ಗುಡಿ ಇಲ್ಲದಿದ್ದರು ನಂಬಿ ಬಂದ ಭಕ್ತರ ಹತ್ತಾರು ಬೇಡಿಕೆಗಳನ್ನು ಈಡೇರಿಸುವ ಕರ್ನಾಟಕದ ಏಕೈಕ ಗಣಪ

0 8,287

ನಾವು ನೋಡಿದಂತೆ ಎಲ್ಲ ದೇವಸ್ಥಾನಗಳಲ್ಲೂ ದೇವರನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ, ಆದರೆ ಸೌತಡ್ಕದಲ್ಲಿರುವ ಈ ಗಣಪತಿಯ ದೇವಾಲಯದಲ್ಲಿ ಗಣೇಶನು ಹಚ್ಚ ಹಸಿರಿನ ಬಯಲು ಆಲಯದಲ್ಲಿ ಪೂಜಿಸಲ್ಪಡುತ್ತಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಸುಪ್ರಸಿದ್ಧ ದೇವಾಲಯಗಳಿವೆ ಅದರಲ್ಲಿ ಈ ಸೌತಡ್ಕ ಶ್ರೀ ಗಣಪತಿ ದೇವಾಲಯವು ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸೌತಡ್ಕದಲ್ಲಿ ಈ ದೇವಸ್ಥಾನವಿದೆ.

ಈ ಸ್ಥಳದ ಹಿನ್ನಲೆಯ ಪ್ರಕಾರ ಸುಮಾರು 800 ವರ್ಷಗಳ ಹಿಂದೆ ರಾಜರು ಆಳ್ವಿಕೆ ನೆಡೆಸುತ್ತಿದ್ದ ಕಾಲದಲ್ಲಿ ರಾಜ ವಂಶಸ್ಥರಿಗೆ ಸೇರಿದ ದೇವಾಲಯವು ಇದ್ದು, ಈ ದೇವಾಲಯವು ಸಂಗ್ರಾಮವೊಂದರಲ್ಲಿ ನಾಶವಾಯಿತು. ಇದಾದ ಕೆಲವು ವರ್ಷಗಳ ನಂತರ ಹಸುವನ್ನು ಕಾಯುವ ಬಾಲಕರಿಗೆ ಈ ವಿಗ್ರಹವು ಕಾಣಿಸಿಕೊಂಡಿತ್ತು,

ಆ ಬಾಲಕರೆಲ್ಲರೂ ವಿಗ್ರಹವನ್ನೆತ್ತಿಕೊಂಡು ಈಗ ವಿಗ್ರಹವಿರುವ  ಜಾಗಕ್ಕೆ ತಂದು ಮರದ ಬುಡದಲ್ಲಿ ಕಲ್ಲುಗಳನ್ನು ಇಟ್ಟು ಗಣಪತಿಯ ಮೂರ್ತಿಯನ್ನು ಇಟ್ಟು ಸೌತೆ ಮಿಡಿಗಳನ್ನು  ಪ್ರತಿ ದಿನ ನೈವೇದ್ಯವಾಗಿ ಇಟ್ಟು ಪೂಜಿಸುತ್ತಾ ಬಂದರು ಅಂದಿನಿಂದ ಆ ಕ್ಷೇತ್ರವು ಸೌತಡ್ಕ ಗಣಪತಿ ಎಂದು ಹೆಸರುವಾಸಿ ಆಯಿತು. ಈ ಗಣೇಶನ ಆಲಯವು 24 ಗಂಟೆ ತೆರೆದೆ ಇರುತ್ತದೆ.

ಹಿಂದೆ ಇಲ್ಲಿನ ಸ್ಥಳಿಯ ಶ್ರೀಮಂತ ಬ್ರಾಹ್ಮಣರೊಬ್ಬರು ದೇವಾಲಯನ್ನು ಕಟ್ಟಬೇಕೆಂದು ನಿರ್ಧರಿಸಿದಾಗ, ಗಣಪತಿಯು  ಆ ಬ್ರಹ್ಮಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ದೇವಾಲಯವನ್ನು ನಿರ್ಮಿಸುವುದೆ ಆದರೆ ಅದರ ಗೋಪುರವನ್ನು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿ ಹಾಗೆ ಅದು ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣಿಸುವಷ್ಟು ಎತ್ತರದಲ್ಲಿರಬೇಕು ಎಂದು ಆಜ್ಞೆಯನ್ನು ನೀಡಿದನಂತೆ, ಆದರೆ ಈ ಕೆಲಸ ಅಸಾದ್ಯವೆಂದು ಅರಿತ ಆ ಬ್ರಾಹ್ಮಣ ದೇವಾಲಯ ಕಟ್ಟುವ ಯೋಜನೆಯನ್ನು ಕೈ ಬಿಟ್ಟರು.

ಈ ದೇವಾಲಯದ ಆವರಣದಲ್ಲಿ ಕಟ್ಟಿರುವ ಗಂಟೆಗಳ ಸಾಲು ಇಲ್ಲಿನ ವಿಶೇಷ ಮಹಿಮೆಯನ್ನು ಸಾರುತ್ತದೆ. ಯಾರೇ ಇಲ್ಲಿಗೆ ಬಂದು ತಮ್ಮ ಆಸೆ, ಇಷ್ಟಾರ್ಥಗಳನ್ನು  ಭಕ್ತಿಯಿಂದ ಕೇಳಿಕೊಂಡರೆ ಸಾಕು ಎರಡು ತಿಂಗಳೊಳಗೆ ಅವರು ಬೇಡಿಕೊಂಡಿದ್ದು  ಈಡೇರಿತ್ತದೆ. ಇದಾದ ನಂತರ ಇಲ್ಲಿ ಬಂದು ಗಂಟೆಯನ್ನು ಹರಕೆಯ ರೂಪದಲ್ಲಿ ಕಟ್ಟಬೇಕು. ಹೀಗೆ ಭಕ್ತರು ಕಟ್ಟಿದ ಸಾವಿರಾರು ಗಂಟೆಗಳು ಗಣೇಶನ ಅನುಗ್ರಹಕ್ಕೆ ಸಾಕ್ಷಿಯಾಗಿವೆ. ವಿದ್ಯೆ, ಹಣದ ಸಮಸ್ಯೆ, ಮನೆ ಕಟ್ಟುವ ಆಸೆ, ಸಂತಾನ ಭಾಗ್ಯ, ಕುಟುಂಬ ಕಲಹ, ಹೀಗೆ ತಮ್ಮ ಕಷ್ಟಗಳನ್ನು ಈ ಗೌರಿತನಯನ ಮುಂದೆ ಹೇಳಿಕೊಂಡರೇ ಸಾಕು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಈ ಸೌತಡ್ಕ ಗಣಪತಿಗೆ ಇದೆ.

ಈ ಗಣಪತಿಯ ಬಯಲು ಆಲಯದಲ್ಲಿ ಬಿರುಗಾಳಿ, ಮಳೆ ಬಂದರೂ ಗಣೇಶನಿಗೆ ಆರತಿ ಮಾಡುವಾಗ ದೀಪವೂ ಆರುವುದಿಲ್ಲ, ಇಲ್ಲಿನ ಪ್ರಸಿದ್ಧ ಸೇವೆಗಳಲ್ಲಿ ಅವಲಕ್ಕಿ, ಬೆಲ್ಲ, ಎಳ್ಳು, ಜೇನುತುಪ್ಪ, ಹಾಗೂ ಬಾಳೆಹಣ್ಣು ಹಾಕಿ ಮಾಡುವ ಪಂಚ ಕಜ್ಜಾಯ  ಸೇವೆಯು ಒಂದು. 800 ವರ್ಷ ಹಳೆಯದಾದ ಈ ಗಣಪತಿಯ ಮೂರ್ತಿ ಕಪ್ಪು ಶಿಲೆಯಿಂದ ಮಾಡಿದ್ದಾಗಿದೆ,

ಹಾಗೂ ಗಣಪತಿಯ ಮೂರ್ತಿಯೊಂದಿಗೆ ಸಿದ್ಧಿ ಬುದ್ದಿಯ ಮೂರ್ತಿಯೂ ಗಣೇಶನ ಎಡ ಬಲದಲ್ಲಿದೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಈ ಬಯಲು ಗಜಾನನನ ಆಲಯದಲ್ಲಿ ಮಹಾಪೂಜೆ ನೆಡೆಯುತ್ತದೆ. ಹಾಗೂ ಸಂಕಷ್ಟಿಯಂದು ಮತ್ತು ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾವಿರಾರು ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಹಚ್ಚ ಹಸಿರಿನಿಂದ ಕೂಡಿದ ಈ ತಂಪಾದ ವಾತಾವರಣವು ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳ ಮನಸ್ಸಿಗೆ ನೆಮ್ಮದಿ ನೀಡುತ್ತದೆ.

Leave A Reply

Your email address will not be published.