ಸಾಮಾನ್ಯವಾಗಿ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಗೃಹಿಣಿಯರಲ್ಲಿ ಬಾದಿಸುವಂತಹ ಸಮಸ್ಯೆ ಎಂದರೆ ಅದು ಮುಖದ ಮೇಲೆ ಬಂಗು ಉಂಟಾಗುವುದು ಈ ರೀತಿಯ ಬಂಗು ಸಾಮಾನ್ಯವಾಗಿ ಚರ್ಮದಲ್ಲಿನ ಅಸಮತೋಲನದಿಂದ ಚರ್ಮದಲ್ಲಿ ವಿಟಮಿನ್ ಗಳೂ ಸೇರಿದಂತೆ ಹಲವಾರು ಅವಶ್ಯಕ ಪೋಷಕಾಂಶಗಳ ಕೊರತೆಯಿಂದ ಮತ್ತು ಹೆಚ್ಚು ಸೂರ್ಯನ ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಉಂಟಾಗುತ್ತವೆ, ಮುಖದ ಮೇಲೆ ಮೂಗಿನ ಮೇಲೆ ಹಣೆ ಮೇಲೆ ಹೀಗೆ ಮುಖದ ಚರ್ಮವನ್ನು ಅಂದಗೆಡಿಸುತ್ತವೆ ಹಾಗಾಗಿ ಹಲವಾರು ಜನರು ಈ ರೀತಿಯ ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಈ ರೀತಿಯಾದ ಬಂಗನ್ನು ನಾವು ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ನಿವಾರಿಸಿ ಕೊಳ್ಳಬಹುದಾಗಿದೆ. ಹಾಗಾದರೆ ಬಂಗನ್ನು ನಿವಾರಿಸಲು ಬೇಕಾದ ಮನೆ ಮದ್ದನ್ನು ತಯಾರಿಸುವ ಮತ್ತು ಅದನ್ನು ಬಳಸು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಒಂದು ಸಿಪ್ಪೆ ತೆಗೆದ ಆಲುಗಡ್ಡೆಯನ್ನು ಚೆನ್ನಾಗಿ ನೀರಿನಿಂದ ತೊಳೆದು ಅದನ್ನು ತುರಿದುಕೊಳ್ಳಬೇಕು ನಂತರ ಹೀಗೆ ತುರಿದ ಆಲುಗಡ್ಡೆಯ ತುರಿಯನ್ನು ಹಿಂಡಿ ಮೂರು ಚಮಚದಷ್ಟು ಆಲುಗಡ್ಡೆಯ ರಸವನ್ನು ಒಂದು ಚಿಕ್ಕ ಬೌಲ್ ಗೆ ಹಾಕಿ ಕೊಳ್ಳಬೇಕು, ನಂತರ ಒಂದು ಚಮಚ ಜೇನು ತುಪ್ಪವನ್ನು ಅದರಲ್ಲಿ ಹಾಕಿ ಮಿಶ್ರಣ ಮಾಡಿಕೊಂಡ ಮಿಶ್ರಣಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಈ ಮೂರನ್ನು ಸಹ ಮಿಶ್ರಣ ಮಾಡಿಕೊಳ್ಳಬೇಕು.

ಹೀಗೆ ತಯಾರಿಸಿಕೊಂಡ ಮಿಶ್ರಣವನ್ನು ಬಂಗು ಇರುವ ಮುಖದ ಜಾಗಕ್ಕೆ ಅಥವಾ ಮುಖ ಪೂರ್ತಿಯಾಗಿ ಲೇಪಿಸಿಕೊಳಬೇಕು ಲೇಪಿಸಿಕೊಂಡನಂತರ ಅರ್ಧಗಂಟೆ ಬಿಟ್ಟು ನಂತರ ಅದನ್ನು ತಮ್ಮ ಎರಡೂ ಕೈಗಳಿಂದ ಚೆನ್ನಾಗಿ ವೃತ್ತಾಕಾರವಾಗಿ ಮಸಾಜ್ ಮಾಡಿ ಕೊಳ್ಳಬೇಕು, ಬಂಗು ಇರುವ ಮುಖದ ಭಾಗಗಳಲ್ಲಿ ಹೆಚ್ಚು ಮಸಾಜ್ ಮಾಡುವುದು ಒಳಿತು ಹೀಗೆ ಚೆನ್ನಾಗಿ ಮಸಾಜ್ ಮಾಡಿದ ನಂತರ 10 ನಿಮಿಷ ಬಿಟ್ಟು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಯಾವುದೇ ಕಾರಣಕ್ಕೂ ಹೆಚ್ಚು ಬಿಸಿ ನೀರಿನಿಂದ ಮುಖ ತೊಳೆಯುವುದು ಈ ಸಮಯದಲ್ಲಿ ಸೂಕ್ತವಲ್ಲ.

ಹೀಗೆ ಇದೇ ಕ್ರಮವನ್ನು ಕಡಿಮೆ ಅಂದರೂ ಮೂರು ತಿಂಗಳ ವರೆಗೆ ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಬಂಗು ಕ್ರಮೇಣ ಕಡಿಮೆಯಾಗುವುದಲ್ಲದೆ, ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಿ ಮುಖವೂ ಕಾಂತಿಯುತವಾಗುತ್ತದೆ.

Leave a Reply

Your email address will not be published. Required fields are marked *