ಬೋರ್ ವೆಲ್ ಕೊರೆಯುವಾಗ ಬಂದಂತ ನೀರು ಹಾಗೆ ಬತ್ತಿ ಹೋಗುವುದು ಏಕೆ? ಇಲ್ಲಿದೆ ಮಾಹಿತಿ

0 48,776

ಎಲ್ಲಾ ಕಾಲದಲ್ಲಿ ಮಳೆ ಬರುವುದಿಲ್ಲ ಬೆಳೆಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ರೈತರು ಬೋರ್ ವೆಲ್ ಕೊರೆಸುವ ದಾರಿ ಕಂಡುಕೊಂಡರು. ಆದರೆ, ಕೆಲವು ಕಡೆ ಬೋರ್ ವೆಲ್ ಕೊರೆಸಿದಾಗ ಬರುವ ನೀರು ಹಾಗೆ ಬತ್ತಿ ಹೋಗುತ್ತದೆ. ಯಾಕೆ? ತಿಳಿಯೋಣ ಬನ್ನಿ.

ಮೊದಲು 150 ಅಡಿ ಇಲ್ಲ 200 ಅಡಿ ಕೊರೆದಾಗ ನೀರಿನ ಸೆಲೆ ಸಿಗುತ್ತದೆ. ಇನ್ನು, ಆಳಕ್ಕೆ ಕೊರೆದರೆ ನೀರು ಇನ್ನು ಜಾಸ್ತಿ ಸಿಗುತ್ತದೆ ಎನ್ನುವ ಆಸೆಗೆ ಬಿದ್ದು ಇನ್ನು ಡ್ರಿಲ್ ಮಾಡುವುದನ್ನು ಮುಂದುವರೆಸಿದರೆ ಇನ್ನು, 400 ಅಡಿಯ ನಂತರ ಸಿಗುವ ಡ್ರೈ ಗ್ಯಾಪ್’ನಿಂದ ಸಿಕ್ಕ ನೀರು ಕೂಡ ಬತ್ತಿ ಹೋಗುತ್ತದೆ. ಮೊದಲಿಗೆ ಅತಿ ಆಸೆ ಗತಿ ಕೇಡು. ಸಿಕ್ಕಿದ್ದಕ್ಕೆ ಸಂತಸ ಪಡಬೇಕು, ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ಮೊದಲಿಗೆ ಸಿಕ್ಕ ನೀರು ಒಂದೇ ಸಮವಾಗಿ ಹರಿಯುವುದು ಅದೇ, ಬೋರ್ ಕೊರೆದಷ್ಟು ಅದು ಕೆಳ ಮುಖವಾಗಿ ಹೋಗುತ್ತದೆ.

ಡ್ರೈ ಗ್ಯಾಪ್’ಗೆ ನೀರು ಹೋದರೆ, ಅದು ಬೋರ್ ವೆಲ್ ಫೇಲ್ ಆಗಿರುವುದನ್ನು ಸೂಚಿಸುತ್ತದೆ. ನೀರಿನ ಬದಲಿಗೆ ದೂಳು ಬರುತ್ತದೆ. ನೀರು ಬರುವುದು ನಿಂತಾಗ ಬೋರ್ ಕೊರೆಯುವುದನ್ನು ನಿಲ್ಲಿಸಬೇಕು. ಸಿಕ್ಕ ನೀರನ್ನು ಪೋಲು ಮಾಡದೆ ಅದನ್ನೇ ಸಮಯಕ್ಕೆ ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು.

ಮಳೆ ಇಲ್ಲ, ಬರಗಾಲ ಬಂದರೇ ಕುಡಿಯಲು ನೀರು ಕೂಡ ಸಿಗುವುದಿಲ್ಲ. ನೀರು ಬೇಕು ಎಂದರೆ ಮೊದಲು ಬೋರ್ ವೆಲ್ ಗಾಡಿಯನ್ನು ಕಳಿಸಿ. ಕೊಳವೆ ಬಾವಿಗೆ ದಪ್ಪ ಜಲ್ಲಿ ಕಲ್ಲು ಇಲ್ಲ ಚಿಕ್ಕ ಚಿಕ್ಕ ಇಟ್ಟಿಗೆ ಚೂರನ್ನು ತುಂಬುತ್ತಾ ಬರಬೇಕು. ಇದನ್ನು ಬೋರ್ ವೆಲ್ ಕ್ಯಾಮರಾ ಸಹಾಯದಿಂದ ವೀಕ್ಷಿಸಬಹುದು.

ಡ್ರೈ ಗ್ಯಾಪ್ ತುಂಬಿದ ಮೇಲೆ ಕೆರೆಯಲ್ಲಿ ಸಿಗುವ ಜೇಡಿ ಮಣ್ಣನ್ನು ( ಅಂಟು ಮಣ್ಣು ) 3-4 ಬಣಲಿ ತಂದು ಇಟ್ಟಿಗೆ ಚೂರಿನ ಮೇಲೆ ಮತ್ತೆ ಹಾಕಬೇಕು. ಇದರಿಂದ, ನೀರು ಮುಂದೆ ಹೋಗುವುದಿಲ್ಲ. ಸಲೆ ಮತ್ತೆ ಹರಿಯುತ್ತದೆ. ಮೋಟಾರ್ ಪಂಪ್ ಅಳವಡಿಸಿದರೆ ಇರುವಷ್ಟು ನೀರು ಮತ್ತೆ ಸಿಗುತ್ತದೆ.

ಮಳೆ ಸರಿಯಾಗಿ ಬಾರದೆ ನೀರಿನ ಮಟ್ಟ ತುಂಬ ಕಡಿಮೆ ಆಗಿದೆ. ಬೋರ್ ಫೇಲ್ ಆಯ್ತು ಎಂದು ಚಿಂತೆ ಮಾಡುವ ಬದಲು ಈ ವಿಧಾನ ಅನುಸರಿಸಬಹುದು. ಸಿಮೆಂಟ್ ಪುಡಿ ಬಳಕೆ ಮಾಡಿದರೆ ಆದು, ನೀರಿನ ಜೊತೆ ಕಮೆಂಟ್ ಕರಗಿ ಡ್ರೈ ಗ್ಯಾಪ್ ಸೇರುತ್ತದೆ. ಅದರಿಂದ, ಮೇಲೆ ತಿಳಿಸಿರುವ ವಿಧಾನ ಅನುಕರಣೆ ಮಾಡುವುದು ಉತ್ತಮ. ಇದರಿಂದ ದುಡ್ಡು ಕೂಡ ವ್ಯರ್ಥವಾಗುವುದಿಲ್ಲ ಮತ್ತು ನೀರನ್ನು ಕೂಡ ಉಳಿತಾಯ ಮಾಡಬಹುದು.

Leave A Reply

Your email address will not be published.