ಮದುವೆ, ಮುಂಜಿಗಳು ಇದ್ದರೆ ಹುಬ್ಬಳ್ಳಿ ಜಿಲ್ಲೆಯಲ್ಲಿ ಶಾಪಿಂಗ್ ಗೆ ಹೋಗಿ ಬಟ್ಟೆ ತರುವವರು ಜಾಸ್ತಿ. ಅದರಲ್ಲೂ ಏನಾದರೂ ಹೋಲ್ ಸೇಲಾಗಿ ತರಬೇಕೆಂದು ಅನಿಸಿದರೆ ಜನರು ಅಲ್ಲಿಯೇ ಹೋಗುತ್ತಾರೆ. ಕಾರಣ ಅಲ್ಲಿ ಬಹಳ ಚೆನ್ನಾಗಿ ಸಿಗುತ್ತದೆ. ಆದರೆ ನಾವು ಇಲ್ಲಿ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಸಿಗುವ ತಿಂಡಿ ತಿನಿಸುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿ ಅನೇಕ  ತಿನಿಸುಗಳ ಅಂಗಡಿಗಳು ಇವೆ. ಇವು ಬಹಳ ಸ್ವಾದಿಷ್ಟವಾಗಿರುತ್ತದೆ ಎಂದು ಹೇಳುತ್ತಾರೆ. ಅಲ್ಲಿಯ ಅಂಗಡಿಗಳ ಬಗ್ಗೆ  ಒಂದೊಂದಾಗೆ ನೋಡೋಣ.
ಮಂಜುನಾಥ್ ಸ್ಪೆಷಲ್ ಮಸಾಲಾ ಚುರುಮುರಿ:- ಇಲ್ಲಿ ಮಸಾಲಾ ಚುರುಮುರಿ ದೊರೆಯುತ್ತದೆ. ಇಲ್ಲಿ ಒಂದು ಪ್ಲೇಟ್ ಗೆ 30 ರೂಪಾಯಿಗಳು ಇರುತ್ತದೆ. ನಂತರ ಅಲ್ಲಿಯೇ ಹತ್ತಿರದಲ್ಲಿ ತಟ್ಟೆ ಇಡ್ಲಿ ಸ್ಟಾಲ್ ಇದೆ.ಇಲ್ಲಿ ಒಂದು ಪ್ಲೇಟ್ ಗೆ 20 ರೂಪಾಯಿಗಳು ಇರುತ್ತದೆ.

ನಂತರ ಮುಂದೆ ಹೋದರೆ ಪಾವ್ ಬಾಜಿ ಶಾಪ್ ಸಿಗುತ್ತದೆ.ಇಲ್ಲಿ ಒಂದು ಪ್ಲೇಟ್ ಗೆ 35 ರೂಪಾಯಿಗಳು ಇರುತ್ತದೆ.ಹಾಗೆಯೇ ಮುಂದೆ ಸಾಗಿದರೆ ಹಲವಾರು ಅಂಗಡಿಗಳು ಸಿಗುತ್ತವೆ. ಅಲ್ಲಿ ಮಾರುತಿ ಗೋಭಿ ಸೆಂಟರ್ ಇದೆ.ಇಲ್ಲಿ ಗೋಭಿ ಮಂಚೂರಿ ದೊರೆಯುತ್ತದೆ.ಇಲ್ಲಿ ಒಂದು ಪ್ಲೇಟ್ ಗೆ 30 ರೂಪಾಯಿಗಳು ಇರುತ್ತದೆ. ಹಾಗೆಯೇ ಮತ್ತೆ ಮುಂದೆ ಸಾಗಿದರೆ ಮಸಲಾದೋಸೆಯ ಅಂಗಡಿ ದೊರೆಯುತ್ತದೆ. ಇಲ್ಲಿ ಮಸಾಲಾದೋಸೆ ಸಿಗುತ್ತದೆ. ಇಲ್ಲಿ ಒಂದು ಪ್ಲೇಟ್ ಗೆ 30 ರೂಪಾಯಿಗಳು ಇರುತ್ತದೆ.

ಬಾಲಾಜಿ ಮಿಕ್ಸ್ ಐಸ್ಕ್ರೀಮ್ ಆಂಡ್ ಚಾಟ್ಸ್:- ಇಲ್ಲಿ ಪಾನಿಪುರಿ, ಮಸಾಲಾಪುರಿ, ಶೇವ್ ಪುರಿ,ದಹಿಪುರಿ,ಭೇಲ್ ಪುರಿ ದೊರೆಯುತ್ತದೆ. ಇಲ್ಲಿ ಒಂದು ಪ್ಲೇಟ್ ಗೆ 20 ರಿಂದ 30 ರೂಪಾಯಿಗಳು ಇರುತ್ತದೆ. ಗಡಬಡ್ ಐಸ್ಕ್ರೀಮ್ ಫಲುದಾ ಇಲ್ಲಿ ಒಂದು ಐಸ್ಕ್ರೀಮ್ ಗೆ 80 ರೂಪಾಯಿಗಳು ಇರುತ್ತದೆ.

ಇಡ್ಲಿ, ವಡಾ, ಪುರಿ ಸ್ಟಾಲ್ ಇದೆ. ಇಲ್ಲಿ ಒಂದು ಪ್ಲೇಟ್ ಗೆ 20 ರಿಂದ 50 ರೂಪಾಯಿಗಳು ಇರುತ್ತದೆ. ಮಿರ್ಚಿ ಮತ್ತು ದಾಲ್ ವಡಾ ಇಲ್ಲಿ ಒಂದು ಪ್ಲೇಟ್ ಗೆ 15 ರೂಪಾಯಿಗಳು ಇರುತ್ತದೆ. ರಾಜಸ್ತಾನಿ ಮತ್ತು ಗುಜರಾತಿ ಫುಡ್ಸ್, ದಾವಣಗೆರೆ ಬೆಣ್ಣೆದೋಸೆ ಇವೆಲ್ಲವೂ ದೊರೆಯುತ್ತದೆ.

Leave a Reply

Your email address will not be published. Required fields are marked *