ಶರೀರದ ಮೇಲಿನ ನರುಳ್ಳೆ ಸಮಸ್ಯೆ ನಿವಾರಿಸುವ ಉತ್ತಮ ಮನೆಮದ್ದು ಇಲ್ಲಿದೆ

0 34

ನರುಳ್ಳೆ/ ನರಹುಲಿ ಗೆ ಸುಲಭವಾದ ಮನೆ ಮದ್ದು ತಿಳಿಯೋಣ.ನರಹುಲಿ ಸಮಸ್ಯೆ ಪ್ರತಿಯೊಬ್ಬರಿಗೂ ಇರುತ್ತದೆ  ಎಂದು ಹೇಳಿದರು ತಪ್ಪಾಗುವುದಿಲ್ಲ, ಈ ನರಹುಲಿಯನ್ನು ನರುಳ್ಳೆ ಎಂದು ಕೂಡ ಕರೆಯಲಾಗುತ್ತದೆ. ನರಹುಲಿ ನಮ್ಮ ದೇಹದ ಕೆಲವು ಭಾಗ ಕಾಣಿಸಿಕೊಳ್ಳುತ್ತದೆ, ಇನ್ನು ನಮ್ಮ ಕಾಲು ಮತ್ತು ಬೆನ್ನಿನ ಭಾಗದಲ್ಲಿ ಈ ನರುಳ್ಳೆ ಕಾಣಿಸಿಕೊಂಡರೆ ಹೆಚ್ಚಾಗಿ ತಲೆ ಕೆಡಸಿಕೊಳ್ಳವುದಿಲ್ಲಾ ಆದರೆ  ಕೈಗೆ, ಕಿವಿ ಹತ್ತಿರ, ಕುತ್ತಿಗೆಯ ಭಾಗಕ್ಕೆ, ಹಾಗೆ ಮೂಗಿನ ಮೇಲೆ ಕಾಣಿಸಿ ಕೊಂಡರೆ ನಮಗೆ ಅದು ದೊಡ್ಡ ತೊಂದರೆಯಾಗಿ ಕಾಣಿಸುತ್ತದೆ.

ಈ ನರುಳ್ಳೆ ಗುಳ್ಳೆಯನ್ನು ನರವಲಿ,ನರುಳಿ,ಚಿಮುಕಲು, ನುಚ್ಚಿನಗುಳ್ಳೆ, ಪುಲ್ಫರಿಗುಳ್ಳೆ, ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ತುಳುವಿನಲ್ಲಿ ಕೆಡು ಎಂದು ಕರೆಯುತ್ತಾರೆ. ಹಾಗೆ ಆಂಗ್ಲ ಭಾಷೆಯಲ್ಲಿ  ಸ್ಕೀನ್ ಟ್ಯಾಗ್ (wrat) ಎಂದು ಕರೆಯುತ್ತಾರೆ.

ನರುಳ್ಳೆ ಭಯ ಪಡುವಂತಹ ರೋಗವೇನು ಅಲ್ಲಾ  ಅದರೆ ಇದು ಬಂದರೆ  ತ್ವಚೆ ಸೌಂದರ್ಯ ಹಾಳಾಗುವುದು. ಇದನ್ನು ಹೋಗಲಾಡಿಸಲು ಸರಳ ಮನೆ ಮದ್ದನ್ನು ಉಪಯೋಗಿಸಿ. ಅದನ್ನ ತಯಾರಿಸುವ ವಿಧಾನ ಈ ಕೆಳಗಿನಂತಿದೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನಿಂಬೆ ಹಣ್ಣು ಹಾಗೂ ಬೇಕಿಂಗ್ ಸೋಡಾ ಇದ್ದೇ ಇರುತ್ತದೆ. ಈ ನಿಂಬೆ ಹಣ್ಣಿನ ರಸದ ಜೊತೆ ಬೇಕಿಂಗ್ ಸೋಡಾ ವನ್ನು ಮಿಕ್ಸ್ ಮಾಡಿ ನರಹುಲಿ ಆದಂತಹ ಭಾಗಕ್ಕೆ ಹಚ್ಚಿ  ಮಸಾಜ್ ಮಾಡಿ ಸ್ವಲ್ಪ ಸಮಯದ ನಂತರ ಉಗುರು ಬೆಚ್ಚಗಿನ ಬಿಸಿ ನೀರಿನಿಂದ ಅದನ್ನು ತೊಳೆದುಕೊಳ್ಳಬೇಕು. ಈ ರೀತಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಕೆಲವು ದಿನಗಳಲ್ಲಿ ಆ ಗಂಟು ಅಥಾವ ನರಹುಲಿ/ ನರುಳ್ಳೆ ಎನ್ನುವುದು ನಿಮ್ಮ ಚರ್ಮದಿಂದ ದೂರವಾಗುತ್ತದೆ.

ಅಥಾವ ತಾಂಬೂಲ ಜಗಿಯಲು ಬಳಸುವ ಸುಣ್ಣ ಅರ್ಧ ಚಮಚ ತೆಗೆದುಕೊಳ್ಳಿ, ಅದಕ್ಕೆ ಅರ್ಧ ಚಮಚ ಕೋಲ್ಗೇಟ್ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ನಂತರ ನರುಳ್ಳೆ ಆಗಿರುವಂತಹ ಭಾಗಕ್ಕೆ ಹಚ್ಚಿ 15 ಗಂಟೆ ಬಿಡಿ, ನಂತರ ನೋಡಿದರೆ ನರುಳ್ಳೆ ಮಾಯವಾಗಿರುತ್ತದೆ. ಸುಣ್ಣ ಮತ್ತು ಕೋಲ್ಗೇಟ್ ಹಚ್ಚಿದಾಗ ಮೊದಲು ಸ್ವಲ್ಪ ಉರಿ ಅನಿಸಿದರೂ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಮುಖಕ್ಕೆ ಹಾಕಿದರೆ ಕಲೆ ಬೀಳಬಹುದು ಆದರೆ, ಆ ಕಲೆ ಸ್ವಲ್ಪ ದಿನಗಳ ಬಳಿಕ ಇಲ್ಲವಾಗುವುದು

ಅಥಾವ ಇನ್ನೊಂದು ಸುಲಭವಾದ ಮನೆ ಮದ್ದು ಯಾವುದೆಂದರೆ,, ಅದಕ್ಕೆ ಬೇಕಾದ ಪದಾರ್ಥಗಳು ಈರುಳ್ಳಿ ಮತ್ತು ಕೊಬ್ಬರಿ ಎಣ್ಣೆ. ಇದನ್ನು ತಯಾರಿಸುವುದು ಹೇಗೆ ಅಂದರೆ ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು, ನಂತರ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸ್ವಲ್ಪ ಬೆಚ್ಚಗೆ ಮಾಡಿ ಅದನ್ನು ನರುಳ್ಳೆ ಆದಂತಹ ಭಾಗಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳುತ್ತಾ ಸುಮಾರು ಎರಡು ಗಂಟೆಗಳ ಬಳಿಕ ಇದನ್ನು ತೊಳೆದುಕೊಳ್ಳುವುದರಿಂದ  ಈ ಸಮಸ್ಯೆ ಬೇಗನೆ ಪರಿಹಾರಗೊಳ್ಳುತ್ತದೆ.

Leave A Reply

Your email address will not be published.