ಬರ ಪರಿಹಾರದ ದುಡ್ಡು ರೈತರಿಗೆ ಕೊಡಬೇಕು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಬೇರೆ ಬೇರೆ ರೀತಿಯ ಹೆಚ್ಚಿನ ತೊಂದರೆಗಳನ್ನು ಸಹ ತಂದಿಟ್ಟಿದೆ. ಸರ್ಕಾರ ಇಲ್ಲಿಯವರೆಗೂ ಯಾವುದೇ ರೀತಿಯ ಹಣ ಎಂಬುದು ಬಿಡುಗಡೆ ಮಾಡಿರಲಿಲ್ಲ. ಅದು, ಹೆಚ್ಚಿನ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಬರ ಪರಿಹಾರದ ಹಣದ ಕುರಿತು ಒಂದು ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಬರ ಪರಿಹಾರ ಹಣದ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಿಲವರೆಗೂ ಸಹ ಈ ವಿಚಾರ ಹೋಗಿದ್ದು. ಈ ವಿಚಾರ ಕೋರ್ಟ್’ನಲ್ಲಿ ಪರಿಹಾರ ಆಗಲು ಮುಂದಾಗಿದೆ.

ಕೇಂದ್ರ ಸರ್ಕಾರ ಬರ ಪರಿಹಾರದ ದುಡ್ಡನ್ನು ಬಿಡುಗಡೆ ಮಾಡಲು ತೀರ್ಮಾನ ಕೈಗೊಂಡಿದೆ. ಆಗಲೇ, ರಾಜ್ಯ ಸರ್ಕಾರ ಬರ ಪರಿಹಾರದ ದುಡ್ಡು ಎಂದು ರೈತರಿಗೆ ₹2,000 ಕೊಟ್ಟಿದೆ. ಆದರೆ, ಕೇಂದ್ರ ಸರ್ಕಾರವು ಈ ವಿಷಯವಾಗಿ ಯಾವ ಹಣ ಕೊಟ್ಟಿಲ್ಲ. ಆದರೆ, ಹೆಚ್ಚುವರಿಯಾಗಿ ದುಡ್ಡನ್ನು ಕೊಡುತ್ತೇವೆ ಎನ್ನುವ ಭರವಸೆಯನ್ನು ಸಹ ರೈತರಿಗೆ ಕೊಟ್ಟಿದೆ.

₹1,872 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ತೀರ್ಮಾನ ಕೈಗೊಂಡಿದೆ. ಮುಂಬರುವ ದಿವಸಗಳಲ್ಲಿ ರೈತರಿಗೆ ಎಷ್ಟು ಪ್ರಮಾಣದ ಬರ ಪರಿಹಾರದ ದುಡ್ಡನ್ನು ನೀಡಲಾಗುತ್ತದೆ ಎನ್ನುವುದನ್ನು ತಿಳಿಯಬೇಕಾಗಿದೆ.

ಬರ ಪರಿಹಾರ ದುಡ್ಡು ಪ್ರತಿ ಒಬ್ಬ ರೈತರು ತೆಗೆದುಕೊಳ್ಳಬೇಕು ಎಂದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು. ಬರ ಪರಿಹಾರದ ದುಡ್ಡು ಎಂದು ₹2,000ವನ್ನು ಕೆಲವೊಂದಿಷ್ಟು ರೈತರು ಪಡೆದುಕೊಂಡಿದ್ದಾರೆ.

ಕೆಲವೊಂದಿಷ್ಟು ರೈತರು ಇನ್ನು ಹಣ ಪಡೆದಿಲ್ಲ. ಬರ ಪರಿಹಾರ ಜಮಾ ಆಗಲೇಬೇಕು ಎಂದರೆ ಎಫ್ ಐ ಡಿ ಸಂಖ್ಯೆಗಳನ್ನು ಕಂಪಲ್ಸರಿ (compulsary) ಮಾಡಲಾಗಿದೆ. ಆದ್ದರಿಂದ, ಪ್ರತಿ ಒಬ್ಬ ರೈತರು ಸಹ ಎಫ್ ಐ ಡಿ ಸಂಖ್ಯೆಗಳನ್ನು ಮಾಡಿಸಿಕೊಳ್ಳಲೇಬೇಕು.

ಎಸ್ ಬಿ ಐ ಬ್ಯಾಂಕ್’ನಲ್ಲಿ (SBI BANK) ಖಾತೆ ಇರುವ ಜನರಿಗೆ ಎಫ್ ಐ ‌ಡಿ ಯೋಜನೆ. ರೈತರಿಗೆ ಒಳ್ಳೆಯ ಸುದ್ದಿ, ರೈತರಿಗೆ ಬರ ಪರಿಹಾರದ ಹಣ ಜಮಾ ಮಾಡಲು ಎಫ್ ಐ ಡಿ ಸಂಖ್ಯೆಗಳು ಇಲ್ಲ ಎಂದರೆ, ಅವರ ಹತ್ತಿರದಲ್ಲಿ ಇರುವ ಗ್ರಾಮ ವನ್ ಇಲ್ಲವೇ, ಕರ್ನಾಟಕ ಒನ್ ಈ ಕೇಂದ್ರಗಳಿಗೆ ಹೋಗಿ, ಎಫ್ ಐ ಡಿ ಸಂಖ್ಯೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಮುಂಬರುವ ದಿವಸಗಳಲ್ಲಿ ಕೇಂದ್ರ ಸರ್ಕಾರವು ಸಹ ಬರ ಪರಿಹಾರದ ದುಡ್ಡನ್ನು ನೀಡುತ್ತಿರುವುದರಿಂದ ಎಫ್ ಐ ಡಿ ಸಂಖ್ಯೆಗಳನ್ನು ಪಡೆದಿರುವ ರೈತರಿಗೆ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚಿಸಿರುವ ಬರ ಪರಿಹಾರದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೈತರು ಹಣ ಪಡೆಯಲು ಎಫ್ ಐ ಡಿ ಸಂಖ್ಯೆಗಳನ್ನು ಪಡೆದರೆ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು.

Leave a Reply

Your email address will not be published. Required fields are marked *