ಪ್ರತಿಯೊಬ್ಬರಿಗೂ ನಾವು ಹೇಗೆ ಮಲಗಬೇಕು ಎಂಬ ಗೊಂದಲ ಇದ್ದೆ ಇರುತ್ತದೆ. ಆದರೆ ಕೆಲವು ವ್ಯಕ್ತಿಗಳಿಗೆ ನಿದ್ದೆ ಸುಲಭವಾದ ಮಾತಲ್ಲ. ಅಸಮಪ ೯ಕ ಹಾಸಿಗೆ, ಸೇವಿಸುವ ಆಹಾರ ಕ್ರಮದಿಂದ ಗಾಢ ನಿದ್ರೆಗೆ ಅಡ್ಡಿಯಾಗುತ್ತದೆ.ಆದರೆ ಮಾನವನಿಗೆ ಮಲಗುವ ಭಂಗಿಯಲ್ಲು ಉಳಿದ ಎಲ್ಲ ಪ್ರಾಣಿಗಳಿಗೆ ಇಲ್ಲದ ವಿಶೇಷತೆ ಇದೆ. ಅದೇನೆಂದರೆ ಬೇರೆ ಯಾವ ಜೀವಿಗೂ ತನ್ನ ಬೆನ್ನ ಮೇಲೆ ಮಲಗಲಾಗುವುದಿಲ್ಲ. ಆದರೆ ಪ್ರತಿಯೊಬ್ಬರು ತನಗೆ ಆರಾಮ ಆದ ಹಾಗೂ ಅನುಕೂಲಕರ ಭಂಗಿಯಲ್ಲಿ ಮಲಗುತ್ತಾರೆ ಆದರೆ ಯಾವ ಭಂಗಿಯಲ್ಲಿ ಮಲಗಿದರೆ ಏನು ಅಥ೯ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರತಿಯೊಂದು ಮಲಗುವ ಭಂಗಿಯು ಪ್ರತಿಯೊಬ್ಬರ ಗುಣ ಲಕ್ಷಣ ಹಾಗೂ ಸ್ವಭಾವವನ್ನು ಬಿಂಬಿಸುತ್ತದೆ. ಆದರೆ ಎಲ್ಲ ಭಂಗಿಯು ವೈದ್ಯರ ಪ್ರಕಾರ ಆರೋಗ್ಯಕ್ಕೆ ಸೂಕ್ತವಲ್ಲ ಆರೋಗ್ಯಕ್ಕೆ ಸೂಕ್ತವಾದ ಭಂಗಿಯೆಂದರೆ ಎಡ ಮಗ್ಗಲಿನಲ್ಲಿ ಮಲಗುವುದು .ಮಲಗುವ ಭಂಗಿ ಗುಣ ಸ್ವಭಾವಗಳನ್ನು ಸೂಚಿಸುವುದು ಅಷ್ಟೇ ಅಲ್ಲದೆ ಸ್ನೇಹಿತರ ನಡುವಿನ ಪ್ರೀತಿ ಹಾಗೂ ನಿಮ್ಮ ಪ್ರತಿಕ್ರಿಯೆ ಇತ್ಯಾದಿಗಳನ್ನು ತಿಳಿಸುತ್ತದೆ. ನಿದ್ರಾ ಭಂಗಿಗಳು ತಮ್ಮ ಗುಣಗಳನ್ನು ಹೇಳುತ್ತದೆ ಅದೇನೆಂದರೆ ಇಗ್ಲೆಂಡ್ ನ ಸ್ಲೀಪ್ ಅಡ್ ವೈಸಿಸ್ ಸರ್ವೆ ಮೂಲಕ ೬ಸಾಮಾನ್ಯಭಂಗಿಯನ್ನು ಗುರುತಿಸಿದೆ .ಅದರಂತೆ ಒಬ್ಬ ವ್ಯಕ್ತಿ ೫೨ ನಿಮಿಷದ ವರೆಗೆ ಒಂದೆ ಭಂಗಿಯಲ್ಲಿ ಮಲಗಿದರೆ ಅದು ಅವರ ನಿದ್ರಾ ಭಂಗಿಯಾಗಿದೆ.

ಹೊಟ್ಟೆಯ ಮೇಲೆ ಮಲಗುವ ವ್ಯಕ್ತಿಗಳು ಆಕರ್ಷಕ ವ್ಯಕ್ತಿಗಳು ಮತ್ತು ವಿನೋದ ಬಯಸುವ ಜನರಾಗಿರುವರು. ಇತರರಿಗೆ ಸಹಾಯ ಮಾಡುವ ವ್ಯಕ್ತಿತ್ವ ಇವರದಾಗಿರುತ್ತದೆ. ಕೆಲವೊಮ್ಮೆ ಇವರಿಂದ ಇತರರಿಗೆ ಅರಿವಿಲ್ಲದೆ ನೋವಾಗುತ್ತದೆ. ಎರಡನೇ ಭಂಗಿಯಲ್ಲಿ ಮಲಗುವ ವ್ಯಕ್ತಿಗಳು ಸಾಮಾನ್ಯವಾಗಿ ದಿಂಬು,ನೆಚ್ಚಿನ ಬೊಂಬೆಯನಿಟ್ಟುಕೊಂಡು ಮಲಗುವ ಹವ್ಯಾಸ ಇವರಿದಾಗಿರುತ್ತದೆ ಇವರು ಇತರರಿಂದ ಸ್ನೇಹ ಪ್ರೀತಿ ಬಯಸುತ್ತಾರೆ ಹಾಗೂ ನಿಷ್ಟಾವಂತರಾಗಿರುತ್ತಾರೆ.ಇನ್ನೂ ೩ನೇ ಭಂಗಿಯಲ್ಲಿ ಮಲಗುವವರು ಬಲಬದಿಯಲ್ಲಿ ಮಲಗುವವರಾಗಿದ್ದು ಹೆಚ್ಚಿನದಾಗಿ ಶಾಂತ ಸ್ವಭಾವದವರಾಗಿರುತಾರೆ ಹಾಗೂ ಗೌರವಾನ್ವಿತ ಜೀವನ ಬಯಸುವರಾಗಿದ್ದು ಹಾಗೂ ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಾಗಿರುತಾರೆ. ಕೆಲವರಿಗೆ ತೋಳಿನ ಮೇಲೆ ಮಲಗುವ ಹವ್ಯಾಸವು ಇರುತ್ತದೆ ಇಂತಹ ವ್ಯಕ್ತಿಗಳು ಯಾವ ಕೆಲಸ ಮಾಡಿದರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ಇನ್ನು ಕೆಲವರು ಎರಡು ಕಾಲುಮೇಲೆತ್ತಿಕೊಂಡು ಎರಡು ಕೈ ಮೇಲೆತ್ತಿಕೊಂಡು ಮಲಗುವರು ತುಂಬಾ ಕ್ರಿಯಾಶೀಲರಾಗಿರುತ್ತಾರೆ ಹಾಗೂ ಯಾರ ಮಾತನ್ನೂ ಕೇಳುವುದಿಲ್ಲ ಆದರೆ ಇವರು ಎಲ್ಲರನ್ನೂ ಪ್ರೀತಿಸುತ್ತಾರೆ.ಸೈನಿಕ ಭಂಗಿಯಲ್ಲಿ ಎರಡು ಕೈ ಚಾಚಿ ಮಲಗುವರು ಇರುತ್ತಾರೆ. ಇವರು ಶಿಸ್ತು ಸಂಯಮಕ್ಕೆ ಹೆಚ್ಚು ಆದ್ಯತೆ ನೀಡುವುದು ಇವರ ನೀತಿಯಾಗಿದೆ.ಇನ್ನೂ ಕೆಲವರು ಎದೆಗೆ ತಾಕಿಕೊಂಡು ಮಡಚಿ ಮಲಗುವುದು ಈ ಭಂಗಿಯ ವಿಶೇಷ ಹೀಗೆ ಮಲಗಿವರಿಗೆ ಯಾವುದೇ ಚಿಂತೆ ಇರುವುದಿಲ್ಲಹಾಗೂ ನಿರಾಶಾವಾದಿಯಾಗಿರುತಾರೆ. ಕೆಲವರು ಮುದುಡಿದ ಭಂಗಿಯಲ್ಲಿ ಮಲಗುತ್ತಾರೆ ಇವರು ಸೂಕ್ಷ್ಮ ಸ್ವಭಾವದವರು ಹಾಗೂ ಜನರೊಂದಿಗೆ ಸಂಪರ್ಕ ಹೋದುವುದಿಲ್ಲ ಇನ್ನು ಕೆಲವರು ಗೊರಕೆ ಹೊಡೆಯುತ್ತ ಮಲಗುತ್ತಾರೆ ಇವರು ಗುರಿ ತಲುಪುವಲ್ಲಿ ಯಶಸ್ವಿಯಾಗುತಾರೆ. ಇವರು ಶ್ರಮ ಜೀವಿಗಳು ಹೀಗೆ ಮಲಗುವ ಭಂಗಿ ನಿಮ್ಮ ಗುಣ ಸ್ವಭಾವಗಳನ್ನು ಸೂಚಿಸುವುದು ಹಾಗೂ ಆರೋಗ್ಯ ದೃಷ್ಟಿಯಿಂದ ನಿದ್ರೆಯು ಅವಶ್ಯಕವಾಗಿದೆ.

Leave a Reply

Your email address will not be published. Required fields are marked *