ರಾತ್ರಿ ಮಲಗುವಾಗ ಏಲಕ್ಕಿ ಬಳಸಿದ್ರೆ ಕೆಟ್ಟ ಕನಸುಗಳು ಬೀಳೋದಿಲ್ಲ ನೆಮ್ಮದಿಯ ನಿದ್ರೆ ಬರುತ್ತೆ

0 1

ಏಲಕ್ಕಿ ಅನ್ನೋದು ಒಂದು ಮಸಾಲೆ ಪದಾರ್ಥವಾಗಿದೆ, ಈ ಏಲಕ್ಕಿ ಬರಿ ಅಡುಗೆಗೆ ಅಲ್ಲದೆ ಇನ್ನು ಹಲವು ಉಪಯೋಗಕಾರಿ ಅಂಶಗಳನ್ನು ಹೊಂದಿದೆ. ಅಡುಗೆಯಲ್ಲಿ ರುಚಿಯನ್ನು ಹೆಚ್ಚಿಸುವ ಜೊತೆಗೆ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ನೀಡುವಂತ ಈ ಏಲಕ್ಕಿ ಮನುಷ್ಯನಿಗೆ ಹೆಚ್ಚು ಉಪಯೋಗಕಾರಿಯಾಗಿದೆ. ರಾತ್ರಿ ಮಲಗುವಾಗ ಏಲಕ್ಕಿಯನ್ನು ಹೀಗೆ ಬಳಸಿದ್ದೆಯಾದಲ್ಲಿ ಕೆಟ್ಟ ಕನಸುಗಳು ಬೀಳೋದಿಲ್ಲ ಹಾಗೂ ನೆಮ್ಮದಿಯ ನಿದ್ರೆ ಮಾಡುವಂತೆ ಸಹಕಾರಿಯಾಗಿದೆ. ಅಷ್ಟಕ್ಕೂ ಈ ಏಲಕ್ಕಿಯಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿದುಕೊಳ್ಳೋಣ.

ರಾತ್ರಿ ಮಲಗುವಾಗ ಕೆಟ್ಟ ಕನಸುಗಳು ಬಿದ್ರೆ ನೆಮ್ಮದಿ ಇರೋದಿಲ್ಲ ಭಯದ ವಾತಾವರಣ ನಮ್ಮಲೇ ನಿರ್ಮಾವಾಗುವುದು ಇಡೀ ದಿನ ಲವ ಲವಿಕೆಯಿಂದ ಇರಲು ಆಗೋದಿಲ್ಲ, ಆದ್ದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏಲಕ್ಕಿಯನ್ನು ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಹಾಕಿಕೊಂಡು ಮಲಗುವುದರಿಂದ ಇಂತಹ ಕೆಟ್ಟ ಕನಸುಗಳು ಬೀಳೋದಿಲ್ಲ. ಹೌದು ದಿಂಬಿನ ಕೆಳಗೆ ಎರಡು ಏಲಕ್ಕಿಯನ್ನು ಇಟ್ಟು ಕೊಂಡು ಮಲಗುವುದರಿಂದ ಸಕಾರಾತ್ಮಕ ಪ್ರಭಾವ ಬಿರುವುದು ಇದರಿಂದ ಯಾವುದೇ ನಕಾರಾತ್ಮಕ ಕ್ರಿಯೆಗಳು ಕೆಲಸ ಮಾಡೋದಿಲ್ಲ.

ಇನ್ನು ಮಲಗುವ ವಿಧಾನಗಳಲ್ಲಿ ಹಲವು ಬಗೆಗಳಿವೆ ಅವುಗಳಲ್ಲಿ ಒಂದನ್ನು ಹೇಳುವುದಾದರೆ ಮಲಗುವಾಗ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು, ಇನ್ನು ಮಲಗುವಂತ ಕೊಠಡಿ ಶುಭ್ರವಾಗಿ ಸ್ವಚ್ಛತೆಯಿಂದ ಕೂಡಿದ್ದರೆ ತುಂಬಾನೇ ಒಳ್ಳೆಯದು. ಮಲಗುವಾಗ ದೇವರನ್ನು ಪ್ರಾರ್ಥಿಸಿ ಮಲಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ಇದರಿಂದ ದೇಹ ಬೇಗನೆ ರಿಲ್ಯಾಕ್ಸ್ ಮೂಡ್ ಗೆ ಹೋಗುವುದು ಅಲ್ಲದೆ ಇದರಿಂದ ಇಡೀ ದೇಹ ಉತ್ತಮವಾಗಿ ನಿದ್ರೆಯನ್ನು ಬರಮಾಡಿಕೊಳ್ಳುತ್ತದೆ, ಇದರಿಂದ ನೆಮ್ಮದಿಯ ನಿದ್ರೆ ನಿಮ್ಮದಾಗುವುದು.

Leave A Reply

Your email address will not be published.