ಸುಸ್ತು ಆಯಾಸ ನಿವಾರಿಸುವ ಜೊತೆಗೆ ಹತ್ತಾರು ಲಾಭಗಳನ್ನು ನೀಡುವ ಬಿಟ್ ರೊಟ್ ಚಹಾ

0 3

ದೇಹಕ್ಕೆ ಹಲವು ತರಕಾರಿಗಳು ಹಾಗೂ ಸೊಪ್ಪು ಹಣ್ಣುಗಳು ಆರೋಗ್ಯವನ್ನು ವೃದ್ಧಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ, ಆದ್ರೆ ಪ್ರತೋಯೊಂದು ಕೂಡ ತನ್ನದೆಯಾದ ವಿಶೇಷತೆಯನ್ನು ಹೊಂದಿರುತ್ತವೆ. ಅದೇ ನಿಟ್ಟಿನಲ್ಲಿ ಇದೀಗ ಬಿಟ್ ರೊಟ್ ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುವುದು. ಹಾಗಾದರೆ ಬಿಟ್ ರೊಟ್ ನಿಂದ ಎಷ್ಟೆಲ್ಲ ಉಪಯೋಗಗಳಿವೆ ಅನ್ನೋದನ್ನ ನೋಡುವುದಾದರೆ, ಇದರಲ್ಲಿ ಪ್ರೊಟೀನ್ ಪೋಷಕಾಂಶಗಳನ್ನು ಕಾಣಬಹುದು ಬಿಟ್ ರೊಟ್ ಅನ್ನು ಅಡುಗೆಗಳಲ್ಲಿ ಬಳಸಿ ಉದರ ಲಾಭವನ್ನು ಪಡೆದುಕೊಳ್ಳಬಹುದು ಹಾಗೂ ಹಸಿಯಾಗಿ ತಿನ್ನುವುದರಿಂದ ಇದರ ಪ್ರಯೋಜನವಿದೆ.

ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಗರ್ಭಿಣಿ ಮಹಿಳೆಯರಿಗೆ ಬಿಟ್ ರೊಟ್ ಉತ್ತಮ, ಇದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಕೆಲವೊಮ್ಮೆ ವಿಡಾಯ್ರೆ ಸಲಹೆ ನೀಡುತ್ತಾರೆ ಹಸಿ ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವನೆ ಮಾಡಿ ಎಂಬುದಾಗಿ, ಹೌದು ಮಹಿಳೆಯರು ಪ್ರೆಗ್ನೆನ್ಸಿ ಸಮಯದಲ್ಲಿ ಬೀಟ್‌ರೂಟ್ ಚಹಾ ಸೇವಿಸಿದರೆ ತಾಯಿ ಹಾಗೂ ಮಗುವಿನ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ದೇಹಕ್ಕೆ ರಕ್ತ ಕಣಗಳನ್ನು ಹೆಚ್ಚಳ ಮಾಡುವುದು.

ದೇಹದ ಆಯಾಸ ಸುಸ್ತು ನಿವಾರಣೆಗೆ ಪ್ರತಿದಿನ ಔಷದಿ ಮಾತ್ರೆಗಳನ್ನು ಸೇವಿಸುವ ಬದಲು ಮನೆಯಲ್ಲೇ ಸುಲಭವಾಗಿ ಬಿಟ್ ರೊಟ್ ಚಹಾ ತಯಾರಿಸಿ ಕುಡಿಯೋದ್ರಿಂದ ದೇಹದ ಸುಸ್ತು ಆಯಾಸ ನಿವಾರಣೆಯಾಗುವುದು ಅಷ್ಟೇ ಅಲ್ದೆ ಮಧುಮೇಹಿಗಳಿಗೆ ದೇಹದ ರಕ್ತದಲ್ಲಿನ ಶುಗರ್ ಲೆವೆಲ್ ಕಡಿಮೆಯಾಗುವುದು. ಹಾಗದರೆ ಬಿಟ್ ರೊಟ್ ಚಹಾ ಹೇಗೆ ತಯಾರಿಸಬಹುದು ಅನ್ನೋದನ್ನ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಬಿಟ್ ತಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಸ್ವಚ್ಛತೆ ಮಾಡಿ ಅದನ್ನು ಒಂದು ಬೌಲ್‌‌ನಲ್ಲಿ ನೀರು ಹಾಕಿ ನೆನಸಿಟ್ಟುಕೊಳ್ಳಬೇಕು, ನಂತರ ಅದಕ್ಕೆ ಸ್ವಲ್ಪ ಶುಂಠಿ ಹಾಕಿ ಕುದಿಸಿ. ಕುದಿಸಿದ ನಂತರ ಅದನ್ನು ಸೋಸಿ ರುಚಿಗೆ ತಕ್ಕಸ್ಟು ಜೇನು ಮತ್ತು ನಿಂಬೆ ರಸ ಪುದಿನ ಅಥವಾ ತುಳಸಿ ಹಾಕಿದರೆ ಬಿಟ್ ರೊಟ್ ಚಹಾ ನೀವು ಸೇವಿಸಲು ರೆಡಿಯಾಗುತ್ತದೆ. ನಿಮಗೆ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ.

Leave A Reply

Your email address will not be published.