ ಹಣ್ಣಿನಲ್ಲಿರುವ ಆ್ಯಂಟಿಒಕ್ಸಿಡೆಂಟ್ ಸಹಾಯ ಮಾಡುತ್ತದೆ. ರೋಗ ನೀರೊಧಕವಾಗಿದೆ ಈ ಹಣ್ಣು.

Leave A Reply

Your email address will not be published.