ನೀವು ಬಳಸುವ ಸೋಪು ಯಾವುದು ಉತ್ತಮ ನೋಡಿ

0 351

ನಮಗೆ ಸ್ನಾನ ಮಾಡುವಾಗ ಸೋಪ್ ಬೇಕೇ ಬೇಕು. ಸೋಪಿನಲ್ಲಿ ಹಲವಾರು ವಿಧಗಳಿವೆ. ಆದರೆ ನಮಗೆ ಯಾವುದು ಒಳ್ಳೆಯದು ಎಂದು ತಿಳಿದಿರುವುದಿಲ್ಲ. ಆದ್ದರಿಂದ ನಾವು ಇಲ್ಲಿ ಸೋಪಿನ ಬಗ್ಗೆ ಮತ್ತು ಯಾವ ಸೋಪ್ ಬಳಸಿದರೆ ಒಳ್ಳೆಯದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೋಪುಗಳು ದೊರೆಯುತ್ತವೆ. ಹೆಚ್ಚು ದುಡ್ಡು ಕೊಟ್ಟ ಹಾಗೆ ಇನ್ನೂ ಒಳ್ಳೆಯ ಕ್ವಾಲಿಟಿಯ ಸೋಪುಗಳು ಸಿಗುತ್ತವೆ ಎನ್ನುವುದು ಗ್ರಾಹಕರ ನಂಬಿಕೆ ಆಗಿದೆ.ಟಿವಿಯಲ್ಲಿ ಸ್ಟಾರ್ ಗಳು ಬಂದು ಸೋಪ್ ಗಳಿಗೆ ಜಾಹೀರಾತು ನೀಡುತ್ತಾರೆ. ಮನೆಯಲ್ಲಿ ಬಳಸುವ ಸೋಪಿನ ಕವರಿನ ಹಿಂಭಾಗವನ್ನು ತೆಗೆದು ನೋಡಿದಾಗ ತಿಳಿಯುತ್ತದೆ ಅದಕ್ಕೆ ಎಷ್ಟು ರಾಸಾಯನಿಕಗಳನ್ನು ಬಳಸುತ್ತಾರೆ ಎಂದು.

ಸೋಪ್ ಗಳಿಗೆ ಬಣ್ಣವನ್ನು ಆಕರ್ಷಕವಾಗಿ ಕಾಣಲಿ ಎಂದು ಹಾಕುತ್ತಾರೆ. ಘಮ ಘಮ ಪರಿಮಳ ಬರಲಿ ಎಂದು ಫ್ರೇಗ್ರೇನ್ಸ್ ಗಳನ್ನು ಹಾಕಿರುತ್ತಾರೆ. ಹಾಗೆಯೇ ಸೋಪುಗಳು ಹಾಳಾಗಬಾರದು ಎಂದು ರಾಸಾಯನಿಕಗಳನ್ನು ಬಳಸುತ್ತಾರೆ.ಈ ರಾಸಾಯನಿಕಗಳನ್ನು ನಾವು ದಿನನಿತ್ಯ ಬಳಸುವುದರಿಂದ ನಮ್ಮ ಚರ್ಮದ ರಂಧ್ರಗಳ ಒಳಗೆ ಹೋಗಿ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ.ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಅತೀ ಕಡಿಮೆ ವಯಸ್ಸಿನಲ್ಲಿ ನೆರಿಗೆಗಳು ಮೂಡಬಹುದು.ಚಿಕ್ಕ ವಯಸ್ಸಿನಲ್ಲೇ 5 ರಿಂದ 6ವರ್ಷ ದೊಡ್ಡವರಾದಂತೆ ಕಾಣಬಹುದು.ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇರುತ್ತದೆ.

ಲಕ್ಸ್, ವಿವೇಲ್, ಫಿಯಾಮಾ ಡಿ ವಿಲ್ಸ್, ಡೇಟಾಲ್,ಪಾರ್ಕ್ ಎವೆನ್ಯೂ ಮತ್ತು ಲಾಯ್ಬಾಯ್ ಸೋಪುಗಳು ಇವುಗಳಲ್ಲಿ ಅತಿ ಹೆಚ್ಚು ರಾಸಾಯನಿಕಗಳು ಇರುತ್ತವೆ.ಇವುಗಳಲ್ಲಿ ತುಂಬಾ ಬಣ್ಣಗಳು, ಪ್ರೇಗ್ರೇನ್ಸ್ ಗಳು ಮತ್ತು 8 ರಿಂದ 10 ರಾಸಾಯನಿಕಗಳನ್ನು ಬಳಸಲಾಗುತ್ತದೆ. ಲಿವಿಲ್, ಹಮಾಮ್,ರೆಕ್ಸೋನಾ ಮತ್ತು ಸಿಂಥೋಲ್ ಇವುಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಣ್ಣಗಳು, ರಾಸಾಯನಿಕಗಳು ಮತ್ತು ಫ್ರೆಗ್ರೇನ್ಸ್ ಗಳು ಇರುತ್ತವೆ. ಮಾರ್ಗೋ, ಸಂತೂರ್,ಹಿಮಾಲಯ, ಮೆಡಿಮಿಕ್ಸ್, ಚಂದ್ರಿಕಾ,ಮೈಸೂರು ಸಾಂಡಲ್ ಮತ್ತು ಡವ್ ಸೋಪುಗಳಲ್ಲಿ ಬಹಳ ಕಡಿಮೆಯಲ್ಲಿ ಬಣ್ಣಗಳು, ರಾಸಾಯನಿಕಗಳು ಮತ್ತು ಫ್ರೆಗ್ರೇನ್ಸ್ ಗಳನ್ನು ಬಳಸಲಾಗುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲ.ಇವುಗಳನ್ನು ನಿಶ್ಚಿಂತೆಯಾಗಿ ಬಳಸಬಹುದು.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ

Leave A Reply

Your email address will not be published.