ಪೊಲೀಸರಿಗೆ ಇನ್ಮುಂದೆ ಈ ರೀತಿ ಮಾಡುವ ಅಧಿಕಾರ ಇರುವುದಿಲ್ಲ, ಹೊಸ ರೂಲ್ಸ್ ಜಾರಿ

0 55

ದೇಶದಲ್ಲಿ ಕಾನೂನು ವ್ಯವಸ್ಥೆಯ ಮೂಲಕ ಶಾಂತಿ ಸುವ್ಯವಸ್ಥೆಯನ್ನು ನೋಡಿಕೊಳ್ಳುವುದು ದೇಶದಲ್ಲಿನ ಪೊಲೀಸ್ ರ ಕೆಲಸವಾಗಿದೆ. ಪೊಲೀಸರು ಕೆಲವೊಮ್ಮೆ ತಪ್ಪು ಮಾಡಬಹುದು ಆದರೆ ಇದರಿಂದ ಜನರಿಗೆ ತೊಂದರೆ ಆಗಬಾರದು. ಟ್ರಾಫಿಕ್ ಪೊಲೀಸರ ನಿಯಮ ಹಾಗೂ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ದೇಶದ ಗಡಿಯಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಸೈನಿಕರು ಮಾಡಿದರೆ ನಮ್ಮ ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪ್ರತಿ ರಾಜ್ಯದ ಪೊಲೀಸರು ಮಾಡುತ್ತಾರೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಸರಿದಾರಿಯಲ್ಲಿ ಸಾಗಲು ಪೊಲೀಸರಿಂದ ಮಾತ್ರ ಸಾಧ್ಯ. ನಾನು ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕು ಎಂದು ಒಮ್ಮೆಯಾದರೂ ಹೇಳುತ್ತಾರೆ. ಆರಕ್ಷಕರು ಆದ ಕಾರಣ ಪ್ರತಿಯೊಬ್ಬ ಪೊಲೀಸರು ಒಳ್ಳೆಯವರಾಗಿರಬೇಕೆಂಬ ನಿಯಮವಿಲ್ಲ. ಪೊಲೀಸರಲ್ಲೂ ಸಾಮಾನ್ಯರಿಗೆ ತೊಂದರೆ ಕೊಡುವವರು ಇದ್ದಾರೆ ಕೆಲವು ಸಮಸ್ಯೆ ಮಾಡುವ ಪೊಲೀಸರಿಂದ ಪಾರಾಗಬಹುದು.

ನಮ್ಮ ದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ ಇದಕ್ಕೂ ಸರಿಯಾದ ನಿಯಮವಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಾಗರಿಕರಿಗೆ ಇರುವುದಿಲ್ಲ. ಕಾನೂನು ರಕ್ಷಣೆಯಲ್ಲಿ ಟ್ರಾಫಿಕ್ ಪೊಲೀಸರ ಕೆಲವು ಕ್ರಮಗಳನ್ನು ವಿರೋಧಿಸಲು ಅವಕಾಶವಿದೆ. ಟ್ರಾಫಿಕ್ ಪೊಲೀಸರು ಗಾಡಿಯನ್ನು ನಿಲ್ಲಿಸಿದ ತಕ್ಷಣ ವಾಹನದ ಕೀಯನ್ನು ಚಾಲಕರಿಂದ ತೆಗೆದುಕೊಳ್ಳಬಾರದು ಹಾಗೆ ಮಾಡುವುದು ಕಾನೂನಾತ್ಮಕವಾಗಿ ತಪ್ಪು. ಇದರ ನಂತರ ಟ್ರಾಫಿಕ್ ಪೊಲೀಸರು ಸಾಮಾನ್ಯವಾಗಿ ಡ್ರೈವಿಂಗ್ ಲೈಸನ್ಸ್ ನೋಂದಣಿ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಬಹುದು. ಈ ಸಮಯದಲ್ಲಿ ಮಾಲಿನ್ಯ ಪ್ರಮಾಣ ಪತ್ರವನ್ನು ಪರಿಶೀಲಿಸುವ ಅಧಿಕಾರ ಆರ್ ಟಿ ಓ ಅಧಿಕಾರಿಗೆ ಮಾತ್ರ ಇರುತ್ತದೆ.

ಒಂದು ವೇಳೆ ರಸ್ತೆಯಲ್ಲಿ ಹೋಗಬೇಕಾದರೆ ವಾಹನವನ್ನು ಕಾನ್ಸಟೇಬಲ್ ಅಡ್ಡಗಟ್ಟಿದರೆ ಅವರಿಗೆ 100 ರೂಪಾಯಿ ಮೇಲೆ ಫೈನ್ ಹಾಕುವ ಅಧಿಕಾರ ಇರುವುದಿಲ್ಲ. ಒಂದು ವೇಳೆ ಕಾನ್ಸ್ಟೇಬಲ್ 100 ರೂಪಾಯಿ ಮೇಲೆ ಫೈನ್ ಹಾಕಿದರೆ ಕಾನ್ಸಟೇಬಲ್ ವಿರುದ್ಧ ಕಂಪ್ಲೇಂಟ್ ಮಾಡಬಹುದು. ಸಂಚಾರ ಪೊಲೀಸರು ವಾಹನದ ದಾಖಲೆ ಕೇಳಿದಾಗ ದಾಖಲೆ ಡಿಜಿ ಲಾಕರ್ ನಲ್ಲಿ ಇರಿಸಿದರೆ ಅವುಗಳನ್ನು ಸಹ ತೋರಿಸಬಹುದು. ಟ್ರಾಫಿಕ್ ಪೊಲೀಸರು ಇದನ್ನು ಮಾನ್ಯವೆಂದು ಪರಿಗಣಿಸಬೇಕು ಒಂದು ವೇಳೆ ಹಾಗೆ ಮಾಡಿದರೆ ಅವರ ವಿರುದ್ಧ ದೂರು ದಾಖಲಿಸಬಹುದು. ಸರ್ಕಾರದ ನಿಯಮದ ಪ್ರಕಾರ ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿ ಇಡಬಹುದು ಹಾಗೂ ಈ ದಾಖಲೆಗಳನ್ನು ಪರಿಶೀಲನೆ ಮಾಡಬೇಕು ಎಂಬ ನಿಯಮವಿದೆ. ಈ ನಿಯಮಗಳ ಬಗ್ಗೆ ಮಾಹಿತಿ ಹೊಂದಿರಬೇಕು.

Leave A Reply

Your email address will not be published.