ನೀರು ನಮ್ಮ ದೇಹಕ್ಕೆ ತುಂಬಾ ಅಗತ್ಯವಾಗಿ ಬೇಕಾಗಿರುವಂತದ್ದು ಅದನ್ನು ಅಮೃತ ಎಂದು ಕೂಡ ಕರೆಯಲಾಗುತ್ತದೆ ಹಾಗಾದರೆ ನೀರನ್ನು ಎಷ್ಟು ಕುಡಿಯಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ ಕೆಲವರು ಮೂರು ಲೀಟರ್ ಕುಡಿಯಬೇಕು ಎಂದು ಹೇಳುತ್ತಾರೆ ಕೆಲವರು ಹೇಳುತ್ತಾರೆ ನಾಲ್ಕು ಲೀಟರ್ ಕುಡಿಯಬೇಕು ಎಂದು ಇನ್ನು ಕೆಲವರು ಎರಡು ಲೀಟರ್ ಕುಡಿದರೆ ಸಾಕು ಎಂದು ಹೇಳುತ್ತಾರೆ

ಆದರೆ ಇದು ನಿಮ್ಮ ದೇಹದ ತೂಕ ಎತ್ತರ ಮತ್ತು ನಿಮ್ಮ ವಯಸ್ಸಿಗೆ ಸರಿಹೊಂದುವುದಿಲ್ಲ. ನೀವು ವಿಸರ್ಜನೆ ಮಾಡುವಂತಹ ಮೂತ್ರದ ಪ್ರಮಾಣ ನೀವು ಕುಡಿಯುತ್ತಿರುವಂತಹ ನೀರು ನಿಮ್ಮ ದೇಹಕ್ಕೆ ಸರಿಯಾಗಿದೆಯೆ ಇಲ್ಲ ಎಂಬುದನ್ನು ತಿಳಿಸಿಕೊಡುತ್ತದೆ.

ಯೋಗ ಶಾಸ್ತ್ರದ ಪ್ರಕಾರ ಒಂದು ದಿನಕ್ಕೆ ಆರು ಸಲ ಮೂತ್ರ ವಿಸರ್ಜನೆಯನ್ನು ಮಾಡಿದರೆ ನೀವು ಸೇವಿಸುವ ನೀರು ನಿಮ್ಮ ದೇಹಕ್ಕೆ ಸರಿಯಾಗಿದೆ ಎಂದು ಅರ್ಥ. ಇದರ ಜೊತೆಗೆ ದಿನಕ್ಕೆ ಮೂರು ಸಲ ಮಲವಿಸರ್ಜನೆ ಆದರೂ ಯಾವುದೇ ರೀತಿಯ ತೊಂದರೆ ಇಲ್ಲ. ಇನ್ನು ನೀವು ವಿಸರ್ಜನೆ ಮಾಡುವ ಮೂತ್ರದ ಬಣ್ಣ ಹಳದಿಯಾಗಿ ಇರಬಾರದು ಬಿಳಿಯಾಗಿ ಇರಬಾರದು ನೀರಿನ ರೀತಿಯಲ್ಲಿಯೂ ಇರಬಾರದು. ಗಾಢವಾದ ಹಳದಿಬಣ್ಣ ಬಂದರೆ ಲಿವರ್ ನಲ್ಲಿ ಏನೊ ತೊಂದರೆ ಇದೆ ಎಂದರ್ಥ.

ಒಂದು ವೇಳೆ ಬಿಳಿ ಬಣ್ಣ ಹೋಗುತ್ತಿದ್ದರೆ ಅದರಲ್ಲಿ ಪ್ರೋಟೀನ್ಸ್ ಹೋಗುತ್ತಿದೆ ಎಂದು ಅರ್ಥ ಅದರಲ್ಲಿ ಸೇಮೆನ್ ಹೋಗುತ್ತಿದೆ ಎಂದು ನೀವು ತಿಳಿದುಕೊಳ್ಳಬೇಕು. ಬರೀ ನೀರಿನ ರೀತಿಯಲ್ಲಿ ಹೋಗುತ್ತಿದೆ ಎಂದರೆ ಕಿಡ್ನಿ ನೀರನ್ನು ಫಿಲ್ಟರ್ ಮಾಡುತ್ತಿಲ್ಲ ಕುಡಿದ ನೀರನ್ನು ಹಾಗೆ ಕಳಿಸುತ್ತಿದೆ ಎಂದರ್ಥ.

ಹಾಗಾದರೆ ಮೂತ್ರದ ಬಣ್ಣ ಯಾವುದು ಎಂದರೆ ಒಣಗಿದ ಹುಲ್ಲಿನ ಬಣ್ಣದಲ್ಲಿ ಇರಬೇಕು ಈ ಕಡೆ ಹಳದಿನು ಅಲ್ಲ ಈ ಕಡೆ ಬಿಳಿ ಬಣ್ಣವು ಅಲ್ಲ. ಅದರ ಮಧ್ಯದ ಬಣ್ಣ ಒಣಗಿರುವ ಹುಲ್ಲಿನ ಬಣ್ಣ ಬಂತು ಎಂದರೆ ನೀವು ಕುಡಿಯುತ್ತಿರುವ ನೀರು ನಿಮ್ಮ ದೇಹಕ್ಕೆ ಸರಿಯಾಗಿದೆ ಎಂದು ಅರ್ಥ. ಹಾಗಾದರೆ ಯಾವಾಗ ನೀರು ಕುಡಿಯಬೇಕು ಎಂಬುದರ ಬಗ್ಗೆ ತುಂಬಾ ಜನರಿಗೆ ಗೊಂದಲ ಇದೆ.

ಆಯುರ್ವೇದದಲ್ಲಿನ ಆಚಾರ್ಯರಾದ ವಾಗ್ಭಟರು ಹೇಳುವ ಪ್ರಕಾರ ಊಟದ ನಂತರ ತಕ್ಷಣ ನೀರನ್ನು ಕುಡಿದರೆ ಅದು ವಿಷವಾಗಿ ಪರಿಣಾಮ ಉಂಟುಮಾಡುತ್ತದೆ. ನಿಮಗೆಲ್ಲರಿಗೂ ಆಶ್ಚರ್ಯವಾಗಬಹುದು ಯಾಕೆಂದರೆ ಎಲ್ಲರೂ ಕೂಡ ಊಟವಾದ ತಕ್ಷಣ ನೀರನ್ನು ಸೇವಿಸುತ್ತಾರೆ ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ದೇಹಕ್ಕೆ ಶಕ್ತಿ ದೊರೆಯುವುದಿಲ್ಲ ಸಪ್ತಧಾತುಗಳ ಪೋಷಣೆ ಆಗುವುದಿಲ್ಲ.

ಆಗ ಎಲ್ಲಾ ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭಿಸುತ್ತವೆ. ಹಾಗಾಗಿ ಊಟವಾದ ತಕ್ಷಣ ನೀರನ್ನು ಕುಡಿಯಬಾರದು. ಜೀರ್ಣಕ್ರಿಯೆ ಪೂರ್ಣವಾದಾಗ ನೀರನ್ನು ಕುಡಿದರೆ ಅದು ಅಮೃತವಾಗಿ ಪರಿಣಾಮವನ್ನು ಉಂಟುಮಾಡುತ್ತದೆ. ಅಮೃತವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದಿದ್ದರೆ ಅದು ವಿಷವಾಗುತ್ತದೆ. ವಿಷವನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡಾಗ ಅದನ್ನು ಅಮೃತವನ್ನಾಗಿ ಕೂಡ ಮಾಡಬಹುದು.

ಹಾಗಾಗಿ ಊಟವಾದ ತಕ್ಷಣ ನೀರನ್ನು ಕುಡಿಯದೇ ಎರಡು-ಮೂರು ತಾಸುಗಳ ನಂತರ ನೀರನ್ನು ಕುಡಿಯಬೇಕು ದಿನಕ್ಕೆ ಆರು ಸಾರಿ ಮೂತ್ರ ವಿಸರ್ಜನೆ ಮಾಡಿದರೆ ನೀವು ಕುಡಿಯುವ ನೀರು ನಿಮ್ಮ ದೇಹಕ್ಕೆ ಸರಿಯಾಗಿದೆ ಎಂದು ಅರ್ಥ. ನೀವು ಕೂಡ ನಿಮ್ಮ ದೇಹಕ್ಕೆ ಬೇಕಾಗುವಷ್ಟು ನೀರನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.

Leave a Reply

Your email address will not be published. Required fields are marked *