ಪ್ರಪಂಚದಲ್ಲಿ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಅಮೇರಿಕ ಅಗ್ರಸ್ಥಾನ ಪಡೆದುಕೊಂಡಿದೆ. ಅಮೇರಿಕ ದೇಶದಲ್ಲಿ ಕೃಷಿ ಹೇಗಿರುತ್ತದೆ, ಯಾವ ರೀತಿಯ ಪದ್ಧತಿಗಳನ್ನು ಅನುಸರಿಸುತ್ತಾರೆ, ಅಲ್ಲಿನ ರೈತರಿಗೆ ಸಂಬಳ ಎಷ್ಟಿರುತ್ತದೆ ಹಾಗೂ ಅಲ್ಲಿನ ಮಾರ್ಕೆಟ್ ಬಗ್ಗೆ ಹೀಗೆ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕೃಷಿ ಅಥವಾ ರೈತ ಭಾರತದ ಬೆನ್ನೆಲುಬು ಎಂದು ಹೇಳಲಾಗುತ್ತದೆ, ಹೊಟ್ಟೆ ತುಂಬಿಸುವ ರೈತನ ಕೆಲಸ ಅದ್ಭುತವಾಗಿರುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ಕೃಷಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಹಾಗೆಯೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಕೃಷಿ ಪದ್ಧತಿ ಇರುತ್ತದೆ. ಭಾರತದಲ್ಲಿ ಒಬ್ಬ ರೈತನಿಗೆ ಸಾಮಾನ್ಯವಾಗಿ 2 ಎಕರೆಯಿಂದ 60 ಎಕರೆವರೆಗೂ ಜಮೀನು ಇರುತ್ತದೆ. ಅಮೇರಿಕದಲ್ಲಿ ಒಬ್ಬ ರೈತ ಸಾಮಾನ್ಯವಾಗಿ 450 ರಿಂದ ಒಂದು ಸಾವಿರ ಎಕರೆವರೆಗೂ ಜಮೀನು ಹೊಂದಿರುತ್ತಾನೆ. ಅಮೇರಿಕದಲ್ಲಿ ರೈತರು ಗದ್ದೆ ಕೆಲಸ ಮಾಡಬೇಕಾದರೆ ಬೂಟ್, ತಲೆಗೆ ಕ್ಯಾಪ್, ಕೈಗೆ ಗ್ಲೌಸ್ ಹಾಕಿಕೊಂಡಿರುತ್ತಾರೆ ಏಕೆಂದರೆ ಗದ್ದೆಯಲ್ಲಿ ಕೆಲಸ ಮಾಡುವಾಗ ಬಿಸಿಲು, ಮಣ್ಣಿನೊಂದಿಗೆ ಕೆಲಸ ಮಾಡಬೇಕಾಗುತ್ತದೆ.

ಅಮೇರಿಕದ ಕೃಷಿ ವ್ಯವಸ್ಥೆಯಲ್ಲಿ ಗ್ರೀನ್ ಹೌಸ್ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅಮೇರಿಕದಲ್ಲಿ ಆರು ತಿಂಗಳು ಅಥವಾ ಹೆಚ್ಚು ಸಮಯ ಚಳಿ ಇರುವುದರಿಂದ ಬೇಸಿಗೆ ಪ್ರಾರಂಭವಾಗುವ ಮೊದಲು ಬೀಜ ಬಿತ್ತಿ ಸಸಿಗಳನ್ನು ತಯಾರು ಮಾಡುತ್ತಾರೆ. ಬೀಜ ಹಾಕಿ ಸಸಿಗಳನ್ನು ಬೆಳೆಸುವ ಜಾಗಕ್ಕೆ ಗ್ರೀನ್ ಹೌಸ್ ಎಂದು ಕರೆಯುತ್ತಾರೆ. ಅಮೇರಿಕದಲ್ಲಿ ಹೆಚ್ಚು ಚಳಿ ಇರುವುದರಿಂದ ಡಿಸೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಯಾವುದೇ ರೀತಿಯ ವ್ಯವಸಾಯ ಮಾಡುವುದಿಲ್ಲ. ಇಲ್ಲಿನ ವ್ಯವಸಾಯದಲ್ಲಿ ಹನಿ ನೀರಾವರಿ ಡ್ರಿಪ್ ಇರಿಗೇಷನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇಲ್ಲಿನ ಕೃಷಿಯಲ್ಲಿ ಕೆಲಸ ಮಾಡಲು ಬರುವ ರೈತರು ವಾರದಲ್ಲಿ ಐದು ದಿನ ಕೆಲಸ ಮಾಡುತ್ತಾರೆ, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ ಮೂರರಿಂದ ನಾಲ್ಕು ಗಂಟೆವರೆಗೆ ಕೆಲಸ ಮಾಡುತ್ತಾರೆ. ಇಲ್ಲಿ ಕೆಲಸ ಮಾಡುವ ರೈತರಿಗೆ ಗಂಟೆಗೆ 10 ರಿಂದ 14 ಡಾಲರ್ ಕೊಡುತ್ತಾರೆ. ಇಲ್ಲಿ ತರಕಾರಿ ಗಿಡಗಳನ್ನು ಬೆಳೆಸುತ್ತಾರೆ ಹೆಚ್ಚು ಲಾಭ ಸಿಗುವುದು ಟೊಮೆಟೊ ಗಿಡಗಳಿಂದ ಎಂಬ ಮಾಹಿತಿ ಇಲ್ಲಿನ ರೈತರಿಂದ ಲಭಿಸಿದೆ. ಎಲೆಕೋಸು, ಕ್ಯಾರೆಟ್, ಬೀನ್ಸ್, ಬ್ರೂಕ್ಲಿ, ಬೆಳ್ಳುಳ್ಳಿ ಹಾಗೂ ಸೊಪ್ಪುಗಳಲ್ಲಿ ಕೇಲ್, ಲೆಟಸ್ ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ.

ಅಮೇರಿಕದಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವುದರಿಂದ ತಿಪ್ಪೆ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಹೆಚ್ಚು ಬಳಸುತ್ತಾರೆ. ಇಲ್ಲಿನ ರೈತರು ಬೆಳೆ ಬೆಳೆಯುವಾಗ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಚಳಿ ಹೆಚ್ಚಾಗಿದ್ದು ಚಳಿಯಿಂದ ಬೆಳೆಯನ್ನು ರಕ್ಷಿಸಲು ಕಂಬಿಗಳನ್ನು ಹಾಕಿ ಮೇಲೆ ಪ್ಲಾಸ್ಟಿಕ್ ಹಾಕುತ್ತಾರೆ. ಇಲ್ಲಿ ಕಡಿಮೆ ಪ್ರಮಾಣದಲ್ಲಿ ವ್ಯವಸಾಯ ಮಾಡುವುದರಿಂದ ಹೆಚ್ಚು ಲಾಭ ಬರುವುದಿಲ್ಲ. ಇಲ್ಲಿನ ರೈತರು ತಾವು ಬೆಳೆದ ಬೆಳೆಯನ್ನು ತಾವೇ ಮಾರಾಟ ಮಾಡುವುದರಿಂದ ಬೆಳೆ ಬಂದ ತಕ್ಷಣ ಅವುಗಳನ್ನು ಚೆನ್ನಾಗಿ ನೀರಿನಿಂದ ಕ್ಲೀನ್ ಮಾಡಿ ಆರಿಸಿಕೊಳ್ಳುತ್ತಾರೆ. ನಂತರ ಕೋಲ್ಡ್ ಸ್ಟೊರೇಜ್ ನಲ್ಲಿ ಪ್ಯಾಕ್ ಮಾಡಿ ಇಡುತ್ತಾರೆ ನಂತರ ಮಾರ್ಕೆಟ್ ಗೆ ತೆಗೆದುಕೊಂಡು ಹೋಗುತ್ತಾರೆ.

ಅಮೇರಿಕದಲ್ಲಿ ಮಾರ್ಕೆಟ್ ನಮ್ಮ ದೇಶದ ಮಾರ್ಕೆಟ್ ರೀತಿಯಲ್ಲಿಯೇ ಇರುತ್ತದೆ ಇದನ್ನು ಫಾರ್ಮ್ ಹೌಸ್ ಮಾರ್ಕೆಟ್ ಎನ್ನುತ್ತಾರೆ. ಈ ಮಾರ್ಕೆಟ್ ವಾರಕ್ಕೆ ಒಂದು ದಿನ ಮಾತ್ರ ಇರುತ್ತದೆ. ಸುತ್ತ ಮುತ್ತಲಿನ ಊರಿನ ಜನರು ಮಾರ್ಕೆಟ್ ಗೆ ಬಂದು ಪರ್ಚೆಸ್ ಮಾಡುತ್ತಾರೆ ಆಗ ರೈತರು ಮತ್ತು ಗ್ರಾಹಕರು ಬೆರೆಯುತ್ತಾರೆ. ಕಮರ್ಷಿಯಲ್ ಫಾರ್ಮಿಂಗ್ ಅಮೇರಿಕದಲ್ಲಿ ಹೆಚ್ಚು ಕಂಡುಬರುತ್ತದೆ. ಈ ಕೃಷಿಯನ್ನು ಸಾವಿರಾರು ಎಕರೆಯಲ್ಲಿ ಮಾಡುತ್ತಾರೆ. ಇಲ್ಲಿ ಬೀಜ ಬಿತ್ತುವುದರಿಂದ ಪ್ಯಾಕ್ ಮಾಡಿ ಅಂಗಡಿಗಳಿಗೆ ಹಾಕುವವರೆಗೆ ಮಷೀನ್ ಇರುತ್ತದೆ. ಅಮೇರಿಕದಲ್ಲಿ 6-7 ಸಾವಿರ ಎಕರೆಗಳ ಜಮೀನಿನಲ್ಲಿ ಮಾಡುವ ಕೃಷಿಗೆ ಕೇವಲ 6 ಜನ ಕೆಲಸಗಾರರು ಕೆಲಸ ಮಾಡುತ್ತಾರೆ.

ಕಮರ್ಷಿಯಲ್ ಉದ್ದೇಶದಿಂದ ಬೆಳೆ ಬೆಳೆಯುವುದರಿಂದ ಕಂಪನಿಗಳು ಮೊದಲೆ ಒಂದು ರೇಟ್ ಅನ್ನು ಫಿಕ್ಸ್ ಮಾಡುತ್ತಾರೆ ಆದ್ದರಿಂದ ಇಲ್ಲಿ ರೈತರಿಗೆ ಲಾಸ್ ಆಗುವುದಿಲ್ಲ. ಇಲ್ಲಿ ವಾಣಿಜ್ಯ ಕೃಷಿಯಲ್ಲಿ ಮೊಡರ್ನ್ ಟೆಕ್ನಾಲಜಿಯನ್ನು ಅಳವಡಿಸಿಕೊಂಡಿದ್ದಾರೆ ಆದ್ದರಿಂದ ಅವರು ಎಕರೆಗೆ 45-50 ಟನ್ ಬೆಳೆ ಬೆಳೆಯುತ್ತಾರೆ. ಬೆಳೆದ ಬೆಳೆಗಳನ್ನು ಸ್ಟೋರೇಜ್ ವೇರ್ ಹೌಸ್ ಗಳಲ್ಲಿ ಸ್ಟೋರ್ ಮಾಡುತ್ತಾರೆ. ಬೇರೆ ದೇಶದಿಂದ ಅಮೇರಿಕಕ್ಕೆ ಹೋಗಲು ಅಗ್ರಿಕಲ್ಚರ್ ವೀಸಾ ಇರುತ್ತದೆ ಅದನ್ನು ಎಚ್ 2ಎ ಎಂದು ಹೇಳಲಾಗುತ್ತದೆ. ಈ ವೀಸಾ ಮೂಲಕ ರೈತ ಮಾತ್ರ ಅಲ್ಲದೆ ರೈತನ ಕುಟುಂಬದವರು ಅಮೇರಿಕಕ್ಕೆ ಬರಬಹುದು ಆದರೆ ಇತ್ತೀಚಿನ ದಿನಗಳಿಂದ ಅಗ್ರಿಕಲ್ಚರ್ ವೀಸಾವನ್ನು ಭಾರತ ಮತ್ತು ಇನ್ನಿತರ ಕೆಲವು ದೇಶಗಳಿಗೆ ಅಮೇರಿಕ ಕೊಡುವುದಿಲ್ಲ.

Leave a Reply

Your email address will not be published. Required fields are marked *