ಮೊಟ್ಟೆಯನ್ನು ದಿನಾಲೂ ತಿನ್ನುವುದರಿಂದ ದೇಹಕ್ಕೆ ಪ್ರೊಟೀನ್ ಸಿಗುತ್ತದೆ. ಭಾನುವಾರವಿರಲಿ, ಸೋಮವಾರವಿರಲಿ, ಪ್ರತಿದಿನ ಮೊಟ್ಟೆ ತಿನ್ನಿ, ಈ ಘೋಷಣೆ ದಶಕಗಳಿಂದ ಕೇಳಿಬರುತ್ತಿದೆ. ಪ್ರಪಂಚದಾದ್ಯಂತ ಜನರು ಮೊಟ್ಟೆಗಳನ್ನು ಸೇವಿಸುತ್ತಾರೆ. ಜಿಮ್ ಗೆ ಹೋಗುವವರಿಗೆ ಮೊಟ್ಟೆಗಳು ಹೆಚ್ಚು ಆದ್ಯತೆ ನೀಡುವ ಆಹಾರವಾಗಿದೆ. ಮೊಟ್ಟೆ ಸುಲಭವಾಗಿ ದೊರೆಯುವ ಆಹಾರವಾಗಿದೆ. ಅವು ಇತರ ಪ್ರೋಟೀನ್ ಮೂಲಗಳಿಗಿಂತ ತುಂಬಾ ಅಗ್ಗವಾಗಿವೆ. ಆದರೆ, ಮೊಟ್ಟೆ ತಿನ್ನುವ ಮುನ್ನ ಅದರಲ್ಲಿ ಪ್ರೊಟೀನ್ ಇದೆಯೇ ಇಲ್ಲವೇ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಮೊಟ್ಟೆಯಲ್ಲಿ ಎಷ್ಟು ಪ್ರೋಟೀನ್ ಇದೆ ಎಂದು ಅದರ ಬಣ್ಣದಿಂದಲೇ ಪತ್ತೆ ಹಚ್ಚಬಹುದು ಅದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರೋಟೀನ್‌ನ ಹೊರತಾಗಿ, ಮೊಟ್ಟೆಯು ಇನ್ನೂ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ತಿನ್ನುವ ಮುನ್ನ ಅದರಲ್ಲಿ ಪ್ರೊಟೀನ್ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅತ್ಯಗತ್ಯ. ಮೊಟ್ಟೆ ತಿನ್ನುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಮೊಟ್ಟೆಯನ್ನು ತಿನ್ನುವುದರಿಂದ ಪ್ರಯೋಜನಗಳು ಲಭ್ಯವಾಗುವುದು ಮೊಟ್ಟೆ ಆರೋಗ್ಯವಾಗಿದ್ದಾಗ ಮಾತ್ರ. ಮೊಟ್ಟೆ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಒಳಗಿನ ಹಳದಿ ಲೋಳೆಯ ಬಣ್ಣವು ತಿಳಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯ ಬಣ್ಣವನ್ನು ನೋಡಿ, ಮೊಟ್ಟೆ ಇಟ್ಟಿರುವುದು ಆರೋಗ್ಯವಂತ ಕೋಳಿಯೇ ಅಥವಾ ಅನಾರೋಗ್ಯಕರ ಕೋಳಿಯೇ ಎಂದು ನೀವು ಸುಲಭವಾಗಿ ತಿಳಿಯಬಹುದು. 

ವಾಸ್ತವವಾಗಿ ಮೊಟ್ಟೆಗಳಲ್ಲಿ ಒಂದಲ್ಲ ಎರಡಲ್ಲ ಅನೇಕ ಪೋಷಕಾಂಶಗಳು, ವಿಟಮಿನ್ ಗಳು ಮತ್ತು ಖನಿಜಗಳಿವೆ. ಮೊಟ್ಟೆಗಳಲ್ಲಿ ಪ್ರೋಟೀನ್, ವಿಟಮಿನ್ ಎ, ಬಿ6, ಬಿ12, ಪ್ರೋಟೀನ್, ಅಮೈನೋ ಆಮ್ಲಗಳು, ಸೆಲೆನಿಯಂ ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳಂತಹ ಗುಣಲಕ್ಷಣಗಳಿವೆ. ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊಟ್ಟೆಗಳನ್ನು ಬಾಯ್ಲ್ಡ್, ಆಮ್ಲೆಟ್ ಗಳು, ಅರ್ಧ ಫ್ರೈಗಳು ಮತ್ತು ಬುರ್ಜಿ ಮೂಲಕ ಸಹ ಸೇವಿಸಬಹುದು. ಆದರೆ, ಮೊಟ್ಟೆ ತಿನ್ನುವ ಮುನ್ನ ಅದರಲ್ಲಿ ಪ್ರೊಟೀನ್ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅತ್ಯಗತ್ಯ. 

ಅದಕ್ಕೂ ಮೊದಲು ಸಂಕ್ಷಿಪ್ತವಾಗಿ ಮೊಟ್ಟೆಯ ಪ್ರಯೋಜನಗಳು ಏನೆಲ್ಲಾ ಇವೆ ಎನ್ನುವುದನ್ನು ನೋಡೋಣ. ಮೊಟ್ಟೆಗಳು ಆರೋಗ್ಯಕ್ಕೆ ತುಂಬಾ ಆರೋಗ್ಯಕರ ಆಹಾರವಾಗಿದೆ. ಮೊಟ್ಟೆಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಈ ಕೆಳಗಿನಂತಿವೆ.  ಮೊಟ್ಟೆಯು ಪ್ರೋಟೀನ್ ಭರಿತ ಆಹಾರವಾಗಿದೆ, ಇದು ಸ್ನಾಯುಗಳಿಗೆ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುತ್ತದೆ. ಮೊಟ್ಟೆಯಲ್ಲಿ 9 ರೀತಿಯ ಅಮೈನೋ ಆಸಿಡ್ ಗಳಿವೆ.

ಇವು ಸ್ನಾಯುಗಳಲ್ಲಿ ಹಾನಿಯುಂಟಾಗಿದ್ದರೆ ಅವುಗಳನ್ನು ಸರಿಪಡಿಸಿ ಸ್ನಾಯುಗಳನ್ನು ಬಲಪಡಿಸುತ್ತದೆ. ಪ್ರತಿ ಮೊಟ್ಟೆಯಲ್ಲಿ 9ಗ್ರಾಂ ಪ್ರೊಟಿನ್ ದೊರೆಯುತ್ತದೆ. ಮೊಟ್ಟೆಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ, ಇದು ಹೃದಯ ಕಾಯಿಲೆಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೊಟ್ಟೆಗಳಲ್ಲಿ ಕೋಲೀನ್ ಎಂಬ ಪೋಷಕಾಂಶವೂ ಇದೆ. ಹೆಚ್ಚಿನ ಜನರಲ್ಲಿ ಇದರ ಕೊರತೆ ಕಂಡು ಬರುತ್ತದೆ. ಈ ಪೋಷಕಾಂಶವು ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮೊಟ್ಟೆ ತಿನ್ನುವುದರಿಂದ ಕಣ್ಣುಗಳು ಕೂಡ ಆರೋಗ್ಯವಾಗುತ್ತವೆ.

ಏಕೆಂದರೆ, ಇದು ಕಣ್ಣುಗಳಿಗೆ ಪ್ರಯೋಜನಕಾರಿಯಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಮೊಟ್ಟೆಗಳನ್ನು ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಏಕೆಂದರೆ, ಮೊಟ್ಟೆಯ ಸೇವನೆಯಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ ಮತ್ತು ಅನಾರೋಗ್ಯಕರ ಆಹಾರದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮಾರುಕಟ್ಟೆಯಲ್ಲಿ ವಿವಿಧ ಸ್ಥಳಗಳಲ್ಲಿ ವಿವಿಧ ಬೆಲೆಯ ಮೊಟ್ಟೆಗಳು ಇರುತ್ತವೆ. ವಾಸ್ತವವಾಗಿ, ಮೊಟ್ಟೆಗಳ ಗುಣಮಟ್ಟವು ಈ ವಿಭಿನ್ನ ಬೆಲೆಗಳ ಹಿಂದಿನ ಕಾರಣವಾಗಿದೆ. ನೀವು ಮೊಟ್ಟೆಯನ್ನು ಒಡೆದಾಗ, ಅದರೊಳಗಿನ ಹಳದಿ ಲೋಳೆಯು ಮುಖ್ಯವಾಗಿ ಮೂರು ವಿಧಗಳಾಗಿರಬಹುದು. ಕಿತ್ತಳೆ, ತಿಳಿ ಕಿತ್ತಳೆ ಅಥವಾ ಹಳದಿ. ಈ ಪೈಕಿ, ಕಿತ್ತಳೆ ಹಳದಿ ಲೋಳೆಯೊಂದಿಗೆ ಮೊಟ್ಟೆಯು ಹೆಚ್ಚು ಆರೋಗ್ಯಕರವಾಗಿ ಇರುತ್ತದೆ ಮತ್ತು ಅದರಲ್ಲಿ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಪ್ರಮಾಣವು ಅಧಿಕವಾಗಿರುತ್ತದೆ.

ಆದರೆ ಮೊಟ್ಟೆಯ ಈ ಹಳದಿ ಲೋಳೆಯಲ್ಲಿ ಯಾಕೆ ವ್ಯತ್ಯಾಸವಿದೆ? ಎನ್ನುವುದನ್ನೂ ತಿಳಿದುಕೊಳ್ಳೋಣ. ನೈಸರ್ಗಿಕ ಪರಿಸರದಲ್ಲಿ ಬೆಳೆಸುವ ಕೋಳಿಗಳು ಇತರ ಕೋಳಿಗಳಿಗಿಂತ ಹೆಚ್ಚು ಆರೋಗ್ಯಕರ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕೋಳಿಗಳು ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕು, ಕೀಟಗಳು ಇತ್ಯಾದಿ ಸಮತೋಲಿತ ಆಹಾರವನ್ನು ಪಡೆಯುತ್ತವೆ. ಈ ಕೋಳಿಗಳ ಮೊಟ್ಟೆಯ ಹಳದಿ ಲೋಳೆಯು ಕಿತ್ತಳೆ ಬಣ್ಣದಲ್ಲಿರುತ್ತದೆ. ಇದಲ್ಲದೆ, ತಿಳಿ ಕಿತ್ತಳೆ ಬಣ್ಣದ ಹಳದಿ ಲೋಳೆಯೊಂದಿಗೆ ಮೊಟ್ಟೆಯು ಸ್ವಲ್ಪ ಆರೋಗ್ಯಕರವಾಗಿ ಕೂಡಾ ಇರುತ್ತದೆ. ಆದಾಗಿಯೂ ಸಹ ಹಳದಿ ಲೋಳೆ ಹೊಂದಿರುವ ಮೊಟ್ಟೆಗಳು ಅನಾರೋಗ್ಯ ಅಥವಾ ಅನಾರೋಗ್ಯಕರ ಕೋಳಿಗಳಿಂದ ಮೊಟ್ಟೆಗಳಾಗಿರಬಹುದು.

Leave a Reply

Your email address will not be published. Required fields are marked *