ರೈತರಿಗೆ ಸೋಲಾರ್ ಪಂಪ್ ಸೆಟ್ ಪಡೆಯಲು 80% ಸಹಾಯಧನ, ಈ ರೀತಿ ಅರ್ಜಿ ಸಲ್ಲಿಸಿ

0 45

ಮಳೆ ಇಲ್ಲದ ಕಾಲದಲ್ಲಿ, ರೈತರ ಸಹಾಯಕ್ಕೆ ಬರುವುದೇ ಪಂಪ್ ಸೆಟ್. ಅದರಿಂದ, ಬೆಳೆಗೆ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ. ಈವಾಗ ಸೋಲಾರ್ ಪಂಪ್ ಸೆಟ್ ಅಡವಳಿಕೆ ಮಾಡಲು ಸರ್ಕಾರದಿಂದ 80% ಸಹಾಯಧನ ನೀಡಲಾಗುವುದು. ಅದಕ್ಕೆ, ಅರ್ಜಿ ಸಲ್ಲಿಕೆ ಮಾಡುವ ವಿಧಾನ ಯಾವೆಲ್ಲ ದಾಖಲೆಗಳು ಬೇಕು ಎನ್ನುವುದನ್ನು ನೋಡೋಣ.

ಪಂಪ್ ಸೆಟ್’ಗೆ 50% ರಾಜ್ಯ ಮತ್ತು ಕರ್ನಾಟಕ ಸರ್ಕಾರ ನೀಡಿದರೆ, 30% ಕೇಂದ್ರ ಸರ್ಕಾರ ಕೊಡುತ್ತದೆ. ಇನ್ನು ಉಳಿದ 20% ರೈತರು ಹೂಡಿಕೆ ಮಾಡಬೇಕು. ಈ ಸೋಲಾರ್ ಪಂಪ್ ಸೆಟ್’ಗಳನ್ನು ತೆರೆದ ಬಾವಿ ಇಲ್ಲ ಕೊರೆದ ಬಾವಿ (ಕೊಳವೆ ಬಾವಿ) ಯಲ್ಲಿ ಅಡವಳಿಸಬೇಕು.

ಸಹಾಯ ಧನ ಪಡೆಯಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಗವರ್ನಮೆಂಟ್ ಸೂಚನೆ ಮೇರೆಗೆ ಅರ್ಜಿ ಸಲ್ಲಿಸಬೇಕು. Souramitra.com ಎನ್ನುವ ವೆಬ್ಸೈಟ್’ಗೆ ಭೇಟಿ ನೀಡಬೇಕು. https://souramitra.com/solar/beneficiary/register/Kusum-Yojana-Component-B ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ( ಮೋಸ ಮಾಡುವ ಜಾಲತಾಣಗಳು ಇವೆ ಎಚ್ಚರಿಕೆ ವಹಿಸಬೇಕು. )

ಈ ಯೋಜನೆ 2019ರಲ್ಲಿ ಜಾರಿಗೆ ಬಂದಿರೋದು ಮತ್ತು 40,000 ಪಂಪ್ ಸೆಟ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದನ್ನು ಕುಸುಮ್ ಬಿ ಯೋಜನೆ ಎಂದು ಕೂಡ ಕರೆಯುವರು. ಯಾರಿಗೆ ಮೊದಲ ಆದ್ಯತೆ ತಿಳಿಯೋಣ. UNIP ಯೋಜನೆಯ ಅಡಿಯಲ್ಲಿ ₹10,000 ಮೊತ್ತವನ್ನು ಸಕ್ರಮವಾಗಿ ಪಾವತಿ ಮಾಡಿರಬೇಕು ಹಾಗೆ ಅರ್ಜಿ ರಿಜಿಸ್ಟರ್ ಮಾಡಿರಬೇಕು. ಯಾರು ಮೊದಲು ನೋಂದಾವಣೆ ಮಾಡಿಕೊಳ್ಳುವರೋ ಅವರಿಗೆ ಮೊದಲ ಆದ್ಯತೆ. ತೆರೆದ/ಕೊರೆದ ಬಾವಿಯಿಂದ ಪರಿವರ್ಧಕ ( transformer ) ಕೇಂದ್ರದಿಂದ 500 ಮೀಟರ್’ಗಿಂತ ಹೆಚ್ಚು ದೂರದಲ್ಲಿ ಇರುವವರಿಗೆ ಮೊದಲ ಆದ್ಯತೆ.

    2  ರೈತರು ಅನಧಿಕೃತ ಪಂಪ್ ಸೆಟ್’ಗಳನ್ನು ಸಕ್ರಮಗೊಳಿಸುವ UNIP ಯೋಜನೆಯ ಅಡಿಯಲ್ಲಿ ₹50 ಅರ್ಜಿ ಶುಲ್ಕ ಪಾವತಿ ಮಾಡಿರಬೇಕು ಮತ್ತು ಅರ್ಜಿ ರಿಜಿಸ್ಟರ್ ಮಾಡಿರಬೇಕು. ಯಾರು ಮೊದಲು ನೋಂದಾವಣೆ ಮಾಡಿಕೊಳ್ಳುವರೋ ಅವರಿಗೆ ಮೊದಲ ಆದ್ಯತೆ. ತೆರೆದ/ಕೊರೆದ ಬಾವಿಯಿಂದ ಪರಿವರ್ಧಕ ( transformer ) ಕೇಂದ್ರದಿಂದ 500 ಮೀಟರ್’ಗಿಂತ ಹೆಚ್ಚು ದೂರದಲ್ಲಿ ಇರುವವರಿಗೆ ಮೊದಲ ಆದ್ಯತೆ.

    1. ಹೊಸದಾಗಿ ನೋಂದಾಣಿ ಮಾಡಿಕೊಳ್ಳುವ ರೈತರು. ತೆರೆದ/ಕೊರೆದ ಬಾವಿಯಿಂದ ಪರಿವರ್ಧಕ (transformer) ಕೇಂದ್ರದಿಂದ 500 ಮೀಟರ್’ಗಿಂತ ಹೆಚ್ಚು ದೂರದಲ್ಲಿ ಇರಬೇಕು ,20% ಹಣವನ್ನು ಯಾರು ಪಾವತಿ ಮಾಡಿರುವರೋ ಅವರಿಗೆ ಮತ್ತು ಮೊದಲು ನೋಂದಾವಣೆ ಮಾಡಿಕೊಂಡವರಿಗೆ ಮೊದಲ ಆದ್ಯತೆ.
    2. ಹೊಸದಾಗಿ ನೋಂದಾವಣಿ ಮಾಡಿಕೊಳ್ಳುವ ರೈತರು. ತೆರೆದ/ಕೊರೆದ ಬಾವಿಯಿಂದ ಪರಿವರ್ಧಕ (transformer) ಕೇಂದ್ರದಿಂದ 500 ಮೀಟರ್’ಗಿಂತ ಒಳಗಿದ್ದು. 20% ಹಣವನ್ನು ಯಾರು ಪಾವತಿ ಮಾಡಿರುವರೋ ಅವರಿಗೆ ಮತ್ತು ಮೊದಲು ನೋಂದಾವಣೆ ಮಾಡಿಕೊಂಡವರಿಗೆ ಮೊದಲ ಆದ್ಯತೆ.

    ಪ್ರತಿ ಕುಟುಂಬಕ್ಕೆ ಒಂದು ಸೌರ ಪಂಪ್ ಸೆಟ್ ಮೀಸಲಿಡಲಾಗಿದೆ. ಅರ್ಜಿ ಭರ್ತಿ ಮಾಡಲು ಭಾಷೆ ಆಯ್ಕೆ ಇರುತ್ತದೆ ಇಂಗ್ಲೀಷ್ ಅಥವಾ ಕನ್ನಡ. UNIP ಯೋಜನೆಯ ಅಡಿಯಲ್ಲಿ ಹಣ ಪಾವತಿ ಮಾಡಿರುವ ಬಗ್ಗೆ ಪ್ರಶ್ನೆ ಇರುತ್ತದೆ ಅದಕ್ಕೆ ಹೌದು ( ಪಾವತಿ ಮಾಡಿದ್ದರೆ ) ಅಥವಾ ಇಲ್ಲ  ( ಪಾವತಿ ಮಾಡಿಲ್ಲದೆ ಇದ್ದರೆ ) ಎಂದು ಉತ್ತರ ನೀಡಬೇಕು.

    ಹೌದು ಎಂದು ಕೊಟ್ಟರೆ ಮುಂದೆ RR ಸಂಖ್ಯೆ ಕೇಳುತ್ತೆ ಅದನ್ನು ಭರ್ತಿ ಮಾಡಿದರೆ ದುಡ್ಡು ಪಾವತಿ ಮಾಡಿರುವ ಎಲ್ಲಾ ಮಾಹಿತಿ ತೋರಿಸುತ್ತದೆ. ಇಲ್ಲ ಎಂದು ಭರ್ತಿ ಮಾಡಿದರೆ, ಅದರ ಕೆಳಗೆ ಅರ್ಜಿ ಬರುತ್ತದೆ ಅದನ್ನು ಪೂರ ಭರ್ತಿ ಮಾಡ್ಬೇಕು ನಂತರ ಸಲ್ಲಿಕೆ ಮಾಡಬಹುದು.

    Leave A Reply

    Your email address will not be published.